RTO; ಫಿಟ್‌ನೆಸ್ ಸರ್ಟಿಫಿಕೇಟ್‌ಗಿನ್ನು ಆರ್‌ಟಿಒ ಬೇಕಿಲ್ಲ!
ಅಧಿಕಾರಿಗಳ ಅಗತ್ಯವಿಲ್ಲದೆ ಸ್ವಯಂಚಾಲಿತ ಪರೀಕ್ಷೆಯ ಮೂಲಕವೇ ವಾಹನಗಳಿಗೆ 'ಫಿಟ್‌ನೆಸ್ ಪ್ರಮಾಣಪತ್ರ'
Team Udayavani, Dec 28, 2024, 6:55 AM IST
ಮಂಗಳೂರು: ಇನ್ನು ಮುಂದೆ ಸ್ವಯಂಚಾಲಿತ ಪರೀಕ್ಷೆಯ ಮೂಲಕವೇ ವಾಹನಗಳಿಗೆ ‘ಫಿಟ್‌ನೆಸ್ ಸರ್ಟಿಫಿಕೆಟ್’ ದೊರೆಯಲಿದೆ. ವಾಹನಗಳ ಅರ್ಹತಾ ಪ್ರಮಾಣ ಪತ್ರ ನವೀಕರಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ವಾಹನಗಳು ಸ್ವಯಂಚಾಲಿತ ತಪಾಸಣಾ ಕೇಂದ್ರದಲ್ಲಿ ತಪಾಸಣೆಗೆ ಒಳಪಡಬೇಕು.
ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿ ಸಚಿವಾಲಯವು ಕೇಂದ್ರ ಮೋಟಾರು ವಾಹನಗಳ ನಿಯಮಕ್ಕೆ ತಿದ್ದುಪಡಿ ತಂದಿದ್ದು, ಅದರಂತೆ ವಾಹನಗಳ ಸ್ವಯಂಚಾಲಿತ ಪರೀಕ್ಷೆಗೆ ಸೂಚಿಸ ಲಾಗಿದೆ. ಹೀಗಾಗಿ ರಾಜ್ಯದ 32 ಕಡೆ ಇಂಥ ಕೇಂದ್ರ ಆರಂಭಕ್ಕೆ ರಾಜ್ಯ ಸರಕಾರ ನಿರ್ಧರಿಸಿದೆ.
ಇನ್ನು ಸ್ವಯಂಚಾಲಿತ ವ್ಯವಸ್ಥೆ
ಹೊಸ ಕೇಂದ್ರದಲ್ಲಿ ತಪಾಸಣೆ ಕಾರ್ಯ “ಸ್ವಯಂ ಚಾಲಿತ’ವಾಗಿ ನಡೆಯಲಿದೆ. ಸ್ವಯಂಚಾಲಿತ ಯಂತ್ರಗಳ ಮೂಲಕ ವಾಹನಗಳ ತಪಾಸಣೆ ನಡೆಸಲಾಗುತ್ತದೆ. ಹೊಸ ಕೇಂದ್ರ ನಿರ್ಮಾಣವಾದ ಬಳಿಕ ಕಂಪ್ಯೂಟರ್ ಪರಿಶೀಲನೆಯಲ್ಲಿಯೇ ಸರ್ಟಿಫಿಕೇಟ್ ನೀಡಲಾಗುತ್ತದೆ.
ಟೆಂಡರ್‌ನಲ್ಲಿ ಆಯ್ಕೆಯಾಗುವ ಸಂಸ್ಥೆಯೇ ಕೇಂದ್ರದ ಸ್ಥಾಪನೆ ಹಾಗೂ ನಿರ್ವಹಣೆ ಮಾಡ ಬೇಕಾಗು ತ್ತದೆ. ಉಸ್ತುವಾರಿ, ಮೇಲ್ವಿಚಾರಣೆಯನ್ನು ಆಯಾ ವ್ಯಾಪ್ತಿಯ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಹಾಗೂ ಮೋಟಾರು ವಾಹನ ನಿರೀಕ್ಷಕರು ನಡೆಸಲಿದ್ದಾರೆ.
