ಸದನಕ್ಕೆ ಅತೃಪ್ತ ಶಾಸಕರು ಹಾಜರ್, ನಡೆ ಇನ್ನೂ ನಿಗೂಢ
Team Udayavani, Feb 14, 2019, 1:04 AM IST
ವಿಧಾನಸಭೆ: ಪಕ್ಷದ ವಿಪ್ ಹಾಗೂ ನೋಟಿಸ್‌ಗಳಿಗೆ ಪತ್ರದ ಮೂಲಕವೇ ಉತ್ತರ ನೀಡುತ್ತಿದ್ದ ಕಾಂಗ್ರೆಸ್‌ನ ನಾಲ್ವರು ಅತೃಪ್ತ ಶಾಸಕರು, ಇಬ್ಬರು ಪಕ್ಷೇತರ ಶಾಸಕರು ಬುಧವಾರ ವಿಧಾನಸಭೆ ಕಲಾಪಕ್ಕೆ ಹಾಜರಾಗಿ ಅಚ್ಚರಿ ಮೂಡಿಸಿದರು.
ಬುಧವಾರ ಮುಂಜಾನೆ ಮುಂಬೈನಿಂದ ಬೆಂಗಳೂರಿಗೆ ಆಗಮಿಸಿದ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ, ಅಥಣಿ ಶಾಸಕ ಮಹೇಶ್ ಕುಮಠಳ್ಳಿ, ಬಳ್ಳಾರಿ ಗ್ರಾಮೀಣ ಶಾಸಕ ಬಿ.ನಾಗೇಂದ್ರ, ಚಿಂಚೊಳ್ಳಿ ಶಾಸಕ ಡಾ. ಉಮೇಶ್ ಜಾಧವ್, ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ನಾಗೇಶ್ ಕಲಾಪಕ್ಕೆ ಹಾಜರಾಗಿದ್ದರು. ಅತೃಪ್ತರು ತಾವು ಇದುವರೆಗೂ ಕಲಾಪಕ್ಕೆ ಗೈರು ಹಾಜರಾಗಿರುವುದಕ್ಕೆ ಸ್ಪಷ್ಟನೆ ನೀಡಿ, ಪಕ್ಷ ಬಿಡುವುದಿಲ್ಲ ಎಂದರು.
ಸರ್ಕಾರದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಎಲ್ಲರ ಬಳಿ ತೆರಳಿ ಅವರಿಂದ ಸದನಕ್ಕೆ ಹಾಜರಾಗಿರುವ ಬಗ್ಗೆ ಸಹಿ ಪಡೆದುಕೊಂಡರು. ಗೃಹ ಸಚಿವ ಎಂ.ಬಿ. ಪಾಟೀಲ್ ಅವರೊಂದಿಗೆ ರಮೇಶ್ ಜಾರಕಿಹೊಳಿ ಮಾತುಕತೆ ನಡೆಸಿದರು.
ಸದನವನ್ನು ಮಧ್ಯಾಹ್ನಕ್ಕೆ ಮುಂದೂಡಿದ ನಂತರ ಅತೃಪ್ತರು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ ಎನ್ನಲಾಗಿದೆ. ಚಿಂಚೊಳ್ಳಿ ಶಾಸಕ ಉಮೇಶ್ ಜಾಧವ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮೊಗಸಾಲೆಯಿಂದ ಹೊರ ನಡೆಯುವಾಗ ಅವರಿಗೆ ತಮ್ಮ ಗೈರು ಹಾಜರಿ ವಿವರಣೆ ನೀಡಿದರು. ಸಿದ್ದರಾಮಯ್ಯ ತರಾಟೆಗೆ ತೆಗೆದುಕೊಂಡರು.
