ಮೀಸಲಾತಿ ಸಿಎಂ ಬೊಮ್ಮಾಯಿಯವರಿಂದ ಮಾತ್ರ ಸಾಧ್ಯ : ಬಸವ ಜಯ ಮೃತ್ಯುಂಜಯ ಶ್ರೀ

ಪಂಚಮಸಾಲಿ 2 ಎ ಮುಂದೆ ಯಾರ ಕೈಯಿಂದಲೂ ಸಾಧ್ಯವಿಲ್ಲ‌..... ಕೊಟ್ಟರೆ 150 ಸ್ಥಾನ ಗೆಲ್ಲುವ ಕನಸು ನನಸಾಗಲು ಸಾಧ್ಯ

Team Udayavani, Nov 16, 2022, 4:35 PM IST

1-dfsfsdf

ಕುಷ್ಟಗಿ: ಪಂಚಮಸಾಲಿ ಸಮಾಜಕ್ಕೆ 2 ಎ ಮೀಸಲಾತಿ ಕೊಡುವುದು ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ಮಾತ್ರ ಸಾಧ್ಯವಿದ್ದು, ಮುಂದೆ ಯಾರ ಕೈಯಿಂದಲೂ ಸಾಧ್ಯವಿಲ್ಲ‌ ಎಂದು ಕೂಡಲಸಂಗಮ ಜಗದ್ಗುರು ಪಂಚಮಸಾಲಿ ಪೀಠದ ಶ್ರೀ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲೂಕಿನ‌ ಕಡೇಕೊಪ್ಪ ಗ್ರಾಮದಲ್ಲಿ ರಾಷ್ಟ್ರಮಾತೆ ಕಿತ್ತೂರರಾಣಿ ಚನ್ನಮ್ಮರವರ 244ನೇ ಜಯಂತ್ಯುತ್ಸವ ಹಾಗೂ 199ನೇ ವಿಜಯೋತ್ಸವ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು. ಈ ಸಮಾಜಕ್ಕೆ 2-ಎ ಮೀಸಲಾತಿ ಕೊಟ್ಟರೆ ಮಾತ್ರ, ಈಗಾಗಲೇ ಬಿಜೆಪಿ ಸರ್ಕಾರ ಕಂಡಿರುವ ಮುಂದಿನ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಕನಸು, ನನಸಾಗಲು ಸಾಧ್ಯ ಎನ್ನುವುದು ಸಹ ಗೊತ್ತಾಗಿದೆ. ಈ ಸಮಾಜಕ್ಕೆ ಮೀಸಲಾತಿ ಕೊಡುವ ವಿಚಾರದಲ್ಲಿ ಕೇಂದ್ರ ಸರ್ಕಾರವೂ, ಆರ್ ಎಸ್ ಎಸ್ ಒಪ್ಪಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೂ ಕೊಡುವ ಮನಸ್ಸಿದೆ. ಆದರೆ‌ ಅವರ ನಿಧಾನಗತಿ ಗಮನಿಸಿದರೆ ಪಂಚಮಸಾಲಿ ಸಮಾಜಕ್ಕೆ ಎಲ್ಲೋ ಆತಂಕ ಶುರುವಾಗಿದೆ ಎಂದರು.

ಮೀಸಲಾತಿ ಕಪ್ ಎತ್ತಲು ಸಿಕ್ಸರ್ ಬಾರಿಸಬೇಕು…
ಈಗ ಕಬ್ಬಿಣ ಕಾದಿದ್ದು ಈಗಲೇ ಮೀಸಲಾತಿ ಕಪ್ ಗಳಿಸಲು ಸಾದ್ಯ. ಕ್ರಿಕೆಟ್ ನಲ್ಲಿ ಭಾರತ ಗೆಲ್ಲಲು ವಿರಾಟ್ ಕೊಯ್ಲಿ ಅವರು ಲಾಸ್ಟ್ ಬಾಲ್, ಲಾಸ್ಟ್ ವಿಕೆಟ್‌ ನಲ್ಲಿ ಸಿಕ್ಸರ್ ಹೊಡೆಯದೇ ಇದ್ದರೆ ಇಂಡಿಯಾ ಹೇಗೆ ಸೋಲುತ್ತದೆಯೋ ಆ ಪರಿಸ್ಥಿತಿಯಲ್ಲಿದ್ದೇವೆ. ಲಾಸ್ಟ್ ಬಾಲ್, ಲಾಸ್ಟ್ ವಿಕೆಟ್ ನಲ್ಲಿ ಸಿಕ್ಸ್ ಹೊಡೆಯಲೇ ಬೇಕಿದ್ದು, ಹೊಡೆಯದೇ ಇದ್ದರೆ ಮೀಸಲಾತಿ ಕಪ್ ಸಿಗೋದಿಲ್ಲ. ಈ ಅವಧಿಯಲ್ಲಿ ನಮ್ಮ ಸಮಾಜಕ್ಕೆ ಮೀಸಲಾತಿ ತಪ್ಪಿದರೆ ಮುಂದಿನ 5 ವರ್ಷದ ಅವಧಿಯಲ್ಲಿ ಸಿಗದಂತಾಗುತ್ತದೆ. ಇದರಿಂದ ಪಂಚಮಸಾಲಿ ಸಮುದಾಯದ ಮಕ್ಕಳು 2ಎ ಮೀಸಲಾತಿಯಿಂದ ವಂಚಿತರಾಗುವ ಸಾಧ್ಯತೆ ಇದೆ ಎಂದು ಶ್ರೀಗಳು ಕಳವಳ ವ್ಯಕ್ತಪಡಿಸಿದರು.

