ಇಬ್ರಾಹಿಮ್ ಸಾಬ್ರು ಬಾಗ್ಲು ತೆಗಿ ಮೆರಿ ಜಾನ್ ಸಾಂಗ್ ಹಾಡ್ತಾವ್ರಂತೆ…
Team Udayavani, Oct 16, 2022, 11:44 AM IST
ಅಮಾಸೆ: ನಮ್‌ಸ್ಕಾರ ಸಾ….
ಚೇರ್ಮನ್ರು: ಏನ್ಲಾ ಅಮಾಸೆ ಆಳೆ ಕಾಣೆ ಎಲ್‌ಗ್ಲಾ ಒಂಟೋಗಿದ್ದೆ
ಅಮಾಸೆ: ಎಲ್‌ಗೋಗುಮಾ ಸಾ… ರಾಹುಲ್ ಅಣ್ಣೋರ್ ಭಾರತ್ ಜೋಡೇಂಗೆ ಆವೋ ಆವೋ ಅಂದ್ರು ಅದ್ಕೆ ನಂದೂ ಒಂದು ಗೋವಿಂದಾ ಅಂತಾ ರೈಯ ರೈಯ
ಚೇರ್ಮನ್ರು: ಸಿವ್‌ಕುಮಾರ್-ಸಿದ್ರಾಮಣ್ಣೋರು ಫುಲ್ ಜೋಶ್ ನಾಗ್ ಇದ್ರಂತೆ ಹೌದೇನ್ಲಾ.
ಅಮಾಸೆ: ಇಬ್ರೂನೂವೇ ರಾಹುಲ್ ಅಣ್ಣೋರು ಕೈ ಹಿಡ್ಕಂಡು ಓಡ್ಸಿ ಓಡ್ಸಿ ಸುಸ್ತ್ ಮಾಡ್ಸ್‌ಬುಟ್ರಾ ಸಾ…
ಚೇರ್ಮನ್ರು: ಆಮ್ಯಾಕೂ ಕೈ ಕೈ ಹಿಡ್ದು ಜೋಡೆತ್ತಂಗೆ ಇರ್ಬೇಕು ಅಂತಾ ನಡ್ಸ್‌ಸಿದ್ರಂತೆ
ಅಮಾಸೆ: ಎಷ್ಟೂ ಅಂತಾ ಅವ್ರು ಜೋಡ್ಸ್‌ತಾರೆ ಬುಡಿ, ಇವ್ರು ಜೋಡ್ಸ್ ಕೋಬೇಕಲ್ವೇ. ಆದ್ರೂ ರಾಹುಲ್ ಅಣ್ಣೋರು ಆವಾಗ್ ಆವಾಗ್ ಇಬ್ರೂನೂ ಜೋಡ್ಸೋ ಟ್ರೈ ಕೊಡ್ತಾನೇ ಇದ್ರು.
ಚೇರ್ಮನ್ರು: ಯಾರ್ ಇದ್ರೂ ಬುಟ್ರೂ ರಾಹುಲ್ ಒಬ್ರೇ ವತ್ತಾರೇನೇ ಎದ್ ಒಂಟೋತಿದ್ರಂತೆ
ಅಮಾಸೆ: ಹೌದೇಳಿ, ಎಲ್ರೂ ಸುಸ್ತೋ ಅಂತಾ ಮಕ್ಕಂಡಿದ್ರೆ ಇವ್ರು ದಬಕ್ನೆ ಎದ್ ಮಾರ್ನಿಂಗ್ ವಾಕಿಂಗ್ ತರಾ ಒಂಟೋಗ್ತಿದ್ರು. ಆಮ್ಯಾಕೆ ಸಿವ್‌ಕುಮಾರ್ -ಸಿದ್ರಾಮಣ್ಣೋರು ಎದ್ನೋ ಬಿದ್ನೋ ಅಂತಾ ಜಾಯಿನ್ ಆಯ್ತಿದ್ರು
