“ದೇವರಾಜೇಗೌಡ ಬಾಯಿ ಮುಚ್ಚಿಸಲು 15 ಕೋ.ರೂ.’: ಹಾಸನ ಕಾಂಗ್ರೆಸ್ ನಾಯಕ ಮಂಜೇಗೌಡ ಆರೋಪ
ಕಾರ್ತಿಕ್ ಸುಮ್ಮನಾಗಿಸಲು ಭವಾನಿ-ಪ್ರಜ್ವಲ್ ಒಪ್ಪಂದ
Team Udayavani, May 8, 2024, 6:37 AM IST
ಬೆಂಗಳೂರು: ಹಾಸನದ ಅಶ್ಲೀಲ ವೀಡಿಯೋ ಪ್ರಕರಣದಲ್ಲಿ ಬಿಜೆಪಿ ನಾಯಕ ದೇವರಾಜೇಗೌಡರ ಬಾಯಿ ಮುಚ್ಚಿಸಲು ಭವಾನಿ ರೇವಣ್ಣ ಹಾಗೂ ಸಂಸದ ಪ್ರಜ್ವಲ್ ರೇವಣ್ಣ 15 ಕೋಟಿ ರೂ. ಒಪ್ಪಂದ ನಡೆಸಿದ್ದರು. ಪೆನ್‌ಡ್ರೈವ್ ಹೊಂದಿದ್ದ ಕಾರ್ತಿಕ್ ಅವರನ್ನು ಸುಮ್ಮನಾಗಿಸಲು ದೇವರಾಜೇಗೌಡ ಇಷ್ಟು ಹಣಕ್ಕೆ ಬೇಡಿಕೆ ಯಿರಿಸಿದ್ದರು ಎಂದು ಹಾಸನದ ಕಾಂಗ್ರೆಸ್ ಮುಖಂಡ ಹಾಗೂ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಬಿ.ಪಿ. ಮಂಜೇಗೌಡ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. ದೇವರಾಜೇಗೌಡ ಮತ್ತು ರೇವಣ್ಣ ಕುಟುಂಬದ ನಡುವೆ ಜಿದ್ದಾಜಿದ್ದಿ ಇದೆ.
ಹೀಗಾಗಿ ಕಾರ್ತಿಕ್ ತನ್ನ ಮೇಲೆ ಆಸ್ತಿ ವಿಚಾರವಾಗಿ ಹಲ್ಲೆ ನಡೆಸಿದ್ದ ರೇವಣ್ಣ ವಿರುದ್ಧ ಕ್ರಮಕ್ಕಾಗಿ ದೇವರಾಜೇಗೌಡರನ್ನು ಭೇಟಿಯಾಗಿ ಪ್ರಜ್ವಲ್ ರೇವಣ್ಣನ ಅಶ್ಲೀಲ ವೀಡಿಯೋಗಳ ಪೆನ್‌ಡ್ರೈವ್ ಕೊಟ್ಟಿದ್ದ. ಈ ವಿಚಾರವನ್ನು ಕಾರ್ತಿಕ್ ಬಿಡುಗಡೆ ಮಾಡಿರುವ ವೀಡಿಯೋದಲ್ಲೇ ಹೇಳಿದ್ದಾನೆ ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಂಜೇಗೌಡ ಹೇಳಿದರು.
ಕಾರ್ತಿಕ್ ಬಾಯಿ ಮುಚ್ಚಿಸಲು ಡೀಲ್
ಈ ಜಿದ್ದಾಜಿದ್ದಿ ನಡುವೆ ಭವಾನಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ದೇವರಾಜೇಗೌಡನನ್ನು ಭೇಟಿಯಾಗಿ ಅಶ್ಲೀಲ ವೀಡಿಯೋಗಳನ್ನು ಬಹಿರಂಗಪಡಿಸದಿರಲು 15 ಕೋಟಿ ರೂ.ಗೆ ಡೀಲ್ ಮಾಡಿ 10 ಕೋಟಿ ರೂ. ಮುಂಗಡವಾಗಿ ಕೊಟ್ಟಿದ್ದರು. ಆದರೆ ಕಾರ್ತಿಕ್ ಬಾಯಿ ಮುಚ್ಚಲಿಲ್ಲ. ಈ ವಿಚಾರವನ್ನು ನಾನು ಹೇಳುತ್ತಿಲ್ಲ, ಹಾಸನದ ಜನ ಹೇಳುತ್ತಿದ್ದಾರೆ ಎಂದು ಮಂಜೇಗೌಡ ಹೇಳಿದರು.
