ಜ. 26ರಿಂದ ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ: ಆರ್‌. ಅಶೋಕ್‌

Team Udayavani, Dec 31, 2021, 9:45 PM IST

ಜ. 26ರಿಂದ ರೈತರ ಮನೆ ಬಾಗಿಲಿಗೆ ಕಂದಾಯ ದಾಖಲೆ: ಆರ್‌. ಅಶೋಕ್‌

ಬೆಂಗಳೂರು: ಕಂದಾಯ ಇಲಾಖೆಗೆ ಸಂಬಂಧಿಸಿದ ರೈತರ ಪಹಣಿ, ಖಾತೆ, ನಕ್ಷೆ ಸಹಿತ ಎಲ್ಲ ದಾಖಲೆಗಳನ್ನು ಜ. 26ರಿಂದ ನೇರವಾಗಿ ರೈತರ ಮನೆಗಳಿಗೆ ಉಚಿತವಾಗಿ ತಲುಪಿಸಲಾಗುವುದು ಎಂದು ಕಂದಾಯ ಸಚಿವ ಆರ್‌. ಅಶೋಕ್‌ ಹೇಳಿದ್ದಾರೆ.

ಮುಖ್ಯಮಂತ್ರಿಗಳ ನೇತೃತ್ವದಲ್ಲಿ ರಾಜ್ಯದ ಎಲ್ಲ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಬಳಿಕ ಮಾತನಾಡಿದ ಅವರು, ಇದುವರೆಗೂ ರೈತರು ಜಮೀನಿನ ಪಹಣಿ, ಖಾತೆ ಬದಲಾವಣೆ, ಸರ್ವೆ ನಂಬರ್‌ ದಾಖಲೆ ಸಹಿತ ಎಲ್ಲವನ್ನೂ ಹಣ ಕೊಟ್ಟು ಪಡೆಯಬೇಕಿತ್ತು. ಜನವರಿ 26ರಿಂದ ಎಲ್ಲ ದಾಖಲೆಗಳನ್ನು ಉಚಿತವಾಗಿ ನೀಡಲಾಗುವುದು. ಸುಮಾರು 45 ಲಕ್ಷ ರೈತರಿಗೆ ದಾಖಲೆಗಳನ್ನು ಮನೆಗೆ ತಲುಪಿಸಲಾಗುವುದು ಎಂದು ಹೇಳಿದರು.

ಅಕಾಲಿಕ ಮಳೆಯಿಂದ ಉಂಟಾದ ಪ್ರವಾಹ ಮತ್ತು ಭೂಕುಸಿತದಿಂದ ಆದ ಹಾನಿಯ ಪರಿಹಾರಕ್ಕೆ ಕೇಂದ್ರ ಸರಕಾರ ಹೆಚ್ಚುವರಿಯಾಗಿ ರಾಜ್ಯಕ್ಕೆ 504.06 ಕೋ. ರೂ. ಬಿಡುಗಡೆ ಮಾಡಿದೆ. ಇನ್ನೂ ಹೆಚ್ಚಿನ ನೆರವನ್ನು ನೀಡುವುದಾಗಿ ಭರವಸೆ ನೀಡಿದೆ.

ನಮ್ಮ ಮನವಿಗೆ ಸ್ಪಂದಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರಕ್ಕೆ ಕೃತಜ್ಞತೆ ಸಲ್ಲಿಸುತ್ತೇನೆ. ಈವರೆಗೆ 16 ಲಕ್ಷಕ್ಕೂ ಅಧಿಕ ರೈತರಿಗೆ 1061.24 ಕೋ. ರೂಗಳನ್ನು ಪರಿಹಾರವಾಗಿ ನೇರವಾಗಿ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗಿದೆ. ಇದೇ ಮೊದಲ ಬಾರಿಗೆ 30 ದಿನದಲ್ಲಿ ಪರಿಹಾರ ವಿತರಿಸಿದ್ದೇವೆ. ಎಲ್ಲ ಜಿಲ್ಲಾಧಿಕಾರಿಗಳ ಪಿಡಿ ಖಾತೆಯಲ್ಲಿ 960 ಕೋ. ರೂ. ಇದೆ. ಜನರ ಅನಿರೀಕ್ಷಿತ ಸಮಸ್ಯೆ ಪರಿಹರಿಸಲು ಇದನ್ನು ಬಳಸಬಹುದಾಗಿದೆ. ಪಿಂಚಣಿ, ಕೋವಿಡ್‌ ಪರಿಹಾರಗಳನ್ನು ಬೇಗ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ. ರೈತರ ಕಂದಾಯ ಜಮೀನುಗಳಿಗೆ ಸಂಬಂಧಿಸಿದ ವ್ಯಾಜ್ಯವನ್ನು ತ್ವರಿತವಾಗಿ ಪರಿಹರಿಸಬೇಕು, ಕೇಸ್‌ಗಳ ಪ್ರಗತಿ ಬಗ್ಗೆ ಪ್ರತಿ ತಿಂಗಳು ಕಾನೂನು ಸಚಿವರಿಗೆ ಮಾಹಿತಿ ನೀಡಬೇಕು ಎಂದು ತಾಕೀತು ಮಾಡಲಾಗಿದೆ ಎಂದರು.

