ರೋವರ್-ರೇಂಜರ್ ಘಟಕ: ಪದವಿ ಪ್ರಾಧ್ಯಾಪಕರಿಗೆ ಆನ್‌ಲೈನ್ ತರಬೇತಿ
Team Udayavani, Jul 17, 2020, 10:55 AM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸಂಸ್ಥೆಯ ರೋವರ್-ರೇಂಜರ್ ಘಟಕವನ್ನು ಕಾಲೇಜುಗಳಲ್ಲಿ ಇನ್ನಷ್ಟು ಬಲವರ್ಧನೆಗೊಳಿಸಲು ಪ್ರತಿ ಪದವಿ ಕಾಲೇಜಿನ ಇಬ್ಬರು ಪ್ರಾಧ್ಯಾಪಕರಿಗೆ ಆನ್‌ಲೈನ್ ಮೂಲಕ ತರಬೇತಿ ನೀಡಲು ನಿರ್ಧರಿದಲಾಗಿದೆ.
ಕಾಲೇಜುಗಳಲ್ಲಿ ರೋವರ್-ರೇಂಜರ್ ಘಟಕ ಇನ್ನೂ ಆರಂಭವಾಗದೇ ಇದ್ದಲ್ಲಿ, ಪ್ರಾಧ್ಯಾಪಕರನ್ನು ಇದಕ್ಕಾಗಿ ಆಯ್ಕೆ ಮಾಡಿ, ತರಬೇತಿಗೆ ನಿಯೋಜಿಸಲು ಮತ್ತು ಇದೇ ತಿಂಗಳಲ್ಲಿ ನಡೆಯಲಿರುವ ಆನ್‌ಲೈನ್ ಬಿಗಿನರ್ ಕೋರ್ಸ್‌ಗೆ ನಿಯೋಜಿಸಿ, ತರಬೇತಿ ಪಡೆಯಲು ಸೂಚಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯಿಂದ ಪ್ರಾಂಶುಪಾಲರಿಗೆ ನಿರ್ದೇಶಿಸಲಾಗಿದೆ.
ಇಲಾಖೆಯ ವ್ಯಾಪ್ತಿಯ ಸರಕಾರಿ ಹಾಗೂ ಅನುದಾನಿತ ಕಾಲೇಜುಗಳ ಪ್ರಾಂಶುಪಾಲರು ತಮ್ಮ ಕಾಲೇಜುಗಳಲ್ಲಿ ಇದುವರೆಗೂ ತರಬೇತಿ ಪಡೆಯದೇ ಇರುವ ಒಬ್ಬರು ಮಹಿಳಾ ಹಾಗೂ ಪುರುಷ ಅಧ್ಯಾಪಕರನ್ನು ಆನ್‌ಲೈನ್ ತರಬೇತಿಗೆ ನಿಯೋಜಿಸಬೇಕು ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕರು ಸೂಚಿಸಿದ್ದಾರೆ.
ಉಳಿಕೆ ಹಣ ಬಳಕೆ
ಸರಕಾರಿ ಹಾಗೂ ಅನುದಾನಿತ ಪದವಿ ಕಾಲೇಜುಗಳಲ್ಲಿ ಪ್ರವೇಶಾತಿ ಸಂದರ್ಭ ಪ್ರತಿ ವರ್ಷ ವಿದ್ಯಾರ್ಥಿಗಳಿಂದ ರೋವರ್ ಮತ್ತು ರೇಂಜರ್ ಘಟಕಕ್ಕೆ ಸಂಗ್ರಹಿಸಲಾಗುವ ಶುಲ್ಕವನ್ನು ಮಾರ್ಗಸೂಚಿ ಅನ್ವಯ ಬಳಸಿಕೊಳ್ಳಬೇಕು. 2019-20ನೇ ಸಾಲಿನಲ್ಲಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ ಶುಲ್ಕವನ್ನು ಒಳಗೊಂಡಂತೆ ಹಿಂದಿನ ವರ್ಷಗಳ ಬಾಕಿ ಉಳಿದಿರುವ ಮೊತ್ತವನ್ನು ರೋವರ್ ಮತ್ತು ರೇಂಜರ್ ಘಟಕದ ಚಟುವಟಿಕೆಗೆ ಪೂರಕವಾಗುವಂತೆ ಸ್ಯಾನಿಟೈಸರ್, ಮಾಸ್ಕ್ ಮೊದಲಾದ ವಸ್ತುಗಳನ್ನು ಖರೀದಿಸಿ, ಕಾಲೇಜು ಆರಂಭದ ಅನಂತರ ವಿದ್ಯಾರ್ಥಿಗಳಿಗೆ ವಿತರಿಸಲು ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶಕರು ಸೂಚಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.