ರಾಜ್ಯಕ್ಕೆ 2070 ಕೋಟಿ ರೂ. ಬಿಡುಗಡೆ
Team Udayavani, Feb 5, 2017, 3:45 AM IST
ಬೆಂಗಳೂರು: ಅಮೃತ್ ಸಿಟಿ ಯೋಜನೆಯಡಿ ರಾಜ್ಯದ 27 ನಗರಗಳ ಅಭಿವೃದ್ಧಿಗೆ 2017ರಿಂದ 2020ನೇ ಸಾಲಿಗೆ
(ಮೂರು ವರ್ಷದ ಅವಧಿ) ಕೇಂದ್ರ ಸರ್ಕಾರ 2070 ಕೋಟಿ ರೂ. ಅನುದಾನ ಮಂಜೂರು ಮಾಡಿದೆ.
2015-16ನೇ ಸಾಲಿನಿಂದ ಜಾರಿಗೆ ಬಂದಿರುವ ಐದು ವರ್ಷ ಅವಧಿಯ ಈ ಯೋಜನೆಗೆ ರಾಜ್ಯದ 27 ನಗರಗಳಿಗೆ
ಕೇಂದ್ರ ಸರ್ಕಾರ 4,791 ಕೋಟಿ ರೂ. ಅನುದಾನ ಘೋಷಿಸಿತ್ತು. ಅದರಂತೆ 2015-16ನೇ ಸಾಲಿನಲ್ಲಿ 1,259
ಕೋಟಿ ರೂ. ಮತ್ತು 2016-17ನೇ ಸಾಲಿನಲ್ಲಿ 1,642 ಕೋಟಿ ರೂ. ಮಂಜೂರಾಗಿದೆ. ಉಳಿದ 2070 ಕೋಟಿ ರೂ.
ಅನ್ನು 2017ರಿಂದ 2020ನೇ ಸಾಲಿಗೆ ಬಿಡುಗಡೆ ಮಾಡಲು ಶುಕ್ರವಾರ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು
ಕೇಂದ್ರ ನಗರಾಭಿವೃದ್ಧಿ ಮತ್ತು ಮೂಲ ಸೌಕರ್ಯ ಸಚಿವ ವೆಂಕಯ್ಯ ನಾಯ್ಡು ಹೇಳಿದ್ದಾರೆ.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 2017ರಿಂದ 20ರ ಅವಧಿಗೆ ಮಂಜೂರಾಗಿರುವ
2070 ಕೋಟಿ ರೂ. ಪೈಕಿ ಕುಡಿಯುವ ನೀರು ಪೂರೈಕೆಗೆ 822 ಕೋಟಿ ರೂ., ಒಳಚರಂಡಿ ಯೋಜನೆಗಳಿಗೆ 1061 ಕೋಟಿ ರೂ, ಚರಂಡಿ ನಿರ್ಮಾಣಕ್ಕೆ 119 ಕೋಟಿ ರೂ., ನಗರ ಸಾರಿಗೆ ವ್ಯವಸ್ಥೆಗೆ 21 ಕೋಟಿ ರೂ. ಹಾಗೂ ಪಾರ್ಕ್ ಮತ್ತು ಹಸಿರು ಪ್ರದೇಶ ಸಂರಕ್ಷಣೆಗೆ 47 ಕೋಟಿ ರೂ. ನಿಗದಿಪಡಿಸಲಾಗಿದೆ ಎಂದರು.
ದಶಾಶ್ವಮೇಧ: ಪ್ರಸಕ್ತ ಸಾಲಿನ ಕೇಂದ್ರ ಬಜೆಟ್ ಕುರಿತಂತೆ ಪ್ರತಿಕ್ರಿಯಿಸಿದ ಅವರು, ಸಬ್‌ಕಾ ಸಾಥ್ ಸಬ್‌ಕಾ ವಿಕಾಸ್
ಎಂಬ ಪ್ರಧಾನಿಯವರ ಘೋಷಣೆಯಂತೆ ಈ ಬಾರಿ ಕೃಷಿ, ಗ್ರಾಮೀಣಾಭಿವೃದ್ಧಿ, ಯುವ ಜನತೆ, ಬಡವರಿಗೆ ಸೂರು,
ಮೂಲ ಸೌಕರ್ಯ, ಡಿಜಿಟಲ್ ಆರ್ಥಿಕತೆ ಎಂಬಿತ್ಯಾದಿ ಹತ್ತು ಅಂಶಗಳೊಂದಿಗೆ ದಶಾಶ್ವಮೇಧ ಕೈಗೊಳ್ಳುವತ್ತ ವಿತ್ತ ಸಚಿವರು ಪ್ರಸ್ತಾಪಿಸಿದ್ದಾರೆ. ವಿಶ್ವವೇ ಆರ್ಥಿಕ ಹಿನ್ನಡೆಯಲ್ಲಿದ್ದರೂ ಭಾರತ ಮಾತ್ರ ಅದಕ್ಕೆ ಹೊರತಾಗಿ ಉಜ್ವಲ ಭವಿಷ್ಯದೊಂದಿಗೆ ಮುನ್ನಡೆಯಲು ಕಾರ್ಯಕ್ರಮ ರೂಪಿಸಿದ್ದಾರೆ ಎಂದರು.
