Nitin Gadkari: ಇಥೆನಾಲ್‌ಗೆ ಪ್ರೋತ್ಸಾಹಿಸಿದರೆ ರಾಜ್ಯದಲ್ಲಿ ಕ್ರಾಂತಿ: ಗಡ್ಕರಿ
Team Udayavani, Feb 22, 2024, 11:06 PM IST
ಬೆಳಗಾವಿ/ಶಿವಮೊಗ್ಗ: ದೇಶದಲ್ಲಿ ಈಗ ಎಥೆನಾಲ್ ಕ್ರಾಂತಿ ಆರಂಭವಾಗಿದೆ. ಕರ್ನಾಟಕ ಕೂಡ ಜೈವಿಕ ಇಂಧನ ತಯಾರಿಕೆ ಹಬ್ ಆಗಲಿದೆ. ಎಥೆನಾಲ್, ಮಿಥೆನಾಲ್, ಬಯೋ ಡೀಸೆಲ್, ಬಯೋ ಎಲ್‌ಎನ್‌ಜಿ, ಗ್ರೀನ್ ಹೈಡ್ರೋಜನ್, ವಿದ್ಯುತ್ ನಮ್ಮ ಭವಿಷ್ಯ ಎಂದು ಕೇಂದ್ರ ರಸ್ತೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.
ಬೆಳಗಾವಿಯಲ್ಲಿ 7,290 ಕೋಟಿ ರೂ. ಹಾಗೂ ಶಿವಮೊಗ್ಗದಲ್ಲಿ 6,168 ಕೋಟಿ ರೂ. ವೆಚ್ಚದ ತಲಾ 18 ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಕರ್ನಾಟಕದಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಎಥೆನಾಲ್ ದೊರೆಯುತ್ತದೆ. ಕಬ್ಬು ಬೆಳೆ ಹೆಚ್ಚಿರುವ ಕಡೆ ಎಥೆನಾಲ್ ಉತ್ಪಾದನೆ ಹಾಗೂ ಬಳಕೆಗೆ ಹೆಚ್ಚು ಅವಕಾಶಗಳಿವೆ. ರೈತರ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆ ದೃಷ್ಟಿಯಿಂದ ಎಥೆನಾಲ್ ಬಳಕೆಗೆ ರಾಜ್ಯ ಸರಕಾರ ಪ್ರೋತ್ಸಾಹ ನೀಡಬೇಕು ಎಂದು ಸಲಹೆ ನೀಡಿದರು.
ವಿಮಾನ ಇಂಧನ ಉತ್ಪಾದನೆ:
ಬೆಳಗಾವಿ ಜಿಲ್ಲೆಯಲ್ಲಿ ಕಬ್ಬು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಎಥೆನಾಲ್ ಮೂಲಕ ವಿಮಾನ ಇಂಧನ ಉತ್ಪಾದನೆಗೂ ಅವಕಾಶಗಳಿವೆ. ಕರ್ನಾಟಕ ಸರಕಾರ ಇಲ್ಲಿನ ರೈತರಿಗೆ ನೆರವು ನೀಡಿದರೆ ಮುಂದಿನ ದಿನಗಳಲ್ಲಿ ಬೆಳಗಾವಿ ಎಥೆನಾಲ್ ಉತ್ಪಾದನೆ ಅಷ್ಟೇ ಅಲ್ಲ, ವಿಮಾನಗಳ ಇಂಧನ ಉತ್ಪಾದನೆ ಮಾಡುವ ಕೇಂದ್ರವಾಗಲಿದೆ. ನಮ್ಮ ರೈತರು ಕೇವಲ ಅನ್ನದಾತರಲ್ಲ, ಉದ್ಯೋಗದಾತರು ಹಾಗೂ ವಿದ್ಯುತ್ ಉತ್ಪಾದಕರೂ ಆಗಲಿದ್ದಾರೆ ಎಂದರು.
