ಸಿದ್ದು- ಡಿಕೆಶಿ ಫೋಟೊ ಹಾಕಿ ‘ಕೂಡಿ ಬಾಳಿದರೆ ಸ್ವರ್ಗ’ ಎಂದು ಟ್ವೀಟ್ ಮಾಡಿದ ರಾಹುಲ್
Team Udayavani, Sep 30, 2022, 4:40 PM IST
ಬೆಂಗಳೂರು: ರಾಜ್ಯದಲ್ಲಿ ಭಾರತ್ ಜೋಡೋ ಯಾತ್ರೆ ಪ್ರಾರಂಭಿಸಿರುವ ರಾಹುಲ್ ಗಾಂಧಿ “ಕೂಡಿ ಬಾಳಿದರೆ ಸ್ವರ್ಗ” ಎಂದು ಟ್ವೀಟ್ ಮಾಡಿರುವುದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.
ಎಲ್ಲರನ್ನೂ ಒಳಗೊಳ್ಳುವ ಸಮಾಜ ನಿರ್ಮಾಣ ಪ್ರತಿಪಾದಿಸಿದ್ದ ಮಹಾ ಗುರು ಬಸವಣ್ಣನ ನಾಡಿಗೆ ನಾವು ಪ್ರವೇಶಿಸುತ್ತಿದ್ದೇವೆ. ರಾಜ್ಯದ ಜನತೆಯ ಧ್ವನಿ ಆಲಿಸುವುದಕ್ಕೆ ನಾವು ಬಂದಿದ್ದೇವೆ ಎಂಬ ಬರಹದೊಂದಿಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಫೋಟೋ ಹಾಕಿ “ಕೂಡಿ ಬಾಳಿದರೆ ಸ್ವರ್ಗ” ಎಂದು ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ರಾಹುಲ್ ಹೆಜ್ಜೆ ಜೊತೆಗೆ ಇತಿಹಾಸ ನಿರ್ಮಾಣವಾಗುತ್ತಿದೆ: ಡಿಕೆ ಶಿವಕುಮಾರ್
ಉಭಯ ನಾಯಕರು ಒಳಜಗಳ ಮರೆತು ಒಟ್ಟಾಗಿ ಸಾಗಬೇಕೆಂದು ಈ ಮೂಲಕ ರಾಹುಲ್ ಗಾಂಧಿ ಆಶಯ ವ್ಯಕ್ತಪಡಿಸಿದ್ದಾರೆಂಬ ವ್ಯಾಖ್ಯಾನ ಈಗ ಕಾಂಗ್ರೆಸ್ ವಲಯದಲ್ಲಿ ಕೇಳಿ ಬಂದಿದೆ.
“ಕೂಡಿ ಬಾಳಿದರೆ ಸ್ವರ್ಗ”
Greetings to Karnataka – the land of the great Guru Basavanna, whose teachings of building an inclusive society is the guiding light of #BharatJodoYatra.
We have come to listen to you. This Yatra is the voice of the people of Karnataka. pic.twitter.com/YMSrM1CMBz
— Rahul Gandhi (@RahulGandhi) September 30, 2022
ಭಾರತ್ ಜೋಡೋ ವೇದಿಕೆಯನ್ನು ರಾಹುಲ್ ಗಾಂಧಿ ಅವರು ಮತ್ತೆ ನಾಯಕರ ಒಗ್ಗೂಡುವಿಕೆಗೆ ಬಳಸಿಕೊಂದಿದ್ದು ವಿಶೇಷವಾಗಿತ್ತು. ಕಾರ್ಯಕ್ರಮದಲ್ಲಿ ಡೋಲು ಬಾರಿಸಲು ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಕೈಯನ್ನು ಒಟ್ಟಾಗಿ ಹಿಡಿದುಕೊಂಡು ರಾಹುಲ್ ಡೋಲು ಬಾರಿಸಿ ಸಂದೇಶ ನೀಡಿದರು.
ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಮೊದಲು ಪ್ರತ್ಯೇಕವಾಗಿ ಡೋಲು ಬಾರಿಸಿದರು. ಬಳಿಕ ರಾಹುಲ್ ತಾವೇ ಸಿದ್ದು, ಡಿಕೆಶಿ ಕೈ ಹಿಡಿದುಕೊಂಡು ಡೋಲು ಬಾರಿಸಿದರು.
ಈ ಹಿಂದೆ ಸಿದ್ದರಾಮೋತ್ಸವದಲ್ಲೂ ಸಿದ್ದರಾಮಯ್ಯರನ್ನು ಅಪ್ಪಿಕೊಳ್ಳುವಂತೆ ಡಿಕೆ ಶಿವಕುಮಾರ್ ಗೆ ರಾಹುಲ್ ಗಾಂಧಿ ಕೈಸನ್ನೆ ಮಾಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
Congress: ಸಿದ್ದರಾಮಯ್ಯ ಮಾಸ್ ಲೀಡರ್, ಮುಗಿಸಲು ಬಿಜೆಪಿ ಯತ್ನ: ಡಿ.ಕೆ.ಶಿವಕುಮಾರ್
Waqf: ಪಾಕಿಸ್ತಾನದಲ್ಲಿ ವಕ್ಫ್ ಆಸ್ತಿ 8 ಲಕ್ಷ, ಭಾರತದಲ್ಲಿಯೇ 9.5 ಲಕ್ಷ ಎಕರೆ: ಯತ್ನಾಳ್
By Election: ಸಿದ್ದರಾಮಯ್ಯ ಜೈಲಿಗೆ ಹೋಗುವುದು ನಿಶ್ಚಿತ: ಬಿ.ಎಸ್.ಯಡಿಯೂರಪ್ಪ ಭವಿಷ್ಯ
MUST WATCH
ಹೊಸ ಸೇರ್ಪಡೆ
Waqf Bill: ಜೆಪಿಸಿ ಅಧ್ಯಕ್ಷರ ಭೇಟಿ ಚುನಾವಣ ನಿಯಮ ಉಲ್ಲಂಘನೆ: ಸಚಿವ ಪ್ರಿಯಾಂಕ್
MUDA: ಆರೋಪಿ ಸ್ಥಾನದಲ್ಲಿರುವ ಸಿಎಂ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ: ಬಿವೈವಿ
By Election: ಒಬ್ಬ ಯುವಕನ ಕಟ್ಟಿ ಹಾಕಲು ಬೀಡುಬಿಟ್ಟ ಕೈ ನಾಯಕರ ದಂಡು: ಎಚ್.ಡಿ.ಕುಮಾರಸ್ವಾಮಿ
Rahul Gandhi ಗುರಿ ತಪ್ಪಿದ ಕ್ಷಿಪಣಿ, ಸೋನಿಯಾರಿಂದ ತರಬೇತಿ ಅಗತ್ಯ: ಹಿಮಾಂತ
Delhi; ಕಾನೂನು ಅಧಿಕಾರಿ ನಿವಾಸದಲ್ಲಿ 3.79 ಕೋಟಿ ನಗದು ಸಿಬಿಐನಿಂದ ವಶಕ್ಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.