ಎಂಬಿಪಿ ಭೋಜನ: ಅತೃಪ್ತ ಶಾಸಕರೊಂದಿಗೆ ಗೃಹ ಸಚಿವ ಎಂ.ಬಿ. ಪಾಟೀಲ್ ಮಧ್ಯಾಹ್ನ ಭೋಜನ ಮಾಡಿದ್ದಾರೆ. ರಮೇಶ್ ಜಾರಕಿಹೊಳಿ ಸರ್ಕಾರಿ ನಿವಾಸದಲ್ಲಿ, ಬಿ.ನಾಗೇಂದ್ರ, ಮಹೇಶ್ ಕುಮಠಳ್ಳಿ ಅವರೊಂದಿಗೆ ಎಂ.ಬಿ.ಪಾಟೀಲ್ ಊಟ ಮಾಡಿ, ಅವರನ್ನು ಪಕ್ಷದಲ್ಲಿಯೇ ಉಳಿ ಯುವಂತೆ ಮನವಿ ಮಾಡಿದ್ದಾರೆಂದು ತಿಳಿದು ಬಂದಿದೆ. ಪಕ್ಷೇತರ ಸದಸ್ಯ ನಾಗೇಶ್ ಅವರು ಸಂಜೆ ಸಚಿವ ಡಿ.ಕೆ.ಶಿವಕುಮಾರ್ ಜತೆ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಕಾಂಗ್ರೆಸ್‌ಗೆ ಬೆಂಬಲ ನೀಡುವ ಪತ್ರ ನೀಡಿದರು. ಜೆಡಿಎಸ್ ಶಾಸಕ ನಾರಾಯಣಗೌಡ ಸಹ ಹಾಜರಾಗಿದ್ದರು.
ಅತೃಪ್ತರ ನಡೆ ಇನ್ನೂ ನಿಗೂಢ: ಅತೃಪ್ತ ಶಾಸಕರು ಕಲಾಪಕ್ಕೆ ಹಾಜರಾಗಿ ಪಕ್ಷದ ಆದೇಶ ಪಾಲನೆ ಮಾಡಿ, ಪಕ್ಷದಲ್ಲಿಯೇ ಉಳಿಯುವು ದಾಗಿ ಹೇಳಿದ್ದರೂ, ಅವರ ನಡೆಯ ಬಗ್ಗೆ ಪಕ್ಷದಲ್ಲಿಯೇ ಅನುಮಾನ ಮುಂದುವರಿದಿದೆ. ಪಕ್ಷದ ರಾಜ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅತೃಪ್ತರಿಂದ ಅಂತರ ಕಾಯ್ದುಕೊಂಡಿದ್ದಾರೆ. ಈ ನಡುವೆ ವಿಧಾನಸಭೆ ಮೊಗಸಾಲೆಯಲ್ಲಿ ರಮೇಶ್ ಜಾರಕಿಹೊಳಿಯವರು ಎಲ್ಲವೂ ಮುಗಿದಿದೆ ಎಂಬ ರೀತಿಯಲ್ಲಿ ಮಾತನಾಡಿದ್ದಾರೆ ಎನ್ನಲಾಗಿದ್ದು, ಪಕ್ಷ ವಿರೋಧಿ ಚಟುವಟಿಕೆಯಡಿ ಶಾಸಕ ಸ್ಥಾನದಿಂದ ಉಚ್ಚಾಟನೆ ಆಗುವುದನ್ನು ತಪ್ಪಿಸಿಕೊಳ್ಳಲು ಕಲಾಪಕ್ಕೆ ಹಾಜರಾಗಿದ್ದರು ಎಂದು
ತಿಳಿದು ಬಂದಿದೆ.
ವೈಯಕ್ತಿಕ ಕೆಲಸದ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಿದ್ದೆ. ಪಕ್ಷ ಬಿಟ್ಟು ಎಲ್ಲಿಗೂ ಹೋಗಿಲ್ಲ. ರಮೇಶ್ ಜಾರಕಿಹೊಳಿ ಅವರ ನಿರ್ಧಾರಕ್ಕೆ ನಾವು ಬದ್ಧ . ಜಿಲ್ಲಾ ಮಟ್ಟದ ರಾಜಕೀಯದಲ್ಲಿ ಸ್ವಲ್ಪ ಅಸಮಾಧಾನವಿದೆ. ಸಿದ್ದರಾಮಯ್ಯ ಅವರೇ ನಮ್ಮ ನಾಯಕರು.
● ಬಿ. ನಾಗೇಂದ್ರ ಬಳ್ಳಾರಿ ಗ್ರಾಮೀಣ ಶಾಸಕ
ನಾನು ಪಕ್ಷ ಬಿಟ್ಟು ಎಲ್ಲಿಯೂ ಹೋಗಿಲ್ಲ. ಮಗಳ ಮದುವೆ ಹಿನ್ನೆಲೆಯಲ್ಲಿ ಮುಂಬೈಗೆ ಹೋಗಿದ್ದೆ. ನಮ್ಮ ನೆಂಟರು, ಸ್ನೇಹಿತರು ಅಲ್ಲಿ ಹೆಚ್ಚಿದ್ದಾರೆ. ಉಮೇಶ್ ಕತ್ತಿ ಮನೆಗೂ ರಾತ್ರಿ ಹೋಗುತ್ತೇನೆ. ಹಾಗಂತ ಬಿಜೆಪಿಗೆ ಹೋಗುತ್ತೇನೆ ಅಂತಾನಾ?