ಮುಂದೆ ಸಮಸ್ಯೆಯಾದಲ್ಲಿ ಈ ಹೋರಾಟ ಇಷ್ಟೊಂದು ಉಗ್ರ ಪ್ರಮಾಣದಲ್ಲಿ ಮಾಡಲು ಸಾಧ್ಯವಿಲ್ಲ. ಪಂಚಮಸಾಲಿ ಸಮಾಜ ಒಳಗೂ, ಹೊರಗೂ ಜಾಗೃತವಾಗಿದೆ ಎಂದರು.

ಹಿಂದುಳಿದ ವರ್ಗಗಳ ಆಯೋಗ ಭೇಟಿ

ರಾಜ್ಯಾದ್ಯಂತ ಹಿಂದುಳಿದ ವರ್ಗಗಳ ಆಯೋಗ ಭೇಟಿ ನೀಡುತ್ತಿರುವುದು ಪಂಚಮಸಾಲಿ ಹೋರಾಟದ ಪರಿಣಾಮವಾಗಿದೆ. ಇದೇ ನ.17 ಹಾಗೂ ನ.18 ರಂದು ಕುಷ್ಟಗಿ ತಾಲೂಕಿಗೆ ಹಿಂದುಳಿದ ವರ್ಗಗಳ ಆಯೋಗ ಕುಷ್ಟಗಿ ತಾಲೂಕಿಗೆ ಬರಲಿದ್ದು ಸಮಾಜದ ಜನರು, ಲಿಂಗಾಯತ, ವೀರಶೈವ ಹೇಳದೇ ಪಂಚಮಸಾಲಿ ಎಂದೇ ಹೇಳಬೇಕು. ಕೌಟುಂಬಿಕ ವಾಸ್ತವ ಸ್ಥಿತಿಯ ಮಾಹಿತಿ ನೀಡಬೇಕು. ಹಿಂದುಳಿದ ವರ್ಗಗಳ‌ ಆಯೋಗದ ಪ್ರವಾಸದ ಪಟ್ಟಿಯಲ್ಲಿ ಹಿರೇಮನ್ನಾಪೂರು, ಗುಮಗೇರಾ ಎಂದಿದೆ. ಸದರಿ ಗ್ರಾಮದಲ್ಲಿ‌‌ ಪಂಚಮಸಾಲಿ ಸಮಾಜದವರು ಹೆಚ್ಚಿಲ್ಲ. ಹೀಗಾಗಿ ಜುಮ್ಲಾಪೂರ, ಮುದೇನೂರು ಈ ಗ್ರಾಮಗಳ ಭೇಟಿ ನೀಡಿದರೆ ಸಮಾಜದ ವಾಸ್ತವ ಸ್ಥಿತಿ ಅರಿಯಲು ಸಾಧ್ಯ ಎಂದರು.

ದೇವೇಂದ್ರಪ್ಪ ಬಳೂಟಗಿ, ಜಿ.ಪಂ.ಮಾಜಿ ಸದಸ್ಯ ಕೆ.ಮಹೇಶ, ಪಂಚಮಸಾಲಿ ಸಮಾಜದ ಅಧ್ಯಕ್ಷ ಚಂದ್ರಶೇಖರ ನಾಲತವಾಡ, ಮಹಾಂತೇಶ ಅಗಸಿಮುಂದಿನ,ಲಿಂಗಪ್ಪ ಮಂಗಳೂರು, ಶಿವಸಂಗಪ್ಪ ಬಿಜಕಲ್, ನೂರಂದಪ್ಪ ಕಂದಕೂರು, ಡಾ.‌ನಾಗರತ್ನಮ್ಮ ಭಾವಿಕಟ್ಟಿ, ಅಮರೇಗೌಡ ನಾಗೂರು, ಶರಣಪ್ಪ ಜೀಗೇರಿ, ಕಳಕೇಶ, ಅಶೋಕ ಬಾವಿಕಟ್ಟಿ ಮತ್ತಿತರಿದ್ದರು.

