ರಿಗ್ ನಿರ್ಮಾಣದಲ್ಲಿ ಎಂ.ಇ.ಐ.ಎಲ್ ಮಹತ್ತರ ಹೆಜ್ಜೆ : ಅತ್ಯಾಧುನಿಕ ತಂತ್ರಜ್ಞಾನ ಬಳಕೆ

Team Udayavani, Apr 7, 2021, 6:08 PM IST

hdghutyh

ಬೆಂಗಳೂರು : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ ಘೋಷಣೆಗೆ ಪ್ರತಿಯಾಗಿ ಮೆಘಾ ಇಂಜಿನಿಯರಿಂಗ್ ಅಂಡ್ ಇನ್ಫಾಸ್ಟ್ರಕ್ಚರ್ ಸಂಸ್ಥೆಯು ಇಂಧನ ನಿಕ್ಷೇಪ ಎತ್ತುವಳಿಗೆ ಅತ್ಯಾಧುನಿಕ ಮತ್ತು ದೇಶಿಯ ನಿರ್ಮಿತ ರಿಗ್‌ ಗಳನ್ನು ಮೊಟ್ಟ ಮೊದಲ ಬಾರಿಗೆ ನಿರ್ಮಿಸಿದೆ.

ಇಡೀ ದೇಶದಲ್ಲಿಯೇ ಇಂತಹ ಪ್ರಯತ್ನದಲ್ಲಿ ಯಶಸ್ಸು ಸಾಧಿಸಿರುವ ಚೊಚ್ಚಲ ಖಾಸಗಿ ಸಂಸ್ಥೆಯಾಗಿರುವ ಎಂಇಐಎಲ್, 1500 ಹೆಚ್‌ಪಿ ಸಾಮರ್ಥ್ಯ ಮೂಲಕ ಭೂಗರ್ಭದಲ್ಲಿ 400 ಮೀಟರ್ ಅಂದರೆ 4 ಕಿ.ಮೀ.ಗಳಷ್ಟು ಆಳವನ್ನು ಹೊಕ್ಕು ಇಂಧನ ಬಾವಿಗಳನ್ನು ನಿರ್ಮಿಸಿ ಇಂಧನ ನಿಕ್ಷೇಪವನ್ನು ಹೊರತರಲಿದ್ದು, ಈ ದೇಶಿಯ ನಿರ್ಮಿತ ರಿಗ್‌ಗಳು 40 ವರ್ಷಗಳ ಸುದೀರ್ಘ ಬಾಳಿಕೆ ಖಾತ್ರಿ ಹೊಂದಿವೆ.

ಎಂಇಐಎಲ್ ಸಂಸ್ಥೆಯ ಈ ಅತ್ಯಾಧುನಿಕ ರಿಗ್ ಗುಜರಾತ್‌ ನ ಅಹ್ಮದಾಬಾದ್ ವ್ಯಾಪ್ತಿಯಲ್ಲಿನ ಕಲೂಲ್‌ನಲ್ಲಿ ಬುಧವಾರದಿಂದ ಕಾರ್ಯಾರಂಭಿಸಿವೆ ಎಂದು ಎಂ.ಇ.ಐ.ಎಲ್ ಉಪಾಧ್ಯಕ್ಷ ಪಿ. ರಾಜೇಶ್ ರೆಡ್ಡಿ ತಿಳಿಸಿದ್ದಾರೆ.

2019ರಲ್ಲಿ ಇಂತಹ ಅತ್ಯಾಧುನಿಕ 47 ರಿಗ್‌ಗಳ ನಿರ್ಮಾಣಕ್ಕೆ ವಿವಿಧೆಡೆಗಳಿಂದ ಬೇಡಿಕೆ ಬಂದಿದ್ದು, ಈ ಸರಬರಾಜು ಆದೇಶಕ್ಕೆ ಪ್ರತಿಯಾಗಿ ಬುಧವಾರ ಸಂಸ್ಥೆಯ ಮೊದಲ ರಿಗ್ ಕಾರ್ಯಾನಿರ್ವಹಣೆ ಆರಂಭಗೊಂಡಿದೆ ಮತ್ತು ಇನ್ನುಳಿದಂತೆ 46 ರಿಗ್‌ಗಳು ವಿವಿಧ ನಿರ್ಮಾಣ ಹಂತಗಳಲ್ಲಿವೆ ಎಂದು ರೆಡ್ಡಿ ಹೇಳಿದ್ದಾರೆ.

