ಬ್ರಿಗೇಡ್ ವಿವಾದ; ದೆಹಲಿಗೆ ಬನ್ನಿ, ಬಿಜೆಪಿ ನಾಯಕರಿಗೆ ಶಾ ಬುಲಾವ್
Team Udayavani, Jan 25, 2017, 3:32 PM IST
ನವದೆಹಲಿ:ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯ ಬಿಜೆಪಿ ವರಿಷ್ಠ ನಾಯಕರಿಗೆ ಹಾಗೂ ಆರ್ ಎಸ್ಎಸ್ ಸಂಘಟನೆ ವರಿಷ್ಠರಿಗೆ ನವದೆಹಲಿಗೆ ಆಗಮಿಸುವಂತೆ ಬಿಜೆಪಿ ಹೈಕಮಾಂಡ್ ಸೂಚನೆ ನೀಡಿದೆ.
ರಾಯಣ್ಣ ಬ್ರಿಗೇಡ್ ವಿವಾದದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹಾಗೂ ಹಿರಿಯ ಮುಖಂಡ ಕೆಎಸ್ ಈಶ್ವರಪ್ಪ ನಡುವಿನ ರಂಪಾಟ ಮುಂದುವರಿದಿದೆ. ಸಂಧಾನ ಸಭೆಯೂ ವಿಫಲವಾದ ಹಿನ್ನೆಲೆಯಲ್ಲಿ ಇದೀಗ ಬಿಜೆಪಿ ಹೈಕಮಾಂಡ್ ಮಧ್ಯಪ್ರವೇಶಿಸಿದೆ.
ಬಿಜೆಪಿ ಮುಖಂಡರೊಳಗಿನ ಭಿನ್ನಮತ ಶಮನಗೊಳಿಸಲು ಮುಂದಾಗಿರುವ ಹೈಕಮಾಂಡ್, ಜನವರಿ 27ರಂದು ನವದೆಹಲಿಯಲ್ಲಿರುವ ಅಮಿತ್ ಶಾ ನಿವಾಸದಲ್ಲಿ ನಡೆಯಲಿರುವ ಸಭೆಗೆ ಬಿಎಸ್ ಯಡಿಯೂರಪ್ಪ, ಕೆಎಸ್ ಈಶ್ವರಪ್ಪ, ಸಂಸದ ಅನಂತ್ ಕುಮಾರ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಭಾಗವಹಿಸಬೇಕೆಂದು ಸಂದೇಶ ರವಾನಿಸಿರುವುದಾಗಿ ಮಾಧ್ಯಮದ ವರದಿ ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.