ಗ್ರಾಮೀಣರಿಗೆ “ಡಿಜಿಟಲ್ ಸಾಕ್ಷರತಾ’ ದೀಕ್ಷೆ ಅಭಿಯಾನ
Team Udayavani, Apr 11, 2017, 10:41 AM IST
ಹುಬ್ಬಳ್ಳಿ: ಕೆಲ ದಶಕಗಳ ಹಿಂದೆ ದೇಶಾದ್ಯಂತ ವಯಸ್ಕರ ಶಿಕ್ಷಣ ಹಾಗೂ ಸಾಕ್ಷರತಾ ಅಭಿಯಾನ ದೊಡ್ಡ ಪ್ರಚಾರ ಪಡೆದಿತ್ತು. ಅದರ ಮುಂದುವರಿದ ಭಾಗವಾಗಿ ಇದೀಗ ಡಿಜಿಟಿಲ್ ಸಾಕ್ಷರತಾ ಅಭಿಯಾನ ಗಮನ ಸೆಳೆಯುತ್ತಿದೆ. ಕೇಂದ್ರ ಸರಕಾರ ದೇಶದ ಸುಮಾರು 6 ಕೋಟಿ ಜನರಿಗೆ ಡಿಜಿಟಲ್ ಸಾಕ್ಷರತೆ ದೀಕ್ಷೆಗೆ ಸದ್ದಿಲ್ಲದ ಸಾಧನೆಗೆ ಮುಂದಾಗಿದೆ.
ಪ್ರಧಾನಿ ನರೇಂದ್ರ ಮೋದಿಯವರ ಹಲವು ಮಹಾತ್ವಾಕಾಂಕ್ಷಿ ಯೋಜನೆಗಳಲ್ಲಿ ಡಿಜಿಟಲ್ ಇಂಡಿಯಾವೂ ಒಂದಾಗಿದೆ.
ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಮಾಹಿತಿ-ತಂತ್ರಜ್ಞಾನ ಪರಿಣಾಮಕಾರಿಯಾಗಿ ಜಾರಿಯಾಗಬೇಕು, ಇದರ
ಪ್ರಯೋಜನವನ್ನು ಗ್ರಾಮೀಣ ಜನತೆ ಸಮರ್ಪಕವಾಗಿ ಪಡೆದುಕೊಳ್ಳಬೇಕೆಂಬ ನಿಟ್ಟಿನಲ್ಲಿ ಹಲವು ಯತ್ನಗಳನ್ನು
ಕೈಗೊಳ್ಳಲಾಗುತ್ತಿದೆ. ಅದರ ಭಾಗವಾಗಿಯೇ ಡಿಜಿಟಲ್ ಸಾಕ್ಷರತಾ ಅಭಿಯಾನ ಆರಂಭಗೊಂಡಿದೆ.
ದೇಶದ ಎಲ್ಲ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಗ್ರಾಮೀಣ ಭಾಗದಲ್ಲಿ ಪ್ರತಿ ಕುಟುಂಬದ ಒಬ್ಬರನ್ನು ಡಿಜಿಟಲ್
ಸಾಕ್ಷರರನ್ನಾಗಿ ಮಾಡುವ ಗುರಿಯಿದೆ. ಗ್ರಾಮೀಣ ಜನತೆ ಕಂಪ್ಯೂಟರ್, ಅಂತರ್ಜಾಲ ಬಳಕೆಯೊಂದಿಗೆ ಸರಕಾರಿ ಯೋಜನೆ ಹಾಗೂ ಸೇವೆಗಳ ಮಾಹಿತಿ ಪಡೆಯುವುದು, ವಹಿವಾಟುಗಳನ್ನು ಡಿಜಿಟಲ್ ರೂಪದಲ್ಲೇ ಮಾಡುವಂತೆ ಮಾಡುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ.
ಪ್ರತಿ ಗ್ರಾಪಂಗೆ 300: ಪರಿಶಿಷ್ಟ ಜಾತಿ-ಪಂಗಡ, ಬಡತನ ರೇಖೆಗಳಿಗಿಂತ ಕೆಳಗಿನ ಕುಟುಂಬಗಳು, ಮಹಿಳೆಯರು,
ಅಂಗವಿಕಲರು, ಅಲ್ಪಸಂಖ್ಯಾತರಿಗೆ ಆದ್ಯತೆಯೊಂದಿಗೆ ಅಭಿಯಾನ ಆರಂಭಿಸಲಾಗಿದೆ. ದೇಶದ ಸುಮಾರು 2.50 ಲಕ್ಷ
ಗ್ರಾಪಂಗಳ ವ್ಯಾಪ್ತಿಯಲ್ಲಿ 200ರಿಂದ 300 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುತ್ತಿದೆ. ಒಂದು ಜಿಲ್ಲೆಯ
ಇ-ಆಡಳಿತ ಸೊಸೈಟಿ ಅಧ್ಯಕ್ಷರಾಗಿರುವ ಜಿಲ್ಲಾ ನ್ಯಾಯಾಧೀಶರು ಜಿಲ್ಲೆಯ ಜನಸಂಖ್ಯೆ, ಸ್ಥಳೀಯ ಅಗತ್ಯತೆ, ಜಿಲ್ಲೆಯ ವ್ಯಾಪ್ತಿಗಳನ್ನು ಗಮನಿಸಿ, ಒಂದು ಗ್ರಾಪಂನಲ್ಲಿ ಇಂತಿಷ್ಟು ಫಲಾನುಭವಿಗಳಾಗಬೇಕು ಎಂದು ತೀರ್ಮಾನಿಸುತ್ತಾರೆ.
