ತಿರುಗೇಟಿಗೆ ಸಿದ್ಧ :ರಾಜನಾಥ್ ಸಿಂಗ್
ಏರೋ ಇಂಡಿಯಾದಲ್ಲಿ ನೆರೆಯ ದೇಶಗಳಿಗೆ ರಾಜನಾಥ್‌ಎಚ್ಚರಿಕೆ
Team Udayavani, Feb 4, 2021, 7:00 AM IST
ಬೆಂಗಳೂರು: ನಮ್ಮ ಮೇಲೆ ಆಗಾಗ್ಗೆ ನಡೆಯುತ್ತಿವ ಅಹಿತಕರ ಘಟನೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಿರುಗೇಟು ನೀಡುವುದಕ್ಕೆ ದೇಶ ಸಜ್ಜಾಗುತ್ತಿದೆ. ಗಡಿ ಮತ್ತು ಜನರ ರಕ್ಷಣೆಗಾಗಿ ಹೋರಾಡಲು ನಾವು ಸದಾ ಸಿದ್ಧ.
ರಕ್ಷಣ ಸಚಿವ ರಾಜನಾಥ್ ಸಿಂಗ್ ಶತ್ರು ದೇಶಗಳಿಗೆ ರವಾನಿಸಿದ ಸ್ಪಷ್ಟ ಸಂದೇಶ ಇದು. “ಏರೋ ಇಂಡಿಯಾ ಶೋ-2021’ಕ್ಕೆ ಬುಧವಾರ ಚಾಲನೆ ನೀಡಿ ಅವರು ಮಾತನಾಡಿದರು. ಸಿಂಗ್ ತಮ್ಮ ಭಾಷಣದಲ್ಲಿ ಯಾವುದೇ ರಾಷ್ಟ್ರದ ಹೆಸರು ಉಲ್ಲೇಖೀಸದೆ, ಗಡಿಯಲ್ಲಿ ಕಾಲು ಕೆರೆಯುವವರಿಗೆ ತಿರುಗೇಟು ನೀಡುವ ಸ್ಪಷ್ಟ ಸಂದೇಶವನ್ನು ರವಾನಿಸಿದರು.
ಒಂದು ರಾಷ್ಟ್ರದ ಪ್ರಾಯೋಜಿತ ಭಯೋತ್ಪಾದನೆಗೆ ಭಾರತ ಗುರಿಯಾಗಿದೆ. ರಕ್ಷಣ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳುವ ಮೂಲಕ ತಕ್ಕ ಉತ್ತರ ನೀಡುವುದಕ್ಕೆ ದೇಶ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂದರು.
ಆಧುನೀಕರಣಕ್ಕೆ ಹಣದ ಹೊಳೆ
130 ಶತಕೋಟಿ ಡಾಲರ್ ವೆಚ್ಚದಲ್ಲಿ ಸೇನೆಯ ಆಧುನೀಕರಣಕ್ಕೆ ಯೋಜನೆ ರೂಪಿಸಲಾಗಿದೆ. ಇತ್ತೀಚೆಗೆ ಎಚ್‌ಎಎಲ್‌ಗೆ 48 ಸಾವಿರ ಕೋ.ರೂ. ಮೊತ್ತದಲ್ಲಿ 83 ಲಘು ಯುದ್ಧ ವಿಮಾನ (ಎಲ್‌ಸಿಎ)ಗಳ ಪೂರೈಕೆಗೆ ಗುತ್ತಿಗೆ ನೀಡಲಾಗಿದ್ದು, ಇದು “ಮೇಕ್ ಇನ್ ಇಂಡಿಯಾ’ದ ಅತೀ ದೊಡ್ಡ ಟೆಂಡರ್. 2024ರ ವೇಳೆಗೆ ರಕ್ಷಣ ಕ್ಷೇತ್ರದಲ್ಲಿ 1.75 ಲಕ್ಷ ಕೋ.ರೂ. ವಹಿವಾಟು ನಡೆಸುವ ಗುರಿ ಇದ್ದು, ಇದರಲ್ಲಿ 35 ಸಾವಿರ ಕೋಟಿ ರೂ. ಮೊತ್ತದ ವೈಮಾನಿಕ ಮತ್ತು ರಕ್ಷಣ ಉಪಕರಣಗಳ ರಫ್ತು ಸೇರಿದೆ. ಶೇ. 74ರಷ್ಟು ಸ್ವಯಂಪ್ರೇರಿತ ವಿದೇಶಿ ನೇರ ಬಂಡವಾಳ ಹೂಡಿಕೆ ಮತ್ತು ಸರಕಾರದ ಮೂಲಕ ಶೇ. 100ರಷ್ಟು ವಿದೇಶಿ ನೇರ ಬಂಡವಾಳ ಹೂಡಿಕೆ ಮಾಡಬಹುದಾಗಿದೆ ಎಂದರು.
