ಕಬ್ಬು ಆದಾಯ ಹಂಚಿಕೆಗೆ ಅನುಪಾತ ಸೂತ್ರ: ಸಚಿವೆ ಗೀತಾ
Team Udayavani, Nov 9, 2017, 9:29 AM IST
ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ಕಬ್ಬು ಬೆಳೆಗಾರರ ನಡುವಿನ ಆದಾಯ ಹಂಚಿಕೆ ಸೂತ್ರ ಪರಿಷ್ಕರಣೆ ಮಾಡಲಾಗಿದ್ದು, ಶೇ 75:25 ಹಾಗೂ ಶೇ. 70:30ರ ಅನುಪಾತದಲ್ಲಿ ನಿಗದಿಪಡಿಸಲಾಗಿದೆ ಎಂದು ಸಕ್ಕರೆ ಖಾತೆ ಸಚಿವೆ ಡಾ. ಗೀತಾ ಮಹದೇವಪ್ರಸಾದ್ ತಿಳಿಸಿದ್ದಾರೆ.
ವಿಧಾನಸೌಧದಲ್ಲಿ ಕಬ್ಬು ಅಭಿವೃದ್ಧಿ ಮಂಡಳಿ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2016-17ನೇ ಸಾಲಿನಲ್ಲಿ ಏಕಪ್ರಕಾರವಾಗಿ ಶೇ.70:30ರ ಅನುಪಾತ ನಿಗದಿಪಡಿಸಲಾಗಿತ್ತು. ಆದರೆ, 2017-18ನೇ ಸಾಲಿಗೆ ಶೇ. 10.3 ಇಳುವರಿ ಬರುವ ಉತ್ತರ ಕರ್ನಾಟಕದ 39 ಕಾರ್ಖಾನೆಗಳಿಗೆ ಸಂಬಂಧಿಸಿದಂತೆ ಆದಾಯ ಹಂಚಿಕೆ ಸೂತ್ರ ಶೇ. 75:25 ನಿಗದಿಪಡಿಸಲಾಗಿದೆ. ಅದೇ ರೀತಿ ಶೇ.10.3ಕ್ಕಿಂತ ಕಡಿಮೆ ಇಳುವರಿ ಬರುವ ದಕ್ಷಿಣ ಕರ್ನಾಟಕದ 12 ಕಾರ್ಖಾನೆಗಳಿಗೆ ಶೇ. 70:30 ನಿಗದಿಪಡಿಸಲಾಗಿದೆ ಎಂದರು.
ಕೇಂದ್ರ ಸರ್ಕಾರ ಈ ಸಾಲಿನ ಪ್ರತಿ ಟನ್ ಕಬ್ಬಿಗೆ ಎಫ್ಆರ್ಪಿ ದರ ನಿಗದಿಪಡಿಸಿದೆ. ಅದರ ಮೇಲೆ ಪ್ರತಿ ಟನ್ಗೆ 200ರೂ. ಹೆಚ್ಚುವರಿಯಾಗಿ ರೈತರಿಗೆ ಕೊಡಲು ಉತ್ತರ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆ ಮಾಲೀಕರು ಈಗಾಗಲೇ ಒಪ್ಪಿಕೊಂಡಿದ್ದಾರೆ. ದಕ್ಷಿಣ ಕರ್ನಾಟಕ ಭಾಗದ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಏಳು ದಿನ ಕಾಲಾವಕಾಶ ಕೊಟ್ಟಿದ್ದು, ಅಷ್ಟರೊಳಗೆ ಸೂಕ್ತ ನಿರ್ಧಾರಕ್ಕೆ ಬರಲಿದ್ದಾರೆ ಎಂದರು.
ಈ ವರ್ಷ 300 ಲಕ್ಷ ಮೆಟ್ರಿಕ್ ಟನ್ ಕಬ್ಬು ಅರೆಯುವ ನಿರೀಕ್ಷೆಯಿದೆ. ಗುಜರಾತಿನ ದರದ ಬಗ್ಗೆ ರೈತರಿಂದ ಮಾತು ಕೇಳಿ ಬರುತ್ತಿರುವ ಹಿನ್ನೆಲೆ ರೈತರು ಮತ್ತು ಅಧಿಕಾರಿಗಳ ತಂಡ ಕಳುಹಿಸಲಾಗುವುದು. ತೂಕ ಮತ್ತು ಅಳತೆ, ಇಳುವರಿ ಇನ್ನಿತರ ವಿಷಯಗಳ ಬಗ್ಗೆ ನಿಗಾ ಇಡಲು 2 ಸಮಿತಿಗಳನ್ನು ರಚಿಸಲು ಇಂದಿನ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Irrigation Development: ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ ಅನುದಾನ: ವಿ.ಸೋಮಣ್ಣ
Power Prayers: ಡಿಸಿಎಂ ಟೆಂಪಲ್ ರನ್ ವಿಚಾರ; ಎಚ್ಡಿಕೆ ವ್ಯಂಗ್ಯ, ಡಿಕೆಶಿ ಪ್ರತ್ಯುತ್ತರ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Sachin Panchal Case: ರಾಜು ಕಪನೂರ ಸೇರಿ ಐವರ ಸಿಐಡಿ ವಿಚಾರಣೆ
SSLC-PUC Exam: ಪರೀಕ್ಷಾ ವೇಳಾಪಟ್ಟಿ ಪ್ರಕಟ: ವಿದ್ಯಾರ್ಥಿಗಳು ಗಮನಿಸಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.