ಲಾಕ್‌ಡೌನ್‌ನಿಂದ ಮಾಲಿನ್ಯ ಕಡಿಮೆ: ಬಿಎಸ್‌ವೈ
ಪರಿಸರ ಜಾಗೃತಿ ಮೂಡಿಸುವಲ್ಲಿ ವಿಫಲವಾದ ಮಾಲಿನ್ಯ ನಿಯಂತ್ರಣ ಮಂಡಳಿ
Team Udayavani, Jun 6, 2020, 11:37 AM IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪರಿಸರದ ಕುರಿತಾದ ಪುಸ್ತಕ ಬಿಡುಗಡೆಗೊಳಿಸಿದರು.
ಬೆಂಗಳೂರು: ಲಾಕ್‌ಡೌನ್ ಜಾರಿಯಾದ ಹಿನ್ನೆಲೆಯಲ್ಲಿ ಪರಿಸರ ಮಾಲಿನ್ಯ ಗಣನೀಯವಾಗಿ ಕಡಿಮೆಯಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. . ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಆಯೋಜಿಸಿದ್ದ ವಿಶ್ವಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನಾಡಿ, ಲಾಕ್‌ಡೌನ್‌ನಿಂಗಿ ಯೇ ಮಾಲಿನ್ಯ ಪ್ರಮಾಣ ಕಡಿಮೆಯಾಗಿದೆ ಎಂದು ತಿಳಿಸಿದರು. ಈ ಮೂಲಕ ಮಾಲಿನ್ಯ ನಿಯಂತ್ರಣದಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಯತ್ನವೇನೂ ಇಲ್ಲ ಎಂಬು ಪರೋಕ್ಷವಾಗಿ ಒಪ್ಪಿಕೊಂಡಂತಾಗಿದೆ. ಲಾಕ್‌ಡೌನ್‌ನಿಂದಾಗಿ ವಾಹನ ಸಂಚಾರ ಇಳಿಕೆಯಾದ್ದರಿಂದ ಮಾಲಿನ್ಯ ಪ್ರಮಾಣ ತಗ್ಗಿತೇ ಹೊರತು ಇಲಾಖೆ ಪ್ರಯತ್ನ, ಅಧಿಕಾರಿಗಳ ಶ್ರಮದಿಂದ ಮಾಲಿನ್ಯ ನಿಯಂತ್ರಣ ಕಾರ್ಯ ನಡೆದಿಲ್ಲ ಎಂಬುದು ಇದರಿಂದ ಸ್ಪಷ್ಟವಾಯಿತಲ್ಲದೆ, ಇದು ಇಲಾಖೆಯ ಕಾರ್ಯ ವೈಖರಿಯನ್ನು ಎತ್ತಿ ತೋರಿಸುವಂತಿತ್ತು.
ಎರಡು ತಿಂಗಳಿಗೂ ಹೆಚ್ಚು ದಿನ ಲಾಕ್ ಡೌನ್‌ನಿಂದಾಗಿ ವಾಹನ ಸಂಚಾರ ವಿರಳವಾಗಿತ್ತು. ರಾಜಧಾನಿ ಬೆಂಗಳೂರು ಸೇರಿ ರಾಜ್ಯಾದ್ಯಂತ ಮಾಲಿನ್ಯ ಪ್ರಮಾಣ ಕಡಿಮೆಯಾಗಿತ್ತು. ಈ ಮಧ್ಯೆ, ವಿಶ್ವ ಪರಿಸರ ದಿನದ ಅಂಗವಾಗಿ ಕೋವಿಡ್ ಹಿನ್ನೆಲೆಯಲ್ಲಿ ಪರಿಸರ ಸಂರಕ್ಷಣೆ ಮಹತ್ವ ದ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಪರಿಣಾಮಕಾರಿಯಾಗಿ ಮಾಡುವಲ್ಲಿ ಮಾಲಿನ್ಯ ನಿಯಂತ್ರಣ ವಿಫಲವಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ನಾಡಿನ ಅರಣ್ಯ- ವನ್ಯಜೀವಿ ಸಂಪತ್ತನ್ನು ಸಂರಕ್ಷಿಸುವ, ಹಸಿರು ಹೊದಿಕೆ ವೃದ್ಧಿಸುವ ಜವಾಬ್ದಾರಿ ಹೊತ್ತ ಇಲಾಖೆ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ವರ್ಷಕ್ಕೊಮ್ಮೆ ಅರ್ಥಪೂರ್ಣವಾಗಿ ಆಚರಿಸುತ್ತಿದ್ದ “ವಿಶ್ವ ಪರಿಸರ ದಿನ’ವನ್ನು ಈ ಬಾರಿ “ಶಾಸ್ತ್ರ’ಕ್ಕೆ ಎಂಬಂತೆ ನಡೆಸಿದ್ದು ಚರ್ಚೆಗೆ ಗ್ರಾಸವಾಗಿದೆ. ಸಚಿವರಾದ ಆನಂದ್ ಸಿಂಗ್,
ಬಸವರಾಜ ಬೊಮ್ಮಾಯಿ, ಸಿ.ಟಿ.ರವಿ, ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸಂದೀಪ್ ದವೆ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ವಿಜಯ ಕುಮಾರ್ ಗೋಗಿ, ಸದಸ್ಯ ಕಾರ್ಯದರ್ಶಿ ಶ್ರೀನಿವಾಸುಲು ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಚೇರಿ ಕಾರ್ಯಕ್ರಮಕ್ಕಷ್ಟೇ ಸೀಮಿತವಾದ ಇಲಾಖೆ!
