ಸಾರಿಗೆ ನಿಗಮಗಳಲ್ಲಿ 2,814 ಸಿಬ್ಬಂದಿ ನೇಮಕ: ಸಚಿವ ಶ್ರೀರಾಮುಲು
Team Udayavani, Sep 21, 2022, 9:03 PM IST
ವಿಧಾನಸಭೆ: ರಾಜ್ಯದ ಸಾರಿಗೆ ನಿಗಮಗಳಲ್ಲಿ ಹೊಸದಾಗಿ 2,814 ಹುದ್ದೆಗಳ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಪ್ರಶ್ನೋತ್ತರ ಅವಧಿಯಲ್ಲಿ ಕಲಘಟಗಿ ಶಾಸಕ ಸಿ.ಎಂ. ನಿಂಬಣ್ಣವರ್ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಸಂಸ್ಥೆಯಲ್ಲಿ 2,500 ಚಾಲಕ, 55 ಚಾಲಕ ಬ್ಯಾಕ್‌ಲಾಗ್ ಮತ್ತು 259 ಚಾಲಕ-ಕಂ-ನಿರ್ವಾಹಕ ಬ್ಯಾಕ್‌ಲಾಗ್ ಸೇರಿದಂತೆ ಒಟ್ಟು 2,814 ಹುದ್ದೆಗಳ ನೇಮಕಾತಿಗೆ 2019ರಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು.
ಕೋವಿಡ್-19 ಕಾರಣದಿಂದ ನೇಮಕಾತಿ ಸ್ಥಗಿತಗೊಂಡಿತ್ತು. ಈಗ ಪ್ರಸ್ತಾವನೆ ಸ್ವೀಕೃತಗೊಂಡಿದ್ದು, ಪರಿಶೀಲನೆಯಲ್ಲಿದೆ. ಸಿಬ್ಬಂದಿ ನೇಮಕದ ನಂತರ ಘಟಕಗಳಿಗೆ ಅವಶ್ಯಕತೆಗೆ ಅನುಗುಣವಾಗಿ ನಿಯೋಜಿಸಲಾಗುವುದು ಎಂದರು.
ಕೋವಿಡ್ ಕಾರಣದಿಂದ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಕಳೆದ 2 ವರ್ಷಗಳಿಂದ ಯಾವುದೇ ಬಸ್‌ಗಳನ್ನು ಖರೀದಿಸಿರುವುದಿಲ್ಲ. ಆದರೆ, ಒಟ್ಟಾರೆ ಇಲಾಖೆಯಲ್ಲಿ 650 ಬಸ್‌ಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಹೊಸ ಬಸ್‌ಗಳು ಖರೀದಿಸಿದ ಮೇಲೆ ಬೇಡಿಕೆ ಆಧರಿಸಿ ಆದ್ಯತೆ ಮೇಲೆ ಬಸ್‌ಗಳನ್ನು ಪೂರೈಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Siraguppa: ಮುಂಜಾನೆ ತಾಲೂಕಿನಲ್ಲಿ ದಟ್ಟ ಮಂಜು… ವಾಹನ ಸವಾರರ ಪರದಾಟ
Belagavi: ವಿವಾಹಿತ ಮಹಿಳೆ ಮತ್ತು ತಾಯಿಯ ಸೀರೆ ಬಿಚ್ಚಿ ಹಲ್ಲೆ ನಡೆಸಿದ ನೆರೆಹೊರೆಯವರು!
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.