ಶಶಿಕಲಾಗೆ ಕೊನೆಗೂ ಪೆರೋಲ್ ಮಂಜೂರು
Team Udayavani, Oct 7, 2017, 10:19 AM IST
ಬೆಂಗಳೂರು: ಆದಾಯ ಮೀರಿ ಆಸ್ತಿ ಗಳಿಕೆ ಆರೋಪದಲ್ಲಿ ಕಳೆದ 9 ತಿಂಗಳಿಂದ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಎಐಡಿಎಂಕೆ ಮಾಜಿ ನಾಯಕಿ ಶಶಿಕಲಾ ನಟರಾಜನ್‌ಗೆ ಕೊನೆಗೂ ಜೈಲಿನ ಅಧಿಕಾರಿಗಳು ಷರತ್ತುಬದ್ಧ ಐದು ದಿನಗಳ ಕಾಲ ಪೆರೋಲ್‌ಗೆ ಅನುಮತಿ ನೀಡಿದ್ದಾರೆ.
ಈ ಮೊದಲು ದಾಖಲಾತಿ ಕೊರತೆ ಹಿನ್ನೆಲೆಯಲ್ಲಿ ಪೆರೋಲ್ ಅರ್ಜಿ ತಿರಸ್ಕ ರಿಸಿದ್ದ ಬಂದೀಖಾನೆ ಅಧಿಕಾರಿಗಳು
ಸಮರ್ಪಕ ದಾಖಲಾತಿ ಒದಗಿಸಿದ್ದರ ಹಿನ್ನೆಲೆಯಲ್ಲಿ ಪೆರೋಲ್ ಬಿಡುಗಡೆಗೆ ಸಹಮತ ವ್ಯಕ್ತಪಡಿಸಿದರು. ಚೆನ್ನೈನ ಆಸ್ಪತ್ರೆಯಲ್ಲಿ ಕಿಡ್ನಿ ಕಸಿ ಮಾಡಿಸಿಕೊಂಡು ಚಿಕಿತ್ಸೆ ಪಡೆಯುತ್ತಿರುವ ತಮ್ಮ ಪತಿಯ ಭೇಟಿಗೆ 15 ದಿನಗಳ ಪೆರೋಲ್ ನೀಡಬೇಕು ಎಂದು ಶಶಿಕಲಾ ನಟರಾಜನ್ ಅರ್ಜಿ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿದ ಜೈಲಿನ ಅಧಿಕಾರಿಗಳು 15 ದಿನಗಳ ಬದಲಿಗೆ 5 ದಿನಗಳ ಕಾಲ ಪೆರೋಲ್‌ಗೆ ಅವಕಾಶ ನೀಡಿದ್ದಾರೆ. ಅಲ್ಲದೇ ಕೆಲವು ಷರತ್ತು ಗಳನ್ನು ವಿಧಿಸಿದ್ದು, ಇದನ್ನು ಮೀರಿ ದರೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶುಕ್ರವಾರ ಅಪರಾಹ್ನ 3 ಗಂಟೆ ಸುಮಾರಿಗೆ ತಮ್ಮ ಸಂಬಂಧಿ ಟಿಟಿಡಿ ದಿನಕರನ್ ಮತ್ತು ಬೆಂಬಲಿಗರೊಂದಿಗೆ ರಸ್ತೆ
ಮಾರ್ಗವಾಗಿ ಚೆನ್ನೈ ತಲುಪಿದ್ದಾರೆ.
ಪೆರೋಲ್ ದೊರೆತ ಹಿನ್ನೆಲೆಯಲ್ಲಿ ಶುಕ್ರವಾರ ಬೆಳಗ್ಗೆಯೇ ಶಶಿಕಲಾ ಸಂಬಂಧಿ ಟಿಟಿಡಿ ದಿನಕರನ್ ಮತ್ತು ಪತ್ನಿ ಅನುರಾಧಾ, ಕರ್ನಾಟಕ ಎಐಎ ಡಿಎಂಕೆ ನಾಯಕರಾದ ಪುಗಳೆಂದಿ, ರಾಜಶೇಖರನ್, ವೆಲ್ಲೂರಿನ ಬಾಲ ಸುಬ್ರಹ್ಮಣ್ಯಂ “ಚಿನ್ನಮ್ಮ’ನ ಆಗ ಮನಕ್ಕಾಗಿ ಜೈಲಿನ ಆವರಣದಲ್ಲಿ ಕಾಯುತ್ತಿದ್ದರು.
