ವಿದ್ಯುತ್ ನೌಕರರ ವೇತನ ಪರಿಷ್ಕರಣೆ: ಶೇ. 20 ವೇತನ ಹೆಚ್ಚಳಕ್ಕೆ ಸಮ್ಮತಿ; ಮುಷ್ಕರ ರದ್ದು
ಸಾರಿಗೆ ನೌಕರರ ಜತೆಗೆ ಸಂಧಾನ ಅಪೂರ್ಣ
Team Udayavani, Mar 16, 2023, 7:00 AM IST
ಬೆಂಗಳೂರು: ರಾಜ್ಯ ಸರಕಾರವು ವಿದ್ಯುತ್ ನೌಕರರಿಗೆ ಶೇ. 20ರಷ್ಟು ವೇತನ ಪರಿಷ್ಕರಣೆ ಮಾಡುವ ನಿರ್ಧಾರ ಪ್ರಕಟಿಸಿದ್ದು, ಗುರುವಾರದಿಂದ ನಡೆಸಲುದ್ದೇಶಿಸಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು ಕೈಬಿಟ್ಟಿದ್ದಾರೆ. ಆದರೆ ಸಾರಿಗೆ ನೌಕರರ ಜತೆಗಿನ ಮಾತುಕತೆ ಕೊನೆಯ ಕ್ಷಣದ ವರೆಗೂ ಫಲ ನೀಡಿಲ್ಲ. ಆದ್ದರಿಂದ ಮಾ. 21ರಿಂದ ಕರೆ ನೀಡಿದ್ದ ಅವರ ಮುಷ್ಕರದಲ್ಲಿ ಯಾವುದೇ ವ್ಯತ್ಯಾಸ ಆಗಿಲ್ಲ.
ವಿದ್ಯುತ್ ನೌಕರರು ಮುಷ್ಕರಕ್ಕೆ ಕರೆ ನೀಡಿದ ಹಿನ್ನೆಲೆಯಲ್ಲಿ ಬುಧವಾರವೇ ಇಂಧನ ಸಚಿವರು ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ (ಕೆಪಿಟಿಸಿಎಲ್) ಮತ್ತು ಎಲ್ಲ ವಿದ್ಯುತ್ ಸರಬರಾಜು ಕಂಪೆನಿ (ಎಸ್ಕಾಂ)ಗಳ ನೌಕರರ ವೇತನವನ್ನು ಶೇ. 20ರಷ್ಟು ಹೆಚ್ಚಿಸಲು ಕೆಪಿಟಿಸಿಎಲ್‌ಗೆ ಲಿಖಿತವಾಗಿ ಸೂಚನೆ ನೀಡಿದ್ದರು. ಆದರೆ ಬರೀ ಟಿಪ್ಪಣಿ
ರೂಪದಲ್ಲಿ ನೀಡಿದ ಈ ಲಿಖೀತ ಹೇಳಿಕೆಯನ್ನು ಒಪ್ಪದ ನೌಕರರು, ಸರಕಾರದ ಅಧಿಕೃತ ಆದೇಶವಾಗುವ ವರೆಗೂ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟುಹಿಡಿದರಾದರೂ ಬಳಿಕ ಹಿಂದೆ ಸರಿದರು.
ಈ ಕುರಿತು ಪ್ರತಿಕ್ರಿಯಿಸಿದ ಸಂಘದ ಪ್ರಧಾನ ಕಾರ್ಯದರ್ಶಿ ಬಲರಾಮ್, “ವಿದ್ಯುತ್ ನೌಕರರ ವೇತನವನ್ನು ಶೇ. 22ರಷ್ಟು ಹೆಚ್ಚಳ ಮಾಡಬೇಕು ಎನ್ನುವುದು ನಮ್ಮ ಪ್ರಮುಖ ಬೇಡಿಕೆಯಾಗಿತ್ತು. ಶೇ. 20ರಷ್ಟು ಪರಿಷ್ಕರಣೆ ಮಾಡುವುದಾಗಿ ಸರಕಾರ ಹೇಳಿದೆ. ಆದರೆ ಮುಖ್ಯಮಂತ್ರಿ ಜತೆಗೆ ಚರ್ಚಿಸಿದ ಬಳಿಕ ಮುಷ್ಕರದ ಬಗ್ಗೆ ಅಂತಿಮ ತೀರ್ಮಾನ ಹೊರ ಬೀಳಲಿದೆ ಎಂದರು.
