ಮುಜರಾಯಿ ದೇವಸ್ಥಾನದ ನೌಕರರಿಗೆ ವೇತನ ಶ್ರೇಣಿ ನಿಗದಿ
Team Udayavani, Dec 18, 2018, 6:00 AM IST
ವಿಧಾನಪರಿಷತ್ತು: ರಾಜ್ಯದ ಮಜರಾಯಿ ಇಲಾಖೆಯ ವಿವಿಧ ದೇವಾಲಯಗಳಲ್ಲಿ ತಾತ್ಕಾಲಿಕವಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು
2,568 ನೌಕರರಿಗೆ ವೇತನ ಶ್ರೇಣಿ ನಿಗದಿಪಡಿಸಲು ಕ್ರಮ ಕೈಗೊಳ್ಳ ಲಾಗುತ್ತದೆ ಎಂದು ಮುಜರಾಯಿ, ಗಣಿ ಮತ್ತು ಭೂವಿಜ್ಞಾನ ಸಚಿವ ರಾಜಶೇಖರ ಪಾಟೀಲ ತಿಳಿಸಿದ್ದಾರೆ.
ಬಿಜೆಪಿ ಸದಸ್ಯ ಕೆ.ಪಿ. ನಂಜುಂಡಿ ಮಾತನಾಡಿ, ಮೈಸೂರಿನ ಚಾಮುಂಡೇಶ್ವರಿ ದೇವಾಲಯದ ಅರ್ಚಕರ ಪ್ರತಿಭಟನೆ ವಿಷಯ ಪ್ರಸ್ತಾಪಿಸಿದರು. ಇದಕ್ಕೆ ಲಿಖೀತ ಉತ್ತರ ನೀಡಿದ ಸಚಿವರು, ಒಟ್ಟು 2,568 ತಾತ್ಕಾಲಿಕ ನೌಕರರಿಗೆ ವೇತನ ತಾರತಮ್ಯ
ನಿವಾರಿಸುವ ನಿಟ್ಟಿನಲ್ಲಿ ವೇತನ ಶ್ರೇಣಿ ನಿಗದಿಗೆ ತಿದ್ದುಪಡಿ ತರಲು ರಚಿಸಿದ್ದ ಸಮಿತಿ ತನ್ನ ವರದಿ ಸಲ್ಲಿಸಿದೆ. ವರದಿಯನ್ನು ಪರಿಶೀಲಿಸಿ ವೇತನ ನಿಯಮಕ್ಕೆ ತಿದ್ದುಪಡಿ ತರಲಾಗುವುದು. ಈಗಾಗಲೇ 5ನೇ ವೇತನ ಶ್ರೇಣಿ ಪಡೆದಿರುವ ಸುಮಾರು 1,111 ನೌಕರರಿಗೆ ದೇವಾಲಯಗಳ ಆದಾಯ/ವೆಚ್ಚದ ಪೂರ್ಣವಾದ ಅಂಕಿ- ಅಂಶಗಳನ್ನು ಪಡೆದು ಪರಿಷ್ಕೃತ/ಹೆಚ್ಚುವರಿ ವೇತನ ಸವಲತ್ತುಗಳನ್ನು ನೀಡುವ ಕುರಿತಾಗಿ ಪರಿಶೀಲಿಸಲಾಗುವುದು. ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆ ಮತ್ತು ಧರ್ಮಾದಾಯ ದತ್ತಿಗಳ ನಿಯಮ-2002ರ ಪ್ರಕಾರ ದೇವಾಲಯಗಳ ಆದಾಯದಲ್ಲಿ ಸಿಬ್ಬಂದಿ ವೆಚ್ಚ ಶೇ.35ರಷ್ಟು ಮೀರಬಾರದು. ಹೀಗಾಗಿ, ಸಿಬ್ಬಂದಿ ವೆಚ್ಚ ಶೇ.35ರಷ್ಟು ಮೀರದಂತೆ ವೇತನ, ಸವಲತ್ತು ಕಲ್ಪಿಸಬೇಕಾಗಿದೆ. 5ನೇ ವೇತನ ಶ್ರೇಣಿಗೆ ಒಳಪಟ್ಟ 1,111 ನೌಕರರಲ್ಲಿ
ಚಾಮುಂಡೇಶ್ವರಿ ದೇವಸ್ಥಾನದ 95 ಸಿಬ್ಬಂದಿ ಇದ್ದಾರೆ. ಅದೇ ರೀತಿ ವೇತನ ಶ್ರೇಣಿ ನಿಗದಿಪಡಿಸಬೇಕಾದ 2,568 ನೌಕರರಲ್ಲಿ
ಚಾಮುಂಡೇಶ್ವರಿ ದೇವಸ್ಥಾನದ 76 ಸಿಬ್ಬಂದಿ ಇದ್ದಾರೆ ಎಂದು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Criminal case; ಏಕಕಾಲಕ್ಕೆ ಪಾಲಿಕೆ, ಮುಡಾದಲ್ಲಿ ಕೆಲಸ: ನೌಕರ ವಜಾ
CID ನೂತನ ಡಿಐಜಿಪಿ ಆಗಿ ಶಾಂತನು ಸಿನ್ಹಾ
Guarantee schemes; ಸಿದ್ದರಾಮಯ್ಯ ವಿರುದ್ಧದ ಅರ್ಜಿ: ವಿಚಾರಣೆ ಡಿ. 6ಕ್ಕೆ ಮುಂದೂಡಿಕೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
50 cr for 50 Cong MLAs ; ಎಸ್ ಐಟಿ ತನಿಖೆಗೆ ಎಚ್.ಡಿ.ಕುಮಾರಸ್ವಾಮಿ ಒತ್ತಾಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.