ಪಿಡಿಒಗಳ ಮುಂಭಡ್ತಿಗೆ ಶೀಘ್ರ ಕ್ರಮ: ಸಿಎಂ


Team Udayavani, Sep 23, 2022, 6:35 AM IST

ಪಿಡಿಒಗಳ ಮುಂಭಡ್ತಿಗೆ ಶೀಘ್ರ ಕ್ರಮ: ಸಿಎಂ

ಬೆಂಗಳೂರು: ರಾಜ್ಯದಲ್ಲಿ 12 ವರ್ಷಗಳಿಂದ ಪದೋನ್ನತಿ ಇಲ್ಲದೆ ಒಂದೇ ಹುದ್ದೆಯಲ್ಲಿ  ಕಾರ್ಯನಿರ್ವಹಿಸುತ್ತಿರುವ ಪಂಚಾಯತ್‌ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗಳ ಮುಂಭಡ್ತಿಗೆ ಶೀಘ್ರ ಕ್ರಮ ಕ್ರಮ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಗುರುವಾರ ಪ್ರಶ್ನೋತ್ತರ ವೇಳೆ ಕಾಂಗ್ರೆಸ್‌ನ ಮಂಜುನಾಥ್‌ ಭಂಡಾರಿ ಅವರ ಪ್ರಶ್ನೆಗೆ ಲಿಖೀತ ರೂಪದಲ್ಲಿ ಪ್ರತಿಕ್ರಿಯಿಸಿದ ಅವರು, ಪಿಡಿಒಗಳು ಸುಮಾರು 12 ವರ್ಷಗಳಿಂದ  ಒಂದೇ ಹುದ್ದೆಯಲ್ಲಿರುವುದು ಸರಕಾರದ ಗಮನಕ್ಕೆ ಬಂದಿದೆ. ಅವರನ್ನು ಸಹಾಯಕ ನಿರ್ದೇಶಕ ಹುದ್ದೆಗೆ  ಭಡ್ತಿಗೊಳಿಸಲು ಶೀಘ್ರ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 6 ಸಾವಿರಕ್ಕೂ ಹೆಚ್ಚು ಪಿಡಿಒ ಹುದ್ದೆಗಳು ಮಂಜೂರಾಗಿವೆ. ಇನ್ನು ಪ್ರಸ್ತುತ ಮಂಜೂರಾಗಿರುವ ಸಹಾಯಕ ನಿರ್ದೇಶಕರ ಹುದ್ದೆಗಳ ಸಂಖ್ಯೆ 452. ಈ ಪೈಕಿ 318 ಹುದ್ದೆಗಳು ಖಾಲಿ ಇವೆ. ಪಿಡಿಒ ವೃಂದದ ಜೇಷ್ಠತಾ ಪಟ್ಟಿ ಕುರಿತು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಕೆಯಾಗಿದೆ. ಈ ಸಂಬಂಧದ ಪ್ರಕರಣ ಬಾಕಿ ಇದ್ದು, ಇತ್ಯರ್ಥಗೊಂಡ ಬಳಿಕ  ನಿಯಮಾನುಸಾರ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಎಪಿಒ-1 ಮತ್ತು ಎಪಿಒ-2 ಹುದ್ದೆಗಳನ್ನು ಕೇವಲ ಪಿಡಿಒ ವೃಂದದಿಂದ ಪದೋನ್ನತಿ ಮೂಲಕ ಭರ್ತಿ ಮಾಡಲು ವೃಂದ ಮತ್ತು ನೇಮಕಾತಿ ನಿಯಮಗಳಿಗೆ ಸೂಕ್ತ ತಿದ್ದುಪಡಿ ತರಬಹುದು. ಈ ನಿಟ್ಟಿನಲ್ಲಿ ಸರಕಾರ ಕೈಗೊಂಡ ಕ್ರಮಗಳೇನು ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ಈ ಎರಡೂ ವೃಂದದ ಹುದ್ದೆಗಳು ಕರ್ನಾಟಕ ಸಾಮಾನ್ಯ ಸೇವೆ (ಅಭಿವೃದ್ಧಿ ಶಾಕೆ ಮತ್ತು ಸ್ಥಳೀಯ ಆಡಳಿತ ಶಾಖೆ) ನಿಯಮಗಳ ವೃಂದ ಬಲದಲ್ಲಾಗಲಿ ಅಥವಾ ಇತ್ತೀಚೆಗೆ ರಚಿಸಲಾದ ಕರ್ನಾಟಕ ಸಾಮಾನ್ಯ ಸೇವೆ (ಪಂಚಾಯತ್‌ರಾಜ್‌ ವಿಭಾಗ) (ವೃಂದ ಮತ್ತು ನೇಮಕಾತಿ) ನಿಯಮಗಳ ಬಲದಲ್ಲಾಗಲಿ ಸೇರ್ಪಡೆ ಆಗುವುದಿಲ್ಲ. ಈ ವೃಂದದ ಹುದ್ದೆಗಳು ಮೂಲತಃ ಗ್ರಾಮೀಣಾಭಿವೃದ್ಧಿ ಕೋಶ ಯೋಜನೆ ಅಡಿ ಸೃಜಿಸಿದ ಹುದ್ದೆಗಳಾಗಿವೆ. ಅವುಗಳನ್ನು ಡಿಆರ್‌ಡಿಎ ಯೋಜನೆ ಅಡಿ ಮಂಜೂರಾದ ಹುದ್ದೆಗಳೊಂದಿಗೆ ಒಆರ್‌ಡಿಪಿ ಲೆಕ್ಕಶೀರ್ಷಿಕೆಗೆ ವರ್ಗಾಯಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಟಾಪ್ ನ್ಯೂಸ್

