Ramayana ಕಲ್ಪನೆಯಲ್ಲ, ಇತಿಹಾಸ: ಮಂತ್ರಾಲಯ ಶ್ರೀ
ರಾಘವೇಶ್ವರ ಭಾರತೀ ಶ್ರೀಗಳ "ಭಾವರಾಮಾಯಣ ರಾಮಾವತರಣ' ಕೃತಿ ಅನಾವರಣ
Team Udayavani, Jun 30, 2024, 12:05 AM IST
ಬೆಂಗಳೂರು: ರಾಮಾಯಣ ಒಂದು ಧರ್ಮ, ಜಾತಿ ಅಥವಾ ವ್ಯಕ್ತಿಗಳಿಗೆ ಸೀಮಿತವಾದ ಗ್ರಂಥವಲ್ಲ. ರಾಮಾಯಣ ಎಂಬುದು ಕಲ್ಪನೆ ಅಲ್ಲ, ಇತಿಹಾಸವಾಗಿದೆ. ಆಧುನಿಕ ಯುಗದಲ್ಲೂ ಈ ಬಗ್ಗೆ ಶೋಧಿಸಬಹುದಾಗಿದೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಶ್ರೀ ಸುಬುಧೇಂದ್ರ ಸ್ವಾಮೀಜಿ ಪ್ರತಿಪಾದಿಸಿದರು.
ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಅವರು ಮೂಲ ವಾಲ್ಮೀಕಿ ರಾಮಾಯಣದ ಸಮಗ್ರ ಭಾವವನ್ನು ಸೆರೆಹಿಡಿದಿರುವ “ಭಾವರಾಮಾಯಣ ರಾಮಾವತರಣ’ ಕೃತಿಯನ್ನು ಬೆಂಗಳೂರಿನ ಹೊಸಕೆರೆಹಳ್ಳಿಯಲ್ಲಿರುವ ಪಿಇಎಸ್ ವಿ.ವಿ. ಆವರಣದ ಸಭಾಂಗಣದಲ್ಲಿ ಅನಾವರಣಗೊಳಿಸಿ ಆಶೀರ್ವಚನ ನೀಡಿದರು.
ನಕಲಿ ರಾಮಾಯಣಗಳಿಂದ
ಮೂಲ ರಾಮಾಯಣಕ್ಕೆ ಧಕ್ಕೆ
ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಮಾತನಾಡಿ, ಈ ಜಗತ್ತಿನಲ್ಲಿ ವ್ಯಾಪಿಸಿರುವ ನಕಲಿ ರಾಮಾಯಣ, ಮೂಲ ರಾಮಾಯಣಕ್ಕೆ ಹಾಗೂ ವಾಲ್ಮೀಕಿ ರಾಮಾಯಣಕ್ಕೆ ಧಕ್ಕೆ ಉಂಟಾಗಿರುವುದು ಈ ಕೃತಿ ರಚಿಸಲು ನಮಗೆ ಪ್ರೇರಣೆ. ನಾವು ನಂಬಿಕೊಂಡಿರುವ ರಾಮಾಯಣವೇ ಬೇರೆ, ನೈಜವಾಗಿರುವುದೇ ಬೇರೆ. ಮೂಲ ರಾಮಾಯಣ ಜನರ ಮನಸ್ಸಿನಲ್ಲಿ ಉಳಿಯಬೇಕು ಎಂಬ ಉದ್ದೇಶದಿಂದ ಇದನ್ನು ಬರೆಯಲಾಗಿದೆ. ರಾಮಾಯಣ ಓದುವಾಗ ಸುಖ ಉಂಟಾಗಿ ಸಮಯ ಹೋಗುವುದು ಗೊತ್ತಾಗುವುದಿಲ್ಲ. ಮೂಲ ರಾಮಾಯಣ ಓದುತ್ತಾ ಹೋದರೆ, ಅದು ಶಿಕ್ಷಣ ಕೊಟ್ಟು ನಿಮ್ಮನ್ನು ಸನ್ಮಾರ್ಗದತ್ತ ಕೊಂಡೊಯ್ಯುತ್ತದೆ ಎಂದು ವಿವರಿಸಿದರು.
