ಸೀಳುನಾಯಿ ಪದ ಬಳಕೆ : ಸಿದ್ದರಾಮಯ್ಯ ವಿರುದ್ಧ ರೇಣುಕಾಚಾರ್ಯ ಕಿಡಿ
ನಾಯಿಗೆ ಇರುವ ನಿಯತ್ತು ಬೇರೆಯವರಿಗೆ ಇಲ್ಲ, ಬಿಜೆಪಿ ಶಾಸಕರು ಕೈಕಟ್ಟಿ ಕೂರುವುದಕ್ಕಾಗುತ್ತದೆಯೇ?
Team Udayavani, Jun 9, 2022, 1:50 PM IST
ಬೆಂಗಳೂರು:ಸೀಳುನಾಯಿ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಬಿಜೆಪಿ ಶಾಸಕ ಎಂ. ಪಿ. ರೇಣುಕಾಚಾರ್ಯ ಕಿಡಿ ಕಾರಿದ್ದು,ಲಘುವಾಗಿ ಮಾತನಾಡಿದರೆ ಸೋನಿಯಾ ಗಾಂಧಿ ಮೆಚ್ಚಿಸಹುದು ಅಂತ ಬಹಳ ಹಗುರವಾಗಿ ಮಾತನಾಡುತ್ತಾರೆ ಎಂದು ಆಕ್ರೋಶ ಹೋರ ಹಾಕಿದ್ದಾರೆ.
ಸಿದ್ದರಾಮಯ್ಯ ಪ್ರತಿಪಕ್ಷ ನಾಯಕರಾಗಿದ್ದಾರೆ. ಸಿದ್ದರಾಮಯ್ಯ ಬಾಯಲ್ಲಿ ಅಂತ ಪದಗಳು ಬರಬಾರದು.ಸಂಘ ಪರಿವಾರ ಭಾರತ ಮಾತೆಯ ಗೌರವ ಉಳಿಸುತ್ತಿರುವ ಸಂಸ್ಥೆ ಗಳು.ಸೀಳುನಾಯಿಗಳು ಅಂತ ಹೇಳುತ್ತಾರೆ. ನಾಯಿಗೆ ಇರುವ ನಿಯತ್ತು ಬೇರೆಯವರಿಗೆ ಇಲ್ಲ. ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದಾಗ ಬಿಜೆಪಿ ಶಾಸಕರು ಕೈಕಟ್ಟಿ ಕೂರುವುದಕ್ಕಾಗುತ್ತದೆಯೋ ಎಂದು ಪ್ರಶ್ನಿಸಿದರು.
ನಾಲಿಗೆ ಇದೆ ಅಂತ ಹೇಳಿ ಹಗುರವಾಗಿ ಮಾತನಾಡಿದರೆ ಜನ ನಿಮ್ಮನ್ನು ಒಪ್ಪುವುದಿಲ್ಲ. ಲೋಕಸಭೆಯಲ್ಲಿ ನಿಮಗೆ ವಿಳಾಸವೇ ಇಲ್ಲ. ಈ ದೇಶದ ಜನ ಸ್ಪಷ್ಟವಾಗಿ ಜನಾದೇಶ ಬಿಜೆಪಿ ಗೆ ಇದೆ ಅಂತ ತೋರಿಸಿದ್ದಾರೆ. 2023ಕ್ಕೆ ಚುನಾವಣೆ ವೇಳೆ ಚಡ್ಡಿ ಮುಟ್ಟಿದರೆ ಏನಾಗುತ್ತದೆ ಎಂದು ನಿಮಗೆ ಅರ್ಥವಾಗುತ್ತದೆ ಎಂದರು.
ದೇಶದ್ರೋಹಿಗಳನ್ನು ಗೌರವಿಸುವವರು ಸಿದ್ದರಾಮಯ್ಯ. ಕಾಂಗ್ರೆಸ್ ಹೈಕಮಾಂಡ್ ಬ್ಯಾಟರಿ ಲೋ ಆಗಿದೆ. ಹಗುರವಾಗಿ ನಾಲಿಗೆ ಹರಿಬಿಟ್ಟರೆ ಜನರೇ ಪಾಠ ಕಲಿಸುತ್ತಾರೆ. ಹತಾಶ ಮನೊಭಾವನೆಯಿಂದ ಸಿದ್ದರಾಮಯ್ಯ ಏಕಾಂಗಿಯಾಗಿದ್ದೇನೆ ಅಂತ ಮಾತನಾಡುತ್ತಾರೆ ಎಂದರು.