ರಾಜ್ಯದಲ್ಲಿ ಒಟ್ಟಾರೆ 27.05 ಲಕ್ಷ ಜನರನ್ನು ಡಿಜಿಟಲ್ ಸಾಕ್ಷರನ್ನಾಗಿಸುವ ಗುರಿಯಿದೆ. ಪ್ರಧಾನಮಂತ್ರಿ ಆದರ್ಶ ಗ್ರಾಮ
ಯೋಜನೆಯಡಿ ಬರುವ ಹಳ್ಳಿಗಳೂ ಡಿಜಿಟಲ್ ಸಾಕ್ಷರತೆ ಯೋಜನೆ ವ್ಯಾಪ್ತಿಗೆ ಬರಲಿದೆ.
ಗ್ರಾಮೀಣ ಪ್ರದೇಶಕ್ಕಷ್ಟೇ ಅನ್ವಯ
ದೇಶದ ಜನರಲ್ಲಿ ಡಿಜಿಟಲ್ ಸಾಕ್ಷರತೆ ಸಾಧಿಧಿಸಲು ರಾಷ್ಟ್ರೀಯ ಡಿಜಿಟಲ್ ಸಾಕ್ಷರತಾ ಮಿಷನ್(ಎನ್‌ಡಿಎಲ್‌ಎಂ) ಮತ್ತು ಡಿಜಿಟಲ್ ಸಾಕ್ಷರತಾ ಮಿಷನ್ (ಡಿಐಎಸ್‌ಎಚ್‌ಎ) ಎಂಬ ಎರಡು ಕಾರ್ಯಕ್ರಮಗಳಿಗೆ ಸರ್ಕಾರ ಅನುಮೋದನೆ ನೀಡಿದೆ. ಇವುಗಳ ಮೇಲ್ವಿಚಾರಣೆಯನ್ನು ಸಿಎಸ್‌ಸಿ-ಎಸ್‌ಪಿವಿ ನಡೆಸುತ್ತದೆ. 2018ರೊಳಗೆ 52.05 ಲಕ್ಷ ಜನರನ್ನು ಡಿಜಿಟಲ್ ಸಾಕ್ಷರರನ್ನಾಗಿಸಿ ಪ್ರಮಾಣ ಪತ್ರ ವಿತರಿಸಲಾಗುವುದು. ಈ ಯೋಜನೆ ಗ್ರಾಮೀಣ ಪ್ರದೇಶಕ್ಕೆ ಮಾತ್ರ ಅನ್ವಯವಾಗಲಿದೆ. ಬೇರು ಮಟ್ಟದಲ್ಲಿ ಯೋಜನೆ ಸಹಕಾರಗೊಳಿಸಲು ಸಿಎಸ್‌ಸಿ- ಎಸ್‌ಪಿವಿನಿಂದ ತರಬೇತಿ ಪಡೆದವರು ಯೋಜನೆ ಅನುಷ್ಠಾನದಲ್ಲಿ ಪಾಲ್ಗೊಳ್ಳುತ್ತಾರೆ.
ದೇಶಾದ್ಯಂತ 2,500 ತರಬೇತಿ ಪಾಲುದಾರರು/ ಕೇಂದ್ರಗಳಿದ್ದು, ಅವುಗಳನ್ನು 2.05 ಲಕ್ಷ ತರಬೇತಿ ಕೇಂದ್ರಗಳಿಗೆ ಹೆಚ್ಚಿಸುವ ಪ್ರಯತ್ನ ನಡೆಯುತ್ತಿದೆ. ಸಿಎಸ್‌ಸಿ-ಪಿಎಸ್‌ವಿ ನಿಯಮಗಳ ಪ್ರಕಾರ ಡಿಜಿಟಲ್ ಸಾಕ್ಷರತೆಯ ನೇರ ತರಬೇತಿಯನ್ನು ಕೈಗೊಳ್ಳಲಾಗುತ್ತದೆ. ಇವುಗಳಲ್ಲಿ ಸಿಎಸ್‌ಸಿ, ಎನ್‌ಐಇಎಲ್ ಐಟಿ ಕೇಂದ್ರಗಳು, ವಯಸ್ಕರ ಸಾಕ್ಷರತಾ ಕೇಂದ್ರಗಳು, ಶಾಲೆಗಳಲ್ಲಿ ತರಬೇತಿ ಜರುಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.