ಶೇ. 22ರಷ್ಟು ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಪಿಟಿಸಿಎಲ್ ಮತ್ತು ಎಲ್ಲ ಎಸ್ಕಾಂ ನೌಕರರು ಕರ್ತವ್ಯಕ್ಕೆ ಗೈರುಹಾಜರಾಗಿ ಅನಿ ರ್ದಿಷ್ಟಾವಧಿ ಮುಷ್ಕರ ನಡೆಸಲು ನಿರ್ಧರಿಸಿದ್ದರು. ಇದರಿಂದ ವಿದ್ಯುತ್ ಪೂರೈಕೆ ಮತ್ತಿತರ ಸಂಬಂಧಪಟ್ಟ ಸೇವೆಗಳಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇತ್ತು.
ಒಂದೆಡೆ ದ್ವಿತೀಯ ಪಿಯುಸಿ ಪರೀಕ್ಷೆಗಳು ನಡೆದಿವೆ. 5ನೇ ತರಗತಿ ಮತ್ತು 8ನೇ ತರಗತಿಯ ಮಂಡಳಿ ಪರೀಕ್ಷೆಗಳೂ ಆರಂಭವಾಗಲಿವೆ. ಮತ್ತೊಂದೆಡೆ ಬಹುತೇಕ ಎಲ್ಲ ಕೈಗಾರಿಕೆಗಳು ಸರಕಾರ ನೀಡುವ ವಿದ್ಯುತ್ ಮೇಲೆ ಅವಲಂಬಿಸಿವೆ. ಒಂದು ವೇಳೆ ಮುಷ್ಕರ ಮುಂದು ವರಿದರೆ ಎಲ್ಲ ವರ್ಗಗಳಿಗೆ ಇದರ ಬಿಸಿ ತಟ್ಟುವ ಸಾಧ್ಯತೆ ಇದೆ. ಮುಷ್ಕರಕ್ಕೆ ಕರೆ ನೀಡಿದ ಬೆನ್ನಲ್ಲೇ ಕೈಗಾರಿಕಾ ಸಂಘಗಳು ಈ ಬಗ್ಗೆ ಆತಂಕ ವ್ಯಕ್ತಪಡಿಸಿ, “ಮುಷ್ಕರ ನಡೆಯುತ್ತದೆಯೇ ಇಲ್ಲವೇ ಎಂಬ ಬಗ್ಗೆ ಸರಕಾರ ಸ್ಪಷ್ಟಪಡಿಸಬೇಕು’ ಎಂದೂ ಒತ್ತಾಯಿಸಿದ್ದವು. ರಾಜ್ಯಾ ದ್ಯಂತ ಸುಮಾರು 60 ಸಾವಿರ ವಿದ್ಯುತ್ ನೌಕರರಿದ್ದು, ಸುಮಾರು 45 ಸಾವಿರ ನಿವೃತ್ತರಿದ್ದಾರೆ. ಅವರೆಲ್ಲರೂ ಈ ಹೋರಾಟಕ್ಕೆ ಬೆಂಬಲ ಸೂಚಿಸಿದ್ದರು.
ಸಾರಿಗೆ ನೌಕರರ ಮುಷ್ಕರ;
ಮುಂದುವರಿದ ಮಾತುಕತೆ
ಇನ್ನು ಮತ್ತೂಂದೆಡೆ ತಡರಾತ್ರಿ ವರೆಗೂ ನಾಲ್ಕೂ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರೊಂದಿಗೆ ಕೆಎಸ್‌ಆರ್‌ಟಿಸಿ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ ಹಾಗೂ ಕೆಎಸ್‌ಆರ್‌ಟಿಸಿ ನೌಕರರ ಕೂಟದ ಪದಾಧಿಕಾರಿಗಳ ಸಭೆ ನಡೆಯಿತು. ಶೇ. 25ರಷ್ಟು ವೇತನ ಪರಿಷ್ಕರಣೆಗೆ ಸಂಘಟನೆಗಳು ಪಟ್ಟುಹಿಡಿದರೆ, ನಿಗಮಗಳು ಶೇ. 10ರಷ್ಟು ಮಾಡಲು ಒಪ್ಪಿದರು.
ಸುಮಾರು ನಾಲ್ಕು ತಾಸುಗಳು ನಡೆದ ಸಭೆಯಲ್ಲಿ ಹಲವು ರೀತಿ ಮನವೊಲಿಕೆ ಯತ್ನಗಳು ನಡೆದವು. ಕೊನೆಗೆ ಪಟ್ಟುಸಡಿಲಿಸಿದ ನಿಗಮಗಳ ಅಧಿಕಾರಿಗಳು ಶೇ. 14ರಷ್ಟು ವೇತನ ಹೆಚ್ಚಳ ಮಾಡುವುದಾಗಿ ಹೇಳಿದರು. ಆಗ ಶೇ. 20ರಷ್ಟಾದರೂ ನೀಡಲೇ ಬೇಕು ಎಂದು ಸಂಘಟನೆಗಳು ಆಗ್ರಹಿಸಿದರು. ಕೊನೆಗೆ ಗುರುವಾರ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳುವುದಾಗಿ ಅಧಿ ಕಾರಿಗಳು ಹೇಳಿದರು. ಹೀಗಾಗಿ ಯಾವುದೇ ನಿರ್ಣಯಕ್ಕೆ ಬಾರದೆ ಸಭೆ ಬರ್ಖಾಸ್ತುಗೊಂಡಿತು.
