ಅವಧಿ ಮುಗಿಸಿದ ಲಿಂಗಾಯತ ಸಿಎಂ ಒಬ್ಬರೇ!
Team Udayavani, Jul 27, 2021, 6:40 AM IST
ಬೆಂಗಳೂರು: ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಈವರೆಗೆ ರಾಜ್ಯದಲ್ಲಿ 8 ಮಂದಿ ಲಿಂಗಾಯತ ಮುಖ್ಯಮಂತ್ರಿ ಆಗಿದ್ದಾರೆ. ಆದರೆ, ಎಸ್. ನಿಜಲಿಂಗಪ್ಪ ಹೊರತುಪಡಿಸಿ ಲಿಂಗಾಯತ ಸಮುದಾಯದ ಬೇರೆ ಯಾವ ಮುಖ್ಯಮಂತ್ರಿಯೂ ಅವಧಿ ಪೂರ್ಣಗೊಳಿಸಿಲ್ಲ.
ವಿಶೇಷವೆಂದರೆ, ದಕ್ಷಿಣ ಭಾರತದಲ್ಲಿ ಬಿಜೆಪಿಯ ಅಧಿಕಾರದ ಹೆಬ್ಟಾಗಿಲು ತೆರೆದು, ಅತೀ ಕಡಿಮೆ ಅವಧಿಗೆ ಅಂದರೆ, 3 ದಿನ ಹಾಗೂ ಅತಿ ಹೆಚ್ಚು ಬಾರಿ ಅಂದರೆ, ನಾಲ್ಕು ಬಾರಿ ಮುಖ್ಯಮಂತ್ರಿ ಹುದ್ದೆ ಆಲಂಕರಿಸಿದ್ದ ಬಿ.ಎಸ್. ಯಡಿಯೂರಪ್ಪನವರು ಯಾವತ್ತೂ ಅವಧಿ ಪೂರ್ಣಗೊಳಿಸಿಲ್ಲ. 1962ರಿಂದ 1967 ರವರೆಗೆ ಪೂರ್ಣಾವಧಿ ಆಡಳಿತ ನಡೆಸಿದ ನಿಜಲಿಂಗಪ್ಪ ಹೊರತುಪಡಿಸಿದರೆ ಇನ್ನೊಬ್ಬ ಲಿಂಗಾಯತ ನಾಯಕ ಪೂರ್ಣಾವಧಿ ಆಡಳಿತ ನಡೆಸಲಿಲ್ಲ.
ಮೈಸೂರು ಪ್ರಾಂತ್ಯ, ಕರ್ನಾಟಕ ಏಕೀಕರಣ ಹಾಗೂ ಕರ್ನಾಟಕದ ಸ್ಥಾಪನೆ ಆದ ನಂತರದಲ್ಲಿ ಒಟ್ಟು 23 ಮಂದಿ ಮುಖ್ಯಮಂತ್ರಿಗಳಾಗಿದ್ದಾರೆ. ಅದರಲ್ಲಿ 8 ಮಂದಿ ಲಿಂಗಾಯತರು, ಏಳು ಮಂದಿ ಒಕ್ಕಲಿಗರು, ಐವರು ಹಿಂದುಳಿದ ವರ್ಗಕ್ಕೆ ಸೇರಿದವರು, 2 ಬ್ರಾಹ್ಮಣರು ಇದ್ದಾರೆ. ವ್ಯಕ್ತಿ ಹಾಗೂ ಅವಧಿಯನ್ನು ಪರಿಗಣಿಸಿದರೆ ಲಿಂಗಾಯತರೇ ಅತಿಹೆಚ್ಚು ಅಂದರೆ, ಸುಮಾರು 23 ವರ್ಷಗಳ ಕಾಲ ಆಡಳಿತ ನಡೆಸಿದ್ದಾರೆ. ಆದರೆ, ಒಬ್ಬರನ್ನು ಹೊರತುಪಡಿಸಿ ಯಾರೊಬ್ಬರೂ ಅವಧಿ ಪೂರ್ಣಗೊಳಿಸಿಲ್ಲ.
ಕರ್ನಾಟಕ ಏಕೀಕರಣದ ನಂತರದ ಒಂದೂವರೆ ದಶಕಗಳ ಕಾಲ ಲಿಂಗಾ ಯತರ ಪ್ರಾಬಲ್ಯ ನಿರಂಕುಶವಾಗಿತ್ತು. 1956ರ ನವೆಂಬರ್ 1ರಿಂದ ಆರಂಭ ಗೊಂಡು 1971ರ ಮಾರ್ಚ್ 18ರವರೆ ಗಿನ ಅವಧಿಯಲ್ಲಿ 4 ಮಂದಿ ಲಿಂಗಾಯತ ನಾಯಕರು ಮೈಸೂರು ರಾಜ್ಯದ ಮುಖ್ಯಮಂತ್ರಿ ಗಾದಿಗೇರಿದ್ದರು. 1967ರವರೆಗೆ ಲಿಂಗಾಯತ ಶಾಸಕ ಬಲ 80-90ರವರೆಗೆ ಇರುತ್ತಿತ್ತು. ನಂತರದ ಚುನಾವಣೆಗಳಲ್ಲಿ 50-60ಕ್ಕೆ ಕುಸಿಯಿತು. 1962ರಿಂದ 1967ರವರೆಗೆ ಪೂರ್ಣಾವಧಿ ಆಡಳಿತ ನಡೆ ಸಿದ ನಿಜಲಿಂಗಪ್ಪ ಹೊರತುಪಡಿಸಿದರೆ ಇನ್ನೊಬ್ಬ ಲಿಂಗಾ ಯತ ನಾಯಕ ಪೂರ್ಣಾವಧಿ ಆಡಳಿತ ನಡೆಸಲಿಲ್ಲ.
ರಫೀಕ್ ಅಹ್ಮದ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Waqf Property: ಬೀದರ್‌ನ ಬಹುಮನಿ ಕೋಟೆಗೂ ವಕ್ಫ್ ಮೊಹರು!
Karnataka: 50 ವರ್ಷ ಮೀರಿದ ಜಲಾಶಯ ದುರಸ್ತಿಗೆ 10 ಸಾವಿರ ಕೋ.ರೂ.
Waqf Notice: ಸಿಎಂ ಪಿತೂರಿ, ಸಚಿವ ಜಮೀರ್ ದ್ರೋಹದಿಂದ ಜಮೀನು ಕಬಳಿಸುವ ಕೆಲಸ: ವಿಜಯೇಂದ್ರ
MUST WATCH
ಹೊಸ ಸೇರ್ಪಡೆ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
US Election 2024, Kamala Vs Trump: ಅಮೆರಿಕ ಅಧ್ಯಕ್ಷರ ಚುನಾವಣೆ ಹೇಗೆ? ಏನು? ಎತ್ತ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.