ಮಹತ್ವಾಕಾಂಕ್ಷಿ ಮಡಿಲು ಯೋಜನೆಗೆ ಎಳ್ಳು-ನೀರು
Team Udayavani, Jan 31, 2017, 3:45 AM IST
ಬೆಂಗಳೂರು: ಬಾಣಂತಿ ಮತ್ತು ಮಕ್ಕಳ ಆರೈಕೆ ಮಾಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ “ಮಡಿಲು’ ಕಿಟ್ ವಿತರಣೆ ಯೋಜನೆಯನ್ನು ಅನುದಾನದ ಕೊರತೆಯಿಂದಾಗಿ ಕೈ ಬಿಡುವ ಲಕ್ಷಣಗಳೇ ಕಂಡು ಬರುತ್ತಿವೆ. ಯೋಜನೆಗಾಗಿ
2017-18 ನೇ ಸಾಲಿಗೆ ಅನುದಾನ ಕೊಡಲು ಸಾಧ್ಯವಿಲ್ಲ ಎಂದು ಆರ್ಥಿಕ ಇಲಾಖೆ ತಿಳಿಸಿದ್ದು, ಮುಂದಿನ ವರ್ಷದಿಂದ ಮಡಿಲು ಯೋಜನೆಗೆ “ಎಳ್ಳು-ನೀರು’ ಬಿಡುವ ಸಾಧ್ಯತೆಯೇ ಹೆಚ್ಚಿದೆ.
“ಮಡಿಲು’ ಯೋಜನೆಗೆ ವಾರ್ಷಿಕ 35 ರಿಂದ 40 ಕೋಟಿ ರೂ.ಅಗತ್ಯವಾಗಿದ್ದು, ಅಷ್ಟು ಮೊತ್ತದ ಹಣವನ್ನು ಈಗಿನ ಪರಿಸ್ಥಿತಿಯಲ್ಲಿ ಕೊಡಲು ಸಾಧ್ಯವಿಲ್ಲ ಎಂಬುದು ಆರ್ಥಿಕ ಇಲಾಖೆಯ ಅಭಿಪ್ರಾಯ. ಹೀಗಾಗಿ, ಬಹುತೇಕ ಯೋಜನೆಯನ್ನು ಕೈ ಬಿಡುವ ತೀರ್ಮಾನಕ್ಕೆ ರಾಜ್ಯ ಸರ್ಕಾರ ಬಂದಿದೆ ಎಂದು ಮೂಲಗಳು ತಿಳಿಸಿವೆ. ಇದಕ್ಕೆ ಪೂರಕ ಎಂಬಂತೆ “ಮಡಿಲು’ ಯೋಜನೆಯಡಿ ವಿತರಿಸುವ ಕಿಟ್‌ಗಳ ಖರೀದಿಗೆ ಮುಂದಿನ ವರ್ಷಕ್ಕೆ ರಾಜ್ಯ ಸರ್ಕಾರ ಟೆಂಡರ್ ಪ್ರಕ್ರಿಯೆಯನ್ನೇ ಆರಂಭಿಸಿಲ್ಲ.