ಎಥೆನಾಲ್ ಬಳಕೆಗೆ ಪ್ರೋತ್ಸಾಹ ನೀಡಲು ದೇಶಾದ್ಯಂತ ನಾಲ್ಕು ಸಾವಿರದಷ್ಟು ಎಥೆನಾಲ್ ಪಂಪ್ ಸ್ಥಾಪನೆಗೆ ಅನುಮತಿ ನೀಡಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಜಗತ್ತಿಗೆ ಎಥೆನಾಲ್ ರಫ್ತು ಮಾಡುಲ ಗುರಿ ಹೊಂದಲಾಗಿದೆ. ಎಥೆನಾಲ್ ಹಾಗೂ ಮಿಥೆನಾಲ್ ಆಧಾರಿತ ವಾಹನಗಳನ್ನು ರಸ್ತೆಗಿಳಿಸುವ ಮೂಲಕ ಪರಿಸರ ರಕ್ಷಣೆ ಜತೆಗೆ ರೈತರ ಆರ್ಥಿಕಾಭಿವೃದ್ಧಿಗೂ ಅವಕಾಶ ಕಲ್ಪಿಸಲಾಗುವುದು ಎಂದರು.
ರಾಜ್ಯದಲ್ಲಿ 3 ಲಕ್ಷ ಕೋಟಿ ರೂ. ವೆಚ್ಚದ ಕಾಮಗಾರಿ ಕೈಗೊಳ್ಳುವ ಗುರಿ ಹೊಂದಿದ್ದು, ಬಹುತೇಕ ಕಾಮಗಾರಿಗಳಿಗೆ ಚಾಲನೆ ದೊರೆತಿದೆ. ಬೆಳಗಾವಿ-ಗೋವಾ ಹಾಗೂ ಬೆಳಗಾವಿ-ಹುನಗುಂದ-ರಾಯಚೂರು ರಾಷ್ಟ್ರೀಯ ಹೆದ್ದಾರಿ ನಿರ್ಮಾಣದ ಬಳಿಕ ಪ್ರಯಾಣದ ಅವಧಿಯೂ ಇಳಿಯಲಿದೆ. ರಾಜ್ಯ ಸರಕಾರವು ಅರಣ್ಯ ಇಲಾಖೆ ಅನುಮತಿ ದೊರಕಿಸಿ ಕೊಡುವ ಜತೆಗೆ ಎಲ್ಲ ಅಡೆತಡೆಗಳನ್ನು ನಿವಾರಿಸಿಕೊಟ್ಟರೆ ಉಳಿದ ಕಾಮಗಾರಿಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಅನುಕೂಲವಾಗುತ್ತದೆ ಎಂದರು.
ಕೊಡಚಾದ್ರಿಯಿಂದ ಕೊಲ್ಲೂರಿಗೆ ರೋಪ್‌ವೇ :
ಕೊಡಚಾದ್ರಿಯಿಂದ ಕೊಲ್ಲೂರು ಹಾಗೂ ಕೊಪ್ಪಳದ ಅಂಜನಾದ್ರಿ ರೋಪ್‌ವೇ ನಿರ್ಮಾಣ ಆಗಲಿದೆ. ಬೆಂಗಳೂರಿನಲ್ಲಿ 17 ಸಾವಿರ ಕೋಟಿ ವೆಚ್ಚದ ಆರು ಪ್ಯಾಕೇಜ್‌ಗಳ ರಿಂಗ್ ರಸ್ತೆ ಕಾಮಗಾರಿ ಮುಂದಿನ ಜನವರಿಗೆ ಪೂರ್ಣಗೊಳ್ಳಲಿದೆ. ರಾಜ್ಯದ ಲೋಕೋಪಯೋಗಿ ಇಲಾಖೆ ಕಳುಹಿಸಿದ ಹದಿನೇಳು ಪ್ರಮುಖ ಯೋಜನೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ಅಗತ್ಯ ಮಂಜೂರಾತಿ ನೀಡಲಾಗುವುದು ಎಂದರು.
