ಹೋಟೆಲ್ಗಳಲ್ಲಿ ದರ ಜಿಜ್ಞಾಸೆ
Team Udayavani, Jun 30, 2017, 3:35 AM IST
ಬೆಂಗಳೂರು: ಜಿಎಸ್ಟಿ ಜಾರಿ ಹಿನ್ನೆಲೆಯಲ್ಲಿ ಹೋಟೆಲ್ ಮತ್ತು ರೆಸ್ಟೋರೆಂಟ್ಗಳಲ್ಲಿ ತಿಂಡಿ-ತಿನಿಸು ಬೆಲೆ
ದುಬಾರಿಯಾಗಲಿದೆಯೇ ಅಥವಾ ಈಗಿನ ದರಕ್ಕಿಂತ ಅಗ್ಗವಾಗುತ್ತದೆಯೇ ಎಂಬ ಜಿಜ್ಞಾಸೆ ಪ್ರಾರಂಭವಾಗಿದೆ. ಏಕೆಂದರೆ, ಪ್ರಸ್ತುತ ಹೋಟೆಲ್ಗಳಲ್ಲಿ ಶೇ.14.5 ವ್ಯಾಟ್, ಶೇ.5.6 ಸೇವಾ ತೆರಿಗೆ, ಶೇ.0.2 ರಷ್ಟು ಕೃಷಿ ಹಾಗೂ ಸ್ವತ್ಛ ಭಾರತ್ ಶುಲ್ಕ, ಶೇ.10ರಷ್ಟು ಸೇವಾ ಶುಲ್ಕ ವಿಧಿಸಲಾಗುತ್ತಿದೆ. ಜಿಎಸ್ಟಿ ಜಾರಿಗೆ ಬಂದ ನಂತರ ವ್ಯಾಟ್, ಸೇವಾ ತೆರಿಗೆ, ಕೃಷಿ ಮತ್ತು ಸ್ವತ್ಛಭಾರತ್ ಸೆಸ್ ಇರುವುದಿಲ್ಲ. ಬದಲಿಗೆ ಜಿಎಸ್ಟಿ ಶೇ.12 (ಹವಾ ನಿಯಂತ್ರಿತ ಇದ್ದರೆ ಶೇ.18) ಹಾಗೂ ಶೇ.10 ರಷ್ಟು ಸೇವಾ ಶುಲ್ಕವಷ್ಟೇ ಪಡೆಯಬಹುದು ಎಂತಿದೆ. ಈ ಲೆಕ್ಕಾಚಾರ ಹಾಕಿದರೆ ಪ್ರಸ್ತುತ ಎಲ್ಲ ತೆರಿಗೆ ಸೇರಿ ಶೇ.30.5 ಆಗಲಿದೆ.
ಜಿಎಸ್ಟಿ ಜಾರಿ ನಂತರ ತೆರಿಗೆ ಪ್ರಮಾಣ ಸೇವಾ ಶುಲ್ಕ ಸೇರಿ ಶೇ.22 ರಿಂದ 28ಗೆ ಏರಿಕೆಯಾಗಬಹುದು ಎಂದು ಅಂದಾಜು ಮಾಡಲಾಗಿದೆ. ಈ ಪ್ರಕಾರ ಹೋಟೆಲ್-ರೆಸ್ಟೋರೆಂಟ್ಗಳಲ್ಲಿ ತಿಂಡಿ-ತಿನಿಸು ದರ ಕಡಿಮೆಯಾಗಬೇಕು. ಆದರೆ, ಹೋಟೆಲ್ ಮಾಲೀಕರ ವಾದವೇ ಬೇರೆ ಆಗಿದ್ದು, ಜಿಎಸ್ಟಿ ಜಾರಿ ನಂತರ ಸಹಜವಾಗಿ ಬೆಲೆ ಹೆಚ್ಚಾಗಲಿದೆ. ವಾರ್ಷಿಕ 75 ಲಕ್ಷ ರೂ. ಗಿಂತ ಅಧಿಕ ವಹಿವಾಟು ನಡೆಸುವ ಹೋಟೆಲ್ಗಳಿಗೆ ಹವಾನಿಯಂತ್ರಿವಾದರೆ ಶೇ.18, ಹವಾನಿಯಂತ್ರಿತ ಇಲ್ಲದಿದ್ದರೆ ಶೇ.12 ರಷ್ಟು ಜಿಎಸ್ಟಿ ಬೀಳಲಿದೆ. ಇದು ಹಾಲಿ ತೆರಿಗೆಗಿಂತ ಹೆಚ್ಚು. ಹೀಗಾಗಿ, ಜಿಎಸ್ಟಿ
