ಮುಂದಿನ ವರ್ಷಕ್ಕೆ ಆರ್‌ಟಿಇ ಸೀಟು ಸಂಖ್ಯೆ ಕಡಿತ?
ಕಳೆದ ವರ್ಷ 14 ಸಾವಿರ ಸೀಟುಗಳಲ್ಲಿ ಕೇವಲ 3 ಸಾವಿರ ಭರ್ತಿ; ಮುಂದಿನ ವರ್ಷ
Team Udayavani, Jan 29, 2022, 7:40 AM IST
ಬೆಂಗಳೂರು: ರಾಜ್ಯದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ (2022-23) ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಅಡಿ ಖಾಸಗಿ ಶಾಲೆಗಳಿಗೆ ನೀಡುವ ಸೀಟುಗಳ ಸಂಖ್ಯೆ ಸುಮಾರು ಮೂರು ಸಾವಿರದಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.
ಪ್ರಸಕ್ತ ಶೈಕ್ಷಣಿಕ ವರ್ಷ ಕೊರೊನಾ ಸೋಂಕು ಹೆಚ್ಚಳ ಮಕ್ಕಳ ದಾಖಲಾತಿ ಮೇಲೆಯೂ ಪರಿಣಾಮ ಬೀರಿದ್ದು, ಸುಮಾರು ಶೇ. 25ರಿಂದ 30ರಷ್ಟು ಮಕ್ಕಳು ದಾಖಲಾಗಿಲ್ಲ. ಇದು ಮುಂದಿನ ವರ್ಷದ ಆರ್‌ಟಿಇ ಸೀಟಿನ ಮೇಲೂ ಪರಿಣಾಮ ಬೀರಲಿದೆ. ಯಾಕೆಂದರೆ ಪ್ರತೀ ಬಾರಿಯೂ ಹಿಂದಿನ ವರ್ಷದ ದಾಖಲಾತಿ ಆಧಾರದಲ್ಲಿ ಖಾಸಗಿ ಶಾಲೆಗಳಿಗೆ ಶೇ. 25ರಷ್ಟು ಆರ್‌ಟಿಇ ಸೀಟುಗಳನ್ನು ನಿಗದಿ ಮಾಡಲಾಗುತ್ತದೆ.
ಕಳೆದ ಶೈಕ್ಷಣಿಕ ಸಾಲಿನಲ್ಲಿ ಕೊರೊನಾ ಸೋಂಕು ಹೆಚ್ಚಳ, ಶುಲ್ಕ ಹೆಚ್ಚಳ, ಆನ್‌ಲೈನ್ ತರಗತಿಗಳಿಗೆ ಸೂಕ್ತ ಪರಿಕರ ಇಲ್ಲದಿರುವುದು, ಆರ್ಥಿಕ ಬಿಕ್ಕಟ್ಟು ಸಹಿತ ಹಲವು ಕಾರಣಗಳಿಂದ ಮಕ್ಕಳ ದಾಖಲಾತಿ ಕುಸಿದಿದೆ. ಇದೇ ದಾಖಲಾತಿ ಆಧಾರದಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕೆ ಸೀಟು ಹಂಚಿಕೆ ಮಾಡುವುದರಿಂದ ಸರಕಾರದಿಂದ ಖಾಸಗಿ ಶಾಲೆಗಳಿಗೆ ಸೀಟು ಹಂಚಿಕೆ ಮಾಡುವುದರ ಸಂಖ್ಯೆ ಕಡಿಮೆಯಾಗಲಿದೆ ಎಂದು ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.