ಆರೋಗ್ಯ ಇಲಾಖೆಯ ಮೂಲಗಳ ಪ್ರಕಾರ, ಪ್ರಸ್ತಕ ಸಾಲಿನ ಮಾರ್ಚ್‌ವರೆಗೆ ಕಿಟ್‌ಗಳ ಪೂರೈಕೆಗೆ ಸಮಸ್ಯೆ ಇಲ್ಲ. ಆದರೆ, ನಂತರ ಕಿಟ್‌ಗಳನ್ನು ವಿತರಿಸಬೇಕಾದರೆ ಟೆಂಡರ್ ಮೂಲಕ ಖರೀದಿ ಮಾಡಬೇಕಿದೆ. ಕಿಟ್‌ಗಳ ಖರೀದಿಗೆ ವಾರ್ಷಿಕ 35 ರಿಂದ 40 ಕೋಟಿ ರೂ.ವೆಚ್ಚವಾಗಲಿದ್ದು, 2017ಧಿ-18ನೇ ಸಾಲಿಗೆ ನಾಲ್ಕು ಲಕ್ಷ ಕಿಟ್‌ಗಳ ಅಗತ್ಯವಿದೆ ಎಂದು ಆರೋಗ್ಯ ಇಲಾಖೆಯಿಂದ ಹಣಕಾಸು ಇಲಾಖೆಗೆ ಪ್ರಸ್ತಾವನೆ ಹೋಗಿದೆ. ಆದರೆ, ಈ ಪ್ರಸ್ತಾವನೆಯನ್ನು ಹಣಕಾಸು ಇಲಾಖೆ ಪರಿಗಣಿಸಿಲ್ಲ. ಹೀಗಾಗಿ, ಏಪ್ರಿಲ್ ನಂತರ ಆಸ್ಪತ್ರೆಗಳಲ್ಲಿ “ಮಡಿಲು’ ಕಿಟ್ ಸಿಗುವುದು ಅನುಮಾನ ಎಂದು ಹೇಳಲಾಗಿದೆ.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬಗಳ ಗರ್ಭಿಣಿಯರು ಸರ್ಕಾರಿ ಆಸ್ಪತ್ರೆಗಳಲ್ಲಿ ಹೆರಿಗೆ ಮಾಡಿಸಿಕೊಂಡಲ್ಲಿ “ಮಡಿಲು’ ಕಿಟ್ ನೀಡುವ ಯೋಜನೆ ಕಳೆದ ಒಂಬತ್ತು ವರ್ಷಗಳಿಂದ ನಡೆದುಕೊಂಡು ಬರುತ್ತಿದೆ. ರಾಜ್ಯ ಸರ್ಕಾರವು 2007-08ನೇ ಸಾಲಿನಲ್ಲಿ “ಮಡಿಲು’ ಕಿಟ… ಯೋಜನೆಗೆ ಚಾಲನೆ ನೀಡಿದ್ದು, ಇದಕ್ಕಾಗಿ ಪ್ರತ್ಯೇಕವಾಗಿ ಅನುದಾನ ಮೀಸಲಿಟ್ಟಿತ್ತು.
2007ರಿಂದ 2013ರವರೆಗೆ ಈ ಯೋಜನೆಯಡಿ ವಿತರಿಸುವ ವಸ್ತುಗಳಿಗೆ ರಾಜ್ಯ ಸರ್ಕಾರವೇ ಹಣ ಭರಿಸುತ್ತಿತ್ತು.
ಆದರೆ, 2013ರಿಂದ 2016ರವರೆಗೆ ರಾಷ್ಟ್ರೀಯ ಆರೋಗ್ಯ ಮಿಷನ್ (ಎನ್ ಎಚ್‌ಎಂ) ಅನುದಾನ ನೀಡಿತು. ಆದರೆ, ಏಕಾಏಕಿ ರಾಷ್ಟ್ರೀಯ ಆರೋಗ್ಯ ಮಿಷನ್ ಇದೀಗ ಅನುದಾನ ನಿಲ್ಲಿಸಿದ್ದು, ಇದು ರಾಜ್ಯ ಸರ್ಕಾರದ ಯೋಜನೆಯಾಗಿರುವುದರಿಂದ ಸರ್ಕಾರವೇ ಹಣ ಭರಿಸಲಿ ಎಂಬುದಾಗಿ ಹೇಳಿ ಕೈತೊಳೆದುಕೊಂಡಿದೆ.
