ಅಪರೂಪದ ಜೋಡಿಗಳ ದಾಂಪತ್ಯ ಗೀತೆ

Team Udayavani, Jun 24, 2018, 11:05 AM IST

aparoopada.jpg

ವಿಜಯಪುರ: ಆ ನಾಲ್ವರಿಗೂ ಮಾತು ಬಾರದ ಮೌನ ಜೀವನ. ಹರೆಯಕ್ಕೆ ಬಂದ ಅವರಿಗೆ ಕೌಟುಂಬಿಕ ಬದುಕು ರೂಪಿಸಿಕೊಡಲು ಹೆತ್ತವರ ಚಿಂತನೆಗೆ ಕೊನೆಗೂ ಕಾಲ ಕೂಡಿ ಬಂದಿತ್ತು. ಶನಿವಾರ ಆ ನಾಲ್ವರ ಜೀವನದಲ್ಲೂ ಹಿರಿಯರ ನಿರೀಕ್ಷೆಯ ಸಪ್ತಪದಿ ತುಳಿದು ಕೌಟುಂಬಿಕ ಜೀವನಕ್ಕೆ ಕಾಲಿಟ್ಟ ಅಪರೂಪದ ವಿವಾಹಕ್ಕೆ ನಗರದ ಜನರು ಸಾಕ್ಷಿಯಾದರು.

ವಿಜಯಪುರದ ನಂದಗೊಂಡ ಕುಟುಂಬದ ಲಕ್ಕಪ್ಪ ಅವರ ಮಕ್ಕಳಾದ ಗಿರೀಶ ಹಾಗೂ ಮಹೇಶ ಇಬ್ಬರೂ ಮೂಗರು, ಸಹಜವಾಗಿಯೇ ಕಿವುಡರು ಕೂಡ. ದೈಹಿಕ ನ್ಯೂನತೆ ಇದ್ದರೂ ಇಬ್ಬರೂ ಪರಿಶ್ರಮದಿಂದ ಬಿಕಾಂ ಪದವಿ ಪಡೆದು, ಉದ್ಯೋಗದಲ್ಲಿ ಇದ್ದರು. ತಮ್ಮ ಮಕ್ಕಳಿಗೆ ಮದುವೆ ಮಾಡಲು ಯೋಚಿಸಿದ್ದ ಹೆತ್ತವರಿಗೆ ವಧುಗಳನ್ನು ಹುಡುಕುವ ಹಂತದಲ್ಲಿ ಇಬ್ಬರಿಗೂ ಅವರಂತೆಯೇ ಮೂಗರನ್ನೇ ಸಂಗಾತಿಯನ್ನಾಗಿ ಮಾಡಿದ್ದಾರೆ.

ಹುಬ್ಬಳ್ಳಿ ಮೂಲದ ಬಾಂಗಿ ಕುಟುಂಬದ ರೇಣುಕಾ-ಬಸವರಾಜ ದಂಪತಿಯ ಪುತ್ರಿ ಸೌಭಾಗ್ಯ ಗಿರೀಶಗೆ ಬಾಳ ಸಂಗಾತಿಯಾಗಿ ದೊರಕಿದರೆ, ಮಹೇಶಗೆ ಬಸವನಬಾಗೇವಾಡಿ ತಾಲೂಕಿನ ಯರನಾಳ ಗ್ರಾಮದ ನಾಗರಾಳ ಕುಟುಂಬದ ವಿಜಯಲಕ್ಷ್ಮೀ ಹಾಗೂ ಗುರುಪಾದ ದಂಪತಿ ಪುತ್ರಿ ದೀಕ್ಷಿತಾ ಅವರು ಬಾಳ ದೋಣಿಯ ಜೋಡಿಯಾಗಿದ್ದಾರೆ.

ಗಿರೀಶ ಬೆಂಗಳೂರಿನ ಪ್ರತಿಷ್ಠಿತ ಬಹುರಾಷ್ಟ್ರೀಯ ಫೈನಾನ್ಸ್‌ ಕಂಪನಿ ಉದ್ಯೋಯಾಗಿದ್ದರೆ, ಇವರ ಕೈ ಹಿಡಿದಿರುವ ಸೌಭಾಗ್ಯ ಕೂಡ ಡಿಪ್ಲೊಮಾ ಅಧ್ಯಯನ ಪೂರ್ಣಗೊಳಿಸಿದವರು. ಫೈನಾನ್ಸಿಯಲ್‌ ಅಕೌಂಟಿಗ್‌ನಲ್ಲಿ ಬಿಕಾಂ ಪದವಿಯಲ್ಲಿ ವಿಶೇಷ ಪರಿಣತಿ ಪಡೆದಿರುವ ಮಹೇಶ ಕೂಡ ಬೆಂಗಳೂರಿನ ಪ್ರತಿಷ್ಠಿತ ಆರ್ಥಿಕ ಸಂಸ್ಥೆಯಲ್ಲಿ ಅ ಧಿಕಾರಿ. ಇವರನ್ನು ವರಿಸಿರುವ ದೀಕ್ಷಿತಾ ಬ್ಯಾಚಲರ್‌ ಆಫ್‌ ಫೈನ್‌ ಆರ್ಟ್ಸ್ನಲ್ಲಿ ಪದವಿ ಪಡೆದಿರುವ ಅಪರೂಪದ ಕಲಾವಿದೆ. ಈ ಅಪರೂಪದ ಜೋಡಿ ಇದೀಗ ಮೌನ ಬಾಳ ದೋಣಿಯಲ್ಲಿ ಜೊತೆಯಾಗಿದ್ದಾರೆ.