ಮುಖ್ಯಮಂತ್ರಿಗಳ ಗೃಹ ಕಚೇರಿ “ಕೃಷ್ಣಾ’ದಲ್ಲಿ ಶುಕ್ರವಾರ ಸರಳ ಕಾರ್ಯಕ್ರಮಕ್ಕೆ ಪರಿಸರ ದಿನಾಚರಣೆ ಸೀಮಿತವಾಗಿತ್ತು. ಪರಿಸರ ಗೀತೆ, ಯೂಟ್ಯೂಬ್ ಚಾನಲ್ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿಯ ಬಳಕೆದಾರ ಸ್ನೇಹಿ ವೆಬ್‌ಸೈಟ್‌ಗೆ ಚಾಲನೆ ನೀಡುವಂತಹ ನಾಮ್ ಕೇವಾಸ್ತೆ ಕಾರ್ಯಕ್ರಮ ಹೊರತುಪಡಿಸಿದರೆ ಪರಿಸರ ದಿನಾಚರಣೆಯನ್ನು ನಿತ್ಯೋತ್ಸವದಂತೆ ವರ್ಷವಿಡೀ ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿಶ್ವಾಸ ಮೂಡಿಸುವ
ಪ್ರಯತ್ನ, ಉತ್ಸಾಹ ಇಲಾಖೆಯಲ್ಲಿ ಕಾಣಲಿಲ್ಲ. ಪರಿಸರ ದಿನದ ಹಿನ್ನೆಲೆಯಲ್ಲಿ ಕನಿಷ್ಠ ಸಸಿ ನೆಟ್ಟು ಪೋಷಿಸುವ ಇಲ್ಲವೇ ಕುಂಡದಲ್ಲಿನ ಸಸಿಗಳಿಗಾದರೂ
ನೀರೆರೆದು ಹಸಿರು ವೃದಿಟಛಿಗೆ ಶ್ರಮಿಸುವ ಸಂದೇಶ ಸಾರುವ ಉತ್ಸಾಹ ಯಾರಲ್ಲೂ ಕಾಣಲಿಲ್ಲ. ಕೋವಿಡ್ ಸೋಂಕು ಭೀತಿ, ಲಾಕ್‌ಡೌನ್, ಸಾಮಾಜಿಕ ಅಂತರ ಪಾಲನೆ ಹೆಸರಿನಲ್ಲಿ ಕೇವಲ ಕಚೇರಿಯೊಂದರಲ್ಲಿ ಸಭೆಗಷ್ಟೇ ಪರಿಸರ ದಿನ ಸೀಮಿತವಾಗಿದ್ದು ವಿಪರ್ಯಾಸ!
ಜೂ. 6ರ ವಿಶ್ವ ಪರಿಸರ ದಿನದಂದು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಸಸಿ ನೆಡುವ ಕಾರ್ಯಕ್ಕೆ ಚಾಲನೆ ನೀಡುವುದು, ಪರಿಸರ ಸ್ನೇಹಿ ಚಟುವಟಿಕೆ, ಪರಿಸರ
ಜಾಗೃತಿ ಮೂಡಿಸುವ ಕಾರ್ಯಕ್ರಮಗಳು ನಡೆಯುತ್ತಿದ್ದವು. ಜತೆಗೆ ಮಾಲಿನ್ಯ ನಿಯಂತ್ರಣ ಹಾಗೂ ತಡೆಗೆ ಅನುಸರಿಸಬೇಕಾದ ಕ್ರಮಗಳು, ಸುಧಾರಿತ ಸಾಧನ- ಉಪಕರಣಗಳ ಪ್ರದರ್ಶನ, ಬಳಕೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನಗಳು ಪರಿಸರ ದಿನದ ಆಕರ್ಷಣೆಯಾಗಿರುತ್ತಿದ್ದವು. ಆದರೆ ಈ ಬಾರಿ ಅಂತಹ ಯಾವುದೇ ಪ್ರಯತ್ನವೇ ನಡೆದಂತಿಲ್ಲ. ನಾಗರಿಕ ಸಂಸ್ಥೆಗಳು, ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು, ನಾನಾ ಸಂಘಟನೆಯವರು, ಉದ್ದಿಮೆ, ಕೈಗಾರಿಕಾ ವಲಯ ದವರು ಸಸಿ ನೆಟ್ಟು ಪರಿಸರ ದಿನವನ್ನು ಆಚರಿಸಿದ್ದಾರೆ. ವರ್ಷವಿಡೀ ಇದೇ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಇಲಾಖೆ ಮಾತ್ರ ಕಚೇರಿ ಕಾರ್ಯಕ್ರಮಕ್ಕೆ ಸೀಮಿತಗೊಳಿಸಿದ್ದು ಚರ್ಚೆಗೆ ಗ್ರಾಸವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Hubli: ಗ್ಯಾರಂಟಿ ಯೋಜನೆ ಹಣ ನಿರ್ಹವಣೆಗೆ ಬಿಪಿಎಲ್ ಕಾರ್ಡ್ ರದ್ದು: ವಿಜಯೇಂದ್ರ ಆರೋಪ
Renukaswamy Case: ದರ್ಶನ್ ಜಾಮೀನು ಅರ್ಜಿ ವಿಚಾರಣೆ ಮುಂದೂಡಿಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.