“ಚಿನ್ನಮ್ಮ’ನಿಗೆ ಷರತ್ತು
ಅ. 7ರಿಂದ ಅ. 11ರ ಸಂಜೆ 5 ಗಂಟೆವರೆಗೆ 5 ದಿನ ಪೆರೋಲ್ ನೀಡಿರುವ ಪರಪ್ಪನ ಅಗ್ರಹಾರ ಜೈಲಿನ ಅಧಿಕಾರಿಗಳು ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದ್ದಾರೆ.ತಾವು ಸಲ್ಲಿಸಿರುವ ಅರ್ಜಿಯಲ್ಲಿ ಪತಿಯ ಅನಾರೋಗ್ಯದ ಬಗ್ಗೆ ಉಲ್ಲೇಖೀಸಿದ್ದೀರಿ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯು ತ್ತಿರುವ ಪತಿ ನಟರಾಜನ್ ಅವರನ್ನು ಮಾತ್ರ ಭೇಟಿಯಾಗಬೇಕು. ಯಾವುದೇ ರಾಜಕೀಯ ಚರ್ಚೆ ನಡೆಸಬಾರದು. ಆಸ್ಪತ್ರೆಯಲ್ಲೇ ತಂಗಬೇಕು, ಇಲ್ಲವಾದರೆ ತಮ್ಮ ಅರ್ಜಿಯಲ್ಲಿ ಉಲ್ಲೇಖೀಸಿರುವ ಮನೆ ಯಲ್ಲೇ ವಾಸಿಸಬೇಕು. ಇದೇ ಸಂದರ್ಭವನ್ನು ಬಳಸಿಕೊಂಡು ಆಸ್ಪತ್ರೆ ಅಥವಾ ಮನೆಯಲ್ಲಿ ತಮ್ಮನ್ನು ಭೇಟಿಯಾಗಲು ಬರುವ ರಾಜಕಾರಣಿ ಗಳು, ಬೆಂಬಲಿಗರು ಹಾಗೂ ಸಂದರ್ಶಕರನ್ನು ಭೇಟಿಯಾಗುವಂತಿಲ್ಲ. ಹಾಗೆಯೇ ಚರ್ಚೆ ನಡೆಸುವಂತಿಲ್ಲ. ರಾಜಕೀಯ ಹಾಗೂ ಸಾರ್ವಜನಿಕ ಸಂಬಂಧಿತ ಚಟುವಟಿಕೆಗಳಾಗಲೀ ಪಕ್ಷದ ಚಟುವಟಿಕೆಗಳಾಗಲೀ ನಡೆಸುವಂತಿಲ್ಲ. ಪ್ರಮುಖವಾಗಿ ಯಾವುದೇ ಸಂದರ್ಭದಲ್ಲಿಯೂ ಮಾಧ್ಯಮ (ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ)ಕ್ಕೆ ಪ್ರತಿಕ್ರಿಯೆ ನೀಡಬಾರದು. ಒಂದು ವೇಳೆ ನಿಯಮ ಉಲ್ಲಂ ಸಿದರೆ ಶಿಸ್ತು ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.
