ಸೋಲಿನಿಂದ ಹೆದರಿ ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ: ಕುಸುಮಾ
Team Udayavani, Nov 12, 2020, 1:35 PM IST
ಬೆಂಗಳೂರು: ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋಲಿನಿಂದ ಹೆದರಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ರಾಜರಾಜೇಶ್ವರಿ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹೇಳಿದ್ದಾರೆ.
ರಾಜರಾಜೇಶ್ವರಿ ನಗರ ಎಂದೆಂದಿಗೂ ನನ್ನಕರ್ಮ ಭೂಮಿ. ಎಂದಿನಂತೆ ಜನರೊಂದಿಗಿದ್ದು ನನ್ನ ಸಮಾಜ ಸೇವಾ ಕಾರ್ಯಗಳನ್ನು ಮುಂದುವರೆಸು ಮೂಲಕ ನೊಂದವರ ಧ್ವನಿಯಾಗುತ್ತೇನೆ. ನಾನು ಈ ಸೋಲಿನಿಂದ ದೃತಿಗೆಡುವುದಿಲ್ಲ ಎಂದುಉದಯವಾಣಿಸಂದರ್ಶನದಲ್ಲಿ ಆತ್ಮಾವಲೋಕನದ ಮಾತುಗಳನ್ನಾಡಿದ್ದಾರೆ.
ಫಲಿತಾಂಶದ ಬಗ್ಗೆ ನಿಮ್ಮಅಭಿಪ್ರಾಯ ಏನು ? :
ಈ ಚುನಾವಣಾ ಫಲಿತಾಂಶ ಸ್ವೀಕರಿಸುತ್ತೇನೆ. ಸೋಲು ಗೆಲುವು ಇದ್ದಿದ್ದೆ. ಎರಡನ್ನೂ ಸಮನಾಗಿ ಸ್ವೀಕರಿಸುತ್ತೇನೆ. ಮುಂದಿನ ಗೆದ್ದೇ ಗೆಲ್ಲುವ ವಿಶ್ವಾಸ ಇದೆ. ನಮ್ಮಕಾರ್ಯಕರ್ತರು ಹಗಲು ರಾತ್ರಿಕೆಲಸ ಮಾಡಿದ್ದಾರೆ ಅವರಿಗೆ ಕೃತಜ್ಞತೆ ಹೇಳುತ್ತೇನೆ.
ನಿಮ್ಮನ್ನು ಯಾಕೆ ಜನರು ನಿರ್ಲಕ್ಷ್ಯ ಮಾಡಿದರು ಅಂತ ಅನ್ನಿಸ್ತು? :
ಗೊತ್ತಿಲ್ಲ ನಾನು ಸಾಕಷ್ಟು ನಿರೀಕ್ಷೆ.ಇಟ್ಟಿದ್ದೆ ಈ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕು. ಚರ್ಚೆ ಮಾಡುತ್ತೇವೆ. ಇನ್ನಷ್ಟುಕೆಲಸ ಮಾಡಬೇಕು ಅನಿಸುತ್ತೆ.
ಮುನಿರತ್ನ ವಿರುದ್ಧ ಸಾಕಷ್ಟುಆರೊಪ ಮಾಡಿದ್ದಿರಿ ಅದು ಮತಗಳಾಗಿ ಪರಿವರ್ತಿಸಲು ಏಕೆ ಆಗಲಿಲ್ಲಾ ?
ಎಲ್ಲವೂ ಕಾರಣವಾಗಿರಬಹುದು. ಇವತ್ತಷ್ಟೆ ಫಲಿತಾಂಶ ಬಂದಿದೆ. ನಾವು ಎಲ್ಲಿ ತಪ್ಪಿದ್ವಿ ಅನ್ನೋದ್ನ ಯೋಚನೆ ಮಾಡಬೇಕು.
ನೀವು ಹೋದಲೆಲ್ಲ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ, ಅದು ಮತಗಳಾಗಿ ಪರಿವರ್ತನೆ ಆಗಲಿಲ್ಲ?
ಗೊತ್ತಿಲ್ಲ. ನಾನು ಹೋದ ಕಡೆಯಲ್ಲಿ ಒಳ್ಳೆಯ ಪ್ರತಿಕ್ರಿಯೆ ಬಂದಿತ್ತು ಅಷ್ಟೇ ಪ್ರೀತಿ ವಿಶ್ವಾಸದಿಂದ ನೋಡಿದರು. ಮನೆ ಒಳಗೆಕರೆದು ಗೌರವ ಕೊಡುತ್ತಿದ್ದರು. ಅದು ಮತಗಳಾಗಿ ಯಾಕೆ ಪರಿವರ್ತನೆ ಆಗಿಲ್ಲ ಅನ್ನುವುದು ಅರ್ಥವಾಗಿಲ್ಲ.
ಒಳ ರಾಜಕೀಯದ ವಾಸನೆ ಬಡಿಯಿತಾ ನಿಮಗೆ :
ನಮ್ಮ ಪಕ್ಷದಲ್ಲಿ ಎಲ್ಲರೂ ಕಷ್ಟಪಟ್ಟುಕೆಲಸ ಮಾಡಿದ್ದಾರೆ. ನನಗೆ ಯಾರ ಬಗ್ಗೆಯೂ ಅಸಮಾಧಾನ ಇಲ್ಲ. ಬೇರೆ ಪಕ್ಷದ ಒಳ ರಾಜಕೀಯದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ.
ರಾಜಕೀಯ ಸಾಕು ಅನಿಸ್ತಾ, ಇದೇ ವೃತ್ತಿಯಲ್ಲಿ ಮುಂದುವರೆಯುತ್ತಿರಾ? :
ನಾನು ರಾಜಕೀಯಕ್ಕೆ ಅಂತ ಕಾಲಿಟ್ಟಿದ್ದೀನಿ ಹಿಂದೆ ತಿರುಗಿ ನೋಡುವ ಪ್ರಶ್ನೆಯೇ ಇಲ್ಲ. ನನ್ನಕೈಲಾದ ಮಟ್ಟಿಗೆ ಜನರ ಸೇವೆ ಮಾಡುತ್ತೇನೆ. ರಾಜಕೀಯದಲ್ಲಿಯೇ ಮುಂದುವರೆಯುತ್ತೇನೆ.
ನಿಮ್ಮ ಪಕ್ಷದ ನಾಯಕರು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ ಅನಿಸ್ತಾ? :
ಖಂಡಿತವಾಗಿಯೂ ಎಲ್ಲಕಾರ್ಯಕರ್ತರು ಹಾಗೂ ನಾಯಕರು ತಮ್ಮ ಮನೆಕೆಲಸ ಬಿಟ್ಟು ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಯಾರ ಕೆಲಸದ ಬಗ್ಗೆಯೂ ನನಗೆ ಅನುಮಾನ ಇಲ್ಲ
ಒಕ್ಕಲಿಗ ಸಮುದಾಯಓಲೈಕೆ ಮಾಡಿದ್ದು ತಪ್ಪಾಯಿತು ಅಂತ ಅನಿಸ್ತಾ?
ನಾನು ಯಾವತ್ತೂ ಒಂದೇ ಸಮುದಾಯದ ಮತಗಳು ಬೇಕು ಎಂದು ಕೇಳಿಲ್ಲ. ಎಲ್ಲ ಸಮುದಾಯಗಳ ಮತಕೇಳಿದ್ದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.