ದೇಶಿಯ ಹೆಗ್ಗಳಿಕೆ: ಈಗಾಗಲೇ ಬಳಕೆಯಲ್ಲಿರುವ ಇಂಧನ ಬಾವಿಗಳಿಂದ ಹೆಚ್ಚಿನ ಉತ್ಪಾದನೆಗೆ ಅನುವಾಗುವಂತೆ ಮತ್ತು ಇಂಧನ ಬಾವಿಗಳ ರಿಪೇರಿಗೆ ಎಂಇಐಎಲ್ ನಿರ್ಮಿತ ಈ ಅತ್ಯಾಧುನಿಕ ರಿಗ್‌ಗಳು ಸಹಕಾರಿಯಾಗಲಿವೆ. ಭೂತಳದಲ್ಲಿನ ಇಂಧನ ನಿಕ್ಷೇಪವನ್ನು ತಲುಪಿ ಅಲ್ಲಿಂದ ಮೇಲೆತ್ತಿ ತರಲು ಈ ಅತ್ಯಾಧುನಿಕ ರಿಗ್‌ಗಳ ಕಾರ್ಯಕ್ಷಮತೆ ಪ್ರಸ್ತುತವಾಗಲಿದ್ದು, 1500 ಮೀಟರ್‌ನಿಂದ ಆರಭಗೊಂಡು 6000 ಮೀಟರ್‌ವರೆಗೆ ಭೂಮಿ ಕೊರೆದು ಇಂಧನ ಎತ್ತುವಳಿ ಮಾಡಲಿದೆ. ಎಂಇಐಎಲ್ ನಿರ್ಮಿತ ಅತ್ಯಾಧುನಿಕ ರಿಗ್‌ಗಳಿಗೆ ಹೋಲಿಕೆ ಮಾಡಿದಲ್ಲಿ, ಪ್ರಸ್ತುತ ಬಳಸುತ್ತಿರುವ ರಿಗ್‌ಗಳು ಕೇವಲ 1000 ಮೀಟರ್ ಆಳದವರೆಗೆ ರಿಗ್ ಮಾಡುವ ಸಾಮರ್ಥ್ಯ ಹೊಂದಿವೆ.

20 ರಿಗ್‌ಗಳ ಪೈಕಿ 12 ರಿಗ್‌ಗಳು 50 ಮೀಟರ್‌ವರೆಗೆ ಸ್ವಯಂ ಚಾಲಿತವಾಗಿದ್ದು, 100 ಮೀಟರ್ ಮತ್ತು 150 ಮೀಟರ್ ಸಾಮರ್ಥ್ಯದ 4 ರಿಗ್‌ಗಳ ನಿರ್ಮಾಣ ಕಾರ್ಯವೂ ಸಹ ಸಾಗಿದೆ. 1500 ಹೆಚ್.ಪಿ. ಮತ್ತು 2000 ಹೆಚ್.ಪಿ ಶಕ್ತಿಯ ರಿಗ್‌ಗಳ ತಯಾರಿಕೆ ದೇಶದಲ್ಲಿ ಇದೇ ಮೊಟ್ಟ ಮೊದಲಾಗಿದೆ.