ಜಾಗತಿಕ ಮಟ್ಟದಲ್ಲಿ ವಿದೇಶಿ ಹೂಡಿಕೆಯಲ್ಲಿ ಶೇ. 5ರಷ್ಟು ಮಾತ್ರ ಪ್ರಗತಿಯಾಗುತ್ತಿದ್ದರೆ, 2016-17ನೇ ಸಾಲಿನಲ್ಲಿ 1.45 ಲಕ್ಷ ಕೋಟಿ ರೂ. ವಿದೇಶಿ ಬಂಡವಾಳ ಹೂಡಿಕೆಯಾಗಿ ಶೇ. 36ರಷ್ಟು ಪ್ರಗತಿ ಸಾಧಿಸಲಾಗಿದೆ. ನೋಟು ಅಮಾನ್ಯದ ನಂತರ ಆರ್ಥಿಕ ಪ್ರಗತಿಗೆ ಕೊಂಚ ಹಿನ್ನಡೆಯಾಗಿದ್ದರೂ ನಂತರದಲ್ಲಿ ಅದು ಬೆಳವಣಿಗೆ ಕಂಡು ಬರಲಿದ್ದು, ಉತ್ತಮ ಸಾಧನೆ ಯಾಗಲಿದೆ. ಈ ಕಾರಣ ಕ್ಕಾಗಿಯೇ ಐಎಂಎಫ್ ಮತ್ತು ವಿಶ್ವಬ್ಯಾಂಕ್ ದೇಶದ ಜಿಡಿಪಿ ಯನ್ನು ಶೇ. 7.6ರಿಂದ ಶೇ. 7.8ರವರೆಗೆ ನಿಗದಿಪಡಿಸಿದೆ ಎಂದರು.
ಕಾಂಗ್ರೆಸ್ ರಾಜಕೀಯವಾಗಿ ಬಡವಾಗಿದೆ
ನೋಟು ಅಮಾನ್ಯದ ನಂತರ ದೇಶದಲ್ಲಿ ಕಾಂಗ್ರೆಸ್ ರಾಜಕೀಯವಾಗಿ ಬಡವಾಗಿದೆ. ಹೀಗಾಗಿ ಕೇಂದ್ರದ ನೋಟು
ಅಮಾನ್ಯ ತೀರ್ಮಾನವನ್ನು ಇಡೀ ದೇಶದ ಜನ ಬೆಂಬಲಿಸಿದರೂ ಕಾಂಗ್ರೆಸ್ ಇದರಿಂದ ಬಡವರಿಗೇನು ಲಾಭ ಎಂದು ಪ್ರಶ್ನಿಸುತ್ತಾ ಕಾಲ ಕಳೆಯುತ್ತಿದೆ. ಕಪ್ಪು ಹಣ ಇಲ್ಲದಂತೆ ಮಾಡಲು ನೋಟು ಅಮಾನ್ಯ ಮಾಡಲಾಯಿತು. ಆದರೆ, 15 ಲಕ್ಷ ಕೋಟಿ ರೂ.ಗೂ ಹೆಚ್ಚು ಹಣ ಬ್ಯಾಂಕ್‌ಗಳಿಗೆ ಬಂದಿದೆ. ಕಾಳಧನಿಕರ ಮಂಚದ ಕೆಳಗೆ, ಕಬ್ಬಿಣದ ಕಪಾಟುಗಳು, ಶೌಚಾಲಯಗಳಲ್ಲಿ ಅಡಗಿಕೊಂಡಿದ್ದ ಆ ಹಣ ಬ್ಯಾಂಕ್‌ಗಳಿಗೆ ಬಂದಿದೆ. ಅದರ ಜತೆಗೆ ಆ ಹಣದ ಮಾಲೀಕರ ವಿಳಾಸ
ಮತ್ತು ಹಣ ಎಲ್ಲಿಂದ ಬಂತು ಎಂಬ ಮಾಹಿತಿಯೂ ಸಿಕ್ಕಿದೆ. ಇದು ದೊಡ್ಡ ಸಾಧನೆಯಲ್ಲವೇ?
ಬ್ಯಾಂಕ್‌ಗಳಿಗೆ ಬಂದ ಹಣ ಚಲಾವಣೆಯಾಗಿ ಅದು ತೆರಿಗೆ ವ್ಯಾಪ್ತಿಗೆ ಬಂದರೆ ಜನರಿಗೆ ಅನುಕೂಲವಾಗುತ್ತದೆ ಎಂಬುದು ಕಾಂಗ್ರೆಸ್‌ನವರಿಗೆ ಗೊತ್ತಿಲ್ಲವೇ ಎಂದು ಸಚಿವ ವೆಂಕಯ್ಯನಾಯ್ಡು ಪ್ರಶ್ನಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.