ಎಲ್ಲೆಲ್ಲಿ ಹೊಸ ಕೇಂದ್ರಗಳು?
ಸಾರಿಗೆ ಇಲಾಖೆ ಜಮೀನು ಹೊಂದಿರುವ 13 ಕಡೆ (ದೇವನ ಹಳ್ಳಿ, ತುಮಕೂರು, ಕೋಲಾರ, ಶಿವಮೊಗ್ಗ, ಬೆಳಗಾವಿ, ಗದಗ, ರಾಣಿಬೆನ್ನೂರು, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಯಾದಗಿರಿ, ಬಳ್ಳಾರಿ, ಬೀದರ್) ಡಿಬಿಎಫ್‌ಒಟಿ (ಡಿಸೈನ್ ಬಿಲ್ಡ್ ಫೈನಾನ್ಸ್ ಆಪರೇಟ್ ಆ್ಯಂಡ್ ಟ್ರಾನ್ಸ್‌ಫರ್) ಮಾದರಿ; ಜಮೀನು ಇಲ್ಲದ 19 ಕಡೆ (ಚಾಮರಾಜನಗರ, ಹಾಸನ, ಮಂಡ್ಯ, ಚಿಕ್ಕಮಗಳೂರು, ಉಡುಪಿ, ಮಡಿಕೇರಿ, ಮಂಗಳೂರು, ಚಿತ್ರದುರ್ಗ, ಕಾರವಾರ, ಕಲಬುರಗಿ, ರಾಯಚೂರು, ಹೊಸಪೇಟೆ, ಕೊಪ್ಪಳ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು (ದಕ್ಷಿಣ), ಬೆಂಗಳೂರು (ಪೂ.), ಬೆಂಗಳೂರು (ಪ.) ಮತ್ತು ಬೆಂಗಳೂರು (ಕೇಂದ್ರ) ಸ್ಥಳಗಳಲ್ಲಿ ಬಿಒಒ (ಬಿಲ್ಡ್ ಓನ್ ಆಪರೇಟ್) ಮಾದರಿಯಲ್ಲಿ ಪಿಪಿಪಿ (ಖಾಸಗಿ ಸಹಭಾಗಿತ್ವ) ಸ್ವರೂಪದಲ್ಲಿ ಸ್ಥಾಪಿಸಲಾಗುತ್ತದೆ.
ವಾಹನಗಳ ತಪಾಸಣೆಗೆ ಅಟೋಮೇಟೆಡ್ ಟೆಸ್ಟಿಂಗ್ ಸೆಂಟರ್ ಆರಂಭಿಸಲು ಕೇಂದ್ರ ಸರಕಾರದಿಂದ ಸೂಚನೆ ಬಂದಿದೆ. ಇದರಂತೆ ರಾಜ್ಯದ ಒಟ್ಟು 32 ಕಡೆ ಈ ಕೇಂದ್ರ ಆರಂಭಿಸಲು ನಿರ್ಧರಿಸಿದ್ದೇವೆ. ಸಾರಿಗೆ ಇಲಾಖೆಯ ನಿಗಾದೊಂದಿಗೆ ಪ್ರಕ್ರಿಯೆ ನಡೆಯಲಿದೆ. ಮಾನವ ಹಸ್ತಕ್ಷೇಪ ಇಲ್ಲದೆ ವಾಹನಗಳ ಅರ್ಹತೆಯನ್ನು ಯಂತ್ರದ ಮೂಲಕ ಪರೀಕ್ಷೆ ಮಾಡಿ ಅರ್ಹತಾ ಪತ್ರ ನವೀಕರಣ ನಡೆಸಲಾಗುತ್ತದೆ.
– ರಾಮಲಿಂಗಾರೆಡ್ಡಿ, ಸಾರಿಗೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.