ಎಸ್ಸಿ-ಎಸ್ಟಿ ಮೀಸಲು: ಕಾನೂನು ಅಡಿಪಾಯಗಳ ಬುನಾದಿ

ಸಂಭಾವ್ಯ ಸವಾಲು ಎದುರಿಸಲು ಸಾಂವಿಧಾನಿಕ, ಕಾನೂನು ತಳಹದಿಗಳನ್ನೇ ಆಧಾರ ಮಾಡಿಕೊಂಡ ಸರಕಾರ

Team Udayavani, Oct 25, 2022, 6:40 AM IST

ಎಸ್ಸಿ-ಎಸ್ಟಿ ಮೀಸಲು: ಕಾನೂನು ಅಡಿಪಾಯಗಳ ಬುನಾದಿ

ಬೆಂಗಳೂರು: ಎಸ್ಸಿ-ಎಸ್ಟಿ ಸಮುದಾಯಗಳ ಮೀಸಲು ಪ್ರಮಾಣ ಹೆಚ್ಚಿಸಲು ಅಧ್ಯಾದೇಶ ತಂದಿರುವ ರಾಜ್ಯ ಸರಕಾರ, ಮುಂದೆ ಎದುರಾಗುವ ಸಂಭಾವ್ಯ ಕಾನೂನು ತೊಡಕುಗಳ ಸವಾಲು ಎದುರಿಸಲು “ಸಾಂವಿಧಾನಿಕ ಮತ್ತು ಕಾನೂನು ತಳಹದಿ’ಗಳನ್ನೇ ಆಧಾರ ಮಾಡಿಕೊಂಡಿದೆ.

ಎಸ್ಸಿ-ಎಸ್ಟಿ ಸಮುದಾಯಗಳ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿಯುವಿಕೆ ಬಗ್ಗೆ ಹಲವು ಅಧ್ಯಯನ ವರದಿ, ಆಯೋಗ, ಸಮಿತಿಗಳ ಶಿಫಾರಸುಗಳನ್ನು ಉಲ್ಲೇಖೀಸಿ ಸರಕಾರ ತನ್ನ ನಿರ್ಧಾರಕ್ಕೆ ಬಲ ಬರುವಂತೆ ಮಾಡಿದೆ.

ಮೀಸಲಾತಿ ಪ್ರಮಾಣ ಶೇ.50 ಮೀರಬಾರದು ಎಂದು ಸುಪ್ರೀಂಕೋರ್ಟ್‌ ಮಿತಿ ಹೇರಿದೆ. ಆದರೆ, ಈಗಾಗಲೇ ಅನೇಕ ರಾಜ್ಯಗಳಲ್ಲಿ ಮೀಸಲಾತಿ ಪ್ರಮಾಣ ಶೇ.50 ದಾಟಿದೆ. ಈ ನಡುವೆ ಕೇಂದ್ರ ಸರಕಾರ ಜಾರಿಗೆ ತಂದ “ಆರ್ಥಿಕ ದುರ್ಬಲ ವರ್ಗ’ (ಇಡಬ್ಲೂಎಸ್‌)ಗಳಿಗೆ ಶೇ.10ರಷ್ಟು ಮೀಸಲಾತಿ ನೀಡಿರುವುದರಿಂದ ಮೀಸಲಾತಿ ಪ್ರಮಾಣ ತಾಂತ್ರಿಕವಾಗಿ ತನ್ನಿಂತಾನೇ ಶೇ.50ರ ಮೀಸಲಾತಿ ದಾಟಿದೆ.

