Police Canteen: ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಜೈಲು ಉತ್ಪನ್ನಗಳ ಮಾರಾಟ!
ರಾಜ್ಯದ ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್ ಕ್ಯಾಂಟೀನ್‌ನಲ್ಲಿ ಮಾರಾಟಕ್ಕೆ ಇಲಾಖೆ ಅಸ್ತು
Team Udayavani, Aug 8, 2023, 11:57 AM IST
ಬೆಂಗಳೂರು: ಕಾರಾಗೃಹಗಳನ್ನು ಸುಧಾರಣಾ ಕೇಂದ್ರಗಳನ್ನಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಒತ್ತು ಕೊಡುತ್ತಿರುವ ಸರ್ಕಾರ ಕೈದಿಗಳ ಕೌಶಲ್ಯಾಭಿವೃದ್ದಿ ಮತ್ತು ಉದ್ಯೋಗ ಸೃಷ್ಟಿಯ ಅವಕಾಶಗಳನ್ನು ಹೆಚ್ಚಿಸುತ್ತಿದ್ದು, ಅದರ ಭಾಗವಾಗಿ ಇದೀಗ ಜೈಲಿನ ಉತ್ಪನ್ನಗಳನ್ನು ಪೊಲೀಸ್ ಇಲಾಖೆಯ ಕ್ಯಾಂಟೀನ್‌ಗಳಲ್ಲಿ ಮಾರಾಟಕ್ಕೆ ಅಸ್ತು ಎಂದಿದೆ.
ರಾಜ್ಯದ ಕೇಂದ್ರ ಕಾರಾಗೃಹಗಳ ಆವರಣದಲ್ಲಿ ಪೆಟ್ರೋಲ್ ಬಂಕ್ ಸ್ಥಾಪನೆಗೆ ರೂಪುರೇಷೆ ಸಿದ್ಧಪಡಿಸಿದ್ದ ಕಾರಾಗೃಹ ಮತ್ತು ಸುಧಾರಣಾ ಇಲಾಖೆ ಇದೀಗ ಜೈಲಿನ ಉತ್ಪನ್ನಗಳನ್ನು ಪೊಲೀಸ್ ಇಲಾಖೆಯ ಕ್ಯಾಂಟಿನ್‌ಗಳಲ್ಲಿ ಮಾರಾಟಕ್ಕೆ ಅವಕಾಶ ಪಡೆಯುವಲ್ಲಿ ಯಶಸ್ವಿಯಾಗಿದೆ.
ಅದರಂತೆ ಕಾರಾಗೃಹಗಳಲ್ಲಿ ತಯಾರಾಗುವ ಟಿ-ಶರ್ಟ್, ಬೇಕರಿ ತಿನಿಸುಗಳು ಸೇರಿ ಇತರೆ ಉತ್ಪನ್ನಗಳನ್ನು ಕೆಎಸ್‌ಆರ್‌ಪಿ ಕ್ಯಾಂಟೀನ್‌ಗಳು ಹಾಗೂ ಇತರೆ ಎಲ್ಲ ಪೊಲೀಸ್ ಕ್ಯಾಂಟೀನ್‌ಗಳಲ್ಲಿ ಮಾರಾಟಕ್ಕೆ ಅನುಮತಿ ನೀಡಿ ರಾಜ್ಯ ಪೊಲೀಸ್ ಇಲಾಖೆ ಆದೇಶ ನೀಡಿದೆ.
ಈಗಾಗಲೇ ರಾಜ್ಯದ ಕೇಂದ್ರ ಕಾರಾಗೃಹಗಳ ಆವರಣಲ್ಲಿ ಇಂಡಿಯನ್ ಆಯಿಲ್ ಕಾರ್ಪೋರೇಷನ್(ಐಓಸಿ) ಜತೆ ಒಡಂಬಡಿಕೆ ಮಾಡಿಕೊಂಡು ಪೆಟ್ರೋಲ್ ಬಂಕ್‌ಗಳ ಸ್ಥಾಪನೆಗೆ ನೀಲನಕ್ಷೆ ಸಿದ್ಧಪಡಿಸಿ, ಈ ಮೂಲಕ ಇಲಾಖೆ ಮತ್ತು ಸಜಾಬಂಧಿಗಳ ಆದಾಯ ಹೆಚ್ಚಳಕ್ಕೆ ಯೋಜನೆ ರೂಪಿಸಲಾಗಿದೆ.
ಈ ಬೆನ್ನಲ್ಲೇ ಕಾರಾಗೃಹದ ಬೇಕರಿ, ಕೈಮಗ್ಗ ಹಾಗೂ ಕಬ್ಬಿಣ ಉಪಕರಣಗಳ ತಯಾರಿಕಾ ಘಟಕ, ರಾಸಾಯನಿಕ ಘಟಕ, ಮುದ್ರಣಾಲಯ ಹಾಗೂ ಇತರೆ ಘಟಕದಲ್ಲಿ ಉತ್ಪಾದಿಸುವ ವಸ್ತುಗಳ ಮಾರಾಟಕ್ಕೆ ಈ ಹಿಂದೆ ಕಾರಾಗೃಹ ಮುಖ್ಯಸ್ಥರಾಗಿದ್ದ ಅಲೋಕ್ ಮೋಹನ್ ರಾಜ್ಯ ಪೊಲೀಸ್ ಇಲಾಖೆಗೆ ಮನವಿ ಮಾಡಿದ್ದರು.
