ನದಿ ಮೂಲ, ಋಷಿ ಮೂಲ, ”ಡ್ಯಾಶ್” ಮೂಲ ಕೆದಕಲು ಹೋಗಬಾರದು: ಸಿ.ಟಿ.ರವಿ
ಸಾವರ್ಕರ್ ಗೆ ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿಯ ಹೆಗಲ ಮೇಲೆ ಕೈ ಹಾಕುವ ಅವಕಾಶ ಸಿಕ್ಕಿರಲಿಲ್ಲ
Team Udayavani, Aug 29, 2022, 2:55 PM IST
ಬೆಂಗಳೂರು : ”ನದಿ ಮೂಲ, ಋಷಿ ಮೂಲ, ಡ್ಯಾಶ್ ಮೂಲ ಕೆದಕಲು ಹೋಗಬಾರದು ಎಂಬ ಹಳೆಯ ಗಾದೆ ಮಾತಿದೆ ಅದರ ಹಾಗೆ ಮುರುಘಾ ಶ್ರೀಗಳ ಮೇಲಿನ ಆರೋಪದ ಕುರಿತು ನಾನು ಹೆಚ್ಚೇನೂ ಮಾತನಾಡಲು ಹೋಗುವುದಿಲ್ಲ” ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಸೋಮವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ”ತನಿಖೆಗೆ ಮೊದಲೇ ಅಪರಾಧದ ಹಣೆ ಪಟ್ಟಿ ಕಟ್ಟಲು ಬರುವುದಿಲ್ಲ, ನಿರಪರಾಧಿ ಎಂದು ಹೇಳಲೂ ಆಗುವುದಿಲ್ಲ. ಸ್ವಾಮೀಜಿ ಮೂರು ದಶಕಗಳಿಂದ ದುರ್ಬಲ ವರ್ಗದವರ ಸೇವೆ ಮಾಡುತ್ತಾ ಬಂದಿದ್ದಾರೆ. ಆಳಿ ನಿಂದ ಹಿಡಿದು ಅರಸನವರೆಗೆ ಎಲ್ಲರಿಗೂ ಈ ನೆಲದ ಕಾನೂನು ಒಂದೇ, ಈ ವಿಷಯದಲ್ಲಿ ನಾವು ಯಾವುದೇ ಹೇಳಿಕೆ ಕೊಟ್ಟರೂ ತಪ್ಪು ಅರ್ಥ ಬರುತ್ತದೆ. ನಾನು ಹೆಚ್ಚೇನೂ ಹೇಳುವುದಿಲ್ಲ” ಎಂದರು.
ಚಾಮರಾಜ ಪೇಟೆ ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಸಮಬಂಧಿಸಿ ಪ್ರತಿಕ್ರಿಯಿಸಿ,”ನನ್ನಂತಹ ಕಾರ್ಯಕರ್ತರ ಭಾವನೆಗಳನ್ನು ಗೌರವಿಸಿಯೇ ಸರಕಾರ ಆನಂದ ಪಡಲು ಅವಕಾಶ ಮಾಡಿ ಕೊಡುತ್ತದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎಲ್ಲರಿಗೂ ಆನಂದ ಪಡಲು ಅವಕಾಶ ಮಾಡಿ ಕೊಡುತ್ತದೆ” ಎಂದರು.
”ಹಿಂದೆ ಕೋರ್ಟ್ ನಮಾಜ್ ಮಾಡಲು ಅವಕಾಶ ಕೊಟ್ಟಾಗ ಸಂಭ್ರಮಿಸಿದವರು ಈಗ ಗಣೇಶೋತ್ಸವ ಮಾಡಲು ಅವಕಾಶ ಮಾಡಿ ಕೊಟ್ಟಿರುವುದನ್ನೂ ಸ್ವೀಕರಿಸಬೇಕಲ್ಲವೇ. ಇನ್ನೊಬ್ಬರ ಸಂಭ್ರಮವನ್ನು ಸ್ವೀಕರಿಸುವುದು ನಿಜಾರ್ಥದಲ್ಲಿ ಧರ್ಮ ಅಲ್ಲವೇ” ಎಂದರು.
ಮನೋವಿಜ್ಞಾನ ಭಾವನೆ
8 ನೇ ತರಗತಿಯ ಪುಸ್ತಕದಲ್ಲಿ ಸಾವರ್ಕರ್ ಅವರ ಪಾಠದಲ್ಲಿ ಬುಲ್ ಬುಲ್ ಪಕ್ಷಿಯ ಮೂಲಕ ಅಂಡಮಾನ್ ಜೈಲಿನಿಂದ ಭಾರತಕ್ಕೆ ಹಾರಿ ಬರುತ್ತಿದ್ದರು ಎನ್ನುವ ಬಹುಚರ್ಚಿತ ವಿಚಾರಕ್ಕೆ ಪ್ರತಿಕ್ರಿಯಿಸಿ, ”ಮನೋವಿಜ್ಞಾನ ಅಂತ ಒಂದಿದೆ. ಒಬ್ಬ ಜೈಲಿನಲ್ಲಿದ್ದ ರಾಜಕೀಯ ಕೈದಿ ತಾನು ನೇರವಾಗಿ ತನ್ನ ದೇಶಕ್ಕೆ ಹೋಗಲು ಸಾಧ್ಯವಾಗದಿದ್ದಾಗ ಭಾವನೆಯನ್ನು ದೇಶದ ಒಳಗಿನ ಸಂಬಂಧವನ್ನು ಅಲ್ಲಿ ವ್ಯಕ್ತಪಡಿಸಲಾಗಿದೆ. ನಾವು ಇಲ್ಲಿದ್ದರೂ ಮನಸ್ಸಿನ ಮೂಲಕ, ಭಾವನೆಗಳ ಮೂಲಕ ವಿಹರಿಸಿ ಬರಬಹುದು. ತಾಂತ್ರಿಕವಾಗಿ, ವಿಪರೀತ ಅರ್ಥದಲ್ಲಿ ನೋಡಲು ಹೋಗಬೇಡಿ” ಎಂದರು.
