ರಸ್ತೆ, ರೈಲು ಸಂಚಾರ ಬಂದ್?
Team Udayavani, Aug 8, 2019, 3:00 AM IST
* ಮಂಗಳೂರು – ಬೆಂಗಳೂರು ರೈಲು ಮಾರ್ಗದ ಸಿರಿಬಾಗಿಲು ಬಳಿ ಹಳಿ ಮೇಲೆ ಮಂಗಳವಾರ ಬಿದ್ದಿರುವ ಮಣ್ಣು ತೆರವು ಕಾಮಗಾರಿ ಪ್ರಗತಿಯಲ್ಲಿದೆ. ಗುರುವಾರ ಹಗಲು ರೈಲು ಯಾನ ಪುನರಾರಂಭಿಸಲಿವೆ.
* ಕೊಡಗಿನ ಜೋಡುಪಾಲದಲ್ಲಿ ಮರವೊಂದು ರಸ್ತೆಗುರುಳಿ ಸಂಚಾರ ಅಸ್ತವ್ಯಸ್ತಗೊಂಡಿತು. ಹೈಸೊಡೂರು-ಬಿರುನಾಣಿ ರಸ್ತೆ ಸಂಚಾರ ನಿಷೇಧ.
* ಶಹಾಪುರ ತಾಲೂಕಿನ ಕೊಳ್ಳೂರು ಎಂ. ಸೇತುವೆ ಮುಳುಗಡೆಯಾಗಿ ದೇವದುರ್ಗಕ್ಕೆ ಸಂಪರ್ಕ ಸ್ಥಗಿತವಾಗಿದೆ. ವಡಗೇರಾ ತಾಲೂಕಿ ಹಯ್ನಾಳ ಮತ್ತು ಐಕೂರ ಮಧ್ಯದ ಸೇತುವೆ ಮುಳುಗಡೆಯಾಗಿದ್ದು, ಸಂಚಾರ ಬಂದ್.
* ಚಿಕ್ಕಮಗಳೂರು ಜಿಲ್ಲೆ ಕಳಸ- ಹೊರನಾಡು ಸಂಪರ್ಕ ಬಂದ್.
* ಮಂಗಳವಾರ ತಡರಾತ್ರಿ ಚಾರ್ಮಾಡಿ ಘಾಟಿಯಲ್ಲಿ ಮತ್ತೆ ಗುಡ್ಡ ಕುಸಿಯುವ ಭೀತಿ ಎದುರಾಗಿದ್ದು ಸಂಚಾರ ನಿಷೇಧಿಸಲಾಗಿದೆ.
* ಇಟ್ಟಿನಹಳ್ಳಿ ಹಾಗೂ ಕುಳಗೂರು ಗ್ರಾಮಗಳಿಂದ ಶೃಂಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿದ್ದ ಕಿರು ಸೇತುವೆ ಮುಳುಗಡೆಯಾಗಿ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಬಸರೀಕಟ್ಟೆ-ಹೇರೂರು ರಸ್ತೆಯಲ್ಲಿ ಮರಬಿದ್ದು ಸಂಚಾರ ಸ್ಥಗಿತವಾಗಿದೆ. ಹೊಳೆಬಾಗಿಲು, ತೆಪ್ಪದಗಂಡಿ ಹಾಗೂ ಮಹಲ್‌ಗೋಡಿನಲ್ಲಿ ರಸ್ತೆ ಮೇಲೆ ನೀರು ನಿಂತಿದ್ದರಿಂದ ಸಂಚಾರ ಬಂದ್ ಆಗಿತ್ತು. ಕಳೆದ ಐದು ದಿನಗಳಿಂದ ಕಲಬುರಗಿ-ರಾಯಚೂರು ಮಾರ್ಗದ ರಸ್ತೆ ಬಂದ್ ಮಾಡಲಾಗಿದೆ.
* ಧಾರವಾಡ ಜಿಲ್ಲೆಯಲ್ಲಿ ಅಳ್ನಾವರದ ಇಂದಿರಮ್ಮನ ಕೆರೆಯಲ್ಲೂ ಕೋಡಿ ಬಿದ್ದ ನೀರಿನ ರಭಸಕ್ಕೆ ಹುಲಿಕೇರಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಜಿಲ್ಲೆಯ 11 ಹಳ್ಳಿಗಳಿಗೆ ಬಸ್ ಸಂಚಾರ ಸ್ಥಗಿತ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.