ಹೇಡಿಯಲ್ಲ,ಪದೇ ಪದೇ ಕರೆದ್ರೆ ರಾಜಕೀಯಕ್ಕೆ ಬರ್ತೇನೆ!
Team Udayavani, Dec 31, 2017, 1:17 PM IST
ಬೆಂಗಳೂರು: ‘ನಾನು ಹೇಡಿಯಾಗಲು ಇಚ್ಛಿಸುವುದಿಲ್ಲ.ಕಲಾವಿದನಾಗಿ ಸ್ಪಂದಿಸಲೇಬೇಕು, ಪದೇ ಪದೇ ತೊಡೆ ತಟ್ಟಿ ಕರೆದರೆ ರಾಜಕೀಯಕ್ಕೆ ಬರ್ತೇನೆ, ಅದೇನು ದೊಡ್ಡ ವಿಷಯವಲ್ಲ..’ ಇದು ನಟ ಪ್ರಕಾಶ್ ರೈ ಅವರು ಕಿಡಿ ಕಾರಿದ ಪರಿ.
ಪ್ರಸ್ಕ್ಲಬ್ನಲ್ಲಿ ಮುಖ್ಯಮಂತ್ರಿ ಸಿಎಂ ಸಿದ್ದರಾಮಯ್ಯ ಅವರೊಂದಿಗೆ ವರ್ಷದ ವ್ಯಕ್ತಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪ್ರಕಾಶ್ ರೈ ಪರೋಕ್ಷವಾಗಿ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ಕಿಡಿ ಕಾರಿದರು.
‘ನನಗೆ ರಾಜಕೀಯ ಪ್ರವೇಶಿಸುವ ಆಕಾಂಕ್ಷೆ ಇಲ್ಲ. ಆದರೆ ತುಂಬಾ ಒತ್ತಾಯ ಮಾಡಿದ್ರೆ ಬರಬಾರದೆಂದೇನು ಇಲ್ಲ, ಬರ್ತೀನಿ. ಬನ್ನಿ ನೋಡೋಣ ಅಂತಾ ತೊಡೆ ತಟ್ಟಿ ಕರೆದ್ರೆ ಬರ್ತೀನಿ. ಅದು ದೊಡ್ಡ ವಿಷಯ ಅಲ್ಲ’ಎಂದರು.
‘ನಾನು ಕಲಾವಿದನಾಗಿ ಸ್ಪಂದಿಸಲೇಬೇಕು, ನೀವು ಪತ್ರಕರ್ತರಾಗಿ ಸ್ಪಂದಿಸಬೇಕು. ಹೇಡಿಯಾಗಿ ನಾವು ನಮ್ಮನ್ನು ಬಿಂಬಿಸಿಕೊಳ್ಳಬಾರದು, ಗೊತ್ತಿದ್ದು ಸುಮ್ಮನೆ ಕೂರುವ ಜಾಯಮಾನ ನನ್ನದಲ್ಲ . ಬೆಂದಕಾಳೂರಿನಲ್ಲಿ ಅಂತಹವರ ಬೇಳೆ ಕಾಳು ಬೇಯಲು ಬಿಡುವುದಿಲ್ಲ’ ಎಂದು ಗುಡುಗಿದರು.
ನಿಮಗೆ ನಮ್ಮ ಬೆಂಬಲವಿದೆ
ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಪ್ರಕಾಶ್ ರೈ ಅವರನ್ನು ಹಾಡಿ ಹೊಗಳಿದರು.’ಪ್ರಕಾಶ್ ರೈ ಅವರು ಮಾಡುತ್ತಿರುವ ಕೆಲಸ ಸರಿಯಾಗಿದೆ. ನಿಮ್ಮ ಸಮಾಜಮುಖೀ ಕೆಲಸಗಳಿಗೆ ನಮ್ಮ ಬೆಂಬಲ ಇದೆ. ಅವರಿಗೆ ಬೆದರಿಕೆ ಕರೆಗಳು ಬರುತ್ತಿವೆ. ಅವರು ಅಂತಹ ತಪ್ಪೇನು ಮಾಡಿದ್ದಾರೆ. ರೈ ಅವರೇ ನಿಮ್ಮ ಕೆಲಸವನ್ನು ಇನ್ನೂ ಗಟ್ಟಿ ಧ್ವನಿಯಲ್ಲಿ ಮಾಡಿ’ ಎಂದರು.
ಸಮಾರಂಭದಲ್ಲಿ ಆದಿಚುಂಚನಗಿರಿ ಮಠದ ನಿರ್ಮಲಾನಂದ ಶ್ರೀಗಳು ಗೌರವ ಉಪಸ್ಥಿತರಿದ್ದು , ರೈ ಮತ್ತು ಸಿಎಂ ಸಿದ್ದರಾಮಯ್ಯ ಸೇರಿದಂತೆ, ಸಾಧಕ ಪತ್ರಕರ್ತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.