ಸರ್ಕಾರಕ್ಕೆ ಖಾಸಗೀಕರಣ ಮಾಡುವ ದುರುದ್ದೇಶ ಇದೆಯೋ ಗೊತ್ತಿಲ್ಲ : ರಾಮಲಿಂಗರೆಡ್ಡಿ
Team Udayavani, Apr 12, 2021, 2:28 PM IST
ಬೆಂಗಳೂರು : ಬೇಡಿಕೆ ಇಟ್ಟಾಗ ಯಾವುದು ಆಗತ್ತೆ ಯಾವುದು ಆಗಲ್ಲ ಅನ್ನೋದನ್ನು ಸರ್ಕಾರ ಸ್ಪಷ್ಟವಾಗಿ ಹೇಳಬೇಕಿತ್ತು. ನೋಡೋಣ ಮಾಡೋಣ ಅಂದಿದ್ದಕ್ಕೆ ಸಮಸ್ಯೆ ಆಗಿದೆ ಎಂದು ಸಾರಿಗೆ ನೌಕರರ ಮುಷ್ಕರದ ಬಗ್ಗೆ ಮಾಜಿ ಸಚಿವ ರಾಮಲಿಂಗ ರೆಡ್ಡಿ ಹೇಳಿಕೆ ನೀಡಿದ್ದಾರೆ.
ಆರನೇ ವೇತನ ಆಯೋಗ ಆಗಲ್ಲ ಅಂತ ಹಿಂದೆಯೇ ಹೇಳಬೇಕಿತ್ತು. ಆದ್ರೆ ಸರ್ಕಾರವು ನೋಡೋಣ ಮಾಡೋಣ ಅಂತಲೇ ಹೇಳಿತ್ತು. ಸರ್ಕಾರ ಹಠ ಬಿಟ್ಟು ತೀರ್ಮಾನ ಮಾಡಬೇಕು. ನೌಕರರು ನಮ್ಮವರೇ, ಅವರ ಎಲ್ಲ ಬೇಡಿಕೆ ಈಡೇರಿಸಲು ಸಾಧ್ಯವಿಲ್ಲ. ಆದರೆ ಪ್ರೈವೇಟ್ ನವರ ಕೈಲಿ ಎಷ್ಟು ದಿನ ಓಡಿಸೋದಕ್ಕಾಗತ್ತೆ ಎಂದರು.
ನಾಲ್ಕೂ ಸಾರಿಗೆ ನಿಗಮ ಉಳಿಸಕೊಳ್ಳಬೇಕು. ಸರ್ಕಾರಕ್ಕೇನಾದ್ರೂ ಪ್ರೈವೇಟೈಸೇಷನ್ ಮಾಡುವ ದುರುದ್ದೇಶ ಇದೆಯೋ ಗೊತ್ತಿಲ್ಲ. ಇದು ಮುಳುಗುತ್ತಿರುವ ಹಡಗು ಅಂತ ಮಂತ್ರಿಗಳು ಯಾಕೆ ಹೇಳಿದ್ದಾರೆ? ರಿಟರ್ನ್ ಇಲ್ಲ ಅಂದ್ರೂ ಜನರ ಸಲುವಾಗಿ ಓಡಿಸಲೇಬೇಕು ಎಂದಿದ್ದಾರೆ.