ಭರ್ತಿಯಾಗುತ್ತಿವೆ ಜಲಾಶಯಗಳು
13ರ ಪೈಕಿ 7 ಜಲಾಶಯಗಳು ಈಗಾಗಲೇ ಭರ್ತಿ ; ಉಳಿದ 6 ಜಲಾಶಯಗಳ ಭರ್ತಿಗೆ ಕೆಲವೇ ಅಡಿಗಳು ಬಾಕಿ
Team Udayavani, Aug 9, 2019, 5:51 AM IST
ಬೆಂಗಳೂರು: ರಾಜ್ಯದ ಜಲಾಶಯಗಳ ಪೈಕಿ ಅರ್ಧಕ್ಕರ್ಧ ಉಕ್ಕಿ ಹರಿಯುತ್ತಿದ್ದರೆ, ಉಳಿದರ್ಧ ಭರ್ತಿಯಾಗುವ ಹಂತ ತಲುಪಿವೆ.
ರಾಜ್ಯದ 13 ಬೃಹತ್ ಜಲಾಶಯಗಳ ಪೈಕಿ ಈಗಾಗಲೇ 7 ತುಂಬಿ ಹರಿಯುತ್ತಿದ್ದು, ಜಲಾಶಯ ಗಳಿಂದ ಅಪಾರ ಪ್ರಮಾಣದ ನೀರನ್ನು ಹೊರ ಬಿಡಲಾಗುತ್ತಿದೆ. ಉಳಿದ ಆರು ಜಲಾಶಯಗಳ ಭರ್ತಿಗೆ ಕೆಲವೇ ಅಡಿಗಳಷ್ಟು ಬಾಕಿ ಇದ್ದು,ಲಕ್ಷಾಂತರ ಕ್ಯುಸೆಕ್‌ಗಳಷ್ಟು ನೀರಿನ ಒಳಹರಿವಿದೆ. ಇದೇ ರೀತಿ ಮಳೆ ಮುಂದುವರಿದರೆ, ಕೆಲವೇ ದಿನಗಳಲ್ಲಿ ಜಲಾಶಯಗಳು ಭರ್ತಿಯಾಗಲಿವೆ ಎಂದು ಜಲಾಶಯಗಳ ಕಾರ್ಯ ನಿರ್ವಹಣಾ ಎಂಜಿನಿಯರ್‌ಗಳು ತಿಳಿಸಿದ್ದಾರೆ.
ಗುರುವಾರ ಬೆಳಗ್ಗೆವರೆಗೆ ಲಿಂಗನಮಕ್ಕಿ ಜಲಾಶಯದ ನೀರಿನ ಮಟ್ಟ 1,799.35 ಅಡಿ ಇತ್ತು.ಇದರ ಸಂಗ್ರಹ ಸಾಮರ್ಥ್ಯ 1,819 ಅಡಿ. ಕಳೆದ ವರ್ಷ ಇದೇ ಅವಧಿಯಲ್ಲಿ 1,809.35 ಅಡಿ.ಹಾರಂಗಿಯಲ್ಲಿ 2,849.83 ಅಡಿ,ಹೇಮಾವತಿಯಲ್ಲಿ 2,905.30 ಅಡಿ, ಕೆಆರ್‌ಎಸ್ ನೀರಿನ ಮಟ್ಟ 94 ಅಡಿ ಇದೆ. ಇವುಗಳ ಸಾಮರ್ಥ್ಯ ಕ್ರಮವಾಗಿ 2,859 ಅಡಿ, 2,922 ಅಡಿ ಹಾಗೂ 124.80 ಅಡಿ. ಭದ್ರಾದಲ್ಲಿ 2,158 ಅಡಿ ಪೈಕಿ
2,1311.66 ಅಡಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ, ಘಟಪ್ರಭಾ, ಮಲಪ್ರಭಾ,ಆಲಮಟ್ಟಿ, ನಾರಾಯಣಪುರ ಜಲಾಶಯಗಳಂತೂ ಈಗಾಗಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿವೆ.
ಮುಂಗಾರು ಪೂರ್ಣಗೊಳ್ಳಲು ಇನ್ನೂ ಹೆಚ್ಚು ಕಡಿಮೆ ಎರಡು ತಿಂಗಳು ಬಾಕಿ ಇದ್ದು, ಈಗಾಗಲೇ ಜಲಾಶಯಗಳು ಭರ್ತಿ ಆಗುತ್ತಿರುವುದು ನೆರೆ ಹಾವಳಿ ನಡುವೆಯೂ ಸಹಜವಾಗಿ ತುಸು ನಿಟ್ಟುಸಿರು ಬಿಡುವಂತಾಗಿದೆ. ಅದರಲ್ಲೂ ದಕ್ಷಿಣ
ಕರ್ನಾಟಕದಲ್ಲಿ ಕೃಷಿ, ವಿದ್ಯುತ್ ಉತ್ಪಾದನೆಗೆ ಇದು ಪೂರಕವಾಗಲಿದೆ. ಆದರೆ, ಉತ್ತರದಲ್ಲಿ ಮಾತ್ರ ಈ ಬಾರಿಯೂ ನಿರಾಸೆ ಆಗಿದೆ. ಕಾರಣ, ಕಳೆದ ಎರಡು-ಮೂರು ವರ್ಷ ಬರದಿಂದ ತತ್ತರಿಸಿದ್ದ ಆ ಭಾಗದ ರೈತರು, ಈ ಸಲ ನೆರೆಯಿಂದ ನಲುಗುವಂತಾಗಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.