ಏಮ್ ಹೈ ಕನ್ಸಲ್ಟಿಂಗ್ ಸಿಇಒ ಎನ್. ರವಿಶಂಕರ್ ಅವರು ಶ್ರೀ ರಾಘವೇಶ್ವರ ಸ್ವಾಮೀಜಿಗಳೊಂದಿಗೆ ಕೃತಿಯ ಕುರಿತು ಸಂವಾದ ನಡೆಸಿದರು.
108ಕ್ಕೂ ಹೆಚ್ಚು ಗಣ್ಯರಿಂದ ಬಿಡುಗಡೆ
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 108ಕ್ಕೂ ಹೆಚ್ಚು ಗಣ್ಯ ಸಾಧಕರು ಏಕಕಾಲದಲ್ಲಿ ಕೃತಿ ಲೋಕಾರ್ಪಣೆ ಮಾಡಿದ್ದು ವಿಶೇಷವೆನಿಸಿತ್ತು.
ಕೃತಿಯಲ್ಲಿ ರಾಮನ ಜನ್ಮದ ಬಗ್ಗೆ ತಿಳಿಸಲಾಗಿದೆ. ಶ್ರೀರಾಮನ ಜಾತಕದ ಬಗ್ಗೆ “ಜಗನ್ನಾಯಕನ ಜಾತಕ’ ಎಂಬ ಬಗ್ಗೆ ಮುಂದಿನ ಸಂಪುಟದಲ್ಲಿ ವಿವರಿಸಲಾಗಿದೆ. ಭಾವ ರಾಮಾಯಣ ಜತೆಗೆ ಅಜ್ಞಾತ ರಾಮಾಯಣ, ತತ್ತÌ ರಾಮಾಯಣದ ಬಗ್ಗೆಯೂ ಬರೆಯುವ ಆಕಾಂಕ್ಷೆ ಇದೆ.
-ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ,
ಶ್ರೀ ರಾಮಚಂದ್ರಾಪುರ ಮಠ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
Mudhol: ಕೈಕೊಟ್ಟ ಬೆಳೆ… ಸಾಲಬಾಧೆಗೆ ಹೆದರಿ ನೇಣಿಗೆ ಶರಣಾದ ರೈತ
Kollur; ಉಪಚುನಾವಣೆಯ ಸೋಲು ಗೆಲುವು ದೇವರ ಫಲಾಫಲ: ಡಿಸಿಎಂ ಡಿ. ಕೆ. ಶಿವಕುಮಾರ್
MUST WATCH
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ
ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು
ಶರಣಾಗತಿಗೆ ಸೂಚಿಸಿದರೂ ಸ್ಪಂದಿಸಿಲ್ಲ, ಗುಂಡಿನ ಚಕಮಕಿಯಲ್ಲಿ ಮೋಸ್ಟ್ ವಾಂಟೆಡ್ ನಕ್ಸಲ್ ಸಾವು
ಹೊಸ ಸೇರ್ಪಡೆ
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Belagavi: ಪೂರ್ಣಾವಧಿ ಅಧಿವೇಶನದಲ್ಲಿ ಸಮಸ್ಯೆಗಳ ಪೂರ್ಣ ಚರ್ಚೆಯಾಗಲಿ: ಡಾ.ಪ್ರಭಾಕರ್ ಕೋರೆ
Pakistan; ಶಿಯಾ ಮುಸ್ಲಿಮರನ್ನು ಗುರಿಯಾಗಿರಿಸಿ ಗುಂಡಿನ ದಾಳಿ: ಕನಿಷ್ಠ 38 ಬ*ಲಿ
IFFI Goa: ಸಿನಿಮಾ ಸಾಯುವುದಿಲ್ಲ, ಕಲೆಯೂ ಅಷ್ಟೇ,…ಆದರೆ ನಾವು ಉಳಿಸಿಕೊಳ್ಳಬೇಕಷ್ಟೇ !
Sandalwood: ಯಾರೋ ನಾ ಕಾಣೆ, ಚಂದಾಗೌಳೆ ಶಾಣೆ..: ಕಟ್ಲೆ ಹಾಡು ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.