ರಮೇಶ್ ಜಾರಕಿಹೊಳಿ ಮೇಲೆ ಭಾರಿ ಭ್ರಷ್ಟಾಚಾರ ಆರೋಪ ಮಾಡಿದ ಕಾಂಗ್ರೆಸ್
ಶಾ, ಫಡ್ನವೀಸ್ ಮತ್ತು ಸಿಎಂ ಬೊಮ್ಮಾಯಿಯೂ ಭಾಗಿ, ಕುಮಾರಸ್ವಾಮಿಗೂ ಪಾಲು !
Team Udayavani, Jun 26, 2022, 1:06 PM IST
ಬೆಂಗಳೂರು : ಬಿಜೆಪಿ ಶಾಸಕ, ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ಮೇಲೆ ಕಾಂಗ್ರೆಸ್ 819 ಕೋಟಿ ಹಣ ಲೂಟಿ ಮಾಡಿರುವ ಗಂಭೀರ ಆರೋಪ ಮಾಡಿದೆ.
ಭಾನುವಾರ ಕೆಪಿಸಿಸಿ ಕಚೇರಿಯಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ವಕ್ತಾರ ಎಂ. ಲಕ್ಷಣ್ ಮಾತನಾಡಿ,ಸೌಭಾಗ್ಯ ಲಕ್ಷ್ಮೀ ಶುಗರ್ ಸಂಸ್ಥೆಯಲ್ಲಿ ಅವ್ಯವಹಾರ ನಡೆಸಲಾಗಿದ್ದು, ರಮೇಶ್ ಜಾರಕಿ ಹೊಳಿ ಮಗ, ಮಗಳು, ಸೊಸೆ ಸೇರಿ ಎಂಟು ಜನ ಈ ಸಂಸ್ಥೆಯ ಪ್ರಮುಖರು. ಸೌಭಾಗ್ಯ ಲಕ್ಷ್ಮಿ ಶುಗರ್ ಅವರೇ ಬರೆದಿರುವ ದಾಖಲೆ ಬಿಡುಗಡೆ ಮಾಡುತ್ತಿದ್ದೇನೆ ಎಂದರು.
ಅಭಿನಂದನ್ ಪಾಟೀಲ್ ರಮೇಶ್ ಜಾರಕಿಹೊಳಿಯ ಬೇನಾಮಿ ಆಸ್ತಿಯ ಒಡೆಯ. ಅವರು ಜಾರಕಿಹೊಳಿ ಜತೆಯೆ ಓಡಾಡುತ್ತಾ ಇರುತ್ತಾರೆ. ಅಭಿನಂದನ್ ಪಾಟೀಲ್ ಹೆಸರಲ್ಲಿ ಒಂದು ಕಂಪನಿ ಇದೆ. ಸೌಭಾಗ್ಯ ಲಕ್ಷ್ಮೀ ಲಾಸ್ ಆಗಿದೆ ಎಂದು ಘೋಷಣೆ ಮಾಡಿದ್ದಾರೆ.ಆದರೂ ಅಲ್ಲಿ ಕಬ್ಬನ್ನುಅರೆಯುತ್ತಾ ಇದ್ದಾರೆ.ಅದರಿಂದ ಲಾಭ ಬರುತ್ತಿದೆ. ಲಾಭಾಂಶ ಬೋರ್ಡ್ ಡೈರೆಕ್ಟರ್ ಗೆ ಹೋಗುತ್ತಿದೆ. ಬೋರ್ಡ್ ಡೈರೆಕ್ಟರ್ ಅವರ ಮಗ, ಮಗಳು, ಸೊಸೆ ಇನ್ನುಳಿದವರು.ಅವರಿಗೆ ಲಾಭಾಂಶ ಹೋಗುತ್ತಿದೆ ಎಂದು ನೇರ ಆರೋಪ ಮಾಡಿದ್ದಾರೆ.
ಇದು ಸಾರ್ವಜನಿಕ ಹಣ, ಇದರಲ್ಲಿ ಅಮಿತ್ ಶಾ, ಫಡ್ನವೀಸ್ ಮತ್ತು ಸಿಎಂ ಬೊಮ್ಮಾಯಿ ಭಾಗಿಯಾಗಿದ್ದಾರೆ. ರಮೇಶ್ ಜಾರಕಿಹೊಳಿಗೆ ಇನ್ನೂ ನೋಟಿಸ್ ನೀಡಿಲ್ಲ ಎಂದು ನೇರ ಆರೋಪ ಮಾಡಿದ್ದಾರೆ.
