Renuka Swamy Case ಶವ ವಿಲೇವಾರಿಗೆ 30 ಲಕ್ಷ ರೂ. ನೀಡಿದ್ದ ದರ್ಶನ್?
ಮೃತಪಟ್ಟ ವಿಷಯ ತಿಳಿದು ಶೆಡ್‌ಗೆ ಬಂದಿದ್ದ ದರ್ಶನ್; ಶವ ಸಾಗಿಸಲು ಸುದೀರ್ಘ ಚರ್ಚೆ?
Team Udayavani, Jun 13, 2024, 7:25 AM IST
ಬೆಂಗಳೂರು: ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಕೆಲವು ಸ್ಫೋಟಕ ಮಾಹಿತಿಗಳು ಬೆಳಕಿಗೆ ಬಂದಿದ್ದು, ಶವವನ್ನು ಸಾಗಿಸಲು ದರ್ಶನ್ ಇತರ ಆರೋಪಿಗಳಿಗೆ 30 ಲಕ್ಷ ರೂ. ನೀಡಿದ್ದಾರೆ ಎಂದು ಹೇಳಲಾಗಿದೆ.
ಇದೇ ವೇಳೆ ದರ್ಶನ್ ಆಪ್ತನಾಗಿರುವ ಆರೋಪಿ ದೀಪಕ್, ಪೊಲೀಸರಿಗೆ ಶರಣಾದ ನಾಲ್ವರಿಗೆ ತಲಾ 5 ಲಕ್ಷ ರೂ. ನೀಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಜೂ. 8ರಂದು ರಾತ್ರಿ 10 ಗಂಟೆ ಸುಮಾರಿಗೆ ತೀವ್ರ ಹಲ್ಲೆಯಿಂದ ರೇಣುಕಾಸ್ವಾಮಿ ಮೃತ ಪಟ್ಟಿದ್ದಾರೆ ಎಂಬುದನ್ನು ತಿಳಿದ ದರ್ಶನ್, ಆತಂಕದಿಂದ ಪಟ್ಟಣಗೆರೆ ಶೆಡ್‌ಗೆ ಬಂದಿದ್ದಾರೆ. ಅನಂತರ ರೇಣುಕಾಸ್ವಾಮಿ ಮೃತದೇಹ ಕಂಡು ಸುಮಾರು ಒಂದೂವರೆ ತಾಸು ಅಲ್ಲಿಯೇ ಇದ್ದು, ಮೃತದೇಹವನ್ನು ಬೇರೆಡೆ ಸಾಗಿಸಲು ಸಂಚು ರೂಪಿಸಿದ್ದಾರೆ. ಆಗ ದರ್ಶನ್, 30 ಲಕ್ಷ ರೂ. ನೀಡುತ್ತೇನೆ. ಮೃತದೇಹವನ್ನು ಬೇರೆ ಎಲ್ಲಾದರೂ ಬಿಸಾಕಿ ಬಿಡಿ ಎಂದು ತನ್ನ ಆಪ್ತ, ಹೊಟೇಲ್ ಉದ್ಯಮಿ ಪ್ರದೋಶ್‌ಗೆ ಸೂಚಿಸಿದ್ದಾರೆ. ಬಳಿಕ ಪ್ರದೋಶ್ ಹಾಗೂ ಇತರರು ಶವವನ್ನು ಸ್ಕಾರ್ಪಿಯೋ ಕಾರಿನಲ್ಲಿ ಕೊಂಡೊಯ್ದು ಸತ್ವ ಅಪಾರ್ಟ್‌ಮೆಂಟ್ ಮುಂಭಾಗದ ಮೋರಿಗೆ ಎಸೆದಿದ್ದಾರೆ.