ಇದನ್ನೂ ಓದಿ:ಐಸಿಸಿ ವರ್ಷದ ಮಹಿಳಾ ಕ್ರಿಕೆಟಿಗ ಪ್ರಶಸ್ತಿಗೆ ಸ್ಮೃತಿ ಮಂಧನಾ ನಾಮ ನಿರ್ದೇಶನ

ಸರಕಾರಿ ದಾಖಲೆಗಳನ್ನು ಸರಿಯಾಗಿಟ್ಟು, ಜನರ ಸಮಸ್ಯೆಗಳನ್ನು ಜಿಲ್ಲಾಧಿಕಾರಿ ಮಟ್ಟದಲ್ಲಿಯೇ ಪರಿಹರಿಸಬೇಕು. ಜನರು ಬೆಂಗಳೂರಿಗೆ ಅಲೆಯುವುದನ್ನು ತಪ್ಪಿಸಬೇಕು. ಕಡತ ವಿಲೇವಾರಿಗೆ ಪ್ರಾಮುಖ್ಯ ನೀಡಿ ಆದ್ಯತೆ ಮೇರೆಗೆ ವಿಲೇವಾರಿ ಮಾಡಬೇಕು. ಇನಾಂ ಜಮೀನಿಗೆ ಸಂಬಂಧಿಸಿ ಸುಪ್ರೀಂ ಕೋರ್ಟಿಗೆ ಪ್ರಮಾಣಪತ್ರ ಸಲ್ಲಿಸುವುದಕ್ಕೆ ಸಿದ್ಧತೆ ನಡೆಸಿದ್ದೇವೆ. ಉಳುಮೆ ಮಾಡುತ್ತಿರುವವರ ಹಿತ ಕಾಯವುದು ಸರಕಾರದ ಹೊಣೆ ಎಂದು ಹೇಳಿದರು.

ಟಾಪ್ ನ್ಯೂಸ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Viral Video: ತೆರೆದ ಬಾವಿ ಮೇಲೆ ಕೂತು ಮಹಿಳೆಯ ರೀಲ್ಸ್..‌ ಕಾಲಿನಲ್ಲಿ ನೇತಾಡಿದ ಮಗು.!

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

pejawara

Tirupati Laddu Case; ದೇವಳಗಳನ್ನು ಸರ್ಕಾರದ ಸ್ವಾಧೀನದಿಂದ ಮುಕ್ತಗೊಳಿಸಿ: ಪೇಜಾವರ ಶ್ರೀ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

Davanagere; ಪ್ರಚೋದನಾತ್ಮಕ ಹೇಳಿಕೆ; ಹಿಂದೂ ಜಾಗರಣ ವೇದಿಕೆ ಮುಖಂಡ ಸತೀಶ್ ಪೂಜಾರಿ ಬಂಧನ

ಮುಂಜಾನೆ ಮನೆಗೆ ನುಗ್ಗಿ ಪುಣೆ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

Karwar: ಮುಂಜಾನೆ ಮನೆಗೆ ನುಗ್ಗಿ ಉದ್ಯಮಿಯ ಹತ್ಯೆ ; ಪತ್ನಿಗೂ ಗಂಭೀರ ಗಾಯ

School bag

School; ಶೀಘ್ರವೇ ಶಾಲಾ ಮಕ್ಕಳಿಗೆ ಆ್ಯಪ್‌ ಆಧಾರಿತ ಹಾಜರಾತಿ?

MUST WATCH

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

ಹೊಸ ಸೇರ್ಪಡೆ

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Cm Siddaramaiah: ಅರ್ಕಾವತಿ ವಿಚಾರದಲ್ಲಿ ರಿಡೂ ಎಂದಿದ್ದು ನಾನಲ್ಲ ಸುಪ್ರೀಂ ಕೋರ್ಟ್

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kaup: ಪಾಂಗಾಳದಲ್ಲಿದೆ ಕೋಟಿ ಚೆನ್ನಯರು ಈಜಿದ ಕಟ್ಟಿಕೆರೆ

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Kiccha Sudeep: ನಮ್ಮ ಚಿತ್ರರಂಗದ ಬಗ್ಗೆ ಹೆಮ್ಮೆ ಇದೆ: ಸುದೀಪ್‌

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

Panemangalore ಗ್ರಾಮ ಆಡಳಿತ ಕಚೇರಿ; ಶಿಥಿಲ ಕಟ್ಟಡದಲ್ಲೇ ಕಾರ್ಯಾಚರಣೆ

belagaviBelagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Belagavi; 2ಎ ಮೀಸಲಾತಿ ‌ವಿಚಾರವಾಗಿ ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪಂಚಮಸಾಲಿ ಶ್ರೀ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.