ಸೋಂಕು ನಿಯಂತ್ರಣ ಬಗ್ಗೆ ಸಿದ್ದರಾಮಯ್ಯ ಮನೆಯಲ್ಲಿ ಕುಳಿತು ಆರೋಪಿಸುವುದು ಸರಿಯಲ್ಲ; ವಿಶ್ವನಾಥ್
Team Udayavani, Jul 3, 2020, 4:14 PM IST
ಬೆಂಗಳೂರು: ಸರ್ಕಾರ ಕೋವಿಡ್ ನಿಯಂತ್ರಣಕ್ಕೆ ಶ್ರಮ ವಹಿಸುತ್ತಿದೆ. ಆದರೆ ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಮನೆಯಲ್ಲಿ ಕುಳಿತು ಆರೋಪ ಮಾಡುವುದು ಸರಿಯಲ್ಲ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ದೂರಿದರು.
ಮುಖ್ಯಮಂತ್ರಿಗಳ ಗೃಹ ಕಚೇರಿ `ಕೃಷ್ಣಾ’ ಬಳಿ ಶುಕ್ರವಾರ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಕೇವಲ ಸಲಹೆ ನೀಡುವುದಲ್ಲ, ಪ್ರತಿಪಕ್ಷಗಳೂ ನಮ್ಮೊಂದಿಗೆ ಕೈಜೋಡಿಸಲಿ. ತಮಗೂ ಒಂದು ಆಸ್ಪತ್ರೆ ಹೊಣೆ ಕೊಡಿ ನಿಭಾಯಿಸುತ್ತೇವೆ ಎಂದು ಸಿದ್ದರಾಮಯ್ಯ ಹೇಳಲಿ. ಅದನ್ನು ಬಿಟ್ಟು ರಾಜಕೀಯ ಹೇಳಿಕೆ ನೀಡುವುದು ಸರಿಯಲ್ಲ. ದಾಖಲೆ ಇದ್ದರೆ ಕೊಡಲಿ. ಸರ್ಕಾರ ಪರಿಶೀಲಿಸಿ ತನಿಖೆಗೆ ಆದೇಶಿಸಲಿದೆ ಎಂದು ಹೇಳಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.