ಪ್ರೌಢಶಾಲಾ ಶಿಕ್ಷಕರ ಮರು ಹೊಂದಾಣಿಕೆ ಮಾರ್ಗಸೂಚಿ ಪ್ರಕಟ
Team Udayavani, Aug 23, 2022, 5:45 AM IST
ಬೆಂಗಳೂರು: ಸರಕಾರಿ ಪ್ರೌಢಶಾಲಾ ಶಿಕ್ಷಕರ ಹುದ್ದೆಗಳ ಮರು ಹೊಂದಾಣಿಕೆ ಬಳಿಕ ಹುದ್ದೆಗಳನ್ನು ನಿಗದಿಪಡಿಸಿ ಮಂಜೂರು ಮಾಡುವುದಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಆ ಪ್ರಕಾರವಾಗಿ ರಾಜ್ಯದ 4,821 ಶಾಲೆಗಳಲ್ಲಿ 43,353 ಹುದ್ದೆಗಳು ಮಂಜೂರಾಗಿದೆ.
ರಾಜ್ಯದ ಬಹುತೇಕ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕಡಿಮೆ ಇದ್ದರೂ, ಶಿಕ್ಷಕರ ಸಂಖ್ಯೆ ಹೆಚ್ಚಿದೆ. ಕೆಲವು ಶಾಲೆಗಳಲ್ಲಿ ಶಿಕ್ಷಕರ ಸಂಖ್ಯೆ ಕಡಿಮೆ ಇದ್ದು, ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿದೆ. ಇದನ್ನು ಮರು ಹೊಂದಾಣಿಕೆ ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆಯು ಮಂಜೂರಾದ ಹುದ್ದೆಗಳ ಪಟ್ಟಿ ರೂಪಿಸಿದೆ.
ಈ ಪಟ್ಟಿಯನ್ನು 70 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಂತೆ (ವಿಭಾಗ) ಹಾಗೂ ಕೆಪಿಎಸ್, ಆದರ್ಶ ಶಾಲೆಗಳಲ್ಲಿ 40 ವಿದ್ಯಾರ್ಥಿಗಳಿಗೆ ಒಬ್ಬ ಶಿಕ್ಷಕರಂತೆ ವಿಂಗಡಿಸಿದೆ. 5 ಅಥವಾ ಅದಕ್ಕಿಂತ ಹೆಚ್ಚು ವಿಭಾಗಗಳಿದ್ದಲ್ಲಿ ಮುಖ್ಯ ಶಿಕ್ಷಕರನ್ನು ಹೊರತುಪಡಿಸಿ ಶಿಕ್ಷಕರ ಹುದ್ದೆಗಳನ್ನು ಒದಗಿಸಿದೆ.
ಈ ಮಂಜೂರಾದ ಹುದ್ದೆ ಪಟ್ಟಿಯನ್ನು ವೆಬ್‌ಸೈಟ್‌ನಲ್ಲಿ ಅಳವಡಿಸಿದ್ದು, ಜಿಲ್ಲಾ ಉಪನಿರ್ದೇಶಕರು ಮತ್ತು ಬಿಇಒಗಳು ಶಾಲೆಗಳ ನಾಮಫಲಕಗಳಲ್ಲಿ ಇದನ್ನು ಪ್ರಕಟಿಸುವಂತೆ ಸೂಚಿಸಿದ್ದಾರೆ. ಶಿಕ್ಷಕರ ವರ್ಗಾವಣೆ ವೇಳೆ ಮರು ಹೊಂದಾಣಿಕೆ ಕಾರ್ಯ ಕೈಗೆತ್ತಿಕೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ
ಇದು 0 ಪರ್ಸೆಂಟ್ ಅಭಿವೃದ್ಧಿ,100 ಪರ್ಸೆಂಟ್ ಭ್ರಷ್ಟಾಚಾರದ ಸರಕಾರ: ಸುನಿಲ್
ಠೇವಣಿದಾರರ ಹಿತ ಕಾಯಲು ಸರ್ಕಾರ ಬದ್ಧ: ಸಚಿವ ಕೃಷ್ಣ ಬೈರೇಗೌಡ
Belagavi, ಮಂಡ್ಯ, ಶಿವಮೊಗ್ಗ ಸೇರಿ 6 ಕಡೆ ಕ್ಯಾನ್ಸರ್ ಆಸ್ಪತ್ರೆ: ಶರಣಪ್ರಕಾಶ್ ಪಾಟೀಲ್
Council session ಲಾಠಿ ಜಾರ್ಜ್: ಮೇಲ್ಮನೆಯಲ್ಲಿ ಪ್ರತಿಪಕ್ಷ ಸಭಾತ್ಯಾಗ
MUST WATCH
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ-126: ವಾರ್ಧಕ್ಯಕ್ಕಾಗಿ ದುಃಖವಲ್ಲ, ಸಾಧನಾಚ್ಯುತಿಗಾಗಿ…
T20; ವೆಸ್ಟ್ ಇಂಡೀಸ್ ಎದುರು ಬಾಂಗ್ಲಾದೇಶ ಗೆಲುವಿನ ಆರಂಭ
T20I;ಡಬಲ್ ಹ್ಯಾಟ್ರಿಕ್ ಸಾಧನೆ ಮೆರೆದ ಆರ್ಜೆಂಟೀನಾದ ಫೆನೆಲ್
Karnataka; ಸರಕಾರಿ ಅಂಗವಿಕಲ ನೌಕರರ ಪ್ರಯಾಣ ಭತ್ತೆ ದರ ಪರಿಷ್ಕರಣೆ
Gukesh Dommaraju; ಚದುರಂಗ ಚಾಂಪಿಯನ್ ಗೆ ತವರೂರು ಚೆನ್ನೈಯಲ್ಲಿ ಭವ್ಯ ಸ್ವಾಗತ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.