ಖರ್ಗೆ ಸಿಎಂ ಆಗಬೇಕು ಅಂತ ಅವರ ಗುಂಪು, ಪರಮೇಶ್ವರ್ ಸಿಎಂ ಆಗಬೇಕು ಅಂತ ಅವರ ಗುಂಪು, ಸಿದ್ದರಾಮಯ್ಯ ಸಿಎಂ ಆಗಬೇಕು ಅಂತ ಜಮೀರ್ ಬಹುಪರಾಕ್ ಹೇಳುತ್ತಾರೆ. ಬಿಜೆಪಿಯಲ್ಲಿ ಗುಂಪಿಲ್ಲ, ನಾವೆಲ್ಲರೂ ಒಗ್ಗಟ್ಟಾಗಿ ನಿಮ್ಮನ್ನು ಸೋಲಿಸುತ್ತೇವೆ. ನಮಗೆ ಸೀಳುನಾಯಿ ಅಂತ ಕರೆಯಬಹುದ, ನಮಗೆ ನಿಯತ್ತಿದೆ. ಸಿದ್ದರಾಮಯ್ಯ ಬೆಂಬಲಕ್ಕೆ ಒಬ್ಬರೇ ಒಬ್ಬ ಶಾಸಕರು ಇಲ್ಲ. ರಾಜಕೀಯವಾಗಿ ನಿಮ್ಮನ್ನು ಮುಗಿಸುತ್ತಾರೆ ಎಂದರು.
ಚಡ್ಡಿ ಚಡ್ಡಿ ಅಂತ ಹೇಳುತ್ತೀರಲ್ಲ. ಚಡ್ಡಿ ಹಾಕಿಕೊಂಡು ಸಂಘಕ್ಕೆ ಬನ್ನಿ. ವೋಟ್ ಬ್ಯಾಂಕ್ ರಾಜಕಾರಣಕ್ಕೋಸ್ಕರ ಟಿಪ್ಪು ಬೆಂಬಲಿಸಿದವರು ಸಿದ್ದರಾಮಯ್ಯ. ಚಡ್ಡಿ ಹಾಕಿಕೊಂಡು ಬಂದು ನಮಸ್ತೆ ಸದಾ ವತ್ಸಲೆ ಅಂತ ಹೇಳಲಿ ಆಗ ಗೊತ್ತಾಗುತ್ತದೆ ಅವರಿಗೆ ಎಂದರು.
ಪಠ್ಯಪುಸ್ತಕ ಪರಿಷ್ಕರಣೆ ರದ್ದು ಮಾಡಬೇಕೆಂದು ಕಾಂಗ್ರೆಸ್ ಹೋರಾಟ ಮಾಡಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಅನೇಕ ಸಂಘಟನೆಗಳು , ಮಠಾಧೀಶರು ಮಾತಾಡಿದ್ದಾರೆ. ಸಿಎಂ ಹಾಗೂ ಶಿಕ್ಷಣ ಸಚಿವರು ಸಮಸ್ಯೆ ಬಗೆ ಹರಿಸುತ್ತಾರೆ.ಕೇಸರಿಕರಣ ಮಾಡಿದರೆ ತಪ್ಪೇನು. ನೀವು ಮಠಗಳಿಗೆ ಹೋಗುವುದಿಲ್ಲವಾ ? ನೀವೇ ಮಾಡಿದ ಸಮಿತಿಗಳು ತಪ್ಪ ಮಾಡಿವೆ.ಅದರ ಬಗ್ಗೆ ಧ್ವನಿ ಎತ್ತಲಿಲ್ಲ.ಈಗಿರುವ ಸಮಸ್ಯೆ ಮುಖ್ಯಮಂತ್ರಿಗಳು ಬಗೆ ಹರಿಸುತ್ತಾರೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
Congress; ಡಿನ್ನರ್ ಮೀಟಿಂಗ್ ನಲ್ಲಿ ವಿಶೇಷ ಇಲ್ಲ: ಸಚಿವ ಭೈರತಿ ಸುರೇಶ್
Anandpur: ಮುಂದುವರೆದ ಕಾಡಾನೆಗಳ ದಾಳಿ… ಇಲಾಖೆ ವಿರುದ್ಧ ರೈತರ ಆಕ್ರೋಶ
Bengaluru:ಕುಡಿದ ಅಮಲಲ್ಲಿದ್ದ ಚಾಲಕ; ರಕ್ಷಣೆಗಾಗಿ ಚಲಿಸುತ್ತಿದ್ದ ರಿಕ್ಷಾದಿಂದ ಜಿಗಿದ ಮಹಿಳೆ
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು
ಎಸ್.ಎಂ.ಕೃಷ್ಣ ಸಂಸ್ಮರಣಾ ವೇದಿಕೆಯಿಂದ ಪಂಚನಮನ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.