“ಕಾಲ”ನಿಗೆ ಕರ್ನಾಟಕದಲ್ಲಿ ಕಷ್ಟಕಾಲ!
Team Udayavani, May 30, 2018, 6:00 AM IST
ಬೆಂಗಳೂರು: ತಮಿಳು ನಟ ರಜನಿಕಾಂತ್ ಅಭಿನಯದ “ಕಾಲ’ ಚಿತ್ರವನ್ನು ಯಾವುದೇ ಕಾರಣಕ್ಕೂ ಕರ್ನಾಟಕದಲ್ಲಿ ಬಿಡುಗಡೆ ಮಾಡದಿರಲು ವಿತರಕರು ತೀರ್ಮಾನಿಸಿದ್ದಾರೆ. ಈ ಕುರಿತು ಮಂಗಳವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ವಿತರಕರು, ಪ್ರದರ್ಶಕರು ಈ ಒಮ್ಮತದ ನಿರ್ಧಾರ ಕೈಗೊಂಡಿದ್ದಾರೆ.
ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ರಜನಿಕಾಂತ್ ಅವರು ಈ ಹಿಂದೆ ಹೇಳಿಕೆಯೊಂದನ್ನು ನೀಡಿದ್ದರು. ಅದು ಕನ್ನಡ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿತ್ತು. ಆ ಹಿನ್ನೆಲೆಯಲ್ಲಿ ರಜನಿಕಾಂತ್ ಅಭಿನಯದ “ಕಾಲ’ ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಕನ್ನಡಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು. ಕನ್ನಡ ಚಳುವಳಿಯ ವಾಟಾಳ್ ನಾಗರಾಜ್ ಕೂಡ, “ಕಾಲ’ ಚಿತ್ರ ಬಿಡುಗಡೆ ಮಾಡಿದರೆ, ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದರು. ಈ ಸಂಬಂಧ, ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು ನೇತೃತ್ವದಲ್ಲಿ ಮಂಗಳವಾರ ವಿತರಕರು ಮತ್ತು ಪ್ರದರ್ಶಕರ ಸಭೆ ನಡೆಯಿತು. ಸಭೆಯಯಲ್ಲಿ “ಗೋಲ್ಡಿ ಫಿಲ್ಮ್ಸ್ ವಿತರಕ ಸೌರವ್, “ನಾನು ಕರ್ನಾಟಕ, ಕನ್ನಡಿಗರಿಗಾಗಿ “ಕಾಲ’ ಚಿತ್ರವನ್ನು ವಿತರಣೆ ಮಾಡುವುದಿಲ್ಲ’ ಎಂದು ಸ್ಪಷ್ಟಪಡಿಸಿದ್ದಾರೆ.
ಜೂನ್ 7 ರಂದು ದೇಶ, ವಿದೇಶಗಳಲ್ಲಿ ರಜನಿಕಾಂತ್ ಅಭಿನಯದ “ಕಾಲ’ ಚಿತ್ರ ಬಿಡುಗಡೆಯಾಗುತ್ತಿದೆ. ಆದರೆ, ರಜನಿಕಾಂತ್ ಹಿಂದೆ, ಕನ್ನಡಿಗರ ಬಗ್ಗೆ ಕೇವಲವಾಗಿ ಮಾತನಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದ ಕನ್ನಡಪರ ಸಂಘಟನೆಗಳು, ಚಿತ್ರ ಬಿಡುಗಡೆಗೆ ಅವಕಾಶ ಕೊಡುವುದಿಲ್ಲ ಎಂದು ಹೇಳಿಕೆ ನೀಡಿದ್ದವು.
ಸಭೆ ಬಳಿಕ ಮಾತನಾಡಿದ ವಾಣಿಜ್ಯ ಮಂಡಳಿ ಅಧ್ಯಕ್ಷ ಸಾ.ರಾ.ಗೋವಿಂದು, “ಇದು ಭಾಷೆ ವಿಚಾರ. ಅದರಲ್ಲೂ ತುಂಬಾ ಸೂಕ್ಷ್ಮ ವಿಚಾರ. ಕರ್ನಾ ಟಕದಲ್ಲಿ “ಕಾಲ’ ಚಿತ್ರ ಬಿಡುಗಡೆಗೆ ಸಾಕಷ್ಟು ವಿರೋಧವಿದೆ. ರಜನಿಕಾಂತ್, ಕಾವೇರಿ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ್ದಲ್ಲದೆ, ಕನ್ನಡಿಗರನ್ನು ಕೆಣಕಿದ್ದಾರೆ ಎಂದರು.