ಚೆನ್ನೈ ಪೊಲೀಸರಿಂದ ಎನ್‌ಓಸಿ
ಬೆಳಗ್ಗೆ 11 ಗಂಟೆ ಸುಮಾರಿಗೆ ತಮಿಳುನಾಡಿನ ಇಬ್ಬರು ವಕೀಲರ ಜತೆ ಟಿಟಿಡಿ ದಿನಕರನ್, ಪತ್ನಿ ಅನುರಾಧ, ಇಳವರಸಿ ಪುತ್ರ ಕಾರ್ತಿಕ್, ಪತ್ನಿ ಅರ್ಚನಾ ಹಾಗೂ ರಾಜ್ಯ ಎಐಎಡಿಎಂಕೆ ನಾಯಕ ಪುಗಳೆಂದಿ ಜೈಲಿನ ಒಳಗೆ
ಪ್ರವೇಶಿದರು. ಬಳಿಕ ಜೈಲಿನ ಅಧಿಕಾರಿಗಳ ಜತೆ ಪೆರೋಲ್ ಕುರಿತು ಚರ್ಚಿಸಿದರು. ನಂತರ ಜೈಲು ಅಧಿಕಾರಿಗಳು ಚೆನ್ನೈನ ಪೊಲೀಸ್ ಆಯುಕ್ತರಿಗೆ ಈ-ಮೇಲ್ ಮೂಲಕ ಪತ್ರ ಬರೆದಿದ್ದು, ಪೆರೋಲ್ ಮೇಲೆ ಬರುತ್ತಿರುವ ಶಶಿಕಲಾ ಷರತ್ತುಗಳನ್ನು ಮೀರದಂತೆ ಎಚ್ಚರಿಕೆ ವಹಿಸುವಂತೆ ಕೇಳಿಕೊಂಡರು. ಇದಕ್ಕೆ ಚೆನ್ನೈನ ಕಮಿಷನರ್, ಶಶಿಕಲಾ ಪೆರೋಲ್ ಮೇಲೆ ಬಂದರೆ ಯಾವುದೇ ತೊಂದರೆ ಇಲ್ಲ. ಇಲ್ಲಿ ಎಲ್ಲ ರೀತಿಯ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು
ಈ-ಮೇಲ್ ಮೂಲಕವೇ ಪ್ರತಿಕ್ರಿಯೆ ನೀಡಿದರು. ಅಲ್ಲದೇ ಹೊಸೂರು ಮಾರ್ಗದಿಂದ ಚೆನ್ನೈನ ಆಸ್ಪತ್ರೆವರೆಗೆ ಸೂಕ್ತ ಭದ್ರತೆ ಕೈಗೊಂಡಿರುವುದಾಗಿ ಮಾಹಿತಿ ನೀಡಿದ ಬಳಿಕ ಮಧ್ಯಾಹ್ನ 3 ಗಂಟೆ ಸುಮಾರಿಗೆ ಶಶಿಕಲಾ ನಟರಾಜನ್ ಹೊರಟರು.
ಮೊದಲು ವಿಮಾನ ಆಮೇಲೆ ಕಾರು
ಆರಂಭದಲ್ಲಿ ಜೈಲಿನ ಅಧಿಕಾರಿಗಳಿಗೆ ಟಿಟಿಡಿ ದಿನಕರನ್ ಚಿನ್ನಮ್ಮನನ್ನು ವಿಮಾನದಲ್ಲಿ ಕರೆದೊಯ್ಯುವುದಾಗಿ ತಿಳಿಸಿದ್ದರು. ಸಂಜೆ 4.10, 5.10 ಹಾಗೂ 7.10ಕ್ಕೆ ಬೆಂಗಳೂರಿನಿಂದ ಹೊರಡುವ ವಿಮಾನಗಳ ಪೈಕಿ ಒಂದರಲ್ಲಿ
ಕರೆದೊಯ್ಯುವುದಾಗಿ ಮಾಹಿತಿ ನೀಡಿದರು. ನಂತರ ಏಕಾಏಕಿ ರಸ್ತೆ ಮಾರ್ಗವಾಗಿಯೇ ಕರೆದೊಯ್ಯುವುದಾಗಿ ತಿಳಿಸಿದರು. ಆ ಮೂಲಕ ಜೈಲಿನ ಅಧಿಕಾರಿಗಳಿಗೆ ಗೊಂದಲ ಉಂಟು ಮಾಡಿದರು.
