ಬಿಎಸ್‌ವೈ ಸಿಎಂ ಮಾಡೋದು ರಾಯಣ್ಣ ಬ್ರಿಗೇಡ್ ಗುರಿಯಲ್ಲ
Team Udayavani, Jan 11, 2017, 3:45 AM IST
ಕಲಬುರಗಿ: ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಮಾಡುವ ಉದ್ದೇಶ ಅಥವಾ ಗುರಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ಗೆ ಇಲ್ಲ. ಅಂತಹ ಉದ್ದೇಶ ಕೈಬಿಡಲಾಗಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್. ಈಶ್ವರಪ್ಪ ಸ್ಪಷ್ಟಪಡಿಸಿದ್ದಾರೆ.
ಬ್ರಿಗೇಡ್ ಜಿಲ್ಲಾ ಮಟ್ಟದ ಸಮಾವೇಶದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ನಾವು ಮೊದಲು ಯಡಿಯೂರಪ್ಪ ಅವರನ್ನು ಸಿಎಂ ಮಾಡುವ ಉದ್ದೇಶ ಹೊಂದಿದ್ದೆವು. ಆದರೆ, ಬ್ರಿಗೇಡ್‌ನಿಂದ ಅವರು (ಯಡಿಯೂರಪ್ಪ) ಮುಖ್ಯಮಂತ್ರಿ ಆಗುವುದಿಲ್ಲವಂತೆ. ಬ್ರಿಗೇಡ್‌ಗಿಂತ ಜನರೇ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡುತ್ತಾರೆ. ಆದ್ದರಿಂದ ಬ್ರಿಗೇಡ್ ಅವರಿಗೆ ಬೇಕಿಲ್ಲ ಯಡಿಯೂ ರಪ್ಪ ಹೇಳಿಕೊಂಡಿದ್ದಾರೆ. ಅದು ಅವರಿಷ್ಟ. ಈಗ ನಮಗೇನಿದ್ದರೂ ದಲಿತರು, ಶೋಷಿತರು, ಹಿಂದುಳಿದವರ ಕಲ್ಯಾಣವೇ ಪ್ರಮುಖವಾಗಿದೆ. ಅಂತಹ ಉದ್ದೇಶ ಇಟ್ಟುಕೊಂಡು ಬ್ರಿಗೇಡ್ ಮುನ್ನಡೆಯಲಿದೆ ಎಂದರು.
ಯಾವುದೇ ಪಕ್ಷದ ಪರ ಇಲ್ಲ: ಬ್ರಿಗೇಡ್ ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ ಅವರು, ಹಿಂದೆ ರಾಜ್ಯವನ್ನು
ಆಳಿದವರೆಲ್ಲ ಅಹಿಂದ ವರ್ಗವನ್ನು ಸಂಪೂರ್ಣ ಕಡೆಗಣಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಒದಗಿಸುವ ದೃಷ್ಟಿಯಿಂದ ಬ್ರಿಗೇಡ್ ಕೆಲಸ ಮಾಡುತ್ತಿದೆಯೇ ಹೊರತು ಯಾರ ವಿರುದ್ದವೂ ಅಲ್ಲ. ಬ್ರಿಗೇಡ್ ಯಾವುದೇ ಪಕ್ಷದ ಪರವಾಗಿಲ್ಲ. ಅದರಲ್ಲೂ ಬಿಜೆಪಿ ಪರವಾಗಿ ಖಂಡಿತ ಇಲ್ಲ. ಇದು ಅನ್ಯಾಯಕ್ಕೊಳಗಾದವರಿಗೆ ರಾಜ್ಯದ ಮಠಾಧೀಶರ ಮುಂದಾಳತ್ವದಲ್ಲಿ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಟೊಂಕ ಕಟ್ಟಿ ನಿಂತಿರುವ ಸಂಘಟನೆ ಎಂದು ಹೇಳಿದರು.
ಭಿನ್ನಮತ ಇರುವುದು ನಿಜ: ಎಲ್ಲ ಪಕ್ಷಗಳಲ್ಲಿದ್ದಂತೆ ಬಿಜೆಪಿಯಲ್ಲೂ ಭಿನ್ನಮತವಿದೆ. ಅಭಿಪ್ರಾಯಗಳು ಬೇರೆಯಾದಾಗ ಭಿನ್ನಮತ ಸೃಷ್ಟಿಯಾಗುತ್ತದೆ. ಬ್ರಿಗೇಡ್ ವಿಷಯದಲ್ಲಿ ಭಿನ್ನಾಭಿಪ್ರಾಯಗಳು ಉಂಟಾಗಿದ್ದು ನಿಜ. ಅವುಗಳನ್ನು ನಾವು ಪಕ್ಷದ ವೇದಿಕೆಯಲ್ಲಿ ಮತ್ತು ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರೊಂದಿಗೆ ಮಾತನಾಡಿ ಬಗೆಹರಿಸಿಕೊಂಡಿದ್ದೇವೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
MUST WATCH
ಹೊಸ ಸೇರ್ಪಡೆ
ಉಪ ಚುನಾವಣಾ ಫಲಿತಾಂಶ: ಸಂಡೂರು, ಚನ್ನಪಟ್ಟಣ, ಶಿಗ್ಗಾಂವಿ ಕ್ಷೇತ್ರಗಳ ಮತ ಎಣಿಕೆ ಆರಂಭ
BJP Internal Politics: ಬಿಜೆಪಿಯ ಬೇಗುದಿ ಇತ್ಯರ್ಥಕ್ಕೆ ಡಿಸೆಂಬರ್‌ನಲ್ಲಿ ಮುಹೂರ್ತ?
Naxal Vikram Gowda: ನೆಟ್ಟಣದಿಂದ ಮುರ್ಡೇಶ್ವರಕ್ಕೆ ರೈಲಿನಲ್ಲಿ ಪ್ರಯಾಣಿಸಿದ್ದ ನಕ್ಸಲರು!
Vikram Gowda Encounter: ಭೀತಿಗ್ರಸ್ತ ಪೀತಬೈಲು ಪರಿಸರದಲ್ಲಿ ನೀರವ ಮೌನ
Financial Burden: ಶಾಲಾ ಶಿಕ್ಷಕರಿಗೆ ಮೊಟ್ಟೆ ತಲೆನೋವು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.