ರುದ್ರೇಶ್ ಹತ್ಯೆ: ಆರೋಪ ಕೈಬಿಡಲು ನ್ಯಾಯಾಲಯ ನಕಾರ
Team Udayavani, Jan 3, 2018, 11:04 AM IST
ಬೆಂಗಳೂರು: ಆರ್‌ಎಸ್‌ಎಸ್ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಮೇಲಿನ ಆರೋಪಗಳನ್ನು ಕೈ ಬಿಡಲು ನಿರಾಕರಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ವಿಶೇಷ ನ್ಯಾಯಾಲಯ, ವಿಚಾರಣೆ ಎದುರಿಸುವಂತೆ ಐವರು ಆರೋಪಿಗಳಿಗೂ ಆದೇಶಿಸಿದೆ. ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾದ ಹಾಗೂ ರುದ್ರೇಶ್ ಹತ್ಯೆ ಪ್ರಕರಣದ ಆರೋಪದಲ್ಲಿ ತನ್ನನ್ನು
ಕೈಬಿಡಲು ಕೋರಿದ್ದ ಪ್ರಕರಣದ 5ನೇ ಆರೋಪಿ ಆಸೀಂ ಶರೀಫ್ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ನ್ಯಾಯಾಲಯ ಈ
ಆದೇಶ ನೀಡಿದೆ. ಜೊತೆಗೆ ಈ ಆದೇಶ ಇತರ ಆರೋಪಿಗಳಿಗೂ ಅನ್ವಯವಾಗುತ್ತದೆಂದು ಮಂಗಳವಾರ ನೀಡಿದ ಆದೇಶದಲ್ಲಿ
ತಿಳಿಸಿದೆ. ಆರೋಪಿಗಳು ಕೃತ್ಯದಲ್ಲಿ ಭಾಗಿಯಾಗಿರುವ ಸಂಬಂಧ ಎನ್‌ಐಎ ಪ್ರಾಸಿಕ್ಯೂಶನ್ ಸಲ್ಲಿಸಿರುವ ಸಾಕ್ಷ್ಯಾಧಾರಗಳು ಪ್ರಬಲವಾಗಿವೆ. ಹೀಗಾಗಿ ಈ ಪ್ರಕರಣದಲ್ಲಿ ತಮ್ಮ ಪಾತ್ರವಿಲ್ಲ ಎಂದು ಅರ್ಜಿದಾರ ಆರೋಪಿಯು ಸಲ್ಲಿಸಿರುವ ವಾದವನ್ನು ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿರುವ ನ್ಯಾಯಾಲಯ, ಆರೋಪಿಗಳ ವಿರುದ್ಧ ದಾಖಲಾಗಿರುವ ಯಾವುದೇ
ಆರೋಪವನ್ನು ಕೈಬಿಡಲು ಸಾಧ್ಯವಿಲ್ಲ. ವಿಚಾರಣೆ ನಡೆಯಲಿ ಎಂದು ಆದೇಶದಲ್ಲಿ ಹೇಳಿದೆ.
ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಆರೋಪಿಗಳ ವಿರುದ್ಧದ ಪೂರಕ ಸಾಕ್ಷ್ಯಾಧಾರಗಳು, ಪ್ರತ್ಯಕ್ಷ ಸಾಕ್ಷ್ಯಗಳ ಹೇಳಿಕೆ, ದೂರವಾಣಿ
ಸಂಭಾಷಣೆ ಕರೆಗಳ ವಿವರಗಳಿವೆ. ಅಲ್ಲದೆ ಉದ್ದೇಶಪೂರ್ವಕವಾಗಿಯೇ ಒಂದು ನಿರ್ದಿಷ್ಟ ಕೋಮಿನ (ಸಂಘಟನೆಯ) ವ್ಯಕ್ತಿಯನ್ನು ಹತ್ಯೆಗೈಯುವುದು ಕೂಡ ಕಾನೂನುಬಾಹಿರ. ಚಟುವಟಿಕೆಗಳ ಪ್ರತಿಬಂಧಕ ಕಾಯಿದೆ ಅಡಿಯಲ್ಲಿಯೇ ಬರಲಿದೆ ಎಂಬ ಪ್ರಾಸಿಕ್ಯೂಷನ್
ವಾದವನ್ನು ನ್ಯಾಯಾಲಯ ಪುರಸ್ಕರಿಸಿದ್ದು, ಆರೋಪಿಯ ಅರ್ಜಿಯನ್ನು ತಿರಸ್ಕರಿಸಿದೆ ಎಂದು ಎನ್‌ಐಎ ಪರ ವಕೀಲರಾದ ಪಿ.ಪ್ರಸನ್ನಕುಮಾರ್ ತಿಳಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.