ಇದನ್ನೂ ಓದಿ:“ರಾಷ್ಟ್ರವೇ ಮೊದಲು’ ಎಂಬ ಯುವಕರಿಂದಲೇ ದೇಶದ ಅಭಿವೃದ್ಧಿ
ಕಳೆದ ವರ್ಷ 3 ಸಾವಿರ ಸೀಟುಗಳಷ್ಟೇ ಭರ್ತಿ
ಕಳೆದ ವರ್ಷ ಆರ್‌ಟಿಇ ಸೀಟು ಪಡೆಯಲು ಪೋಷಕರು ನಿರಾಸಕ್ತಿ ತೋರಿದ್ದು, ರಾಜ್ಯಾದ್ಯಂತ ಒಟ್ಟಾರೆ 14,042 ಸೀಟುಗಳಲ್ಲಿ ಕೇವಲ 3,063ಕ್ಕಷ್ಟೇ ಮಕ್ಕಳು ದಾಖಲಾಗಿದ್ದರು. ಹೀಗಾಗಿ ಮುಂದಿನ ವರ್ಷದ ಸೀಟು ಹಂಚಿಕೆ ಸಂಖ್ಯೆ 14 ಸಾವಿರಕ್ಕಿಂತ ಕಡಿಮೆಯಾಗಬಹುದು ಎಂದು ತಿಳಿದುಬಂದಿದೆ. 2022-23ನೇ ಸಾಲಿನ ಸೀಟು ಗಾಗಿ ಅರ್ಜಿ ಸಲ್ಲಿಸಲು ಫೆ. 3ರಿಂದ ಮಾ. 3ರ ವರೆಗೆ ಸಮಯ ನಿಗದಿ ಮಾಡಲಾಗಿದೆ. ಫೆ. 1ರಂದು ಈ ಬಾರಿ ಲಭ್ಯವಿರುವ ಪ್ರಾಥಮಿಕ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಲಭ್ಯವಿರುವ ಸೀಟುಗಳು ಮತ್ತು ಶಾಲೆಗಳ ವಿವರಗಳನ್ನು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಕಟಿಸಲಿದೆ.
ಖಾಸಗಿ ಶಾಲೆಗಳಲ್ಲಿ ಈ ವರ್ಷದ ದಾಖಲಾತಿ ಆಧಾರದಲ್ಲಿ ಮುಂದಿನ ವರ್ಷದ ಶೇ. 25ರಷ್ಟು ಸೀಟು ನಿಗದಿ ಮಾಡಲಾಗುತ್ತದೆ. ಈ ವರ್ಷ ದಾಖಲಾತಿ ಪ್ರಮಾಣ ಕೆಲವೆಡೆ ಕುಸಿದಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಮುಂದಿನ ವರ್ಷದ ಆರ್‌ಟಿಇ ಸೀಟು ಸಂಖ್ಯೆ ಸ್ವಲ್ಪ ಕಡಿಮೆಯಾಗಬಹುದು.
– ಪ್ರಸನ್ನಕುಮಾರ್,
ಪ್ರಾಥಮಿಕ ಶಿಕ್ಷಣ ನಿರ್ದೇಶಕರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಿ.ಟಿ.ರವಿ ಮನಸ್ಸಲ್ಲೇ ಕೊಳೆ ತುಂಬಿದೆ, ಫೆನಾಯಿಲ್ ಹಾಕಿ ತೊಳೆದುಕೊಳ್ಳಲಿ: ಸಚಿವೆ ಲಕ್ಷ್ಮೀ
Kalaburagi: ಟಿಟಿ ಟಯರ್ ಸ್ಫೋಟಗೊಂಡು ಸರಣಿ ಅಪಘಾತ; ಮೂವರು ಸ್ಥಳದಲ್ಲೇ ಮೃತ್ಯು!
Egg Thrown: ಬಿಜೆಪಿ ಶಾಸಕ ಮುನಿರತ್ನ ಮೇಲೆ ಮೊಟ್ಟೆ ಎಸೆತ; ಮೂವರ ಬಂಧನ
ಗಾಂಧಿ ಭಾರತ್ ಕಾರ್ಯಕ್ರಮದ ಬಗ್ಗೆ ಶೆಟ್ಟರ್ ಅಪಸ್ವರ ತೆಗೆದಿದ್ದು ದುರ್ದೈವ – ಎಚ್ ಕೆ ಪಾಟೀಲ
Congress ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮ ದೇಶದ ಇತಿಹಾಸದ ಒಂದು ಐತಿಹಾಸಿಕ ಕಾರ್ಯಕ್ರಮ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.