ಹೊರೆ ಗ್ರಾಹಕರಿಂದಲೇ ಭರಿಸಬೇಕಾಗುತ್ತದೆ ಎಂದು ಹೇಳುತ್ತಾರೆ. ದಿನಕ್ಕೆ 22 ಸಾವಿರ ರೂ. ವ್ಯಾಪಾರ ಆದರೂ ವಾರ್ಷಿಕ ವಹಿವಾಟು ಪ್ರಮಾಣ 75 ಲಕ್ಷ ರೂ. ಮೀರುತ್ತದೆ. ಹೀಗಾಗಿ, ಬಹುತೇಕ ಹೋಟೆಲ್ -ರೆಸ್ಟೋರೆಂಟ್ಗಳು ಜೆಎಸ್ಟಿ ಶೇ.12ರ ತೆರಿಗೆ ವ್ಯಾಪ್ತಿಗೆ ಬರಲಿದೆ. ಇಂತಹ ಹೋಟೆಲ್-ರೆಸ್ಟೋರೆಂಟ್ಗಳಲ್ಲಿ ತಿಂಡಿ ಬೆಲೆ ದೊಡ್ಡ ಪ್ರಮಾಣದಲ್ಲೇ ಹೆಚ್ಚಾಗಲಿದೆ.
ಜಿಎಸ್ಟಿ ಪರಿಣಾ ಮವನ್ನು ಈಗಲೇ ಸಂಪೂರ್ಣವಾಗಿ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಶೇ.12 ಅಥವಾ ಶೇ.18 ರಷ್ಟು
ಜಿಎಸ್ಟಿ ಪಾವತಿಸಬೇಕಾದ ಹೋಟೆಲ್ಗಳಿಗೆ ಹೆಚ್ಚಿನ ಹೊರೆಯಾಗುವುದು ಸತ್ಯ. ಹೀಗಾಗಿ, ಅಂತಹ ಹೋಟೆಲ್ಗಳು ಗ್ರಾಹಕರ ಮೂಲಕ ಜಿಎಸ್ಟಿ ಸಂಗ್ರಹಿಸಲು ನಿರ್ಧರಿಸಿವೆ.
ಚಂದ್ರಶೇಖರ್ ಹೆಬ್ಟಾರ್, ಅಧ್ಯಕ್ಷ ಹೋಟೆಲ್ ಮಾಲೀಕರ ಸಂಘ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ದ.ಕ.ದ ವೈಭವಿ, ಉಡುಪಿಯ ಧೀರಜ್ ಐತಾಳ್ ; ಸಾಹಸ ಮೆರೆದ ಮಕ್ಕಳಿಗೆ ಶೌರ್ಯ ಪ್ರಶಸ್ತಿ
D.K. Shivakumar: ಬೆಳಗಾವಿ ಕಾಂಗ್ರೆಸ್ ಅಧಿವೇಶನ ಬಗ್ಗೆ ಚರ್ಚೆ
KEA: ಎಂಎಸ್ಸಿ ನರ್ಸಿಂಗ್: ಅರ್ಜಿ ಸಲ್ಲಿಕೆಗೆ ಡಿ. 2 ಕೊನೆ ದಿನ
Karnataka: ಪಠ್ಯಪುಸ್ತಕಕ್ಕೆ ಬೇಡಿಕೆ ಸಲ್ಲಿಸಲು ಡಿ. 9 ಕಡೇ ದಿನ
ಸಾಹಿತ್ಯ ಸಮ್ಮೇಳನನ ಖರ್ಚು ಕಡಿತಗೊಳಿಸಿ ಹಂಪಿ ಕನ್ನಡ ವಿ.ವಿ.ಗೆ ನೆರವು: ಜೋಶಿ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.