ಟಾಪ್ ನ್ಯೂಸ್

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಕಳಕಮಲ್ಲಯ್ಯ ಕ್ಷೇತ್ರ: ದಕ್ಷಿಣ ಕಾಶಿ ಪ್ರಸಿದ್ಧಿಯ ಸುಕ್ಷೇತ್ರ ಶ್ರೀಕಾಲ ಕಾಲೇಶ್ವರ…

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

ಇದು ವಿಶ್ವದ ಅತಿ ಎತ್ತರದ ಏಕಶಿಲಾ ಬೆಟ್ಟ… Online ನೋಂದಣಿ ಇಲ್ಲದೆ ಚಾರಣಕ್ಕೆ ಅವಕಾಶವಿಲ್ಲ

Satish Jaraki

Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

Satish Jaraki

Congress; ಸುರ್ಜೇವಾಲ ವಿರುದ್ಧ ಸಚಿವರಿಂದಲೇ ದೂರು?: ಸತೀಶ್ ಜಾರಕಿಹೊಳಿ ಹೇಳಿದ್ದೇನು?

1-BP-Harish

BJP Rift; ಯತ್ನಾಳ್ ಪರ ಬ್ಯಾಟಿಂಗ್ ಮಾಡಿದ ಶಾಸಕ ಬಿ.ಪಿ. ಹರೀಶ್

School bag

ಜ.21 ರಂದು ಬೆಳಗಾವಿ ತಾಲೂಕಿನ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ರಜೆ ಘೋಷಣೆ

Belagavi: ಪ್ರಭಾಕರ ಕೋರೆಯವರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

Belagavi: ಪ್ರಭಾಕರ ಕೋರೆಯವರನ್ನು ಕಾಂಗ್ರೆಸ್ ಗೆ ಕರೆದಿಲ್ಲ: ಡಿಕೆ ಶಿವಕುಮಾರ್‌ ಸ್ಪಷ್ಟನೆ

MUST WATCH

udayavani youtube

|ಹೂವಿನ ತೋಟದಲ್ಲಿ ಅರಳಿದೆ ರಾಮಾಯಣ ಕಥನ

udayavani youtube

ಮಿದುಳು ನಿಷ್ಕ್ರಿಯಗೊಂಡಿದ್ದ ಮಹಿಳೆಯ ಅಂಗಾಂಗ ದಾನ

udayavani youtube

ಅಮೇರಿಕಾದಲ್ಲಿ ವೈಕುಂಠ ಏಕಾದಶಿ ಸಂಭ್ರಮ

udayavani youtube

ನಕ್ಸಲರ ಶರಣಾಗತಿಯಲ್ಲಿ ಸರಕಾರದ ನಡೆ ಸಂಶಯ ಮೂಡಿಸುವಂತಿದೆ: ಅಣ್ಣಾಮಲೈ |

udayavani youtube

ಹೇಗಿತ್ತು ಎಂ.ಜಿ.ಎಂ ಅಮೃತ ಮಹೋತ್ಸವ ಸಂಭ್ರಮ

ಹೊಸ ಸೇರ್ಪಡೆ

1-jan-26

R-Day parade; ಗಣರಾಜ್ಯೋತ್ಸವ ಪರೇಡ್‌ನಲ್ಲಿ 5,000 ಕ್ಕೂ ಹೆಚ್ಚು ಕಲಾವಿದರ ತಂಡಗಳು

1-wl

ಅಖಿಲ ಭಾರತ ಅಂತರ್‌ ವಿ.ವಿ.ವೇಟ್‌ಲಿಫ್ಟಿಂಗ್‌:ಮಂಗಳೂರು ವಿವಿ ರನ್ನರ್ ಅಪ್‌

1-sp

Farmers; ಕಬ್ಬು ಹಾನಿಗೆ ಪರಿಹಾರ ನಿಧಿ,ತೊಗರಿಗೆ ಬೆಂಬಲ ಬೆಲೆ: ಸಚಿವ ಶಿವಾನಂದ ಪಾಟೀಲ್

1-dee

Sharon Raj ಹ*ತ್ಯೆ ಕೇಸ್: ಪ್ರೇಯಸಿಗೆ ಮರ*ಣ ದಂಡನೆ ವಿಧಿಸಿದ ನ್ಯಾಯಾಲಯ

1-ani

Mangaluru; ಕೋಟೆಕಾರು ಸಹಕಾರಿ ಬ್ಯಾಂಕ್ ದರೋಡೆ : ಮೂವರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.