ಚೇರ್ಮನ್ರು: ಕೈ ಪಾಲ್ಟಿಗೇನಾದ್ರು ಹೆಲ್ಪ್ ಆಯ್ತತಾ
ಅಮಾಸೆ: ಯೂತ್ಸ್-ಹೈಕ್ಳು- ಸ್ಟೂಡೆಂಟ್ಸ್ ವಸಿ ಇಂಟ್ರೆಸ್ಟ್ ತೋರ್ಸು ಬತ್ತಿದ್ರು. ರಾಹುಲ್ ಅಣ್ಣೋರು ಸ್ಮೈಲ್ ಕೊಡ್ತಿದ್ರು. ಏನಾದ್ರೂವೇ ಕೈ ಪಾಲ್ಟಿಗೆ ಟಾನಿಕ್ಕೇ ಬುಡಿ
ಚೇರ್ಮನ್ರು: ಬುದ್ವಂತ ಬಸಣ್ಣೋರು- ರಾಜಾಹುಲಿ ಯಡ್ನೂರಪ್ನೋರು ತ್ರೀ ಡೇಸ್ ಟೂರ್ ಮಾಡಿದ್ರಂತಲ್ಲಾ
ಅಮಾಸೆ: ಕೈ ಪಾಲ್ಟಿ ಭಾರತ್ ಜೋಡೋ ರೆಸ್ಪಾನ್ಸ್ ನೋಡಿದ್‌ಮ್ಯಾಕೆ ಅಮಿತ್ ಶಾ ಸಾಹೇಬ್ರು, ತುಮ್ ಕ್ಯಾ ಕರ್ ರಹೇಹೋ ತಮಾಶಾ ದೇಖ್‌ರಹೇ ಕ್ಯಾ ಅಂತಾ ಆವಾಜ್ ಹಾಕಿದ್ರಂತೆ. ಅದ್ಕೆ ಬಸಣ್ಣೋರು ರಾಜಾಹುಲಿಗೆ ರಿಕ್ವೆಸ್ಟ್ ಮಾಡ್‌ಬುಟ್ಟು ಜತೇಗ್ ಕರ್ಕೊಂಡ್ ಒಂಟೋದ್ರಂತೆ
ಚೇರ್ಮನ್ರು: ಯಡ್ನೂರಪ್ನೋರು ಫುಲ್ ಜೋಶ್‌ನಾಗೆ ಸ್ಪೀಚ್ ಮಾಡವ್ರೆ
ಅಮಾಸೆ: ಇಲ್ಲಾಂದ್ರೆ ಡೆಲ್ಲಿ ಲೀಡ್ರುಗ್ಳು ಬುಟ್ಟಾರಾ, ಯಾರ್ ಏನ್ ಮಾತಾಡಿದ್ರು ಅಂತಾ ಫುಲ್ ರೆಕಾರ್ಡ್ ಮಾಡ್ತಾವ್ರಂತೆ.
ಚೇರ್ಮನ್ರು: ದಿಟವೇನ್ಲಾ
ಅಮಾಸೆ: ಬಾಂಬೆ ಬ್ಲೂ ಬಾಯ್ಸಗೂ ಮಾಂಜಾ ಕೊಟ್ಟವ್ರಂತೆ, ನೀವ್ ಸಿದ್ರಾಮಣ್ಣೋರು ಮ್ಯಾಗೆ ಪಿರೂತಿಗೆ ಯಾರೂ ಏನೂ ಮಾತಾಡ್ತಿಲ್ಲ, ಕಮ್ಲ ಪಾಲ್ಟಿನಾಗೆ ಅವೆಲ್ಲಾ ನಡಿಯಾಕಿಲ್ಲಾ ಖಬರ್‌ದಾರ್ ಅಂತಾ ಹೇಳಿದ್ರಂತೆ. ಆಮ್ಯಾಕೆ ಡಾಕ್ಟ್ರು ಸುಧಾಕರಣ್ಣೋರು, ಕುರುಕ್ಷೇತ್ರ ಮುನಿರತ್ನಣ್ಣೋರು, ಎಸ್‌ಟಿ ಸೋಮ್‌ಶೇಖರಪ್ಪೋರು ಅಟ್ಯಾಕ್ ಮಾಡ್ತಾವ್ರಂತೆ.