ಅನಂತರ “ಉದಯವಾಣಿ’ಯೊಂದಿಗೆ ಮಾತನಾಡಿದ ಜಂಟಿ ಕ್ರಿಯಾ ಸಮಿತಿ ವಕ್ತಾರ ಅನಂತ ಸುಬ್ಬರಾವ್, “ಸರಕಾರಿ ನೌಕರರಿಗೆ ಶೇ. 17ರಷ್ಟು ಮಧ್ಯಂತರ ಪರಿಹಾರ ನೀಡಲಾಗಿದೆ. ವಿದ್ಯುತ್ ನೌಕರರಿಗೆ ಶೇ. 20ರಷ್ಟು ಪರಿಷ್ಕರಿಸ ಲಾಗಿದೆ. ಸಾರಿಗೆ ನೌಕರರ ವಿಚಾರ ದಲ್ಲಿ ಯಾಕೆ ಈ ಚೌಕಾಸಿ ಗೊತ್ತಾಗುತ್ತಿಲ್ಲ. ಈ ಕ್ಷಣದವರೆಗೂ ಮಾತುಕತೆ ಮುಂದು ವರಿದಿದೆ. ಮುಷ್ಕರದ ವಿಚಾರದಲ್ಲೂ ಯಾವುದೇ ಬದ ಲಾವಣೆ ಇಲ್ಲ’ ಎಂದು ಸ್ಪಷ್ಟಪಡಿಸಿದರು.
ಸಾರಿಗೆ ನೌಕರರ ಮುಷ್ಕರಕ್ಕೆ ಸಂಬಂ ಧಿಸಿದಂತೆ ನೌಕರರ ಫೆಡರೇಶನ್‌ಗಳೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲಾಗುವುದು. ಈ ಬಗ್ಗೆ ನೌಕರರನ್ನು ಕರೆದು ಮಾತನಾಡಿದ್ದೇನೆ. ಮುಖ್ಯಮಂತ್ರಿಗಳ ಜತೆಗೆ ಕೂಡ ಚರ್ಚಿಸಿದ್ದೇನೆ.
– ಬಿ. ಶ್ರೀರಾಮುಲು, ಸಾರಿಗೆ ಸಚಿವ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್ ಜಾರಕಿಹೊಳಿ
Hubli; ಅಧಿಕಾರಕ್ಕಾಗಿ ಕಾಂಗ್ರೆಸ್ ಯಾವ ಕೀಳು ಮಟ್ಟಕ್ಕೆ ಇಳಿಯಲು ಹೇಸಲ್ಲ: ಪ್ರಹ್ಲಾದ ಜೋಶಿ
Gold Fraud Case: ಐಶ್ವರ್ಯಗೌಡ ದಂಪತಿಯ 3 ಐಷಾರಾಮಿ ಕಾರು ಜಪ್ತಿ
Gold Cheating Case: ಚಿನಾಭರಣ ವಂಚನೆ… ಶ್ವೇತಾಗೌಡ ವಿರುದ್ಧ ಇನ್ನೊಂದು ದೂರು
Metro: ಮೆಟ್ರೋದಲ್ಲಿ ಮಹಿಳಾ ಟೆಕಿ ಫೋಟೋ ತೆಗೆದು ಸಿಕ್ಕಿಬಿದ್ದ ಆಯುರ್ವೇದಿಕ್ ವೈದ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Sanju Weds Geetha 2: ಸಂಜು-ಗೀತಾಗೆ ಕಿಚ್ಚ ಸಾಥ್
Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್ ಮಾದರಿಯ ಎಚ್ ಎಂಪಿವಿ ವೈರಸ್?
Gadag: ನಿರ್ಮಿತಿ ಕೇಂದ್ರದ ಗುತ್ತಿಗೆ ಆಧಾರಿತ ಇಂಜಿನಿಯರ್ ಆತ್ಮಹ*ತ್ಯೆ
Bantwala: ನೇತ್ರಾವತಿ ನದಿಯ ಅಂಬಿಗ ನಾಪತ್ತೆ; ಸ್ಥಳೀಯರಿಂದ ಶೋಧ ಕಾರ್ಯ
Back to Life: ಸತ್ತ ವ್ಯಕ್ತಿಯನ್ನು ಬದುಕಿಸಿದ ರೋಡ್ ಹಂಪ್ಸ್… ರಸ್ತೆಯಲ್ಲೇ ನಡೆಯಿತು ಪವಾಡ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.