ಎಸ್ಸಿ ವರ್ಗಗಳಿಗೆ ಶೇ. 15ರಿಂದ 17 ಮತ್ತು ಎಸ್ಟಿ ವರ್ಗಗಳಿಗೆ ಶೇ.3 ರಿಂದ 7ಕ್ಕೆ ಮೀಸಲಾತಿ ಹೆಚ್ಚಿಸಿ ತಂದಿ ರುವ ಅಧ್ಯಾದೇಶದಲ್ಲಿ ಈ ಎಲ್ಲ ಕಾನೂನು ಆಧಾರಗಳನ್ನು ವಿವರವಾಗಿ ಉಲ್ಲೇಖಿಸಲಾಗಿದ್ದು, ಈ ಅಧ್ಯಾ ದೇಶ ಜಾರಿಗೊಳಿಸಲು ತೊಂದರೆ ಗಳು ಉದ್ಭವಿಸಿದರೆ ಸರಕಾರ ಸೂಕ್ತ ಆದೇಶ ಹೊರಡಿಸಬಹುದು ಎಂದು ಅಧ್ಯಾದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಅಧ್ಯಾದೇಶದಲ್ಲಿ ನೀಡಲಾದ ಆಧಾರಗಳು
– ಸಂವಿಧಾನದ ಅನುಚ್ಛೇದ 341 ಮತ್ತು 342 ಇದರ ಮೇರೆಗೆ ರಾಷ್ಟ್ರಪತಿಯವರು ಕೆಲವು ಜಾತಿಗಳನ್ನು ಎಸ್ಸಿ, ಎಸ್ಟಿ ಎಂದು ಘೋಷಿಸಿರುವುದು. ಇನ್ನೂ ಕೆಲವು ಸಮುದಾಯಗಳನ್ನು ಸೇರಿಸಿದ ಬಳಿಕ ರಾಜ್ಯದ ಎಸ್ಸಿ-ಎಸ್ಟಿಗಳ ಒಟ್ಟು ಜನಸಂಖ್ಯೆ ತ್ವರಿತಗತಿಯಲ್ಲಿ ಹೆಚ್ಚಾಗಿರುವುದು.
– 1976ರ ಎಸ್ಸಿ-ಎಸ್ಟಿ ಆದೇಶಗಳ (ತಿದ್ದುಪಡಿ) ಅನುಸಾರ ಜಾತಿಗಳಿಗೆ ಹಾಕಲಾದ ಭೌಗೋಳಿಕ ಮಿತಿಗಳನ್ನು ತೆಗೆದುಹಾಕಿದ್ದು, ಇದೂ ಸಹ ಕರ್ನಾಟಕದಲ್ಲಿ ಎಸ್ಸಿ-ಎಸ್ಟಿ ಜನಸಂಖ್ಯೆ ಅಸಾಧಾರಣ ಹೆಚ್ಚಳಕ್ಕೆ ಕಾರಣವಾಗಿದೆ.
– ಕರ್ನಾಟಕ ರಾಜ್ಯದಲ್ಲಿ 1955ರಿಂದ ಎಸ್ಸಿ-ಎಸ್ಟಿಗಳಿಗೆ ಶೇ.18ರಷ್ಟು ಸಂಯೋಜಿತ ಮೀಸಲಾತಿ ನೀಡಿದ್ದು, 1958ರಿಂದ ಎಸ್ಸಿಗಳಿಗೆ ಶೇ.15 ಮತ್ತು ಎಸ್ಟಿಗಳಿಗೆ ಶೇ.3 ಮೀಸಲಾತಿ ಉಳಿದುಕೊಂಡು ಬಂದಿದೆ. 2002ರಿಂದ ಇದೇ ಮೀಸಲಾತಿ ಮುಂದುವರಿಸಿಕೊಂಡು ಬರಲಾಗಿದೆ.
– ಶೇ.74ರಷ್ಟು ಬುಡಕಟ್ಟು ಸಮುದಾಯಗಳು ಅಗೋಚರವಾಗಿರುವುದು ಮತ್ತು ಸಾಕ್ಷರತೆ ಪ್ರಮಾಣ ಶೇ.3ಕ್ಕಿಂತ ಕಡಿಮೆ ಇದೆ. ಎಸ್ಸಿ-ಎಸ್ಟಿ ಮೀಸಲಾತಿ ಇತರ ರಾಜ್ಯಗಳಲ್ಲಿ ಕರ್ನಾಟಕಕ್ಕಿಂತ ಹೆಚ್ಚಿದೆ. ಎಸ್ಸಿ-ಎಸ್ಟಿಗಳಲ್ಲಿ ಅತ್ಯಂತ ವಂಚಿತ ವರ್ಗ ಗಳಿಗೆ ಮೀಸಲಾತಿ ಅಗತ್ಯವಿದೆ ಎಂದು ರಾಷ್ಟ್ರೀಯ ಕಾನೂನು ಶಾಲೆ ಅಧ್ಯಯನ ವರದಿ ಹೇಳಿದೆ.
-ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗ ಗಳ ಏಳಿಗೆಗೆ ವಿಶೇಷ ಕ್ರಮಗಳನ್ನು ಕೈಗೊಳ್ಳಲು ರಾಜ್ಯ ಸರಕಾರಕ್ಕೆ ಅಧಿಕಾರವಿದೆ ಎಂದು ಸಂವಿಧಾನದ 15ನೇ ಅನುಚ್ಛೇದದ 4ನೇ ಖಂಡವು ಹೇಳಿದೆ.
– ರಾಜ್ಯದ ಅಧೀನ ಸೇವೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಇಲ್ಲದ ವರ್ಗಗಳಿಗೆ ಮೀಸಲಾತಿ ಒದಗಿಸಲು ರಾಜ್ಯ ಸರಕಾರ ಕ್ರಮ ಕೈಗೊಳ್ಳಬಹುದು ಎಂದು ಸಂವಿಧಾನದ ಅನುಚ್ಛೇದ 16 (4) ಹೇಳಿದೆ.
– ಶೇ.50ರ ಮೀಸಲಾತಿ ಪರಿಮಿತಿಯನ್ನು ಅನೇಕ ರಾಜ್ಯಗಳು ಕಾಲಕಾಲಕ್ಕೆ ಹೆಚ್ಚಿಸಿರುವುದು.