ತಲಾ 5 ಲಕ್ಷ ರೂ. ಕೊಟ್ಟಿದ್ದ ದರ್ಶನ್ ಆಪ್ತ ದೀಪಕ್
ಶವ ಪತ್ತೆಯಾದ ಕೂಡಲೇ ದರ್ಶನ್ ಆಪ್ತ ದೀಪಕ್, ಚಿತ್ರದುರ್ಗದ ರಾಘವೇಂದ್ರ, ದರ್ಶನ್ ಕಾರು ಚಾಲಕ ಕಾರ್ತಿಕ್, ನಿಖೀಲ್ ನಾಯಕ್, ಕೇಶವ ಮೂರ್ತಿಗೆ ಕೊಲೆ ಪ್ರಕರಣದಲ್ಲಿ ಶರಣಾಗುವಂತೆ ಸೂಚಿಸಿದ್ದ. ಅಲ್ಲದೆ ಕೊಲೆಯಲ್ಲಿ ದರ್ಶನ್ ಹೆಸರು ಬರಬಾರದು. ಅದಕ್ಕಾಗಿ ತಲಾ 5 ಲಕ್ಷ ರೂ. ನೀಡುತ್ತೇನೆ ಎಂದಿದ್ದ. ಕೇಶವ ಮೂರ್ತಿ ಮತ್ತು ನಿಖೀಲ್‌ಗೆ ಸ್ಥಳದಲ್ಲೇ 5 ಲಕ್ಷ ರೂ. ಕೊಟ್ಟಿದ್ದಾನೆ. ರಾಘವೇಂದ್ರ ಮತ್ತು ಕಾರ್ತಿಕ್ ಜೈಲಿಗೆ ಹೋದ ಬಳಿಕ, ಅವರ ಮನೆಯವರಿಗೆ ಹಣ ತಲುಪಿಸುತ್ತೇನೆ. ವಕೀಲರ ಶುಲ್ಕ ಕೂಡ ನಾನೇ ಕೊಡುತ್ತೇನೆ ಎಂದು ಹೇಳಿದ್ದಾಗಿ ಶರಣಾದ ಆರೋಪಿಗಳು ಹೇಳಿದ್ದರು.
ಆರೋಪಿಗಳ ಸಂಖ್ಯೆ 13 ಅಲ್ಲ 17: ಬಾಕಿ ನಾಲ್ವರಿಗಾಗಿ ಶೋಧ
ರೇಣುಕಾಸ್ವಾಮಿ ಹತ್ಯೆ ಪ್ರಕರಣ ದಲ್ಲಿ 13 ಮಂದಿ ಆರೋಪಿಗಳಲ್ಲ, 17 ಮಂದಿ ಎಂಬುದು ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತಲೆಮರೆಸಿಕೊಂಡಿರುವ ನಾಲ್ವರಿಗಾಗಿ ಶೋಧ ಮುಂದುವರಿ ದಿದೆ. 13 ಮಂದಿ ಬಂಧನವಾಗಿದೆ.
ದರ್ಶನ್ ಮಹೀಂದ್ರ ಜೀಪ್, ಸ್ಕಾರ್ಪಿಯೋ ಕಾರು ವಶಕ್ಕೆ
ಬಂಧಿತ ಆರೋಪಿಗಳು ಕೃತ್ಯಕ್ಕೆ ಬಳಸಿದ್ದ ಸ್ಕಾರ್ಪಿಯೋ ಮತ್ತು ದರ್ಶನ್ ಓಡಾಟಕ್ಕೆ ಬಳಸಿದ್ದ ಮಹೀಂದ್ರ ಜೀಪನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸ್ಕಾರ್ಪಿಯೋ ಕಾರಿನಲ್ಲಿ ರೇಣುಕಾಸ್ವಾಮಿ ಮೃತದೇಹವನ್ನು ಸಾಗಿಸಲಾಗಿತ್ತು.
ಕೊಲೆ ಮಾಡಿಲ್ಲ, ಆದರೆ ಹೊಡೆದಿದ್ದು ನಿಜ: ದರ್ಶನ್
ಪೊಲೀಸ್ ವಿಚಾರಣೆ ವೇಳೆ, ರೇಣುಕಾಸ್ವಾಮಿಗೆ ಒಂದೆರೆಡು ಬಾರಿ ಹೊಡೆದಿದ್ದೆ. ಆದರೆ ಆತನ ಕೊಲೆ ಮಾಡಿಲ್ಲ ಎಂದು ದರ್ಶನ್ ಹೇಳಿಕೊಂಡಿದ್ದಾರೆ. ಇನ್ನೊಮ್ಮೆ ಹೀಗೆ ಮಾಡಬೇಡ ಎಂದು ಎಚ್ಚರಿಕೆ ನೀಡಿ ಸುಮ್ಮನಾಗಿದ್ದೆ. ಆದರೆ ಆಪ್ತರು ಈ ರೀತಿ ಮಾಡಿದ್ದಾರೆ. ಬಳಿಕ ತಡರಾತ್ರಿ ಆತ ಮೃತಪಟ್ಟಿದ್ದಾನೆ ಎಂದು ವಿಚಾರಣೆ ವೇಳೆ ತಿಳಿಸಿದ್ದಾರೆ.