”ಕೆಲವರು ಭಾರತದಲ್ಲೇ ಇದ್ದಾರೆ ಆದರೆ ಭಾರತೀಯತೆಯೇ ಇರುವುದಿಲ್ಲ. ಸಾವರ್ಕರ್ ಅವರು ಬ್ರಿಟಿಷರೊಂದಿಗೆ ರಾಜಿ ಮಾಡಿಕೊಂಡಿರಲಿಲ್ಲ. ರಾಜಿ ಮಾಡಿಕೊಂಡಿದ್ದರೆ ಪುಸ್ತಕ ಬರೆಯಲು ಅವಕಾಶವೂ ಸಿಗುತ್ತಿತ್ತು. ಡಿಸ್ಕವರಿ ಆಫ್ ಇಂಡಿಯಾ ಬರೆಯಲು ಅವಕಾಶ ಸಿಗುತ್ತಿತ್ತು. ಲಾರ್ಡ್ ಮೌಂಟ್ ಬ್ಯಾಟನ್ ಪತ್ನಿಯ ಹೆಗಲ ಮೇಲೆ ಕೈ ಹಾಕುವ ಅವಕಾಶವೂ ಸಿಗುತ್ತಿತ್ತು. ಆ ಅವಕಾಶ ಸಿಗಲಿಲ್ಲ” ಎಂದು ಪರೋಕ್ಷವಾಗಿ ಮಾರ್ಮಿಕ ಉತ್ತರದ ಮೂಲಕ ಕಾಂಗ್ರೆಸ್ ನತ್ತ ಆಕ್ರೋಶ ಹೊರ ಹಾಕಿದರು.
ನಾನು ಮೊದಲು ಮತ ಹಾಕಿದ್ದು ಜನತಾ ಪಕ್ಷಕ್ಕೆ
ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಜನ್ಮ ಜಯಂತಿ ಯಂದು ಅವರನ್ನು ಸ್ಮರಿಸಿದರು. ಅವರ ಹೆಸರಿನಲ್ಲೇ ಚುನಾವಣೆ ನಡೆದಿತ್ತು. 85 ರಲ್ಲಿ ಮೊದಲ ಬಾರಿಗೆ ಮತ ಹಾಕಲು ಅವಕಾಶ ಸಿಕ್ಕಾಗ ನಾನು ಜನತಾ ಪಕ್ಷಕ್ಕೆ ಮತ ಹಾಕಿದ್ದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Halebeedu; ನ. 29-ಡಿ. 4: ಜೈನರ ಗುತ್ತಿ ಕ್ಷೇತ್ರದಲ್ಲಿ ಪಂಚಕಲ್ಯಾಣ ಮಹೋತ್ಸವ
Railway;ನನೆಗುದಿಗೆ ಬಿದ್ದಿದ್ದ 9 ಯೋಜನೆಗಳಿಗೆ ವೇಗ: ಸೋಮಣ್ಣ
Davangere: ಮದುವೆಯಾಗುವುದಾಗಿ ಯುವತಿಯರಿಗೆ 62 ಲಕ್ಷ ರೂ.ಗೂ ಹೆಚ್ಚು ವಂಚಿಸಿದವನ ಬಂಧನ
C.P.Yogeshwara; ಜಮೀರ್ ಹೇಳಿಕೆ ಪರಿಣಾಮ…: ಸೋಲಿನ ಆತಂಕ ಹೊರ ಹಾಕಿದ ಸೈನಿಕ?!
CTRavi; ಯಾರು,ಯಾರನ್ನು,ಯಾವಾಗ ಖರೀದಿಸಲು ಪ್ರಯತ್ನಿಸಿದ್ದಾರೆ?: ಸಿಎಂಗೆ ಸಿ.ಟಿ.ರವಿ ಪ್ರಶ್ನೆ
MUST WATCH
ಹೊಸ ಸೇರ್ಪಡೆ
Karnataka: ಹೊಸ ಸಿಎಂ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನ: ಸುನಿಲ್
Udupi: ಶತಚಂಡಿಕಾಯಾಗ, ಬ್ರಹ್ಮಮಂಡಲ ಸೇವೆ ಆಮಂತ್ರಣ ಪತ್ರಿಕೆ ಬಿಡುಗಡೆ
Children’s Day: ಶಿಕ್ಷಣವನ್ನು ಪ್ರೋತ್ಸಾಹಿಸಿ ಮೋದಿ ಕನಸಿನ ವಿಕಸಿತ ಭಾರತ ನಿರ್ಮಾಣ ಮಾಡೋಣ
Bantwal: ನಾಪತ್ತೆಯಾದವರ ಮೃತ*ದೇಹ ಉಳ್ಳಾಲ ರೈಲು ಹಳಿಯಲ್ಲಿ ಪತ್ತೆ
Dharmasthala; ಗ್ರಾಮಾಭಿವೃದ್ಧಿ ಯೋಜನೆ ಜನರ ನಾಡಿಮಿಡಿತ: ನಿರ್ಮಲಾ ಸೀತಾರಾಮನ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.