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರMangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Mangaluru ಪಾಲಿಕೆ ಆಯುಕ್ತರ ವರ್ಗಾವಣೆ ರದ್ದುಗೊಳಿಸಿದ ಸರಕಾರ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

Heavy Rain ದಕ್ಷಿಣ ಕನ್ನಡದಲ್ಲಿ ಸೋಮವಾರವೂ ಭಾರೀ ಮಳೆ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ

Rain ಮೈದುಂಬಿದ ನೇತ್ರಾವತಿ, ಕುಮಾರಧಾರಾ ನದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

CM-Siddaramaiah

Government ಜಮೀನು ಒತ್ತುವರಿ ನಿರ್ದಾಕ್ಷಿಣ್ಯ ತೆರವು: ಸಿಎಂ ಸಿದ್ದರಾಮಯ್ಯ

Dinesh-gundurao

Dengue ಹೆಚ್ಚಳಕ್ಕೂ ನಾನೂ ಈಜಿದ್ದಕ್ಕೂ ಏನು ಸಂಬಂಧ: ದಿನೇಶ್‌ ಗುಂಡೂರಾವ್‌

Eshwarappa

Shivamogga; ತುರ್ತಾಗಿ ಬಿಜೆಪಿ ಸೇರುವ ಚಿಂತನೆ ಇಲ್ಲ: ಈಶ್ವರಪ್ಪ

Parameshwar

Guarantee Schemeಗಳ ಬಗ್ಗೆ ಬಿಜೆಪಿ ಅಪಪ್ರಚಾರ: ಗೃಹ ಸಚಿವ ಪರಮೇಶ್ವರ್‌

MUST WATCH

udayavani youtube

ಬೆನ್ನು ನೋವು ನಿವಾರಣೆ | ಬೆನ್ನು ನೋವಿನ ಸಮಸ್ಯೆಗೆ ಪರಿಹಾರ

udayavani youtube

ಉಡುಪಿ ಜಿಲ್ಲಾದ್ಯಂತ ಭಾರೀ ಮಳೆ – ಜಲಾವೃತಗೊಂಡ ಮುಖ್ಯ ರಸ್ತೆಗಳು

udayavani youtube

ಕೂಲ್ ಮೂಡ್ ನಲ್ಲಿ ಸ್ವಿಮ್ಮಿಂಗ್ ಮಾಡಿದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ : ಇಲ್ಲಿದೆ ವಿಡಿಯೋ

udayavani youtube

ಅಂಬಾನಿ ಕುಟುಂಬದಿಂದ ಆಟಗಾರರೊಂದಿಗೆ ವಿಶ್ವಕಪ್ ಗೆಲುವಿನ ಸಂಭ್ರಮಾಚರಣೆ

udayavani youtube

Team india

ಹೊಸ ಸೇರ್ಪಡೆ

supreem

Supreme Court: ಬೇಸಗೇಲಿ 1,170 ಕೇಸ್‌ ಇತ್ಯರ್ಥ

Jalashaya

Monsoon: ನಾಲ್ಕು ಜಿಲ್ಲೆಗಳಲ್ಲಿ ಭಾರೀ ಮಳೆ; ಹಲವು ಪ್ರದೇಶ ಜಲಾವೃತ

Supreme Court

NEET ಪರೀಕ್ಷೆ ರದ್ದು ತನಿಖೆ ಬಳಿಕ ತೀರ್ಮಾನ: ಸುಪ್ರೀಂ ಕೋರ್ಟ್‌

police crime

BSP ಅಧ್ಯಕ್ಷ ಹತ್ಯೆ ಬೆನ್ನಲ್ಲೇ ಚೆನ್ನೈ ಪೊಲೀಸ್‌ ಕಮಿಷನರ್‌ ಎತ್ತಂಗಡಿ

1-mm

France ಸಂಸತ್‌ ಅತಂತ್ರ?: ಎಡಪಕ್ಷ ಕೂಟಕ್ಕೆ ಮುನ್ನಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.