ಹೈಕೋರ್ಟ್‌ ನಿರ್ದೇಶನ
ಸಾಂವಿಧಾನಿಕ ಆದೇಶದಂತೆ ಸಾರ್ವ ಜನಿಕ ಉದ್ಯೋಗ ಶಿಕ್ಷಣದಲ್ಲಿ ಎಸ್ಸಿ-ಎಸ್ಟಿ ಸಮುದಾಯಗಳಿಗೆ ಸೂಕ್ತ ಪ್ರಾತಿನಿಧ್ಯ ಕಲ್ಪಿಸಬೇಕೆಂದು ಆ ಸಮುದಾಯಗಳು ನಿರಂತರವಾಗಿ ಬೇಡಿಕೆ ಇಡುತ್ತಲಿತ್ತು. ಈ ನಡುವೆ ನಾಯಕ ವಿದ್ಯಾರ್ಥಿ ಸಂಘ ಹೈಕೋರ್ಟ್‌ ಮೊರೆ ಹೋಗಿತ್ತು. ಮೀಸಲು ಹೆಚ್ಚಿಸಲು ಸಂಘವು ದಾಖ ಲಿಸಿದ ಮನವಿ ಪರಿಗಣಿಸುವಂತೆ 2015 ರಲ್ಲಿ ರಾಜ್ಯ ಸರಕಾರಕ್ಕೆ ಹೈಕೋರ್ಟ್‌ ನಿರ್ದೇಶಿಸಿತ್ತು. ಅದರಂತೆ ಪ್ರಾಯೋಗಿಕ ಜನ್ಯ’ (ಎಂಪಿರಿಕಲ್‌ ) ದತ್ತಾಂಶ ಸಂಗ್ರಹಿಸಲು ಸರಕಾರ ನ್ಯಾ| ನಾಗಮೋಹನ್‌ದಾಸ್‌ ಆಯೋಗ ರಚಿಸಿತ್ತು. ಇದರ ವರದಿ ಅನುಷ್ಠಾನ ಅವಲೋಕನೆಗೆ ನ್ಯಾ| ಸುಭಾಷ್‌ ಅಡಿ ಸಮಿತಿ ರಚಿಸಲಾಗಿತ್ತು. ಇವುಗಳ ವರದಿ ಆಧರಿಸಿ ಮೀಸಲಾತಿ ಹೆಚ್ಚಿಸಲಾಗಿದೆ.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.