ಪರಿಹಾರ ಮರೀಚಿಕೆ; ಕೋವಿಡ್‌ನಿಂದ ಮೃತರಿಗೆ 1 ಲಕ್ಷ ರೂ. ನೆರವು ದೂರ
Team Udayavani, Dec 13, 2021, 7:08 AM IST
ಬೆಂಗಳೂರು: ಕೊರೊನಾದಿಂದ ಮೃತ ಪಟ್ಟ ಬಿಪಿಎಲ್ ಕುಟುಂಬ ಸದಸ್ಯ ರಿಗೆ ಒಂದು ಲಕ್ಷ ರೂ. ಪರಿಹಾರ ನೀಡುವ ರಾಜ್ಯ ಸರಕಾರದ ಘೋಷಣೆ ಇನ್ನೂ ಭರವಸೆ ಯಾಗಿಯೇ ಉಳಿ ದಿದೆ. ದುಡಿಯುವ ವ್ಯಕ್ತಿ ಯನ್ನು ಕಳೆದುಕೊಂಡು ಆರ್ಥಿಕ ಸಂಕಷ್ಟಕ್ಕೆ ಸಿಲು ಕಿರುವ ಕುಟುಂಬಗಳಿಗೆ ಆಸರೆಯಾಗಲು ಕೈಗೊಂಡ ಈ ತೀರ್ಮಾನ ಆರು ತಿಂಗಳಾದರೂ ಅನುಷ್ಠಾನವಾಗಿಲ್ಲ.
ಪರಿಹಾರಕ್ಕೆ ಸಲ್ಲಿಕೆಯಾಗಿದ್ದ ಅರ್ಜಿಗಳು ಜಿಲ್ಲಾಧಿಕಾರಿಗಳಿಂದ ಪರಿಶೀಲನೆಗೊಳಪಟ್ಟು ಅರ್ಹ ಎಂಬ ಮುದ್ರೆ ಒತ್ತಿದ್ದರೂ ಪರಿಹಾರ ಮಾತ್ರ ಕೈ ಸೇರಿಲ್ಲ. ರಾಜ್ಯ ಸರಕಾರದ ಜತೆ ಕೇಂದ್ರ ಸರಕಾರವೂ 50 ಸಾವಿರ ರೂ. ಪರಿಹಾರ ಘೋಷಿ ಸಿತ್ತು. ಬಿಪಿಎಲ್ ಮತ್ತು ಎಪಿಎಲ್ ಕುಟುಂಬ ದವರಿಗೆ ಕೇಂದ್ರದ ಪರಿಹಾರ ತಲುಪಿದೆ. ಆದರೆ ರಾಜ್ಯ ಸರಕಾರ ಬಿಪಿಎಲ್ ಕುಟುಂಬ ದವರಿಗೆ ಘೋಷಿಸಿದ ಪರಿಹಾರ ತಲುಪಿಲ್ಲ.
ಅರ್ಜಿ ಹಾಕಲು ಅಡ್ಡಿ
ಬಿಪಿಎಲ್ ಕುಟುಂಬಗಳಲ್ಲಿ ದುಡಿಯುವ ವಯಸ್ಕರು ಎಂದು ಮೊದಲ ಆದೇಶದಲ್ಲಿ ತಿಳಿಸ ಲಾಗಿತ್ತು. ಹೀಗಾಗಿ ಹಿರಿಯರು ಮೃತಪಟ್ಟಿದ್ದರೆ ಅವಕಾಶ ಇರಲಿಲ್ಲ. ಇದರಿಂದಾಗಿ ಬಹುತೇಕ ಕುಟುಂಬಗಳು ಪರಿಹಾರಕ್ಕೆ ಅರ್ಜಿ ಹಾಕ ದಂತಾಯಿತು. ಜನಪ್ರತಿನಿಧಿಗಳ ಒತ್ತಾಯದ ಅನಂತರ ಯಾವುದೇ ವಯಸ್ಸಿನ ಒಬ್ಬರಿಗೆ ಪರಿ ಹಾರ ಎಂದು ಮರು ತಿದ್ದುಪಡಿ ಮಾಡ ಲಾಯಿತು. ಅನಂತರ ಮತ್ತೆ ಅರ್ಜಿ ಸ್ವೀಕಾರ ಮಾಡಲಾಗುತ್ತಿದೆಯಾದರೂ ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ಪರಿಹಾರ ಸಿಕ್ಕಿಲ್ಲ.
