ಆರ್ಟಿಇ: ಅರ್ಜಿ ಸಲ್ಲಿಕೆಗೆ ಮುಗಿಬಿದ್ದ ಪೋಷಕರು
Team Udayavani, Mar 2, 2017, 3:50 AM IST
ಬೆಂಗಳೂರು: ಆರ್ಟಿಇ ಸೀಟುಗಳ ಪ್ರವೇಶಕ್ಕೆ ಬುಧವಾರ (ಮಾ.1)ರಿಂದ ಆನ್ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಮೊದಲ ದಿನವೇ 15 ಸಾವಿರ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ಆದರೆ, ಪೋಷಕರು ಮತ್ತು ಆರ್ಟಿಇ ಕಾರ್ಯಕರ್ತರು ಮಾತ್ರ ಬುಧವಾರ ಸಂಜೆ ವರೆಗೂ ಅರ್ಜಿ ಸಲ್ಲಿಸಲು ಶಿಕ್ಷಣ ಇಲಾಖೆಯ ವೆಬ್ಸೈಟ್ ನಲ್ಲಿ ಸೂಕ್ತ ಲಿಂಕ್ ವ್ಯವಸ್ಥೆ ಕಲ್ಪಿಸಿರಲಿಲ್ಲ. ಹೀಗಾಗಿ ದಿನವಿಡೀ ಅರ್ಜಿ ಸಲ್ಲಿಸಲು ಕಂಪ್ಯೂಟರ್ ಕೇಂದ್ರಗಳು, ಬಿಇಒ, ಡಿಡಿಪಿಐ ಕಚೇರಿ, ಕರ್ನಾಟಕ ಒನ್ ಕೇಂದ್ರಗಳ ಬಳಿ ಕಾದು ಕುಳಿತಿದ್ದಾಯಿತು ಎಂದು ಆರೋಪಿಸಿದ್ದಾರೆ. ಮಾ.1 ರಿಂದ ಅರ್ಜಿ ಸಲ್ಲಿಸಬಹುದು ಎಂದು ಇಲಾಖೆ ಅಧಿಕಾರಿಗಳು ಮಾಧ್ಯಮಗಳಲ್ಲಿ ನೀಡಿದ ಮಾಹಿತಿ ನೋಡಿ ಬುಧವಾರ ಬೆಳಗ್ಗೆಯಿಂದಲೇ ಪೋಷಕರು ಅರ್ಜಿ ಸಲ್ಲಿಸಲು ಮುಂದಾದರು. ಆದರೆ, ಇಲಾಖೆ ವೆಬ್ಸೈಟ್ನಲ್ಲಿ ಅರ್ಜಿ ಸಲ್ಲಿಕೆಗೆ ಸೂಕ್ತ ಲಿಂಕ್ ವ್ಯವಸ್ಥೆಯನ್ನೇ ಅಪ್ಲೋಡ್
ಮಾಡಿರಲಿಲ್ಲ.
ಪ್ರಕಾಶ್ ನಗರ ವಾರ್ಡ್ನಲ್ಲಿ ಆಯೋಜಿಸಿದ್ದ ಆರ್ಟಿಇ ಆನ್ಲೈನ್ ಅರ್ಜಿ ಸಲ್ಲಿಕೆ ಕೇಂದ್ರದ ಉದ್ಘಾಟನೆಯನ್ನು ಮೇಯರ್ ನೆರವೇರಿಸಿದರು. ಮೇಯರ್ ಕೂಡ ಅರ್ಜಿ ಸಲ್ಲಿಸಲಾಗದ ಕಾರಣ ಪೋಷಕರಿಂದ ಅರ್ಜಿ ಸಲ್ಲಿಕೆಗೆ ಬೇಕಾದ ಆಧಾರ್,
ಜಾತಿ, ಆದಾಯ ಪ್ರಮಾಣ ಪತ್ರಗಳ ಮಾಹಿತಿ ಖುದ್ದು ಲಿಖೀತ ರೂಪದಲ್ಲಿ ಸ್ವೀಕರಿಸಿದರು. ಆರ್ ಟಿಇ ಕಾರ್ಯಪಡೆ ಸಂಚಾಲಕ ನಾಗಸಿಂಹ ರಾವ್ ಅವರ ಪ್ರಶ್ನೆ ಕೂಡ ಇದೇ ಆಗಿದ್ದು, “ಸಂಜೆವರೆಗೂ ಅರ್ಜಿ ಸಲ್ಲಿಕೆಗೆ ವೆಬ್ಸೈಟ್ನಲ್ಲಿ ಲಿಂಕ್ ಇರಲಿಲ್ಲ. ರಾಜ್ಯಾದ್ಯಂತ ಅರ್ಜಿ ಸಲ್ಲಿಕೆ ಸಾಧ್ಯವಾಗುತ್ತಿಲ್ಲ ಎಂಬ ದೂರುಗಳು ಬಂದಿವೆ. 15 ಸಾವಿರ ಅರ್ಜಿಗಳು ಹೇಗೆ ಬಂದವು ಎಂಬುದನ್ನು ಅಧಿಕಾರಿಗಳೇ ಹೇಳಬೇಕು’ ಎಂದು ಹೇಳಿದ್ದಾರೆ.