● ರಮೇಶ್ ಜಾರಕಿ ಹೊಳಿ , ಮಾಜಿ ಸಚಿವ
ನಾನು ಬಂಡಾಯ ಶಾಸಕರ ಜತೆ ಗುರುತಿಸಿಕೊಂಡಿಲ್ಲ. ನನಗೆ ಯಾರ ಜತೆಯೂ ಸಮಸ್ಯೆಯಿಲ್ಲ. ನನ್ನಿಂದ ಯಾವುದೇ ತಪ್ಪಾಗಿದ್ದರೂ ಶಿಕ್ಷೆಗೆ ಸಿದಟಛಿ. ನಾನು ಗೊಂದಲದಲ್ಲಿದ್ದೇನೆ. ರಾಜೀನಾಮೆ ಕುರಿತು ಇನ್ನೂ ನಿರ್ಣಯ ಆಗಿಲ್ಲ.
● ಡಾ.ಉಮೇಶ್ ಜಾಧವ್, ಚಿಂಚೋಳಿ ಶಾಸಕ
ಆರೋಗ್ಯ ಸರಿ ಇರಲಿಲ್ಲ. ಹಾಗಾಗಿ ಶಾಸಕಾಂಗ ಪಕ್ಷದ ಸಭೆ ಹಾಗೂ ಕಲಾಪಕ್ಕೆ ಹಾಜರಾಗಲು ಸಾಧ್ಯವಾಗಿಲ್ಲ. ಅಸಮಾಧಾನ ಇತ್ತು. ಅದು ವಿಕೋಪಕ್ಕೆ ಹೋಯಿತು. ಪಕ್ಷದ ನಾಯಕರ ಜಗಳದಲ್ಲಿ ನಾವು ಬಡವಾದೆವು.
● ಮಹೇಶ್ ಕುಮಠಳ್ಳಿ ಅಥಣಿ ಶಾಸಕ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Shimoga: ತ್ಯಾವರೆಕೊಪ್ಪ ಧಾಮದಲ್ಲಿ ಮೃತಪಟ್ಟ ಹೆಣ್ಣು ಹುಲಿ ಅಂಜನಿ
Dharwad: ದಲಿತಪರ ಸಂಘಟನೆ ಕರೆ ನೀಡಿದ ಬಂದ್ ಗೆ ಮಿಶ್ರ ಪ್ರತಿಕ್ರಿಯೆ
Bidar: ಬಂದ್‌ಗೆ ಉತ್ತಮ ಪ್ರತಿಕ್ರಿಯೆ… ಸಾರಿಗೆ ಸಂಚಾರ ಸ್ಥಗಿತ, ಅಂಗಡಿ ಮುಂಗಟ್ಟು ಬಂದ್
Hubballi: ಸಂಪೂರ್ಣ ಬಂದ್… ರಸ್ತೆಗಿಳಿದ ವಾಹನಗಳ ಚಕ್ರದ ಗಾಳಿ ತೆಗೆದು ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Dharwad: ಬಂದ್ ಹೆಸರಲ್ಲಿ ವ್ಯಾಪಾರಿಗೆ ಕಪಾಳಮೋಕ್ಷ?: ಕಾಲೇಜು ಪ್ರಾಧ್ಯಾಪಕರಿಗೆ ಅವಾಜ್
Friendship: ಸ್ನೇಹವೇ ಸಂಪತ್ತು
ಸೇತುವೆ ನಿರ್ಮಾಣಕ್ಕೆ ಆಗ್ರಹಿಸಿ ರಸ್ತೆ ತಡೆದು ಹಳೇ ಕುಂದುವಾಡ ಗ್ರಾಮಸ್ಥರಿಂದ ಪ್ರತಿಭಟನೆ
UV Fusion: ತೆಪ್ಪ ದ್ವೀಪದೂರಿಗೊಂದು ಸಂಪರ್ಕಸೇತು
ಏನು ಧೈರ್ಯ..! ರೈಲು ಹಳಿ ಮೇಲೆ ಬಂದ ಸಿಂಹವನ್ನು ಸಾಕು ಪ್ರಾಣಿಯಂತೆ ಓಡಿಸಿದ ಅರಣ್ಯ ಸಿಬ್ಬಂದಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.