ಕಂದಾಯ ಇಲಾಖೆ ಅಧಿಕಾರಿಗಳ ಪ್ರಕಾರ, ಇದುವರೆಗೆ ಪರಿಹಾರಕ್ಕೆ ಸ್ವೀಕರಿಸಿರುವ ಅರ್ಜಿ ಗಳ ಸಂಖ್ಯೆ 15,999. ಆ ಪೈಕಿ ಬಿಪಿಎಲ್ ಕುಟುಂಬಗಳದ್ದು 9,080, ಎಪಿಎಲ್ ಕುಟುಂ ಬ ಗಳದ್ದು 6,918. ಜಿಲ್ಲಾಧಿಕಾರಿಗಳಿಂದ ಅನುಮೋದನೆಗೊಂಡ ಬಿಪಿಎಲ್ ಪ್ರಕರಣಗಳು 6,736, ಎಪಿಎಲ್ ಪ್ರಕರಣಗಳು 5,242 ಸೇರಿ 11,978. 9,647 ಕುಟುಂಬಗಳಿಗೆ ಕೇಂದ್ರ ಸರಕಾರದ 50 ಸಾವಿರ ರೂ. ಪರಿಹಾರ ಸಿಕ್ಕಿದೆ.
ತಿರಸ್ಕೃತ ಅಥವಾ ಇನ್ನೂ ವಿಲೇವಾರಿ ಆಗದ ಅರ್ಜಿಗಳ ವಿಚಾರದಲ್ಲಿ ಪ್ರಮಾಣಪತ್ರ ಮತ್ತಿತರ ಹೆಚ್ಚುವರಿ ದಾಖಲೆ ಅಗತ್ಯವಿದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. ಆದರೆ ಬಗ್ಗೆ ಬಹುತೇಕ ಸಂತ್ರಸ್ತ ಕುಟುಂಬ ಸದಸ್ಯರಿಗೆ ಮಾಹಿತಿ ನೀಡಿಲ್ಲ ಎನ್ನಲಾಗಿದೆ.
ಇದನ್ನೂ ಓದಿ:ಮಧ್ಯಪ್ರದೇಶದ 5 ಕಡೆ ಡ್ರೋನ್ ತಂತ್ರಜ್ಞಾನ ಶಾಲೆ: ಜ್ಯೋತಿರಾಧಿತ್ಯ ಸಿಂಧಿಯಾ
38,243 ಮಂದಿ ಸಾವು
ರಾಜ್ಯ ಸರಕಾರದ ಅಂಕಿಅಂಶ ಪ್ರಕಾರ 2020ರ ಮಾ. 8ರಿಂದ ಇದುವರೆಗೆ ಕೊರೊ ನಾದಿಂದ ಮೃತಪಟ್ಟವರ ಸಂಖ್ಯೆ 38,243. ಆ ಪೈಕಿ 20 ಸಾವಿರ ಕುಟುಂಬಗಳು ಬಿಪಿಎಲ್ ವ್ಯಾಪ್ತಿಗೆ ಬರಬಹುದು ಎಂದು ಅಂದಾಜಿಸ ಲಾಗಿತ್ತು. ವಿಪಕ್ಷಗಳ ಪ್ರಕಾರ 1 ಲಕ್ಷ ಮಂದಿ ಕೊರೊನಾದಿಂದ ಮೃತಪಟ್ಟಿದ್ದು, ಬಹುತೇಕ ಪ್ರಕರಣಗಳಲ್ಲಿ ಕೊರೊನಾದಿಂದ ಮೃತಪಟ್ಟ ಪ್ರಮಾಣಪತ್ರ ಸಿಕ್ಕಿಲ್ಲ, ಪರಿಹಾರ ಕೊಡಬೇಕಾ ಗುತ್ತದೆ ಎಂದು ಕೊರೊನಾ ಮೃತ ಪ್ರಕರಣ ಮುಚ್ಚಿಡಲಾಗಿದೆ ಎಂಬ ಆರೋಪವೂ ಇದೆ.