ಹಾಗಾಗಿ ಚಿತ್ರ ಬಿಡುಗಡೆ ಮಾಡದಿರಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಒಂದು ವೇಳೆ ರಜನಿಕಾಂತ್ ಅವರು ಕ್ಷಮೆ ಕೇಳಿದರೂ ಕೂಡ ಬಿಡುಗಡೆಗೆ ಅವಕಾಶ ಕೊಡಬಾರದು ಎಂದು ತೀರ್ಮಾನಿಸಲಾಗಿದೆ’ ಎಂದು ಹೇಳಿದರು. ವಿತರಕರ ಸಂಘದ ಅಧ್ಯಕ್ಷ ನರಸಿಂಹಲು ಅವರು ಸಹ, “ರಾಜ್ಯದ
ನೆಲ, ಜಲಕ್ಕಾಗಿ ಎಲ್ಲರೂ ಒಂದಾಗಿದ್ದೇವೆ. ಆದರೆ, ತಮಿಳು ನಟರು ಹೀಗೆಲ್ಲಾ ಮಾತಾಡಿರುವುದರಿಂದ “ಕಾಲ’ ಚಿತ್ರವನ್ನು ಬಿಡುಗಡೆ ಮಾಡದಿರಲು ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿದೆ. ಮುಂಬರುವ ದಿನಗಳಲ್ಲಿ ರಾಜ್ಯದಲ್ಲಿ ಅನಾಹುತ ತಡೆಯಲು ರಜನಿಕಾಂತ್ ಹಾಗು ಕಮಲ್ ಹಾಸನ್ ಚಿತ್ರಗಳನ್ನು ಬಿಡುಗಡೆ ಮಾಡದಿರಲು ತೀರ್ಮಾನ ಮಾಡಲಾಗಿದೆ’ ಎಂದರು. ವಾಣಿಜ್ಯ ಮಂಡಳಿಯಲ್ಲಿ ನಡೆದ ಸಭೆಯಲ್ಲಿ ಮಂಡಳಿಯ ಎನ್.
ಕುಮಾರ್, ಉಮೇಶ್ ಬಣಕಾರ್, ಜ್ಞಾನೇಶ್ವರ್ ಐತಾಳ್ ಇತರರು ಇದ್ದರು. ರಜನಿಕಾಂತ್ ಅಭಿನಯಿಸಿರುವ “ಕಾಲ’ ಚಿತ್ರವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ. ಈ ಹಿಂದೆ “ಕಬಾಲಿ’ ಚಿತ್ರ ನಿರ್ದೇಶಿಸಿದ್ದ ಪಾ ರಂಜಿತ್, “ಕಾಲ’ವನ್ನೂ ಮಾಡಿದ್ದಾರೆ. ಈ ಚಿತ್ರದಲ್ಲಿ ರಜನಿಕಾಂತ್, ಮುಂಬೈನ ಅಂಡರ್‌ವರ್ಲ್ಡ್ನಲ್ಲಿ ತಮಿಳರ ಪರ ಹೋರಾಡುವ ನಾಯಕರಾಗಿ ನಟಿಸಿದ್ದಾರೆ. ಧನುಷ್ ಈ ಚಿತ್ರದ ನಿರ್ಮಾಪಕರು. ಚಿತ್ರದಲ್ಲಿ ಹುಮಾ ಖುರೇಷಿ ,
ಈಶ್ವರಿ ರಾವ್, ಧನುಷ್ ಇತರರು ನಟಿಸಿದ್ದಾರೆ.
ಕನ್ನಡ ಸಂಘಟನೆ ಕಿಡಿ
ಕಾವೇರಿ ವಿಷಯಕ್ಕೆ ಸಂಬಂಧಿಸಿ ಪ್ರತಿ ಬಾರಿಯೂ ಗೊಂದಲದ ಹೇಳಿಕೆಗಳು ಕೇಳಿ ಬರುತ್ತಿವೆ ಎಂದು ಆರೋಪಿಸಿರುವ ಕನ್ನಡ ಪರ ಸಂಘಟನೆಗಳು,
ಯಾವ ಕಾರಣಕ್ಕೂ “ಕಾಲ’ ಚಿತ್ರವನ್ನು ಬಿಡುಗಡೆ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಎಚ್ಚರಿಸಿವೆ. ಸಾ.ರಾ. ಗೋವಿಂದು ನಡೆಸಿದ
ಸಭೆಯಲ್ಲಿ, ವಿತರಕರು “ಕಾಲ’ ಚಿತ್ರವನ್ನು ವಿತರಣೆ ಮಾಡುವುದಿಲ್ಲ ಎಂದು ಹೇಳಿದ್ದರೆ, ಪ್ರದರ್ಶಕರು ಕೂಡ “ಕಾಲ’ ಚಿತ್ರವನ್ನು ಪ್ರದರ್ಶನ ಮಾಡುವು
ದಿಲ್ಲ. ನಮಗೆ ಸಿನಿಮಾಗಿಂತ ಕರ್ನಾಟಕ ಜನರ ಸಮಸ್ಯೆ ದೊಡ್ಡದು. “ಕಾಲ’ ಚಿತ್ರದಿಂದ ನಮಗೇನೂ ಆಗಬೇಕಿಲ್ಲ’ ಎಂದು ನಿರ್ಧರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru: ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳ ಬಂಧನ
Ration Card: ಅನರ್ಹರಿಗೆ ಬಿಪಿಎಲ್ ಕಾರ್ಡ್ ಕೊಡಲ್ಲ, ಅರ್ಹರಿಗೆ ತಪ್ಪಿಸಲ್ಲ: ಸಿದ್ದರಾಮಯ್ಯ
Sagara: ಸಹಕಾರಿ ಚಳುವಳಿಯ ಭದ್ರ ಬೇರು ಕರ್ನಾಟಕದಲ್ಲಿದೆ: ಬಿ.ಎಸ್.ಯಡಿಯೂರಪ್ಪ
Liquor: ಮದ್ಯ ಬಂದ್ ಗೆ ಬೆಂಬಲವಿಲ್ಲ: ಪ್ರವಾಸೋದ್ಯಮ ಹೋಟೆಲ್ ಮಾಲೀಕರ ಸಂಘ
Bagalakote: ಅನರ್ಹರ ಬಿಪಿಎಲ್ ಕಾರ್ಡ್ ಗಳು ಮಾತ್ರ ರದ್ದು: ಸಿಎಂ ಸಿದ್ದರಾಮಯ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.