ಸ್ಯಾನಿಟರಿ ನ್ಯಾಪ್‌ಕಿನ್‌ನಲ್ಲಿ ಅವ್ಯವಹಾರವಾಗಿಲ್ಲ: ಸ್ಪಷ್ಟನೆ
Team Udayavani, Oct 30, 2017, 10:42 AM IST
ಕಲಬುರಗಿ: “ಶುಚಿ ಯೋಜನೆಯಡಿ ಸ್ಯಾನಿಟರಿ ನ್ಯಾಪ್‌ಕಿನ್‌ಗಳ ಖರೀದಿ ಪ್ರಕ್ರಿಯೆಗಳಲ್ಲಿ ಯಾವುದೇ ಅವ್ಯವಹಾರವಾಗಿಲ್ಲ. ಅಮೋಘಸಿದ್ಧಿ ಸ್ತ್ರೀ ಶಕ್ತಿ ಸ್ವ ಸಹಾಯ ಸಂಘದವರು ಮಾಡಿರುವ ಆರೋಪ ಸತ್ಯಕ್ಕೆ ದೂರ’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ಆಯುಷ್ ಸೇವೆ ಇಲಾಖೆ ಸ್ಪಷ್ಟಪಡಿಸಿದೆ.
ಅ.21ರಂದು “ಉದಯವಾಣಿ’ಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಖರೀದಿಯಲ್ಲಿ ಸ್ಥಳೀಯ ಸಂಸ್ಥೆಗಳನ್ನು ಕಡೆಗಣಿಸಿ ಬೇರೆ ರಾಜ್ಯಗಳ ಖರೀದಿಗೆ ಮಣೆ ಎನ್ನುವ ವರದಿ ಪ್ರಕಟವಾಗಿತ್ತು. ಈ ಕುರಿತು ಸ್ಪಷ್ಟನೆ ನೀಡಿರುವ ಇಲಾಖೆ, “ಸ್ಯಾನಿಟರಿ ನ್ಯಾಪ್‌ಕಿನ್ ಖರೀದಿಗಾಗಿ ಏಳು ವರ್ಷಗಳಿಂದ ಬೇರೆ ರಾಜ್ಯದವರಿಗೆ ಟೆಂಡರ್ ನೀಡುತ್ತಾ ಬಂದಿಲ್ಲ. 2013-14ನೇ ಸಾಲಿನ ಅಂತ್ಯದಲ್ಲಿ ಪ್ರಾರಂಭವಾಗಿ 2015ನೇ ಸಾಲಿಗೆ ಅನುಷ್ಠಾನಗೊಂಡಿದೆ. ಸ್ಯಾನಿಟರಿ ನ್ಯಾಪ್‌ಕಿನ್ ಪೂರೈಕೆ ಸಂಬಂಧವಾಗಿ ಅಫಜಲಪುರದ ಅಮೋಘಸಿದ್ಧಿ ಸ್ತ್ರೀಶಕ್ತಿ ಸಂಘ, ಗದಗ ಜಿಲ್ಲೆಯ ಖುಷಿ ಕುಸುಮ ಸ್ತ್ರೀಶಕ್ತಿ ಸ್ವಸಹಾಯ ಸಂಘದವರು ಮಾತ್ರ ತಮ್ಮಲ್ಲಿ ಉತ್ಪಾದನೆಯಾಗುವ ನ್ಯಾಪ್‌ಕಿನ್ ಗಳ ಖರೀದಿ ಸಂಬಂಧ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ.
ಪ್ರಸ್ತಾವನೆಯನ್ನು ಸರ್ಕಾರ ನಿರ್ಲಕ್ಷಿಸಿಲ್ಲ. ಹಲವಾರು ಬಾರಿ ಸಂಘದವರೊಂದಿಗೆ ಚರ್ಚಿಸಿದ್ದು ಸೂಕ್ತ ದಾಖಲೆ ನೀಡುವುದರ
ಜತೆಗೆ ಪ್ರಸ್ತಾವನೆಯನ್ನು ಸರ್ಕಾರದ ಅನುಮೋದನೆಗಾಗಿಸಲ್ಲಿಸಲಾಗಿದೆ. ಈ ಎರಡು ಸಂಘಗಳು ಬಿಟ್ಟರೆ ಉಳಿದವರ್ಯಾರು ಪ್ರಸ್ತಾವನೆ ಸಲ್ಲಿಸಿಲ್ಲ ‘ಎಂದು ತಿಳಿಸಿದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.