ರಾಜ್ಯ ಸಹಕಾರ ಮಾರಾಟ ಮಂಡಲ ಖಾತೆಯಿಂದ 2 ಕೋ. ರೂ. ಲೂಟಿ!
Team Udayavani, Jan 6, 2021, 9:02 PM IST
ಸಾಂದರ್ಭಿಕ ಚಿತ್ರ
ಬೆಂಗಳೂರು: ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲದ (ಕೆಎಸ್ಸಿಎಂಎಫ್) ಬ್ಯಾಂಕ್ ಖಾತೆಯಿಂದ ನಕಲಿ ಚೆಕ್ ಬಳಸಿ 2 ಕೋ. ರೂ. ಲಪಟಾಯಿಸಲಾಗಿದ್ದು, ಮತ್ತೂಂದು ಬಾರಿ 2 ಕೋ. ರೂ. ವರ್ಗಾಯಿಸಲು ಯತ್ನಿಸಿರುವುದು ಬಹಿರಂಗಗೊಂಡಿದೆ.
ಈ ಬಗ್ಗೆ ಮಹಾಮಂಡಲದ ಪ್ರಧಾನ ವ್ಯವಸ್ಥಾಪಕ ಪಿಳ್ಳೆಗೌಡ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿರುವ ಹೈಗ್ರೌಂಡ್ಸ್ ಠಾಣೆ ಪೊಲೀಸರು, ಒರಿಸ್ಸಾ ಮೂಲದವ ಎನ್ನಲಾದ ಮೂರ್ತಿ ಪಿಳ್ಳೆ ಬಿ., ಕೋಲ್ಕತಾ ಮೂಲದ ಉಲ್ಬೆರಿಯಾ ಹೆವೆನ್ ವೆಲ್ಫೆàರ್ ಸೊಸೈಟಿ ಹೆಸರಿನ ಎನ್ಜಿಒ ಹಾಗೂ ಬ್ಯಾಂಕ್ ಆಫ್ ಇಂಡಿಯಾದ ಸಿಬಂದಿ ವಿರುದ್ಧ ಒಳಸಂಚು, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಟಿ ಆರೋಪಗಳ ಅನ್ವಯ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.
ಕೆಎಸ್ಸಿಎಂಎಫ್ ಕೆ. ಜಿ. ರಸ್ತೆಯ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಖಾತೆ ಹೊಂದಿದೆ. ಕಳೆದ ವರ್ಷದ ನ. 20ರಂದು ಕೋಲ್ಕತಾದ ಬ್ಯಾಂಕ್ ಆಫ್ ಶಾಖೆಯಿಂದ 20 ಕೋ. ರೂ. ಗಳನ್ನು ಉಲ್ಬೆರಿಯಾ ಹೆವೆನ್ ವೆಲ್ಫೆàರ್ ಸೊಸೈಟಿ ಖಾತೆಗೆ ವರ್ಗಾಯಿಸಲು ಚೆಕ್ ಬಂದಿತ್ತು. ಅನುಮಾನಗೊಂಡ ಬ್ಯಾಂಕ್ ಸಿಬಂದಿಯು ಕೆಎಸ್ಸಿಎಂಎಫ್ಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಪಿಳ್ಳೆಗೌಡ ಅವರು ತಮ್ಮ ಬಳಿಯಿರುವ ಚೆಕ್ಗಳ ನಂಬರ್ ಪರಿಶೀಲಿಸಿದಾಗ ಚೆಕ್ ನಕಲಿ ಎಂಬುದು ಗೊತ್ತಾಗಿದ್ದು, ಅದನ್ನು ತಡೆಹಿಡಿಯಲು ಬ್ಯಾಂಕ್ಗೆ ತಿಳಿಸಿದ್ದರು.
ಬಳಿಕ ಕೆಎಸ್ಸಿಎಂಎಫ್ನ ಬ್ಯಾಂಕ್ ಖಾತೆಯನ್ನು ಅಡಿಟ್ ನಡೆಸಿದಾಗ ಒರಿಸ್ಸಾ ಮೂಲದ ಮೂರ್ತಿ ಪಿಳ್ಳೆ ಎಂಬಾತನ ಖಾತೆಗೆ ನ. 3ರಂದು 2.87 ಕೋ. ರೂ. ವರ್ಗಾಯಿಸಲ್ಪಟ್ಟಿರುವುದು ಕಂಡು ಬಂದಿದೆ. ಸಂಸ್ಥೆಯ ಹೆಸರಿನಲ್ಲಿ ನಕಲಿ ಚೆಕ್ ಹಾಗೂ ಸಂಸ್ಥೆಯ ಮುಖ್ಯ ಲೆಕ್ಕಾಧಿಕಾರಿ ನಕಲಿ ಸಹಿ ಮಾಡಿ ಬ್ಯಾಂಕ್ಗೆ ಸಲ್ಲಿಸಿ ಹಣ ವರ್ಗಾಯಿಸಿಕೊಂಡಿರುವುದು ಗೊತ್ತಾಗಿದೆ. ತನಿಖೆ ಮುಂದುವರಿದಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Session: ಕಾಂಗ್ರೆಸಿಗರ ವೀಡಿಯೋಗೆ ಯಾವ ಬೆಲೆಯೂ ಇಲ್ಲ: ಎಂಎಲ್ಸಿ ರವಿಕುಮಾರ್
ಸುಮ್ನೆ ಬ್ಯಾಂಡೇಜ್ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.