ಬೆಂಗಳೂರು : ವಿಮಾನ ಸುರಕ್ಷಿತ ಲ್ಯಾಂಡಿಂಗ್ ಪರೀಕ್ಷೆ ಯಶಸ್ವಿ
Team Udayavani, May 15, 2022, 11:10 PM IST
ಬೆಂಗಳೂರು : ವಿಮಾನದ ಸುರಕ್ಷಿತ ಲ್ಯಾಂಡಿಂಗ್‌ಗೆ ಪೂರಕವಾದ ಡಿಜಿಟಲ್ ಆ್ಯಂಟಿಸ್ಕಿಡ್ ಬ್ರೇಕ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಂ (ಜಾರು ನಿಯಂತ್ರಕ ಬ್ರೇಕ್ ನಿರ್ವಹಣಾ ವ್ಯವಸ್ಥೆ) ಅನ್ನು ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯ (ಎನ್‌ಎಎಲ್- ಸಿಎಸ್‌ಐಆರ್) ಅಭಿವೃದ್ಧಿಪಡಿಸಿದ್ದು, ಅದರ ಪರೀಕ್ಷೆ ಯಶಸ್ವಿಯಾಗಿ ನಡೆಯಿತು.
“ಸಾರಸ್ ಎಂಕೆ-2′ ಯೋಜನೆಗಾಗಿ ಈ ಆ್ಯಂಟಿ ಬ್ರೇಕ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಂ ಅನ್ನು ಅಭಿವೃದ್ಧಿಪಡಿಸಿದ್ದು, ನಾಗರಿಕ ವಿಮಾನಕ್ಕಾಗಿ ಈ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದ್ದು ದೇಶದಲ್ಲಿ ಇದೇ ಮೊದಲು. ಈ ತಂತ್ರಜ್ಞಾನವನ್ನು ವಿಮಾನದಲ್ಲಿ ಅಳವಡಿಸಿ ಈಚೆಗೆ ಪರೀಕ್ಷೆ ನಡೆಸಲಾಯಿತು. ಗಂಟೆಗೆ 56 ಕಿ.ಮೀ. (30 ನಾಟ್ಸ್) ವೇಗದಲ್ಲಿ ಇದರ ಪರೀಕ್ಷೆ ನಡೆಸಿದ್ದು, ಫಲಿತಾಂಶ ಅತ್ಯಂತ ತೃಪ್ತಿಕರವಾಗಿದೆ ಎಂದು ಎನ್‌ಎಎಲ್- ಸಿಎಸ್‌ಐಆರ್ ತಿಳಿಸಿದೆ.
ದೇಶೀಯ ಅಭಿವೃದ್ಧಿ
“ಎಲೆಕ್ಟ್ರೋ-ಹೈಡ್ರಾಲಿಕ್ ಬ್ರೇಕಿಂಗ್ ವ್ಯವಸ್ಥೆ ಒಳಗೊಂಡ ಈ ಸುಧಾರಿತ ತಂತ್ರಜ್ಞಾನವನ್ನು ದೇಶೀಯವಾಗಿ ಅಭಿವೃದ್ಧಿಪಡಿಸಲಾಗಿದೆ. 15ರಿಂದ 20 ಟ್ಯಾಕ್ಸಿ ಟ್ರಯಲ್‌ಗಳನ್ನು ಮೌಲ್ಯಮಾಪನ ಮಾಡಿ, ಅತ್ಯಾಧುನಿಕ ವ್ಯವಸ್ಥೆಯ ಕಾರ್ಯವೈಖರಿಯ ಬಗ್ಗೆ ನಿರ್ಧಾರಕ್ಕೆ ಬರಲಾಗಿದೆ’ ಎಂದು ಎನ್‌ಎಎಲ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ : ದಿಲ್ಲಿಗೆ ಬನ್ನಿ: ರಾಜ್ಯ ನಾಯಕರಿಗೆ ಕಾಂಗ್ರೆಸ್ ಹೈಕಮಾಂಡ್‌ನಿಂದ ಬುಲಾವ್
ಸಾರಸ್ ಎಂಕೆ-2 ಹಾರಾಟ
ಡಿಜಿಟಲ್ ಆ್ಯಂಟಿ ಬ್ರೇಕ್ ಮ್ಯಾನೇಜ್‌ಮೆಂಟ್ ಸಿಸ್ಟ್‌ಂನಿಂದ ಸಣ್ಣ ರನ್‌ವೇನಲ್ಲಿ ಸಾರಸ್ ಎಂಕೆ-2 ವಿಮಾನದ ಕಾರ್ಯಾಚರಣೆ, ಉಪನಗರಗಳ ನಡುವೆ ವೈಮಾನಿಕ ಸೇವೆ ಕಲ್ಪಿಸಲು ಸಾಕಷ್ಟು ನೆರವಾಗಲಿದೆ. ಭಾರತೀಯ ವಾಯುಸೇನೆಯು ಈಗಾಗಲೇ 15 ಸಾರಸ್ ಎಂಕೆ-2 ವಿಮಾನಗಳನ್ನು ಪರಿಚಯಿಸಲು ಉದ್ದೇಶಿಸಿದ್ದು, 2024ರ ಡಿಸೆಂಬರ್‌ನಲ್ಲಿ ಮೊದಲ ಸಾರಸ್ ಎಂಕೆ-2 ಹಾರಾಟ ನಡೆಸಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಎಐಸಿಸಿ ಅಧಿವೇಶನದ ಶತಮಾನೋತ್ಸವಕ್ಕೆ ಅಡ್ಡಿಪಡಿಸಿದರೆ ಕ್ರಮ: ಸಿದ್ದರಾಮಯ್ಯ
Vijayapura: ಜನವರಿ 1, 2 ರಂದು ಸಿದ್ದೇಶ್ವರ ಶ್ರೀಗಳಿಗೆ ಗುರುನಮನ ಕಾರ್ಯಕ್ರಮ
ಮದುವೆಯಾಗಿದ್ದೇವೆ… ನಮಗೆ ರಕ್ಷಣೆ ನೀಡಿ ಎಂದು ಠಾಣೆ ಮೆಟ್ಟಿಲೇರಿದ ಪ್ರೇಮಿಗಳು
Karnataka: “ಸೈಬರ್ ಕ್ರೈಂ ತಡೆಗೆ ಪ್ರತ್ಯೇಕ ಭದ್ರತಾ ವಿಭಾಗ’: ಸಚಿವ ಡಾ| ಜಿ. ಪರಮೇಶ್ವರ್
Karnataka: ಬೆಂಗಳೂರಿನಲ್ಲಿ ಸಾಕು ನಾಯಿಗಳ ಅಂತ್ಯಕ್ರಿಯೆಗೆ ಚಿತಾಗಾರ; ಸರಕಾರ ಚಿಂತನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.