ಈ ಮಧ್ಯೆ, ರಾಜ್ಯ ಹಣಕಾಸು ಇಲಾಖೆ ಸಹ ಹಣ ನೀಡಲು ಸಾಧ್ಯವಿಲ್ಲ ಎಂದು ಹೇಳಿದೆ. ಆದರೆ, ಯಾವ ಕಾರಣಕ್ಕಾಗಿ ಹಣ ನೀಡುತ್ತಿಲ್ಲ ಎಂಬುದರ ಬಗ್ಗೆ ಸ್ಪಷ್ಟನೆ ನೀಡಿಲ್ಲ. ಮುಂದಿನ ವರ್ಷದ “ಮಡಿಲು’ ಯೋಜನೆಗೆ ಈಗಾಗಲೇ ಟೆಂಡರ್ ಕರೆದು ಕಿಟ್ ಖರೀದಿ ಪ್ರಕ್ರಿಯೆ ನಡೆಸಬೇಕಿತ್ತು. ಆದರೆ, ಹಣಕಾಸು ಇಲಾಖೆಯ ಒಪ್ಪಿಗೆ ದೊರೆಯದ ಕಾರಣ ಟೆಂಡರ್
ಪ್ರಕ್ರಿಯೆ ನಡೆದಿಲ್ಲ. ಇದರಿಂದಾಗಿ ಏಪ್ರಿಲ್ ನಂತರ ಯೋಜನೆ ಜಾರಿ ಅನುಮಾನವಾಗಿದೆ.
ಸಿಎಸ್‌ಆರ್‌ಯಡಿ ಪೂರೈಕೆಗೆ ಮನವಿ “ಮಡಿಲು’ ಕಿಟ್ ಯೋಜನೆಗೆ ಎನ್‌ಎಚ್‌ಎಂ ಮತ್ತು ರಾಜ್ಯ ಸರ್ಕಾರಗಳೆರಡೂ ಅನುದಾನ ನೀಡಲು ಹಿಂದೇಟು ಹಾಕಿರುವುದರಿಂದ ಆರೋಗ್ಯ ಇಲಾಖೆ, ಕಾರ್ಪೋರೇಟ್ ಕಂಪನಿಗಳಿಗೆ ಪತ್ರ ಬರೆದಿದೆ. ಸಿಎಸ್ ಆರ್‌ಯಡಿ ಕಿಟ್‌ಗಳ ಖರೀದಿಗೆ ಸಹಾಯ ಹಸ್ತ ಚಾಚುವಂತೆ ಮನವಿ ಮಾಡಿದೆ. ಆದರೆ, ಯಾವುದೇ ಕಾರ್ಪೋರೇಟ್ ಸಂಸ್ಥೆಗಳು ಮುಂದೆ ಬಂದಿಲ್ಲ. “ಮಡಿಲು’ ಕಿಟ್ ಪೂರೈಕೆಗೆ ಆರೋಗ್ಯ ಇಲಾಖೆ ಕಾಳಜಿ ಹೊಂದಿದ್ದರೂ, ಯಾವ ಕಡೆಯಿಂದಲೂ ಸಕಾರಾತ್ಮಕ ಸ್ಪಂದನೆ ಸಿಗುತ್ತಿಲ್ಲ ಎಂದು ಹೇಳಲಾಗಿದೆ.
*ಪ್ರಭುಸ್ವಾಮಿ ನಟೇಕರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Udupi: ಗೀತಾರ್ಥ ಚಿಂತನೆ 143: ದೇಹ-ಆತ್ಮ ಬೇರೆ: ಶ್ರುತಿ ಪ್ರಾಮಾಣ್ಯ
ಹೊಸ ವರ್ಷ: ಕರಾವಳಿಯ ದೇವಸ್ಥಾನಗಳಲ್ಲಿ ಭಕ್ತಸಂದಣಿ
Kasaragod: ವೈದ್ಯಕೀಯ ಕಾಲೇಜು ಆಗಿ ಭಡ್ತಿಗೊಳ್ಳಲಿರುವ ಕಾಸರಗೋಡು ಜಿಲ್ಲಾ ಜನರಲ್ ಆಸ್ಪತ್ರೆ
Ullala; ನರಿಂಗಾನ ದುರಂತ: ಗಾಯಾಳುಗಳಿಗೆ ನಿರಂತರ ಧೈರ್ಯ ತುಂಬುತ್ತಿದ್ದ ಶಿಕ್ಷಕ
ಅರಣ್ಯದಲ್ಲಿ ಹೊಸ ವರ್ಷ ಆಚರಣೆಗೆ ಸಿದ್ಧತೆ: 30 ಮಂದಿ ವಶ, ಮುಚ್ಚಳಿಕೆ ಪಡೆದು ಬಿಡುಗಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.