ದ್ವಿತೀಯ ಪಿಯು: ಮೂರು ವಿಷಯಗಳ ಪ್ರಶ್ನೆ ಪತ್ರಿಕೆಗಳ ಪರಿಷ್ಕರಣೆ
Team Udayavani, Jan 23, 2019, 1:15 AM IST
ಬೆಂಗಳೂರು: ಈ ಬಾರಿಯ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಮೂರು ವಿಷಯಗಳ ಪ್ರಶ್ನೆ ಪತ್ರಿಕೆಗಳ ಅಂಕ ಕ್ರಮವನ್ನು ಪರಿಷ್ಕರಿಸಲಾಗಿದೆ. ದ್ವಿತೀಯ ಪಿಯು ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರದ ಪ್ರಶ್ನೆ ಪತ್ರಿಕೆಗಳ ಅಂಕ ಕ್ರಮವು ಉಳಿದ ವಿಷಯದ ಪತ್ರಿಕೆಗಳಿಗಿಂತ ಭಿನ್ನವಾಗಿರಲಿದ್ದು, ಬಹುಆಯ್ಕೆ ಮಾದರಿ, ಹೊಂದಿಸಿ ಬರೆಯುವ ಮತ್ತು ಬಿಟ್ಟಸ್ಥಳ ತುಂಬುವುದು ಸೇರಿದಂತೆ ಅಂಕಗಳಲ್ಲಿ ಹೊಸ ಕ್ರಮವನ್ನು ಪರಿಚಯಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಕೂಡ ಸ್ವಾಗತಿಸಿದ್ದಾರೆ.
ಈ ಮೊದಲು ಪ್ರಶ್ನೆ ಪತ್ರಿಕೆಯ “ಎ’ ವಿಭಾಗದಲ್ಲಿ ಒಂದು ಅಂಕದ 10 ಪ್ರಶ್ನೆಗಳು, “ಬಿ’ ವಿಭಾಗದಲ್ಲಿ 2 ಅಂಕಗಳ 10 ಪ್ರಶ್ನೆಗಳು, “ಸಿ’ ವಿಭಾಗದಲ್ಲಿ 5 ಅಂಕದ 8 ಪ್ರಶ್ನೆಗಳು ಇರುತ್ತಿದ್ದವು. “ಡಿ’ ವಿಭಾಗದಲ್ಲಿ 10 ಅಂಕದ 2 ಪ್ರಶ್ನೆಗಳು ಹಾಗೂ “ಇ’ ವಿಭಾಗದಲ್ಲಿ 5 ಅಂಕದ ಎರಡು ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಿತ್ತು. ಆದರೆ, ಈ ಬಾರಿ “ಎ’ ವಿಭಾಗದಲ್ಲಿ 1 ಅಂಕದ ಬಹು ಆಯ್ಕೆ ಮಾದರಿ (5 ಪ್ರಶ್ನೆ),ಬಿಟ್ಟಸ್ಥಳ ತುಂಬಿರಿ (5 ಅಂಕ), ಹೊಂದಿಸಿ ಬರೆಯಿರಿ (5 ಅಂಕ) ಸೇರಿಸಿ ಪ್ರಶ್ನಾಕ್ರಮ ರಚಿಸಲಾಗಿದೆ. 2 ಅಂಕಗಳ 9 ಪ್ರಶ್ನೆಗಳು, 4 ಅಂಕಗಳ 7 ಪ್ರಶ್ನೆಗಳು, 6 ಅಂಕಗಳ 4 ಪ್ರಶ್ನೆಗಳು ಮತ್ತು 5 ಅಂಕಗಳ 2 ಪ್ರಶ್ನೆಗಳಿಗೆ ವಿದ್ಯಾರ್ಥಿಗಳು ಉತ್ತರಿಸಬೇಕಾಗುತ್ತದೆ. ಈ ಬಹುಆಯ್ಕೆ ಮತ್ತು ಹೊಂದಿಸಿ ಬರೆಯುವಿಕೆಯಲ್ಲಿ ಉತ್ತರಗಳು ಪ್ರಶ್ನೆಪತ್ರಿಕೆಯಲ್ಲಿಯೇ ಇರುವುದರಿಂದ ವಿದ್ಯಾರ್ಥಿಗಳಿಗೆ ಪೂರಕವಾಗಿದೆ.
ಅವುಗಳನ್ನು ಸರಿಯಾಗಿ ಗುರುತಿಸಿದರೆ, ಉತ್ತಮ ಅಂಕಗಳನ್ನು ಗಳಿಸಬಹುದು ಎಂದು ವಿದ್ಯಾರ್ಥಿಗಳು ತಿಳಿಸುತ್ತಾರೆ. ಈ ವರ್ಷದಿಂದ ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ ಮತ್ತು ಲೆಕ್ಕಶಾಸ್ತ್ರ ವಿಷಯಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ಪಠ್ಯಕ್ರಮ ಅಳವಡಿಸಿಕೊಳ್ಳಲಾಗಿದೆ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
CT Ravi case:ಬೆಳಗಾವಿ ಕೋರ್ಟ್ ನಲ್ಲಿ Bailಗಾಗಿ ವಾದ ಮಂಡನೆ-ವಿಚಾರಣೆ 3ಗಂಟೆಗೆ ಮುಂದೂಡಿಕೆ
Belagavi: ಸಿ.ಟಿ ರವಿ ಹೇಳಿಕೆ ಪ್ರಕರಣ; ಕಣ್ಣೀರು ಹಾಕಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
CT Ravi Arrested: ಬಿಜೆಪಿ ಕರೆ ನೀಡಿದ್ದ ಬಂದ್ ಗೆ ಚಿಕ್ಕಮಗಳೂರಿನಲ್ಲಿ ಮಿಶ್ರ ಪ್ರತಿಕ್ರಿಯೆ
Belagavi: ಹೆಬ್ಬಾಳಕರ್ ಕ್ಷೇತ್ರದಲ್ಲೇ ಸಿ.ಟಿ.ರವಿಗೆ ವೈದ್ಯಕೀಯ ತಪಾಸಣೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಮಳೆ ನೀರು ಹರಿಯುವ ಕಾಲುವೆಗೆ ಪೈಪ್!
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Kinnigoli: ಘನ ವಾಹನ ನಿರ್ಬಂಧ; ಜನ ಪರದಾಟ
Shimoga; ಇದು ಸಿ.ಟಿ.ರವಿ ಅವರನ್ನು ಸದೆಬಡಿಯುವ ಪ್ರಯತ್ನ;ಶಾಸಕ ಚನ್ನಬಸಪ್ಪ
Mangaluru: ಕೊಕ್ಕಡದ ʼಸಾಂತಾ ಕ್ಲಾಸ್ʼ ವಿನ್ಸೆಂಟ್ ಕ್ರಿಸ್ಮಸ್ ತಿರುಗಾಟಕ್ಕೆ 25 ವರ್ಷ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.