15 ಸಾವಿರ ಅರ್ಜಿ ಬಂದಿವೆ: ಪೋಷಕರು ಮತ್ತು ಆರ್ಟಿಇ ಕಾರ್ಯಕರ್ತರ ದೂರಿನ ಹಿನ್ನೆಲೆ ಇಲಾಖೆ ಆಯುಕ್ತರಾದ ಸೌಜನ್ಯರನ್ನು
ದೂರವಾಣಿ ಮೂಲಕ ಸಂಪರ್ಕಿಸಿದಾಗ “ಬುಧವಾರ ಬೆಳಗ್ಗೆಯಿಂದಲೇ ಅರ್ಜಿ ಸಲ್ಲಿಕೆಗೆ ವೆಬ್ಸೈಟ್ನಲ್ಲಿ ಅವಕಾಶ ನೀಡಲಾಗಿತ್ತು.
ಮಧ್ಯಾಹ್ನ 3 ಗಂಟೆಗೆ ಕೆಲ ಅಪ್ಡೇಟ್ಗಾಗಿ ಸಾಫ್ಟ್ವೇರನ್ನು ರಿಫ್ರೆಷ್ ಮಾಡಲಾಯಿತು. ಮತ್ತೆ ಸಂಜೆ 6 ಗಂಟೆಯಿಂದ ಅವಕಾಶ
ನೀಡಲಾಗಿದೆ. ಬುಧವಾರ ರಾಜ್ಯಾದ್ಯಂತ ಒಟ್ಟಾರೆ 15 ಸಾವಿರ ಅರ್ಜಿ ಸಲ್ಲಿಕೆಯಾಗಿವೆ ‘ ಎಂದು “ಉದಯವಾಣಿ’ಗೆ ತಿಳಿಸಿದ್ದಾರೆ. ಈ
ಮಧ್ಯೆ ಇಲಾಖೆಯ ಮತ್ತೂಬ್ಬ ಅಧಿಕಾರಿಯನ್ನು ಸಂಪರ್ಕಿಸಿದಾಗ ಸಂಜೆ 4.30ರವೇಳೆಗೆ ವೆಬ್ ಸೈಟ್ನಲ್ಲಿ ಅರ್ಜಿ ಸಲ್ಲಿಕೆಗೆ ಅವಕಾಶ ನೀಡಲಾಗಿದೆ. ಸಾವಿರಾರು ಮಂದಿ ಅರ್ಜಿ ಸಲ್ಲಿಕೆಗೆ ಪ್ರಯತ್ನ ಮಾಡಿದ್ದಾರೆ. ಆದರೆ, ಎಷ್ಟು ಅರ್ಜಿ ಬಂದಿವೆ ಎಂಬ ಮಾಹಿತಿ ಇಲ್ಲವೆಂದು ಹೇಳಿದರು.
ವೇಳಾಪಟ್ಟಿಯೇ ಪ್ರಕಟವಾಗಿಲ್ಲ
ವಿಶೇಷವೆಂದರೆ ಮಾ.1ರಿಂದ ಆರ್ಟಿಇ ಅರ್ಜಿ ಸಲ್ಲಿಸಬಹುದು ಎಂಬ ಅಧಿಕೃತ ಪ್ರಕಟಣೆಯನ್ನು ಕನಿಷ್ಠ ಮಂಗಳವಾರ ಸಂಜೆಯಾದರೂ ನೀಡಬೇಕಿದ್ದ ಇಲಾಖೆ ಬುಧವಾರ ಸಂಜೆ 7 ಗಂಟೆಗೆ ಮಾಧ್ಯಮಗಳಿಗೆ ಬಿಡುಗಡೆ ಮಾಡಿದೆ. ಈ ಹಿಂದಿನ ವರ್ಷಗಳಲ್ಲಿ ಮೊದಲು ನೆರೆಹೊರೆಯ ಶಾಲೆಗಳ ಪಟ್ಟಿ ಪ್ರಕಟಣೆ, ಅವುಗಳಿಗೆ ಪೋಷಕರಿಂದ ಆಕ್ಷೇಪಗಳ ಸ್ವೀಕಾರ,
ಅಂತಿಮ ಪಟ್ಟಿ ಪ್ರಕಟ, ನಂತರ ಅರ್ಜಿ ಸಲ್ಲಿಕೆಗೆ ಇರುವ ಕಾಲಾವಕಾಶ ಸೇರಿದಂತೆ ಆರ್ಟಿಇ ಪ್ರವೇಶಕ್ಕೆ ಸಂಬಂಧಿಸಿದ ಪರಿಪೂರ್ಣ ಮಾಹಿತಿಯನ್ನೊಳಗೊಂಡ ಸಾರ್ವಜನಿಕ ಪ್ರಕಟಣೆ ಹಾಗೂ ಅಧಿಸೂಚನೆ ಪ್ರಕಟಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gadag: ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದಲ್ಲಿ ನಡೆದ ದುರ್ಘಟನೆಗೆ ಒಂದು ವರ್ಷ…
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
Bengaluru: ಇಬ್ಬರು ಮಕ್ಕಳಿಗೆ ವಿಷವುಣಿಸಿ ಕೊಂದು ಟೆಕಿ ದಂಪತಿ ಆತ್ಮಹ*ತ್ಯೆ!
Percentage War: ಮತ್ತೆ 60 ಪರ್ಸೆಂಟ್ ಕಮಿಷನ್ ಯುದ್ಧ ; ಆರೋಪ – ಪ್ರತ್ಯಾರೋಪ
Dinner Meet: ಸಚಿವರ ಮನೆ ಔತಣಕೂಟಕ್ಕೆ ಅಪಾರ್ಥ ಕಲ್ಪಿಸುವುದು ಬೇಡ: ಡಿ.ಕೆ.ಶಿವಕುಮಾರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.