ಪ್ರಸ್ತುತ ಗುಜರಾತ್‌ನಲ್ಲಿ ಒಂದು ರಿಗ್ ಯಶಸ್ವಿಯಾಗಿ ಕಾರ್ಯಾರಂಭಿಸಿದ್ದರೆ, ಎರಡನೇ ರಿಗ್ ಆರಂಭಕ್ಕೆ ಭರದ ಸಿದ್ಧತೆಗಳು ನಡೆದಿವೆ ಮತ್ತು ಇನ್ನುಳಿದ 46 ರಿಗ್‌ಗಳ ಪೈಕಿ ಆಂಧ್ರ ಪ್ರದೇಶದ ರಾಜಮಂಡ್ರಿ ಇಂಧನ ನಿಕ್ಷೇಪ ಪ್ರದೇಶಕ್ಕೆ ಸರಬರಾಜಾಗಿದ್ದರೆ, ಇನ್ನುಳಿದ ರಿಗ್‌ಗಳನ್ನು ಓಎನ್‌ಜಿಸಿಯ ಆಸ್ಸಾಂ, ತ್ರಿಪುರ ಮತ್ತು ತಮಿಳುನಾಡು ಇಂಧನ ನಿಕ್ಷೇಪ ಪ್ರದೇಶಗಳಿಗೆ ಸರಬರಾಜಾಗಲಿವೆ ಎಂದು ರಾಜೇಶ್ ರೆಡ್ಡಿ ತಿಳಿಸಿದ್ದಾರೆ.

ಸ್ಥಳೀಯ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿರುವ ಈ ರಿಗ್‌ಗಳು ಅತಿ ಕಡಿಮೆ ವಿದ್ಯುತ್ ಬಳಕೆ ಮಾಡಿಕೊಳ್ಳಲಿದೆ. ಅತ್ಯಾಧುನಿಕ ಹೈಡ್ರಾಲಿಕ್ ಮತ್ತು ಸ್ವಯಂಚಾಲಿತ ವ್ಯವಸ್ಥೆ ಹೊಂದಿರುವುದರಿಂದ 1500 ಹೆಚ್.ಪಿ ಸಾಮರ್ಥ್ಯದಿಂದ 400 ಮೀಟರ್ ಆಳವನ್ನು ಸುಲಭದಲ್ಲಿ ಕ್ರಮಿಸಲಿದ್ದು, ಸುರಕ್ಷತೆಗೂ ಆದ್ಯತೆ ನೀಡಲಾಗಿದೆ ಎಂದು ಅವರು ವಿವರಿಸಿದರು.

ದೇಶಿಯ ಇಂಧನ ಉತ್ಪಾದನೆಗೆ ಒತ್ತು:

ದೇಶದ ನವರತ್ನ ಸಂಸ್ಥೆಗಳಲ್ಲಿ ಒಂದಾಗಿರುವ ಓಎನ್‌ಜಿಸಿ ಈ ಅತ್ಯಾಧುನಿಕ ರಿಗ್‌ಗಳನ್ನು ಪಡೆದುಕೊಳ್ಳಲಿದ್ದು, ಇದರಿಂದ ದೇಶೀಯ ಇಂಧನ ಉತ್ಪಾದನೆ ಹೆಚ್ಚಲಿದೆ. ಈ ಬೆಳವಣಿಗೆಯಿಂದ ಇಂಧನ ಆಮದಿನಲ್ಲಿ ಕಡಿತವಾಗುವ ಮೂಲಕ ಆರ್ಥಿಕ ಪರಿಸ್ಥಿತಿ ಸುಧಾರಣೆಗೆ ಸಹಕಾರಿಯಾಗುವ ಜತೆಗೆ ಓಎನ್‌ಜಿಸಿಗೆ ಅತ್ಯಾಧುನಿಕ ತಂತ್ರಜ್ಞಾನ ಸುಲಭದಲ್ಲಿ ಲಭ್ಯವಾಗಲಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ “ಮೆಕ್ ಇನ್ ಇಂಡಿಯಾ”ವನ್ನು ತನ್ನ ನೀತಿಯನ್ನಾಗಿ ಪರಿಗಣಿಸಿರುವ ಎಂ.ಇ.ಐ.ಎಲ್, ಮುಂದಿನ ದಿನಗಳಲ್ಲಿ ಓ ಅತ್ಯಾಧುನಿಕ ರಿಗ್‌ಗಳ ವಾಣಿಜ್ಯ ಮಾರಾಟಕ್ಕೂ ಮುಂದಡಿ ಇರಿಸಲಿದ್ದು, ಇತರೆ ವಿದೇಶಿ ಸಂಸ್ಥೆಗಳ ರಿಗ್‌ಗಳಿಗಿಂತ ಈ ದೇಶಿಯ ರಿಗ್ ಅತ್ಯುತ್ತಮ ಮತ್ತು ಅತ್ಯಾಧುನಿಕವಾಗಿದ್ದು, ದೇಶವೇ ಹೆಮ್ಮೆ ಪಡುವಂತ ಬೆಳವಣಿಗೆ ಇದಾಗಿದೆ.