ಇದಕ್ಕೆ ಸಕರಾತ್ಮಕವಾಗಿ ಸ್ಪಂದಿಸಿರುವ ಪೊಲೀಸ್ ಇಲಾಖೆ, ಕೆಎಸ್‌ಆರ್‌ಪಿ, ಸಿಎಆರ್, ಡಿಎಆರ್ ಕ್ಯಾಂಟೀನ್‌ಗಳಲ್ಲಿ ಅಲ್ಪಾವಧಿ ಮತ್ತು ದೀರ್ಘಾವಧಿ ಕಾಲ ಸಂಗ್ರಹಿಸಿ ಇಡಬಹುದಾದ ಬೇಕರಿಯ ಬ್ರೇಡ್, ರಸ್ಕ್, ಖಾರ ಮತ್ತು ಸಿಹಿ ಬೆಣ್ಣೆ ಬಿಸ್ಕೆಟ್‌ಗಳು ಸೇರಿ ಆರೇಳು ರೀತಿಯ ತಿನಿಸುಗಳು ಹಾಗೂ ಕೈಮಗ್ಗದ ಶರ್ಟ್‌ಗಳು (ಅರ್ಥ ತೋಳಿನ, ಪೂರ್ಣ ತೋಳಿನ) ಟಿ-ಶರ್ಟ್, ಟವಲ್, ಲುಂಗಿ, ಬೆಡ್‌ಶೀಟ್‌ಗಳು, ಕರವಸ್ತ್ರಗಳು, ಫಿನಾಯಿಲ್‌ಗಳನ್ನು ಮಾರಾಟ ಮಾಡಲಾಗುತ್ತಿದೆ. ಇದರಿಂದ ಕಾರಾಗೃಹ ಇಲಾಖೆಗೆ ಆದಾಯ ಹೆಚ್ಚಳವಾಗಿದೆ.
ಇದೇ ವೇಳೆ ಜೈಲಿನಲ್ಲಿ ತಯಾರಿಸುವ ಕಬ್ಬಿಣದ ಉಪಕರಣಗಳಾದ ಫರ್ನಿಚರ್‌ಗಳಿಗೆ ಕೋರ್ಟ್ ಗಳಿಂದ ಉತ್ತಮ ಬೇಡಿಕೆ ಇದ್ದು, ಅವುಗಳನ್ನು ಬೇಡಿ ಕೆಗೆ ಅನುಗುಣವಾಗಿ ತಯಾರಿಸಿ ಮಾರಾಟ ಮಾಡ ಲಾಗುತ್ತಿದೆ. ಜತೆಗೆ ಕೆಲ ಆಸ್ಪತ್ರೆಗಳಿಗೆ ಬೇಕಾಗುವ ಕಬ್ಬಿಣದ ಬೆಡ್‌ಗಳು ಮತ್ತು ಪಕ್ಕದಲ್ಲಿ ಔಷಧಿಗಳು ಇಡುವ ಫರ್ನಿಚರ್‌ಗಳನ್ನು ಮಾರಾಟ ಮಾಡಲಾ ಗುತ್ತಿದೆ ಎಂದು ಜೈಲಿನ ಮೂಲಗಳು ತಿಳಿಸಿವೆ.
ಕೆಎಸ್‌ಆರ್‌ಪಿಯಲ್ಲೂ ಬೇಕರಿಗಳಿವೆ. ಆದರೆ, ಎಲ್ಲ ಉತ್ಪನ್ನಗಳನ್ನು ತಯಾರಿಸುವುದಿಲ್ಲ. ತಮ್ಮ ತಯಾರಿಸದ ಆಹಾರ ಪದಾರ್ಥಗಳನ್ನು ಬೇಡಿಕೆಗೆ ಅನುಸಾರವಾಗಿ ಪಡೆಯಲಾಗಿದೆ. ಜತೆಗೆ ಡಿಎಆರ್ ಮತ್ತು ಸಿಎಆರ್ ಕ್ಯಾಂಟೀನ್‌ಗಳಲ್ಲಿ ಎಲ್ಲ ಉತ್ಪನ್ನಗಳ ಮಾರಲಾಗುತ್ತಿದೆ. ಹೆಚ್ಚಾಗಿ ಶರ್ಟ್‌ಗಳು, ಕರವಸ್ತ್ರ, ಫಿನಾಯಿಲ್, ಟಿ-ಶರ್ಟ್‌ಗಳಿಗೆ ಉತ್ತಮ ಬೇಡಿಕೆ ಇದೆ ಎಂದು ಕೆಎಸ್‌ಆರ್‌ಪಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದರು.
– ಮೋಹನ್ ಭದ್ರಾವತಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
ದುಷ್ಟ ಶಕ್ತಿಗಳಿಂದ ದೇಶದ ನೆಮ್ಮದಿ ಕೆಡಿಸಲು ಧರ್ಮ-ಜಾತಿಯ ದುರ್ಬಳಕೆ: ಸಿದ್ದರಾಮಯ್ಯ
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.