ಉದ್ಯಮಿಗಳಿಗೆ ಮುಕ್ತ ಆಹ್ವಾನ
ದೇಶವು ನಾಗರಿಕ ವಿಮಾನಯಾನ ಕ್ಷೇತ್ರದಲ್ಲಿ ಅತೀ ವೇಗವಾಗಿ ಬೆಳೆಯುತ್ತಿದೆ. ಜಾಗತಿಕ ವೈಮಾನಿಕ ಉದ್ದಿಮೆಗಳು ಇಲ್ಲಿ ಹೂಡಿಕೆ ಮಾಡಬೇಕು. ಇದಕ್ಕೆ ಸರಕಾರ ಎಲ್ಲ ಅಗತ್ಯ ಸಹಕಾರ ನೀಡಲು ಬದ್ಧ ಎಂದು ಮುಕ್ತ ಆಹ್ವಾನ ನೀಡಿದರು.
ಏರೋ ಇಂಡಿಯಾ ಸಂದರ್ಭ ಹಿಂದೂ ಮಹಾಸಾಗರ ಪ್ರದೇಶದ ರಾಷ್ಟ್ರಗಳ ರಕ್ಷಣ ಸಚಿವರ ಸಮಾವೇಶ ನಡೆಯಲಿದೆ. ಚೀಫ್ ಆಫ್ ಏರ್ ಸ್ಟಾಫ್ಗಳ ಸಮಾವೇಶ ಕೂಡ ಏರ್ಪಾಡಾಗಿದೆ ಎಂದರು.
ಇದಕ್ಕೆ ಮುನ್ನ ಸಚಿವ ರಾಜನಾಥ್ ಸಿಂಗ್, 83 ಎಲ್‌ಸಿಎ ಪೂರೈಕೆಗೆ ಸಂಬಂಧಿಸಿದ ಒಪ್ಪಂದ ಪ್ರಮಾಣಪತ್ರವನ್ನು ಎಚ್‌ಎಎಲ್ ಅಧ್ಯಕ್ಷ ಮತ್ತು ಎಂಡಿ ಮಾಧವನ್ ಅವರಿಗೆ ಹಸ್ತಾಂತರಿಸಿದರು.
ಇದನ್ನೂ ಓದಿ:ದಲಿತ ಮಕ್ಕಳಿಗೆ ನಾಲ್ಕು ಸೈನಿಕ ಶಾಲೆ: ಗೋವಿಂದ ಕಾರಜೋಳ
ಉದ್ಯಮಿಗಳಿಗೆ ಸಹಕಾರ
ಸಿಎಂ ಯಡಿಯೂರಪ್ಪ ಮಾತನಾಡಿ, ಬೆಂಗಳೂರು ವಿಶ್ವದ ವೈಮಾನಿಕ ಕ್ಷೇತ್ರದ ಹೂಡಿಕೆಯಲ್ಲಿ 3ನೇ ಅತೀ ದೊಡ್ಡ ನಗರ ಆಗಿದೆ. ಇದಕ್ಕೆ ಕಾರಣ ಇಲ್ಲಿರುವ ಕೈಗಾರಿಕೆಗೆ ಪೂರಕವಾದ ವಾತಾವರಣ. ಹೆಚ್ಚುವರಿ ವಿದ್ಯುತ್, ವೈಮಾನಿಕ ಕ್ಷೇತ್ರದ ಅಭಿವೃದ್ಧಿಗಾಗಿಯೇ ಪ್ರತ್ಯೇಕ ನೀತಿ ಸಹಿತ ಅನೇಕ ಸೌಕರ್ಯಗಳನ್ನು ಕಲ್ಪಿಸಲಾಗಿದೆ. ಕೊರೊನಾ ಹಾವಳಿ ನಡುವೆಯೂ 14 ರಾಷ್ಟ್ರಗಳು ಈ ಬಾರಿಯ ಪ್ರದ ರ್ಶನಕ್ಕೆ ಸಾಕ್ಷಿಯಾಗಿರುವುದು ರಾಜ್ಯ ಸರಕಾರದ ಆಡಳಿತದ ಮೇಲಿನ ವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಉದ್ಯಮಿಗಳ ಹೂಡಿಕೆಗೆ ಅಗತ್ಯ ಸಹಕಾರ ನೀಡಲು ಸರಕಾರ ಸಿದ್ಧ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
State Budget Meeting: ಇಂದಿನಿಂದ ಸಿಎಂ ಬಜೆಟ್ ಪೂರ್ವಭಾವಿ ಸರಣಿ ಸಭೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
ಆಪರೇಷನ್ ಬಾಂಗ್ಲಾದೇಶಿ; ಅಕ್ರಮ ವಲಸಿಗರ ಪತ್ತೆ ಹಚ್ಚುವ ಕಾರ್ಯಾಚರಣೆ ಚುರುಕು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.