ದೇವರಾಜೇಗೌಡನಿಂದಲೇ ಪೆನ್‌ಡ್ರೈವ್ ಹಂಚಿಕೆ
ದೇವರಾಜೇಗೌಡ ರಾಜಕೀಯ ಮುಖಂಡರ ಬ್ಲ್ಯಾಕ್‌ವೆುàಲ್ ಮಾಡುವುದನ್ನೇ ಉದ್ಯೋಗ ಮಾಡಿಕೊಂಡಿದ್ದಾರೆ. ಈ ಪೆನ್‌ಡ್ರೈವ್ ಕಾರ್ತಿಕ್ ಮತ್ತು ದೇವರಾಜೇಗೌಡ ವಿನಾ ಬೇರೆ ಯಾರ ಬಳಿಯೂ ಇರಲಿಲ್ಲ. ಹೀಗಾಗಿ ಹಾಸನದಲ್ಲಿ ದೇವರಾಜೇಗೌಡನೇ ಪೆನ್‌ಡ್ರೈವ್ ಹಂಚಿದ್ದಾರೆ. ಆದರೆ ತನಿಖೆ ದಿಕ್ಕು ತಪ್ಪಿಸುವ ಉದ್ದೇಶದಿಂದ ಡಿಸಿಎಂ ಡಿ.ಕೆ. ಶಿವಕುಮಾರ್ ಮೇಲೆ ಆರೋಪ ಹೊರಿಸಿದ್ದಾರೆ ಎಂದು ದೂರಿದರು.
ಸೋಮವಾರ ದೇವರಾಜೇಗೌಡ ಬಿಡುಗಡೆ ಮಾಡಿರುವ ಆಡಿಯೋ ಸುಳ್ಳು. ಯಾವುದೋ ಕಾರ್ಯನಿಮಿತ್ತ ಶಿವಕುಮಾರ್ ಅವರು ದೇವರಾಜೇಗೌಡನ ಜತೆ ಮಾತಾಡಿರಬಹುದು. ಆದರೆ ಅಶ್ಲೀಲ ವೀಡಿಯೋ ಕುರಿತು ಮಾತನಾಡಿಲ್ಲ. ಅದನ್ನೇ ಆತ ಈ ಪ್ರಕರಣದಲ್ಲಿ ಬಳಸಿಕೊಂಡಿದ್ದಾನೆ. ಈ ಬ್ಲ್ಯಾಕ್‌ವೆುàಲ್ ರಾಜಕೀಯ ನಿಲ್ಲಬೇಕಾದರೆ ಕಾರ್ತಿಕ್ ಗೌಡ ಮತ್ತು ದೇವರಾಜೇಗೌಡರನ್ನು ಬಂಧಿಸಬೇಕು ಎಂದು ಒತ್ತಾಯಿಸಿದರು.
ದೇವರಾಜೇಗೌಡ ವಿರುದ್ಧ ದೂರು ಏಕಿಲ್ಲ?
ಅಶ್ಲೀಲ ವೀಡಿಯೋ ಹಂಚಿರುವ ಬಗ್ಗೆ ಪೂರ್ಣಚಂದ್ರ ತೇಜಸ್ವಿ ಎಂಬಾತ ನವೀನ್ ಗೌಡ ಹಾಗೂ ಇತರರ ವಿರುದ್ಧ ಹಾಸನ ಠಾಣೆ ಯಲ್ಲಿ ದೂರು ನೀಡಿದ್ದಾರೆ. ಆದರೆ ದೇವರಾಜೇಗೌಡನ ವಿರುದ್ಧ ಯಾಕೆ ದೂರು ನೀಡಿಲ್ಲ? ಆತ ಈ ಕೃತ್ಯದಲ್ಲಿ ಭಾಗಿ ಯಾಗಿದ್ದಾನೆ ಎಂದು ಗೊತ್ತಿದ್ದರೂ ರೇವಣ್ಣ ಏಕೆ ಆತನ ವಿರುದ್ಧ ದೂರು ನೀಡಿಲ್ಲ? ಭವಾನಿ, ಪ್ರಜ್ವಲ್ ಅವನ ಜತೆ ಡೀಲ್ ಮಾಡಿಕೊಂಡಿರುವುದೇ ಕಾರಣ ಎಂದು ಮಂಜೇಗೌಡ ಆರೋಪ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Winter Session: ಪಂಚಮಸಾಲಿಗಳ ಮೇಲೆ ಲಾಠಿ ಬೀಸಿದವರಿಗೆ ಬಹುಮಾನ; ಶಾಸಕ ಯತ್ನಾಳ್ ಆಕ್ರೋಶ
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.