ಈ ವಿಶಿಷ್ಟ ವಿವಾಹಕ್ಕೆ ಶನಿವಾರ ನಗರ ಹೇಮರಡ್ಡಿ ಮಲ್ಲಮ್ಮ ಕಲ್ಯಾಣ ಮಂಟಪದಲ್ಲಿ ಸರಳ ಸುಂದರ ವಿವಾಹಕ್ಕೆ ಎರಡೂ ಕುಟುಂಬಗಳ ಹಾಗೂ ಬಂಧು-ಬಾಂಧವರು ಸಾಕ್ಷಿಯಾದರು. ಅಚ್ಚರಿಯ ಸಂಗತಿ ಎಂದರೆ ಮೌನಿಗಳಿಗೆ ಸಂವಹನ ಭಾಷೆಯಾಗಿ ರೂಪುಗೊಂಡಿರುವ ಸನ್ನೆ ಭಾಷೆಯಲ್ಲೇ ಅಪ್ಪಟ ಸಾಂಪ್ರದಾಯಿಕವಾಗಿ ಇವರ ವಿವಾಹ ಜರುಗಿದ್ದು,

ಹಲವು ಮೂಗ-ಕಿವುಡರು ಕೂಡ ತಮ್ಮ ಸ್ನೇಹಿತರ ಮದುವೆಯಲ್ಲಿ ಭಾಗಿಯಾಗಿ, ಕೈಗಳನ್ನು ಮೇಲೆತ್ತಿ ಸಂಭ್ರಮ ಆಚರಿಸಿ, ಮೌನ ನವ ಜೋಡಿಗಳನ್ನು ಹರಸಿದರು. ವಿಕಲ ಚೇತನರಾಗಿರುವ ತಮ್ಮ ಮಕ್ಕಳ ಬಾಳಲ್ಲಿ ಅವರದೇ ನ್ಯೂನತೆ ಹೊಂದಿರುವ ಪ್ರತಿಭಾವಂತರೇ ಜೀವನ ಸಂಗಾತಿಯಾಗಿ ದೊರಕಿದಕ್ಕೆ ಈ ಮಕ್ಕಳ ಪಾಲಕರು ಸಂಭ್ರಮ ಎಲ್ಲೆ ಮೀರಿತ್ತು.

ಟಾಪ್ ನ್ಯೂಸ್

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

ಆಯನೂರು ಮಂಜುನಾಥ್

Shimoga; ನಿತ್ಯ ಸುದ್ದಿಯಲ್ಲಿರಬೇಕೆಂದು ಸಿ.ಟಿ ರವಿ ʼಆʼ ಹೇಳಿಕೆ ನೀಡಿದ್ದಾರೆ: ಆಯನೂರು

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Tragedy: ಆನೆ ತುಳಿದು ಮಾವುತನ ಸಹಾಯಕ ಮೃತ್ಯು… ಮುಗಿಲು ಮುಟ್ಟಿದ ಕುಟುಂಬಸ್ಥರ ಆಕ್ರಂದನ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

Sirsi: ಅರಣ್ಯವಾಸಿಗಳ 50,000 ಕ್ಕೂ ಮಿಕ್ಕಿ ಜಿ.ಪಿ.ಎಸ್ ನಕಾಶೆ ಅತಂತ್ರ: ರವಿಂದ್ರ ನಾಯ್ಕ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

bjp-congress

Aranthodu:ಕಾಂಗ್ರೆಸ್‌-ಬಿಜೆಪಿ ಕಾರ್ಯಕರ್ತರ ಮಾತಿನ ಚಕಮಕಿ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

BBK11: ಚೈತ್ರಾಳನ್ನು ಬಿಗ್ ಬಾಸ್ ಮನೆಯ ಬಕೆಟ್ , ಟ್ಯಾಂಕ್ ಎಂದ ಐಶ್ವರ್ಯಾ

court

Kasaragod; ಯುವಕನ ಕೊಲೆ: 6 ಮಂದಿಗೆ ಜೀವಾವಧಿ

death

Puttur: ಅಪಘಾತದಲ್ಲಿ ಗಾಯಾಳಾಗಿದ್ದ ಬೈಕ್‌ ಸಹ ಸವಾರ ಸಾವು

arrested

BC Road; ಎರಡು ತಂಡಗಳ ಮಧ್ಯೆ ಮಾರಾಮಾರಿ: ಇಬ್ಬರ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.