ಸಚಿವರು, ಶಾಸಕರ ಪಟ್ಟು
ಪರಿಹಾರ ನಾವೇ ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರು, ಸ್ಥಳೀಯ ಶಾಸಕರು ಪಟ್ಟು ಹಿಡಿದಿದ್ದಾರೆ. ಅಧಿ ಕಾರಿ ಗಳಿಂದ ಕೊಡಿಸಲು ಜನಪ್ರತಿನಿಧಿಗಳಿಗೆ ಮನಸ್ಸಿಲ್ಲ. ಹೀಗಾಗಿ ಪರಿಹಾರ ವಿತರಣೆ ವಿಳಂಬ ವಾಗುತ್ತಿದೆ. ಪರಿಷತ್ ಚುನಾವಣೆ ನೀತಿ ಸಂಹಿತೆ ಡಿ. 14ರ ವರೆಗೆ ಇದೆ. ಬಳಿಕ 56 ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ನೀತಿ ಸಂಹಿತೆ ಡಿ. 17ರಿಂದ ಜಾರಿಯಾಗಲಿದೆ. ಹೀಗಾಗಿ ಪರಿಹಾರ ವಿತರಣೆ ಮತ್ತಷ್ಟು ವಿಳಂಬ ವಾಗಲಿದೆ ಎನ್ನಲಾಗುತ್ತಿದೆ.
ದೇಶದಲ್ಲೇ ಮೊದಲಿಗೆ ರಾಜ್ಯ ದಲ್ಲಿ ಕೊರೊನಾದಿಂದ ಮೃತ ಪಟ್ಟ ಬಿಪಿಎಲ್ ಕುಟುಂಬ ಸದಸ್ಯ ರೊಬ್ಬ ರಿಗೆ 1 ಲಕ್ಷ ರೂ. ಪರಿಹಾರ ಘೋಷಿಸಲಾಗಿದೆ. ಪರಿಹಾರ ವಿತರಿಸಲು ಯಾವುದೇ ಸಮಸ್ಯೆ ಇಲ್ಲ, ಚುನಾವಣ ನೀತಿ ಸಂಹಿತೆಯಿಂದ ತಡವಾಗಿದೆ.
– ಆರ್. ಅಶೋಕ್, ಕಂದಾಯ ಸಚಿವ
-ಎಸ್. ಲಕ್ಷ್ಮೀನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಹಿಳೆಯರಿಗೆ ಉಚಿತ ಕೊಟ್ಟು, ಪುರುಷರಿಗೆ ಬಸ್ ದರ ಏರಿಕೆ ಭಾರ ಸರಿಯಲ್ಲ: ಬಿ.ಎಸ್.ಯಡಿಯೂರಪ್ಪ
Passes Away: ಹಿರಿಯ ಸಾಹಿತಿ ನಾ.ಡಿ’ಸೋಜಾ ವಿಧಿವಶ
BJP Inner Politics: ಬಿ.ವೈ.ವಿಜಯೇಂದ್ರ ಬಿಜೆಪಿ ಹಂಗಾಮಿ ರಾಜ್ಯಾಧ್ಯಕ್ಷ: ಬಸನಗೌಡ ಯತ್ನಾಳ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Uttar Pradesh: ಮಹಾಕುಂಭದಲ್ಲಿ ಮುಸ್ಲಿಮರ ಮತಾಂತರ: ಯೋಗಿಗೆ ಮೌಲ್ವಿ ಪತ್ರ
Bangladesh ನ್ಯಾಯಾಂಗ ಸಿಬಂದಿಯ ಭಾರತದಲ್ಲಿನ ತರಬೇತಿ ರದ್ದು
Bhopal: ಭಕ್ತರು ನೀಡಿದ್ದ ದೇಣಿಗೆ ಜತೆಗೆ ಇಸ್ಕಾನ್ ಸಿಬಂದಿ ಪರಾರಿ: ದೂರು
Garlic: ಚೀನದಿಂದ ಕದ್ದು ಸಾಗಿಸುತ್ತಿದ್ದ 300 ಬ್ಯಾಗ್ ಬೆಳ್ಳುಳ್ಳಿ ವಶಕ್ಕೆ
Pakistan: ಬಲೂಚ್‌ನಲ್ಲಿ ಆತ್ಮಾಹುತಿ ದಾಳಿ: 6 ಸಾವು, 25 ಮಂದಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.