ಚೇರ್ಮನ್ರು: ಸಾಮ್ರಾಟ್ ಅಸೋಕಣ್ಣೋರು ಅಗ್ರೆಸೀವ್ ಆಗವ್ರೆ
ಅಮಾಸೆ: ನೆಕ್ಸ್ಟ್ ಕಿತಾ ಸಿಎಂ ಸೀಟ್ ಮ್ಯಾಗೇ ಕಣ್ ಮಡಗವ್ರೆ ಸಾ…. ಅದ್ಕೆ ಡಿಪಾರ್ಟ್‌ಮೆಂಟ್‌ನಾಗೆ ಶ್ಯಾನೆ ವರ್ಕ್ ಮಾಡ್ತಾವ್ರೆ. ಆದ್ರೆ, ಸೀಟಿ ರವಿ ಅಣ್ಣೋರು, ಡಾಕ್ಟ್ರು ಅಸ್ವತ್ಥಣ್ಣೋರು ಕ್ಯಾಂಪಿಟೇಸನ್ ಅಂತೇ.
ಚೇರ್ಮನ್ರು: ಈಸ್ವರಪ್ನೋರು ಡಲ್ ಅವ್ರೆ ಯಾಕ್ಲಾ
ಅಮಾಸೆ: ರಾಯಣ್ಣ ಬ್ರಿಗೇಡ್ ಈಸ್ವರಪ್ನೋರು, ಬೆಳಗಾವ್ ಸುಲ್ತಾನ್ ರಮೇಸ್ ಜಾರ್ಕಿಹೊಳಿ ಸಾವ್ ಕಾರ್ರು, ಹಳ್ಳಿಹಕ್ಕಿ ವಿಸ್ವನಾಥಣ್ಣೋರು, ಆಟೋ ಸಂಕರ್ ಒಂದೇ ಟ್ಯೂನ್‌ನಾಗೆ ಕೈ ಎತ್‌ಬುಟ್ರಪ್ಪೋ ಅಂತಾ ಆಳ್ತಾವ್ರೆ.
ಚೇರ್ಮನ್ರು: ಅದ್ಯಾಕ್ಲಾ ಸಿದ್ರಾಮಣ್ಣೋರು ಬಸಣ್ಣೋರ್ ಮ್ಯಾಗೆ ಫುಲ್ ರಾಂಗ್ ಆಗಿದ್ರಂತೆ
ಅಮಾಸೆ: ರಾಹುಲ್ ಅಣ್ಣೋರು ಬಚ್ಚಾ ಅಂತೇಳಿ ಕಿಂಡಲ್ ಮಾಡಿದ್ರು. ಅದ್ಕೆ ಧಮ್ ಇದ್ರೆ ಒಂದೈದ್ ಕಿಲೋಮೀಟ್ರಾ ನಡ್ಕಂಡ್ ಬನ್ನಿ ನೋಡುಮಾ, ನನ್ ಹೆಸ್ರು ಹೇಳ್ದೆ ಫೈವ್ ಮಿನಿಟ್ಸ್ ಸ್ಪೀಚ್ ಮಾಡ್ರಿ ಅಂತಾ ಬಸ್ತೀಮೆ ಸವಾಲ್ ಹಾಕಿದ್ರು, ಆಮ್ಯಾಕೆ ಬಸಣ್ಣೋರು-ಯಡ್ನೂರಪ್ನೋರು ಸೈಲಂಟಾಗೋದ್ರು.
ಚೇರ್ಮನ್ರು: ಇತ್ತೀತ್ಲಾಗೆ ಕುಮಾರಣ್ಣೋರ್ ಕಾನ್ಫಿಡೆಂಟ್ ಲೆವಲ್ ಜಾಸ್ತಿ ಆಗದಂತೆ ಹೌದೇನ್ಲಾ
ಅಮಾಸೆ: ಹೈದ್ರಾಬಾದ್‌ಮೇ ಕೆಸಿಆರ್ ಮೀಟ್ ಮ್ಯಾಡಿದ್‌ಮ್ಯಾಗೇ ಫುಲ್ ಕಾನ್ಫಿಡೆಂಟ್. ನಮ್ದೇ ಕಪ್ ಅಂದವ್ರೆ. ದೊಡ್‌ಗೌಡ್ರು ಫೀಲ್ಡ್‌ಗಿಳಿದವ್ರೆ. ಇನ್ನೊಂದಪಾ ನಮ್ ಸರ್ಕಾರ ಬರೋದ್ ನೋಡ್‌ಬೇಕ್ ಅಂತಾ ಫರ್ಮಾನ್ ಕೊಟ್ಟವ್ರೆ.