2019 ರಲ್ಲಿ ಸೌಭಾಗ್ಯ ಲಕ್ಷ್ಮಿ ಶುಗರ್ ಗೆ ನೊಟೀಸ್ ಕೊಡುತ್ತಾರೆ. ಅಫೆಕ್ಸ್ ಬ್ಯಾಂಕ್ ರಮೇಶ್ ಗೆ ನೊಟೀಸ್ ಮಾಡುತ್ತಾರೆ. ಅದರ ಅಧ್ಯಕ್ಷ ಬೆಳ್ಳಿ ಪ್ರಕಾಶ್ , ನೀವು ಪಡೆದ ಸಾಲ ಹಿಂದುರಿಗಿಸಿದ ಹಿನ್ನಲೆ ನಿಮ್ಮ ಆಸ್ತಿ ಮುಟ್ಟುಗೋಲು ಹಾಕಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿಗಳಿಗೆ ನೊಟೀಸ್ ಕೊಡುತ್ತಾರೆ. ಜಿಲ್ಲಾಧಿಕಾರಿ ಇಲ್ಲಿ ತನಕ ಏನೂ ಮಾಡಿಲ್ಲ.ಬಳಿಕ ರಮೇಶ್ ಕೋರ್ಟ್ ಮೊರೆ ಹೋಗಿದ್ದು, ಬಳಿಕ ಕೋರ್ಟ್ ಒಂದು ನಿರ್ದೆಶನ ನೀಡಿದ್ದು, ಮೊದಲು ನೀವು ಪಡೆದ ಸಾಲದ ಅರ್ಧ ಪಾವತಿ ಮಾಡಿ ಎಂದು ಸೂಚನೆ ನೀಡಿದೆ. ಆದರೆ ಕೋರ್ಟ್ ಸೂಚನೆಯನ್ನು ಜಾರಕಿಹೊಳಿ ಪಾಲನೆ ಮಾಡಿಲ್ಲ.ಅದಾದ ಬಳಿಕ ಮತ್ತೆ ಅಫೆಕ್ಸ್ ಬ್ಯಾಂಕ್ ಅಧ್ಯಕ್ಷ ಬೆಳ್ಳಿಪ್ರಕಾಶ್ ಕೋರ್ಟ್ ಸೂಚನೆಯ ಹಿನ್ನಲೆ ನೋಟಿಸ್ ನೀಡುತ್ತಾರೆ. ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಪರ್ಮಿಷನ್ ಕೇಳುತ್ತಾರೆ.ಸೌಭಾಗ್ಯ ಲಕ್ಷ್ಮೀ ಶುಗರ್. 900 ಕೋಟಿ ಗೂ ಹೆಚ್ಚಿನ ಆಸ್ತಿ ಮೌಲ್ಯ ಹೊಂದಿದೆ, ರಮೇಶ್ ಜಾರಕಿಹೊಳಿ ಇಷ್ಟು ತಪ್ಪು ಮಾಡಿದರೂ ಐಟಿ, ಇಡಿ ಏನ್ ಮಾಡುತ್ತಿದೆ?ಅಮಿತ್ ಶಾ ಏನು ಮಾಡುತ್ತಿದ್ದಾರೆ. ಸರ್ಕಾರ ಬೀಳಿಸುತ್ತಾರೆ ಎನ್ನುವ ಭಯವೇ ನಿಮಗೆ? ಅಥವಾ ಸರ್ಕಾರ ತಂದವರು ಎನ್ನುವ ಕಾಳಜಿಯೆ ? ಎಂದು ಪ್ರಶ್ನಿಸಿದ್ದಾರೆ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಲ್ಲಿ ಇದ್ದಿದ್ದರೆ ನೀವು ಬಿಡುತ್ತಿದ್ದರೆ? ಕೂಡಲೇ ರಮೇಶ್ ರನ್ನು ಬಂಧಿಸಬೇಕು. 819 ಕೋಟಿ ಹಗರಣದಲ್ಲಿ ನಿರ್ಮಲಾ ಸೀತಾರಾಂ ಅವರಿಗೂ ಪಾಲಿದೆ. ಕುಮಾರಸ್ವಾಮಿ ಸಮ್ಮಿಶ್ರ ಸರ್ಕಾರ ಇದ್ದಾಗ ನಮ್ಮ ಮಾತು ಕೇಳುತ್ತಿರಲಿಲ್ಲ.ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿ, ಬಂಡೆಪ್ಪ ಕಾಶಪ್ಪನವರ್ ಅವರಿಗೂ ಇದರಲ್ಲಿ ಹಣ ಹೋಗಿರಬಹುದು ಎಂದು ಆರೋಪಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Test Cricket; ರೋಹಿತ್ ಆಯ್ತು, ಈಗ ವಿರಾಟ್..: ಬಿಸಿಸಿಐ ಕಳಿಸಿದ ʼಆʼ ಸಂದೇಶದಲ್ಲಿ ಏನಿದೆ?
Gangolli: ಪಂಚಾಯತ್‌ನೊಳಗೆ ನಮಾಜ್; ಹಿಂದೂ ಹಿತರಕ್ಷಣಾ ಸಮಿತಿ ಪ್ರತಿಭಟನೆ
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
ನಾನು ಶೀಶಮಹಲ್ ಕಟ್ಟಿಲ್ಲ, ಜನರಿಗೆ ಮನೆ ಕಟ್ಟಿಸಿದ್ದೇನೆ: ಕೇಜ್ರಿವಾಲ್ ಗೆ ಮೋದಿ ಟಾಂಗ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.