ಚಪ್ಪಲಿಯಿಂದ ಹೊಡೆದಿದ್ದ ಪವಿತ್ರಾ ಗೌಡ
ದರ್ಶನ್ ಸೇರಿ ಆತನ ತಂಡ ರೇಣುಕಾಸ್ವಾಮಿ ಮೇಲೆ ಹಲ್ಲೆ ನಡೆಸುವಾಗ ಪವಿತ್ರಾ ಗೌಡ ಕೂಡ ಚಪ್ಪಲಿಯಿಂದ ಹೊಡೆದಿದ್ದಳು. ಅನಂತರ ದರ್ಶನ್ ಕೂಡ ಮರದ ಪಟ್ಟಿಯಿಂದ ಹಲ್ಲೆ ನಡೆಸಿದ್ದಾರೆ. ಪರಿಣಾಮ ತೀವ್ರ ರಕ್ತಸ್ರಾವದಿಂದ ಅಸ್ವಸ್ಥಗೊಂಡಿದ್ದ ರೇಣುಕಾಸ್ವಾಮಿಗೆ ಎಚ್ಚ ರಿಕೆ ನೀಡಿ ದರ್ಶನ್ ತೆರಳಿದ್ದ. ಆಗಲೇ ರೇಣುಕಾ ಸ್ವಾಮಿ ಅರ್ಧಜೀವ ಕಳೆದುಕೊಂಡಿದ್ದ. ಅನಂತರ ಇತರ ಆರೋಪಿಗಳು ಹಲ್ಲೆ ನಡೆಸಿದ್ದರಿಂದ ರೇಣುಕಾಸ್ವಾಮಿ ಮೃತಪಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಸಿಬಿಐಗೆ ಕೊಡುವ ಅಗತ್ಯವಿಲ್ಲ
ಕೊಲೆಯಾದ ರೇಣುಕಾಸ್ವಾಮಿ ಕುಟುಂಬದ ಕುರಿತು ಮುಖ್ಯ ಮಂತ್ರಿ ಜತೆಗೆ ಚರ್ಚಿಸುತ್ತೇನೆ. ಪ್ರಕ ರಣದ ತನಿಖೆ ಮುಂದುವರಿದಿದ್ದು,13 ಆರೋಪಿಗಳನ್ನು ಈಗಾಗಲೇ ಬಂಧಿಸ ಲಾಗಿದೆ. ತನಿಖೆಯನ್ನು ಸಿಬಿಐಗೆ ಕೊಡುವ ಅಗತ್ಯ ಇಲ್ಲ. ತನಿಖೆ ಪೂರ್ಣಗೊಂಡ ಬಳಿಕ ಎಲ್ಲ ಮಾಹಿತಿ ಗೊತ್ತಾಗಲಿದೆ.
-ಜಿ. ಪರಮೇಶ್ವರ್, ಗೃಹ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
ರಾಜ್ಯದಲ್ಲಿ ಶೇ. 27 ಪ್ರೌಢಶಾಲಾ ಶಿಕ್ಷಕ ಹುದ್ದೆ ಖಾಲಿ! ಕಲ್ಯಾಣ ಕರ್ನಾಟಕದಲ್ಲಿಯೇ ಹೆಚ್ಚು
Waqf ಬಗ್ಗೆ ಬಿವೈವಿ ಜತೆ ಮಾತಾಡುವ ಅವಶ್ಯಕತೆ ನನಗಿಲ್ಲ: ಯತ್ನಾಳ್
ರಾಜ್ಯದ ಅರಣ್ಯ ನಿಧಿಗಾಗಿ ಕೇಂದ್ರ ಸರಕಾರಕ್ಕೆ ನಿಯೋಗ: ಅರಣ್ಯ ಸಚಿವ ಖಂಡ್ರೆ
Bus Fare Hike: ಸರಕಾರದ ಹೊಟ್ಟೆಗೆ ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.