ಟಾಪ್ ನ್ಯೂಸ್

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Jaipur: ಶ್ರೀಮಂತ ಪುರುಷರನ್ನು ಮೋಡಿ ಮಾಡುವ ʼಕಿಲಾಡಿ ವಧುʼ; ಇವಳು ಪೀಕಿದ್ದು ಕೋಟಿ ಕೋಟಿ ಹಣ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Birds: ಸಿಲಿಕಾನ್‌ ಸಿಟಿಯಲ್ಲಿ ವಿದೇಶಿ ಪಕ್ಷಿಗಳ ಕಲರವ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

Chhattisgarh: ವಿವಾಹಿತ ಮಹಿಳೆಯರ ಖಾತೆಗೆ ಹಣ-ಸನ್ನಿ ಲಿಯೋನ್‌ ಹೆಸರಲ್ಲಿ ವಂಚನೆ!

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

hubli-fire-incident-at-ayyappa-camp-nine-devotees-seriously-injured

Hubli: ಅಯ್ಯಪ್ಪ ಶಿಬಿರದಲ್ಲಿ ಅಗ್ನಿ ಆಕಸ್ಮಿಕ: ಒಂಬತ್ತು ವೃತಧಾರಿಗಳಿಗೆ ಗಂಭೀರ ಗಾಯ

ಬೆಂಗಳೂರಿನಿಂದ ಹೊರನಾಡು ದೇವಸ್ಥಾನಕ್ಕೆ ಬರುತ್ತಿದ್ದ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Mudigere: ಹೊರನಾಡು ದೇವರ ದರ್ಶನಕ್ಕೆ ಬರುತ್ತಿದ್ದವರ ವಾಹನ ಪಲ್ಟಿ… ನಾಲ್ವರಿಗೆ ಗಂಭೀರ ಗಾಯ

Shivamogga: ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

Shivamogga: ತಡರಾತ್ರಿ ಭೀಕರ ರಸ್ತೆ ಅಪಘಾತ… ಬೈಕ್ ನಲ್ಲಿದ್ದ ಇಬ್ಬರು ಯುವಕರು ಮೃ*ತ್ಯು

rain-dk

Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Belagavi: ಕಾಂಗ್ರೆಸ್ ಅಧಿವೇಶನ ಶತಮಾನೋತ್ಸವ ದೇಶದ ಇತಿಹಾಸ ಸಂಭ್ರಮಿಸುವ ಕಾರ್ಯಕ್ರಮ: ಡಿಕೆಶಿ

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

Bengaluru: ಅನುಮತಿ ಇಲ್ಲದೇ ಅಲೋಪತಿ ಚಿಕಿತ್ಸೆ; 3 ಕ್ಲಿನಿಕ್‌ಗಳ ವಿರುದ್ಧ ಕೇಸ್‌

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

ವಿಚಾರಣೆ ದಿನ ಗೈರಾದ ವಕೀಲ… ಸಿಟ್ಟಿಗೆದ್ದು ನ್ಯಾಯಾಧೀಶರ ಮೇಲೆ ಚಪ್ಪಲಿ ಎಸೆದ ಆರೋಪಿ

5

Bengaluru: ಮಹಿಳೆಯರಿಗೆ ನೌಕರಿ ಆಮಿಷ ತೋರಿಸಿ ವೇಶ್ಯಾವಾಟಿಕೆಗೆ ಬಳಕೆ

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Driver: ಹೆಚ್ಚು ಪ್ರಯಾಣದ ದರ ನೀಡಲು ಒತ್ತಡ, ಹಲ್ಲೆಗೆ ಯತ್ನ: ಕ್ಯಾಬ್‌ ಚಾಲಕನ ವಿರುದ್ಧ ದೂರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.