ಚೇರ್ಮನ್ರು: ಅಂಗಾರೆ, ಮೂರೂ ಪಾಲ್ಟಿನಾಗೆ ನೆಕ್ಸ್ಟ್ ಎಲೆಕ್ಸನ್ ವ್ಯವಾರಾನೇ ನಡೆದೈತೆ ಅನ್ನೂ
ಅಮಾಸೆ: ಹನ್ರೆಡ್ ಪರ್ಸೆಂಟ್ ಸಾ…. ಕಮ್ಲ 150 ಅಂದ್ರೆ, ಕೈ ಇನ್ ತರ್ಟಿ ಅಂತಾವ್ರೆ. ತೆನೆ ಒನ್ ಟ್ವೆಂಟಿ ಅಂತಾ ಫಿಕ್ಸ್ ಆಗೈತೆ. ಎಲ್ರೂ ಸೇರಿದ್ರೆ ಫೋರ್ ಹನ್ರೆಡ್ ಆಯ್ತದೆ. ಇರೋದ್ ಟೂ ಟ್ವೆಂಟಿ ಫೋರ್, ಇದ್ರಾಗೇ ಯಾರ್ ಎಲ್ ದಬ್ಟಾಕೋತಾರೋ ನೋಡುಮಾ. ನನ್ ಹೆಂಡ್ರು ಕೈಮಾತತ್ತಾ ಅಂತಾ ಹೇಳವ್ರೆ ಬತ್ತೀನಿ ಸಾ….
ಎಸ್.ಲಕ್ಷ್ಮಿನಾರಾಯಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
ಪತ್ನಿ ಊರಿನತ್ತ ಪ್ರಯಾಣ ಬೆಳೆಸಿದರೆ… ಸಾವಿನ ಮನೆಯ ಕದ ತಟ್ಟಿದ ಯೋಧ ನಾಗಪ್ಪ ಮರೆಗೊಂಡ
Mahalingpur: ಇಂದು ಮೃತ ಯೋಧ ಮಹೇಶ ಅಂತ್ಯಕ್ರಿಯೆ; ಯೋಧನ ಮನೆಗೆ ಸಚಿವ ತಿಮ್ಮಾಪುರ ಭೇಟಿ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bengaluru: ಕ್ಯಾಬ್ ಡಿಕ್ಕಿ;ಬುಲೆಟ್‌ನಲ್ಲಿ ತೆರಳುತ್ತಿದ್ದ ಸಾಫ್ಟ್ವೇರ್ ಎಂಜಿನಿಯರ್ ಸಾವು
Belagavi: ಹುತಾತ್ಮ ಯೋಧರ ಕುಟುಂಬಕ್ಕೆ ಸರ್ಕಾರದಿಂದ ನೆರವು: ಸಿಎಂ ಘೋಷಣೆ
Mumbai: ಚಲಿಸುತ್ತಿರುವಾಗಲೇ ರಸ್ತೆ ಮಧ್ಯೆ ಹೊತ್ತಿ ಉರಿದ ಲ್ಯಾಂಬೋರ್ಘಿನಿ ಕಾರು!
Christmas: ಸಿಲಿಕಾನ್ ಸಿಟಿಯಲ್ಲಿ ಕಳೆಗಟ್ಟಿದ ಕ್ರಿಸ್‌ಮಸ್ ಸಂಭ್ರಮ
INDvAUS: ಯುವ ಆಟಗಾರನ ಕೆಣಕಿ ತಪ್ಪು ಮಾಡಿದರೆ ಕೊಹ್ಲಿ? ಶಿಕ್ಷೆ ಗ್ಯಾರಂಟಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.