ಪ್ರಮುಖ ಷರತ್ತುಗಳು
1. ಆಸ್ಪತ್ರೆ ಚಿಕಿತ್ಸೆಯಲ್ಲಿ ಪಡೆಯುತ್ತಿರುವ ಪತಿ ನಟರಾಜನ್ ಅವರನ್ನು ಮಾತ್ರ ಭೇಟಿಯಾಗಬೇಕು.
2. ಆಸ್ಪತ್ರೆಯಲ್ಲೇ ತಂಗಬೇಕು ಇಲ್ಲವಾದರೆ ತಾವು ಅರ್ಜಿಯಲ್ಲಿ ಉಲ್ಲೇಖೀಸಿರುವ ಮನೆಯಲ್ಲೇ ವಾಸಿಸಬೇಕು.
3. ಯಾವುದೇ ರಾಜಕೀಯ ಮುಖಂಡರ ಜತೆ ಚರ್ಚೆ ನಡೆಸಬಾರದು.
4. ಆಸ್ಪತ್ರೆ ಅಥವಾ ಮನೆಯಲ್ಲಿ ತಮ್ಮನ್ನು ಭೇಟಿಯಾಗಲು ಬರುವ ರಾಜಕಾರಣಿ, ಬೆಂಬಲಿಗರು ಹಾಗೂ ಸಂದರ್ಶಕರನ್ನು ಭೇಟಿಯಾಗುವಂತಿಲ್ಲ.
5. ರಾಜಕೀಯ ಹಾಗೂ ಸಾರ್ವಜನಿಕ ಸಂಬಂಧಿತ ಚಟುವಟಿಕೆಗಳ ಲ್ಲಾಗಲಿ, ಪಕ್ಷದ ಚಟುವಟಿಕೆಗಳಲ್ಲಾಗಲಿ ಪಾಲ್ಗೊಳ್ಳುವಂತಿಲ್ಲ.
6. ಪ್ರಮುಖವಾಗಿ ಯಾವುದೇ ಸಂದರ್ಭದಲ್ಲಿಯೂ ಮಾಧ್ಯಮ
(ಪತ್ರಿಕೆ ಹಾಗೂ ದೃಶ್ಯ ಮಾಧ್ಯಮ)ಕ್ಕೆ ಪ್ರತಿಕ್ರಿಯೆ ನೀಡಬಾರದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Waqf issue: ಅಲ್ಲಾನ ಹೆಸರಲ್ಲಿ ಅಲ್ಲಾನಿಗೆ ದೋಖಾ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
Bellary: ತುಕಾರಾಂ ಆಡಳಿತದಲ್ಲಿ ಸಂಡೂರು ಅಭಿವೃದ್ಧಿಯಾಗಿದೆ: ಡಿಕೆ ಶಿವಕುಮಾರ್
Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್: ಸಿದ್ದರಾಮಯ್ಯ
Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ
Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ
MUST WATCH
ಹೊಸ ಸೇರ್ಪಡೆ
Udupi: ವಕ್ಫ್ ಬೋರ್ಡ್ ಭೂ ಕಬಳಿಕೆ ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ
Session:ನ.25- ಡಿ.20- ಸಂಸತ್ ಚಳಿಗಾಲದ ಅಧಿವೇಶನ;ಒಂದು ದೇಶ, ಒಂದು ಚುನಾವಣೆ ಮಸೂದೆ ಮಂಡನೆ?
Malpe ಫಿಶರೀಸ್ ಕಾಲೇಜು: ದುರ್ವಾಸನೆಯಲ್ಲೇ ಪಾಠ
Kaup: ಎರ್ಮಾಳು-ಉಚ್ಚಿಲ-ಮೂಳೂರು ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ಕತ್ತಲೆಗೆ ಮುಕ್ತಿ!
County Championship: ಶಕಿಬ್ ಹಸನ್ ಬೌಲಿಂಗ್ ಶೈಲಿ ಬಗ್ಗೆ ಅಂಪೈರ್ ಗಳ ಆಕ್ಷೇಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.