ನಾಡಗೀತೆ ದೇಶದಲ್ಲೇ ಅತ್ಯುತ್ತಮ :
ಕನ್ನಡ ನಾಡಗೀತೆ ಕೇಳಿದಾಗ ಬಹಳ ಸಂತೋಷವಾಗುತ್ತದೆ. ದೇಶದಲ್ಲೇ ಅತ್ಯುತ್ತಮ ಗೀತೆ ಎಂದು ಹೇಳಲು ಯಾವುದೇ ಹಿಂಜರಿಕೆ ಇಲ್ಲ. ಕನ್ನಡ ನನಗೆ ಅರ್ಥವಾಗದಿದ್ದರೂ ಕೆಲವು ಶಬ್ದಗಳಿಂದ ಅದರ ಭಾವಾರ್ಥ ಅರ್ಥವಾಗುತ್ತದೆ. ಇದನ್ನು ರಚಿಸಿದವರಿಗೆ, ಸಂಗೀತ ನೀಡಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಗಡ್ಕರಿ ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Yadgir: ಅಪ್ರಾಪ್ತೆ ಮೇಲೆ ಅತ್ಯಾಚಾರ… ಪ್ರಕರಣ ದಾಖಲು
ಬೈಲಹೊಂಗಲ: ಜ್ಞಾನೇಶ್ವರ ಮುನಿ ಮಹಾರಾಜರು ಸಮಾಧಿ ಮರಣ
Online Discussion: ಶಿಕ್ಷಣ ಮಂತ್ರಿಗೆ ಕನ್ನಡ ಬರಲ್ಲ ಎಂದ ವಿದ್ಯಾರ್ಥಿ, ಮಧು ಬಂಗಾರಪ್ಪ ಗರಂ
ಅನ್ನಭಾಗ್ಯ ಯೋಜನೆ ಮುನ್ನಡೆಸಲು ಸಾಧ್ಯವಾಗದೆ ಸರಕಾರ ಬಿಪಿಎಲ್ ಕಾರ್ಡು ರದ್ದು ಮಾಡಲು ಹೊರಟಿದೆ
ರಾಜ್ಯದ ರೈತರಿಗೆ ಕೇಂದ್ರ ಸರ್ಕಾರದಿಂದ ಭಾರಿ ಅನ್ಯಾಯವಾಗಿದೆ: ದಿನೇಶ್ ಗುಂಡೂರಾವ್
MUST WATCH
ಹೊಸ ಸೇರ್ಪಡೆ
Govt Hospital: ಡಿ ಗ್ರೂಪ್ ಸಿಬ್ಬಂದಿಗೆ ಶೀಘ್ರನೇರ ಪಾವತಿ: ಸಚಿವ ದಿನೇಶ್ ಗುಂಡೂರಾವ್
Maharashtra Polls: ಪ್ರಾಣ ಬೆದರಿಕೆ ನಡುವೆ ಮತ ಹಾಕಿ ಫೋಟೋ ತೆಗೆಸಿದ ಸಲ್ಮಾನ್!
Aircel-Maxis Case: ಏರ್‌ಸೆಲ್-ಮ್ಯಾಕ್ಸಿಸ್ ಕೇಸಿನಲ್ಲಿ ಚಿದಂಬರಂ ವಿರುದ್ಧ ವಿಚಾರಣೆ ತಡೆ
Bhagyanagar: ಹೈದರಾಬಾದ್ ಅಲ್ಲ, ಭಾಗ್ಯನಗರ: ಆರೆಸ್ಸೆಸ್ ಮತ್ತೆ ಹಕ್ಕೊತ್ತಾಯ
Exit Poll: ಮಹಾರಾಷ್ಟ್ರ: ಬಿಜೆಪಿ ನೇತೃತ್ವಕ್ಕೆ ಮತ್ತೆ ಅಧಿಕಾರ, ಜಾರ್ಖಂಡ್‌ನಲ್ಲಿ ಪೈಪೋಟಿ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.