ಶ್ರೀರಂಗಪಟ್ಟಣ ಬಳಿ ಲೀಥಿಯಂ ನಿಕ್ಷೇಪಕ್ಕೆ ಶೋಧ
Team Udayavani, Feb 20, 2020, 3:02 AM IST
ಮಂಡ್ಯ/ಶ್ರೀರಂಗಪಟ್ಟಣ: ಸಕ್ಕರೆ ನಾಡು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಲೀಥಿಯಂ ನಿಕ್ಷೇಪದ ಶೋಧ ಕಾರ್ಯ ಸುಮಾರು 20 ವರ್ಷಗಳಿಂದ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಪ್ರಧಾನಿ ಸಚಿವಾಲಯದಡಿ ಕಾರ್ಯನಿರ್ವಹಿಸುತ್ತಿರುವ ಅಟಾ ಮಿಕ್ ಮಿನರಲ್ಸ್ ಡೈರೆಕ್ಟರ್ಸ್ ವಿಜ್ಞಾನಿಗಳ ತಂಡ ಈ ಶೋಧ ಕಾರ್ಯದಲ್ಲಿ ನಿರತವಾಗಿದೆ.
ಕರೀಘಟ್ಟ ತಪ್ಪಲಿನ ಅಲ್ಲಾಪಟ್ಟಣ, ಮರಳಗಾಲ ಸುತ್ತಮುತ್ತಲಿನ ಸುಮಾರು 150 ಎಕರೆ ಪ್ರದೇಶ ವ್ಯಾಪ್ತಿಯಲ್ಲಿ 10 ವಿಜ್ಞಾನಿಗಳ ತಂಡ ಹಲವಾರು ಸ್ಥಳಗಳಲ್ಲಿ ಲೀಥಿಯಂ ನಿಕ್ಷೇಪಕ್ಕಾಗಿ ಹುಡುಕಾಟ ನಡೆಸು ತ್ತಿದೆ. ವಿಜ್ಞಾನಿಗಳ ಈ ಕಾರ್ಯಕ್ಕೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿದ್ಯುತ್ ಚಾಲಿತ ಕಾರು ಮತ್ತು ಬೈಕ್‌ಗಳಲ್ಲಿರುವ ಬ್ಯಾಟರಿಯಲ್ಲಿನ ವಿದ್ಯುತ್‌ಗೆ ಅವಶ್ಯಕ ವಾಗಿರುವ ಲೀಥಿಯಂ ಸಂಪತ್ತು ನಮ್ಮ ಮಣ್ಣಿನಲ್ಲಿ ಅಡಗಿರುವುದಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.